19th May 2024
Share

TUMAKURU:SHAKTHIPEETA FOUNDATION

ತುಮಕೂರು ನಗರದಲ್ಲಿ ವಸತಿ ರಹಿತರಿಗೆ ನಿವೇಶನ ನೀಡಲು ಸರ್ಕಾರಿ ಜಮೀನು ಹುಡುಕಾಟ ಆರಂಭಿಸಲಾಗಿದೆ. ಸರ್ಕಾರಿ ಕಟ್ಟಡಗಳ ಸಂಕೀರ್ಣ ಮಾಡಬೇಕು ಎಂಬ ಒಂದು ಕೂಗು ಎದ್ದಿದೆ. ಸರ್ಕಾರಿ ಇಲಾಖೆಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವುದೇ ಒಂದು ದಂಧೆಯಾಗಿದೆ. ಎಂದು ಹಲವಾರು ಜನತೆಯ ಅರೋಪವಾಗಿದೆ.

ಇವೆಲ್ಲದರ ಮಧ್ಯೆ ತುಮಕೂರು ಮಹಾನಗರ ಪಾಲಿಕೆಯ ಒಂದನೇ ವಾರ್ಡ್‌ನಲ್ಲಿರುವ ಮರಳೇನಹಳ್ಳಿ ಗ್ರಾಮದ ಸರ್ವೆನಂಬರ್ 5 ಮತ್ತು 8 ರಲ್ಲಿ ಸುಮಾರು 21 ಎಕರೆ ಸರ್ಕಾರಿ ಜಮೀನು ಇದೆಯಂತೆ. ಈ ಜಮೀನನ್ನು ಆ ಗ್ರಾಮದವರೇ ಅನಧಿಕೃತವಾಗಿ ಹಂಚಿಕೆ ಮಾಡಿಕೊಂಡು ಸುಮಾರು 1970 ರಿಂದಲೂ ಅನುಭವದಲ್ಲಿದ್ದಾರಂತೆ.

ಅವರೆಲ್ಲರೂ ಮಂಜೂರಾತಿಗೆ ಅರ್ಜಿಹಾಕಿದ್ದಾರಂತೆ. ಅವರಿಗೆ ಮಂಜೂರು ಮಾಡದೆ, ಯಾವುದೋ ಊರಿನವರಿಗೆ, ಅನುಭವದಲ್ಲಿ ಇಲ್ಲದೆ ಇರುವವರೆಗೆ ಮಂಜೂರು ಮಾಡಿದ್ದಾರಂತೆ, ನಂತರ ಅವರಿಂದ ಸರ್ಕಾರಿ ನೌಕರರಿಗೆ ಕೆಲವು ಜಮೀನಿನನ್ನು ಕ್ರಯ ಮಾಡಿಸಿಕೊಂಡಿದ್ದಾರಂತೆ.

 ಈ ಗ್ರಾಮವನ್ನೇ ನೋಡದ ಮಾಜಿ ಸೈನಿಕರಿಗೆ ಜಮೀನು ಮಂಜೂರು ಮಾಡಿದ್ದು, ಅವರು ಸತ್ತ ನಂತರ ಬೇರೆಯವರಿಗೆ ಅವರೇ ಕ್ರಯ ಮಾಡಿದ್ದಾರಂತೆ. ಬಹುಷ: ಭೂತವಾಗಿ ಬಂದು ಕ್ರಯ ಮಾಡಿಕೊಟ್ಟರಬಹುದು.

 ಯಾರೇ ಆದರೂ ಒಂದು ಗುಂಟೆ ಜಮೀನಿಗೂ ಇದೂವರೆಗೂ ಮಂಜೂರಿದಾರರನ್ನು ಬಿಟ್ಟಿಲ್ಲವಂತೆ. ಆ ಗ್ರಾಮದ ಕಟ್ಟಾಳುಗಳು, ಆಗ್ರಾಮದವರೇ ಈಗಲೂ ಅನುಭದಲ್ಲಿದ್ದಾರಂತೆ.

ಅದಿರಲಿ ಈ ಜಮೀನಿನಲ್ಲಿಯೇ 3 ಎಕರೆ ಜಮೀನನ್ನು ತುಮಕೂರು ನಗರಸಭೆಗೆ ಶುದ್ಧ ಕ್ರಯಮಾಡಿದ್ದಾರಂತೆ. ಆಲ್ಲಿ ಕ್ರಯಮಾಡಿದ ಜಮೀನೇ ಇಲ್ಲವಂತೆ, ಪಹಣೆ ಮಾತ್ರ ತುಮಕೂರು ನಗರಸಭೆ ಎಂದು ಈಗಲೂ ಬರುತ್ತಿದೆಯಂತೆ.

ಈ ಪವಾಡಗಳು ನಡೆಯ ಬೇಕಾದರೆ ಯಾರಾದರೂ ಫಂಟರೂ ಇರಲೇಬೇಕು, ಅವರು ಸರ್ಕಾರಿ ನೌಕರರಿರಬಹುದು, ರಾಜಕಾರಣಿಗಳಿರ ಬಹುದು ಅಥವಾ ಪಿಶಾಚಿಗಳಿರಬಹುದು. ಕೆಲವರಿಗೆ 94 ಸಿಸಿ ಅಡಿಯಲ್ಲಿ ಮಂಜೂರು ಮಾಡಲಾಗಿದೆಯಂತೆ. ಈಗ ಸುಮಾರು 2 ಎಕರೆ 20 ಗುಂಟೆ ಜಮೀನಿನನ್ನು ನಿವೇಶನಕ್ಕಾಗಿ ಕಾಯ್ದಿರಸಲು ಕ್ರಮವಹಿಸಲಾಗಿದೆಯಂತೆ.

ಈಗಲೂ ಈ 21 ಎಕರೆ ಕರ್ಮಕಾಂಡದ ದಾಖಲೆ ಪರಿಶೀಲನೆ ನಡೆದಿಲ್ಲವಂತೆ. ಅನುಭವದಲ್ಲಿ ಇರುವವರೇ ನಿಯಮ ಪ್ರಕಾರ ನಮಗೆ ಮಂಜೂರು ಮಾಡಲು ಸಾಧ್ಯವಿಲ್ಲದಿದ್ದರೇ ನಾವು ಸರ್ಕಾರಕ್ಕೆ ಬಿಡಲು ಸಿದ್ಧ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರಂತೆ.

 ಅನುಭವದಲ್ಲಿ ಇಲ್ಲದವರೆಗೆ ಹೇಗೆ ಜಮೀನು ಮಂಜೂರಾತಿ ಸಾಧ್ಯ ಎಂಬುದು ಒಂದು ಯಕ್ಷ ಪ್ರಶ್ನೆ?

ಇದು ಸತ್ಯಾನಾ? ಅಥವಾ ಸುಳ್ಳಾ ಎಂಬ ಬಗ್ಗೆ ಸ್ಪಷ್ಟ ಪಡಿಸುವಿರಾ ಜಿಲ್ಲಾಧಿಕಾರಿಯವರೇ?