9th October 2024
Share

TUMAKURU:SHKTHIPEETA FOUNDATION

ಗುಬ್ಬಿ ತಾಲ್ಲೂಕಿನ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು  ಸಂಸದರ/ಸಂಸತ್ತಿನ ಆದರ್ಶ ಗ್ರಾಮ ಯೋಜನೆಯ ಕನ್ನಡದ ಮಾರ್ಗಸೂಚಿಯನ್ನು ಅರ್ಥಮಾಡಿಕೊಂಡು ತಮ್ಮ ತಮ್ಮ ಇಲಾಖೆಯಡಿ, ಈ ಗ್ರಾಮಪಂಚಾಯಿತಿಯ ವ್ಯಾಪ್ತಿಯ 18 ಗ್ರಾಮಗಳಲ್ಲೂ ಯಾವ ಯೋಜನೆಗಳನ್ನು ಅನುಷ್ಠಾನಗೊಳಿಸಲು  ಆಯ್ಕೆ ಮಾಡಿಕೊಳ್ಳ ಬೇಕು ಎಂಬ ಬಗ್ಗೆ ಪ್ರಸ್ತಾವನೆಯನ್ನು ಇಲಾಖಾವಾರು ಸಿದ್ಧಪಡಿಸಿಕೊಳ್ಳುವುದು ಸೂಕ್ತ.

 ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಈ ಗ್ರಾಮಪಂಚಾಯಿತಿಗೆ ಒಬ್ಬ ನೋಡೆಲ್ ಅಧಿಕಾರಿಯನ್ನು ನೇಮಿಸುವುದು ಸೂಕ್ತ. ಎಲ್ಲೋ ಕುಳಿತು ಪಟ್ಟಿ ಮಾಡುವುದನ್ನು ಬಿಟ್ಟು, ಆಯಾ ಗ್ರಾಮಕ್ಕೆ ತೆರಳಿ ಪರಿಶೀಲಿಸಿ ಯೋಜನೆ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ನಂತರ ಜಿಲ್ಲಾ ಪಂಚಾಯತ್‌ನಲ್ಲಿರುವ ಎನ್.ಆರ್.ಡಿ.ಎಂ.ಎಸ್. ನಲ್ಲಿ ಜಿಐಎಸ್ ಆಧಾರಿತ ನಕ್ಷೆಯಲ್ಲಿ ನಮೂದಿಸಲೇ ಬೇಕು.

 ಕ್ಲಿಕ್ ಮಾಡಿದ ತಕ್ಷಣ ಇತಿಹಾಸ ಸಹಿತ ಮಾಹಿತಿ ಇರಬೇಕು. ಹಾಲಿ ಇರುವ ಯೋಜನೆಗಳಿಗೆ ಒಂದು ಕಲರ್, ಪ್ರಗತಿಯಲ್ಲಿರುವ ಯೋಜನೆಗಳಿಗೆ ಒಂದು ಕಲರ್, ನೆನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಒಂದು ಕಲರ್ ಮತ್ತು ಹೊಸ ಯೋಜನೆಗಳಿಗೆ ಒಂದು ಕಲರ್ ಜಿಐಎಸ್ ಲೇಯರ್ ಮಾಡುವುದು ಸೂಕ್ತ.

 ಮಾರ್ಗಸೂಚಿಯ ಅನುಬಂಧ ಎರಡಲ್ಲಿನ 36 ಮತ್ತು 37 ನೇ ಪುಟದ ಎಲ್ಲಾ ಮಾಹಿತಿಗಳನ್ನು ಆಯಾ ಇಲಾಖೆಗಳು ಜಿಐಎಸ್ ಆಧಾರಿತ ಲೇಯರ್‌ಗಳನ್ನು ತುಮಕೂರು ಜಿಐಎಸ್‌ನ ನಕ್ಷೆಯಲ್ಲಿ ಗುರುತು ಮಾಡಲೇಬೇಕು. ಇದನ್ನು ಪರಿಶೀಲಿಸುವ ಹೊಣೆಗಾರಿಕೆ ಗ್ರಾಮಪಂಚಾಯಿತಿ ಪಿಡಿಓ ರವರದ್ದು. 

 ಸಂಸದರು ತಿಂಗಳಲ್ಲಿ ಪ್ರಗತಿಪರಿಶೀಲನೆ ಮಾಡ ಬಹುದು. ಸಭೆಯಲ್ಲಿ ನಮಗೆ ಗೊತ್ತಿಲ್ಲ ಸಾರ್ ಎಂಬ ಡೈಲಾಗ್ ದಯವಿಟ್ಟು ಬೇಡ. ಅಗತ್ಯವಿದ್ದಲ್ಲಿ ಗುಬ್ಬಿ ತಾಲ್ಲೂಕು ಇಓ ಮತ್ತು ನೋಡೆಲ್ ಆಫೀಸರ್ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಶಿಬಿರ ನಡೆಸುವುದು ಸೂಕ್ತವಾಗಿದೆ.

ನಮೋ ಅಭಿಮಾನಿಗಳಲ್ಲಿ ಮನವಿ: ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯ 18 ಗ್ರಾಮಗಳ ಪ್ರಧಾನಿ ಶ್ರೀ ನರೇಂದ್ರಮೋದಿಯವರ ಅಭಿಮಾನಿಗಳು ಮೊದಲು ಸಂಸದರ/ಸಂಸತ್ತಿನ ಆದರ್ಶ ಗ್ರಾಮ ಯೋಜನೆಯ ಕನ್ನಡದ ಮಾರ್ಗಸೂಚಿ ಓದಿ ಅರ್ಥ ಮಾಡಿಕೊಳ್ಳಿ.

 ನಂತರ ಗ್ರಾಮದ ಪ್ರತಿಯೊಬ್ಬರಿಗೂ ಈ ಯೋಜನೆಯ ಮಹತ್ವದ ಬಗ್ಗೆ ಮನವರಿಕೆ ಮಾಡಿ. ಅದಕ್ಕೋಸ್ಕರವೇ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಪ್ರತಿಗ್ರಾಮಕ್ಕೆ ಒಂದು ಸೋಶಿಯಲ್ ಮೀಡಿಯಾ ಗ್ರೂಪ್ ರಚಿಸಲು ಸೂಚಿಸಿದ್ದಾರೆ.