12th October 2024
Share

TUMAKURU:SHAKTHIPEETA FOUNDATION

  ಗುಬ್ಬಿ ತಾಲ್ಲೂಕು ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಸಂಸದರ ಆದರ್ಶ ಗ್ರಾಮ ಯೋಜನೆ ವ್ಯಾಪ್ತಿಯಲ್ಲಿ ರೈತರ/ಉದ್ಯಮಿಗಳ ವಿದ್ಯುತ್ ಸಮಸ್ಯೆ ಬಗೆ ಹರಿಸಿ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಲು ಅಗತ್ಯವಿರುವ ಎಲ್ಲಾ ಯೋಜನೆಗಳ ಪ್ರಸ್ತಾವನೆ ಸಿದ್ಧಪಡಿಸಲು ಬೆಸ್ಕಾಂ ಎಸ್.ಇ. ಶ್ರೀ ಗೋವಿಂದಯ್ಯನವರು ಮತ್ತು ಇಇ ಶ್ರೀ ಜಗದೀಶ್‌ರವರಿಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಸೂಚಿಸಿದ್ದಾರೆ.

 ಹೊಸದಾಗಿ ಎಂ.ಯು.ಎಸ್.ಎಸ್ ಸ್ಥಾಪನೆ, ಓವರ್ ಲೋಡ್ ಆಗಿರುವ ಕಡೆ ಪ್ರತ್ಯೇಕ ಟಿ.ಸಿ ಗಳ ಅಳವಡಿಕೆ, ಪ್ರೈಮರಿ ಲೈನ್‌ಗಳಿಂದ ರೈತರ ಸಾವಿರಾರು ಅಡಿಕೆ/ತೆಂಗು ಇತ್ಯಾದಿ ಮರಗಳು ಬೆಂದು ಹೋಗಿವೆ. ಅಂತಹ ಕಡೆ ಕೇಬಲ್ ಅಳವಡಿಸುವುದು ಸೇರಿದಂತೆ, ಇತ್ಯಾದಿ ಇನ್ನೋವೇಟೀವ್ ಯೋಜನೆಗಳ ಚಿಂತನೆ ಆರಂಭಿಸಿದ್ದಾರೆ.

   ಗ್ರಾಮಪಂಚಾಯಿತಿ ವ್ಯಾಪ್ತಿಯ 18 ಗ್ರಾಮಗಳವಾರು ಅಧಿಕಾರಿಗಳ ಜೊತೆಗೆ, ವಿದ್ಯುತ್ ಗ್ರಾಹಕರು ಮತ್ತು ಸಮಸ್ಯೆಗಳಿಗೆ ಸದಾ ಸ್ಪಂಧಿಸುವ ಅನುಭವಿ ರೈತ ಸೋಶಿಯಲ್ ಇಂಜಿನಿಯರ್‌ಗಳು, ಲೈನ್‌ಮೆನ್‌ಗಳು, ವಿದ್ಯುತ್ ಪ್ರತಿನಿಧಿಗಳ ಸಹಭಾಗಿತ್ವದಲ್ಲಿ ಪ್ರತಿ ಗ್ರಾಮವಾರು ಜಿಐಎಸ್ ಲೇಯರ್ ಮಾಡುವ ಮೂಲಕ ಪ್ರಸ್ತಾನೆ ಸಿದ್ಧಪಡಿಸಲಿದ್ದಾರೆ.

  ಯಾವುದೇ ಯೋಜನೆ ಸಮರ್ಪಕವಾಗಿ ಜಾರಿಯಾಗಬೇಕಾದರೆ ಅಧಿಕಾರಿಗಳ ಜೊತೆಗೆ ಒಂದು ವಿಷನ್‌ಗ್ರೂಪ್ ಮತ್ತು ಇನ್ನೊಂದು ಪ್ರಷರ್‌ಗ್ರೂಪ್ ಇರಲೇ ಬೇಕು. ಈ ಯೋಜನೆಯ ವಿಷನ್‌ಗ್ರೂಪ್ ಮುಖ್ಯಸ್ಥರಾಗಿ ದಿಶಾ ಸಮಿತಿ ಸದಸ್ಯರಾದ ಶ್ರೀ ಟಿ.ಆರ್.ರಘೋತ್ತಮರಾವ್‌ರವರು ಮತ್ತು ಅವರ ತಂಡ ಸೇರಿ ವರದಿ ನೀಡಲಿದ್ದಾರೆ.

 ಇಂದಿನ ವ್ಯವಸ್ಥೆಯಲ್ಲಿ ಪ್ರಷರ್‌ಗ್ರೂಪ್ ಕಾರ್ಯವನ್ನು ಗುತ್ತಿಗೆದಾರರು ಮಾಡಲಿದ್ದಾರೆ. ಗುಬ್ಬಿ ತಾಲ್ಲೂಕಿನ ಎಲ್ಲಾ ಗುತ್ತಿಗೆದಾರರು ಅವರ ಸಲಹೆಗಳ ಜೊತೆಗೆ ಯೋಜನೆ ಜಾರಿಗೆ ಶ್ರಮಿಸುವುದಾಗಿ ಶ್ರೀ ಗುಡ್ಡದಹಳ್ಳಿ ಬಸವರಾಜ್‌ರವರು ಮತ್ತು ಅವರ ತಂಡ ಶ್ರಮಿಸಲು ಮುಂದೆ ಬಂದಿದ್ದಾರೆ.

ಆಸಕ್ತರು ಸಲಹೆ ಮತ್ತು ಮಾರ್ಗದರ್ಶನ ನೀಡಬಹುದು.