24th July 2024
Share

TUMAKURU:SHAKTHIPEETA FOUNDATION

ಆಮೆಗತಿಯಲ್ಲಿ ಸಾಗುವ ತುಮಕೂರು ಇಂಟರ್ ನ್ಯಾಷನಲ್ ಏರ್‌ಪೋರ್ಟ್ -2 ಕಡತಕ್ಕೆ   ಜಿಲ್ಲಾಧಿಕಾರಿ ಶ್ರೀ ಡಾ.ರಾಕೇಶ್ ಕುಮಾರ್‌ರವರು ಶೀಘ್ರ ಚಾಲನೆ ನೀಡುವುದು ಅಗತ್ಯವಾಗಿದೆ.  AIRPORTS AUTHORITY OF INDIA ದ ಅಧಿಕಾರಿಗಳು ಸಭೆ ನಡೆಸಿ, ಸ್ಥಳ ಪರಿಶೀಲಿಸಿ ನಮಗೆ ಯಾವ ಜಾಗ ಸೂಕ್ತ ಎಂಬ ವರದಿ ನೀಡಿದ ಮೇಲಷ್ಟೆ ಜಿಲ್ಲಾಡಳಿತ ಮತ್ತು ಕೆಐಡಿಬಿ ಭೂಸ್ವಾಧೀನ ಪ್ರಕ್ರೀಯೆ ಮುಂದುವರೆಸಬಹುದು.

  ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ಜಿಲ್ಲಾಧಿಕಾರಿ ಇಬ್ಬರು ಪ್ರತ್ಯೇಕವಾಗಿ ಪತ್ರ ಬರೆಯಬೇಕಿದೆ. ಈಗಾಗಲೇ ಕೇಂದ್ರ ವಿಮಾನ ಯಾನ ಖಾತೆ ಸಚಿವರಿಗೆ ಬಸವರಾಜ್ ರವರು ಮನವಿ ಮಾಡಿದ್ದಾರೆ.

 ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರ ಅಧ್ಯಕ್ಷತೆಯ ಕೆಡಿಪಿ ಸಭೆ, ಶ್ರೀ ಜಿ.ಎಸ್.ಬಸವರಾಜ್ ಅಧ್ಯಕ್ಷತೆಯ ದಿಶಾ ಸಭೆ ನಿರ್ಣಯದ ಮೇರೆಗೆ, ಆಗಿನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್ ರವರ ಪತ್ರ, ಮೂಲ ಸೌಲಭ್ಯ ಇಲಾಖೆ, ಕೈಗಾರಿಕಾ ಇಲಾಖೆಯ ಪತ್ರಗಳು ಕೆಐಡಿಬಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಬಂದು ತಲುಪಿವೆ.

 ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳ ನೇತೃತ್ವದಲ್ಲಿನ ಸಭೆಗಳಲ್ಲಿಯೂ ಈ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಯೋಜನಾ ಆಯೋಗದ ಉಪಾಧ್ಯಕ್ಷರು ಸಹ ಈಗಾಗಲೇ ಪ್ರಸ್ತಾಪಿಸಿದ್ದಾರೆ.

 ಈ ಯೋಜನೆಯ ಕಡತ ಅನುಸರಣೆ ಮಾಡಲು, ತುಮಕೂರು ಜಿಲ್ಲಾಧಿಕಾರಿಯವರು ಜಿಲ್ಲಾ ಮಟ್ಟದಲ್ಲಿ ಒಬ್ಬ ನೋಡೆಲ್ ಅಧಿಕಾರಿ ನೇಮಿಸುವುದು ಸೂಕ್ತವಾಗಿದೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶ್ರೀ ರಾಕೇಶ್ ಕುಮಾರ್‌ರವರು ವಿಶೇಷವಾಗಿ ಗಮನಹರಿಸುವುದು ಅಗತ್ಯವಾಗಿದೆ.