24th July 2024
Share

TUMAKURU:SHAKTHIPEETA FOUNDATION

ಡಾ. ನಂಜುಂಡಪ್ಪನವರ ವರದಿ ಪ್ರಕಾರ ತುಮಕೂರು ಜಿಲ್ಲೆ ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಎರಡನೇ ಸ್ಥಾನ ಪಡೆದಿದೆ. ಈ ಜಿಲ್ಲೆಯ ಅಭಿವೃದ್ಧಿಗೆ ವಿಫುಲ ಅವಕಾಶಗಳಿವೆ. ಜಿಲ್ಲೆ ಮೂರು ಲೋಕಸಭಾ ಕ್ಷೇತ್ರಗಳಿಗೆ ಹಂಚಿಕೆಯಾಗಿದೆ. ಇದರಲ್ಲ್ಲಿ ಬಿಜೆಪಿ ತುಮಕೂರು ಕ್ಷೇತ್ರದಿಂದ ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ಚಿತ್ರದುರ್ಗ ಕ್ಷೇತ್ರದಿಂದ ಶ್ರೀ ನಾರಾಯಣಸ್ವಾಮಿರವರು ಸೇರಿ ಎರಡು ಲೋಕಭಾ ಕ್ಷೇತ್ರ ಮತ್ತು ಕಾಂಗ್ರೆಸ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ  ಶ್ರೀ ಡಿ.ಕೆ.ಸುರೇಶ್‌ರವರು ಒಂದು ಲೋಕಸಭಾ ಕ್ಷೇತ್ರದಲ್ಲಿ ವಿಜಯ ಸಾಧಿಸಿದ್ದಾರೆ.

  11 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಶ್ರೀ ಜೆ.ಸಿ.ಮಾಧುಸ್ವಾಮಿರವರು, ತಿಪಟೂರು ವಿಧಾನಸಭಾ ಕ್ಷೇತ್ರದ ಶ್ರೀ ಬಿ.ಸಿ.ನಾಗೇಶ್‌ರವರು, ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ಮತ್ತು ತುರುವೇಕೆರೆ ವಿಧಾನಸಭಾ ಕ್ಷೇತ್ರದ ಶ್ರೀ ಮಸಾಲೆ ಜಯರಾಂರವರು ಸೇರಿ 4 ಜನ ಗೆಲುವು ಸಾಧಿಸಿದ್ದಾರೆ.

 ಕಾಂಗ್ರೆಸ್‌ನಿಂದ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಡಾ.ಶ್ರೀ ಜಿ.ಪರಮೇಶ್ವರ್‌ರವರು, ಪಾವಗಡ ವಿಧಾನಸಭಾ ಕ್ಷೇತ್ರದ ಶ್ರೀ ವೆಂಕಟರಮಣಪ್ಪನವರು, ಕುಣಿಗಲ್ ವಿಧಾನಸಭಾ ಕ್ಷೇತ್ರದ ಶ್ರೀ ರಂಗನಾಥ್‌ರವರು ಸೇರಿ  3 ಜನ ಗೆಲುವು ಸಾಧಿಸಿದ್ದಾರೆ.

 ಜನತಾದಳದಿಂದ ಗುಬ್ಬಿ ವಿಧಾನಸಭಾ ಕ್ಷೇತ್ರದ ಶ್ರೀ ಎಸ್.ಆರ್.ಶ್ರೀನಿವಾಸ್‌ರವರು, ಮಧುಗಿರಿ ವಿಧಾನಸಭಾ ಕ್ಷೇತ್ರದ ಶ್ರೀ ವೀರಭಧ್ರಯ್ಯನವರು, ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶ್ರೀ ಗೌರಿಶಂಕರ್ ರವರು ಮತ್ತು ಶಿರಾ ವಿಧಾನಸಭಾ ಕ್ಷೇತ್ರದ ದಿ. ಸತ್ಯಾನಾರಯಣರವರು ಸೇರಿದಂತೆ 4 ಜನ ಗೆಲುವು ಸಾಧಿಸಿದ್ದಾರೆ.

  4 ಜನ ವಿಧಾನಸಭಾ ಸದಸ್ಯರಲ್ಲಿ ಬಿಜೆಪಿಯ ಶ್ರೀ ವೈ.ಎ.ನಾರಾಯಣಸ್ವಾಮಿರವರು, ಜನತಾದಳದ ಶ್ರೀ ಚೌಡರೆಡ್ಡಿ ತೂಪಲ್ಲಿರವರು, ಶ್ರೀ ಕಾಂತರಾಜುರವರು ಮತ್ತು ಶ್ರೀ ತಿಪ್ಪೆಸ್ವಾಮಿರವರು ಇದ್ದಾರೆ.

 ಜಿಲ್ಲೆಯ ಅಭಿವೃದ್ಧಿಗಾಗಿ ಈ 18 ಜನ ಶ್ರಮವಹಿಸುವುದು ಸಂವಿಧಾನದ ಆಶಯ. ಜೊತೆಗೆ ವಿವಿಧ ವರ್ಗದ ಚುನಾಯಿತ ಜನಪ್ರತಿನಿಧಿಗಳು, ಪರಾಭವಗೊಂಡಿರುವವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ.

 ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಪಕ್ಷಬೇದ ಮರೆತು ಎಲ್ಲರನ್ನು ಒಂದೇ ವೇದಿಕೆಯಲ್ಲಿ ತೆಗೆದುಕೊಂಡು ಹೋಗಲು ಕೇಂದ್ರ ಸರ್ಕಾರ ಸಂಸದರ ಅಧ್ಯಕ್ಷತೆಯಲಿ ದಿಶಾ ಸಮಿತಿ ರಚಿಸಿದೆ. ರಾಜ್ಯ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಮಿತಿ ರಚಿಸಿದೆ.

 ಪ್ರಸುತ ಈ 18 ಜನರ ಆಪ್ತ ಕಾರ್ಯದರ್ಶಿಗಳ, ಆಪ್ತ ಸಹಾಯಕರ ಮತ್ತು ಕಚೇರಿ ಇತರ ಸಿಬ್ಬಂಧಿಗಳ ವೇದಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವರ ಆಪ್ತಕಾರ್ಯದರ್ಶಿಗಳ ನೇತೃತ್ವದಲ್ಲಿ ರಚಿಸಿಕೊಂಡು ಅಭಿವೃದ್ಧಿ ವಿಚಾರದ ಅಂಶಗಳನ್ನು ಹಂಚಿಕೊಳ್ಳಲು ಮತ್ತು ಪಕ್ಷಾತೀತವಾಗಿ ಸರ್ಕಾರಗಳ ಮೇಲೆ ಒತ್ತಡ ತರಲು ಒಗ್ಗಟ್ಟು ಮೂಡಿಸಲು ಶಕ್ತಿಪೀಠ ಫೌಂಡೇಷನ್ ಚಿಂತನೆ ನಡೆಸಿದೆ. ಈ ಹಿನ್ನಲೆಯಲ್ಲಿ ಮೊದಲನೇ ಹಂತದಲ್ಲಿ ಡಿಜಿಟಲ್ ವೇದಿಕೆ ರಚಿಸಿ ಎಲ್ಲರ ಅಭಿಪ್ರಾಯ ಸಂಗ್ರಹಣೆಗೆ ಮುಂದಾಗಿದೆ. ಆಸಕ್ತರು ಸಲಹೆ, ಮಾರ್ಗದರ್ಶನ ನೀಡಲು ಮನವಿ.

 ಇವರ ಜೊತೆಗೆ ಚುನಾಯಿತ ಜನಪ್ರತಿನಿಧಿಗಳು ಅಭಿವೃದ್ಧಿ ಸಲಹಾಗಾರರನ್ನು ನೇಮಿಸಿಕೊಂಡು ಈ ವೇದಿಕೆಗೆ ಸೇರ್ಪಡೆ ಮಾಡುವುದು ಅಗತ್ಯವಾಗಿದೆ.