25th April 2024
Share

TUMAKURU:SHAKTHIPEETA FOUNDATION

 ಜಲಜೀವನ್ ಮಿಷನ್ ಯೋಜನೆಗೆ ತುಮಕೂರು ಜಿಲ್ಲೆಯನ್ನು ಸೇರ್ಪಡೆ ಮಾಡಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮನವಿ ಮೇರೆಗೆ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪನವರು.  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅತೀಕ್‌ರವರಿಗೆ ಸೂಕ್ತ ಆದೇಶ ನೀಡಿದ್ದಾರೆ.

  ದಿನಾಂಕ:23.08.2020 ರಂದು ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಅವರ ಸೂಚನೆ ಮೇರೆಗೆ ಬೆಂಗಳೂರಿನ ಬಹುಮಹಡಿಗಳ ಕಟ್ಟಡದಲ್ಲಿ ಶ್ರೀ ಅತೀಕ್‌ರವರೊಂದಿಗೆ ಜಿ.ಎಸ್.ಬಸವರಾಜ್ ರವರು ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಇದ್ದರು.

  ಈ ಯೋಜನೆಗೆ ಪೂರಕವಾಗಿ ತುಮಕೂರು ಜಿಲ್ಲೆಗೆ ಹೇಮಾವತಿ ಯೋಜನೆಯಿಂದ ಕುಡಿಯುವ ನೀರಿಗೆ 6.237 ಟಿ.ಎಂ.ಸಿ ಅಡಿ ನೀರು, ಭಧ್ರಾ ಮೇಲ್ದಂಡೆಯಿಂದ  ಕೆರೆಗಳಿಗೆ/ಕುಡಿಯುವ ನೀರಿಗೆ 3.025   ಟಿ.ಎಂ.ಸಿ ಅಡಿ ನೀರು, ಎತ್ತಿನಹೊಳೆ ಯೋಜನೆಯಿಂದ  ಕುಡಿಯುವ ನೀರಿಗೆ 2.42   ಟಿ.ಎಂ.ಸಿ ಅಡಿ ನೀರು, ಕೆರೆಗಳಿಗೆ 2.16   ಟಿ.ಎಂ.ಸಿ ಅಡಿ ನೀರು, ತುಂಗಭದ್ರಾ ನದಿಯಿಂದ ಕುಡಿಯುವ ನೀರಿಗಾಗಿ 0.745   ಎಂಸಿಎಫ್‌ಟಿ (0.75ಟಿ.ಎಂ.ಸಿ ಅಡಿ ನೀರು) ಒಟ್ಟು ಕುಡಿಯುವ ನೀರಿಗಾಗಿಯೇ 14.602    ಟಿ.ಎಂ.ಸಿ ಅಡಿ ನೀರು ಅಲೋಕೇಷನ್ ಆಗಿದೆ.

 ಇಷ್ಟು ನೀರು ಕುಡಿಯುವ ನೀರಿಗಾಗಿಯೇ ಅಲೋಕೇಷನ್ ಇದ್ದರೂ, ತುಮಕೂರು ಜಿಲ್ಲೆಗೆ ನದಿ ನೀರು ಅಲೋಕೇಷನ್ ಇಲ್ಲ ಎಂದು ಯೋಜನೆಯ ವ್ಯಾಪ್ತಿಯಿಂದ ಕೈಬಿಟ್ಟಿರುವ ಕಾರಣಗಳ ಬಗ್ಗೆ ಚರ್ಚಿಸಿದರು. ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿಗಾಗಿ ಬೇಕಾಗಿರುವ ನೀರು ಕೇವಲ 2.85   ಟಿಂಎಂಸಿ ಎಂದು ಅಂದಾಜಿಸಿದ್ದಾರೆ. ಆದ್ದರಿಂದ ಜಲಜೀವನ್ ಮಿಷನ್ ಯೋಜನೆಗೆ ತುಮಕೂರು ಜಿಲ್ಲೆಯನ್ನು ಸೇರ್ಪಡೆ ಮಾಡಲು  ಅಗತ್ಯಕ್ರಮಕೈಗೊಳ್ಳಲಾಗುವುದು ಎಂದು ಅತೀಕ್ ರವರು ತಿಳಿಸಿದರು.

  ಈ ವರ್ಷವೇ ಸಂಸದರ ಆದರ್ಶ ಗ್ರಾಮಗಳು ಸೇರಿದಂತೆ ಹೇಮಾವತಿ ನೀರು ತುಂಬುವ ಕೆರೆಗಳ ಸುತ್ತಮತ್ತಲ ಗ್ರಾಮ ಪಂಚಾಯಿತಿಗಳಿಗೆ ಯೋಜನೆ ಜಾರಿ ಮಾಡುವುದಾಗಿ ತಿಳಿಸಿದರು. ಇದೂವರೆಗೂ ಜಿಲ್ಲೆಯಲ್ಲಿ ಅನುಷ್ಠಾನ ಮಾಡಿರುವ ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆ ಸಫಲವಾಗದೇ ಇರುವ ಬಗ್ಗೆ ಗಂಭೀರ ಚರ್ಚೆ ನಡೆಯಿತು.

 ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿಯವರ ನೇತೃತ್ವದ ಕೇಂದ್ರ ಸರ್ಕಾರ 2022 ರೊಳಗೆ ದೇಶದ ಎಲ್ಲಾ ಮನೆಗಳಿಗೂ ನಲ್ಲಿ ಮುಖಾಂತರ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷೆ ಯೋಜನೆಗೆ ಇದಾಗಿರವುದರಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರು ಮತ್ತು ಎಲ್ಲಾ ವಿಧಾನಸಭಾ ಕ್ಷೇತ್ರಗಳ ಶಾಸಕರುಗಳು ವಿಶೇಷ ಗಮನಹರಿಸುವುದು ಅಗತ್ಯವಾಗಿದೆ.