22nd December 2024
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡುವ ಅನುದಾನದ ಮೇಲೆ ನಿಗಾ ಇಡಲು, ಪ್ರಗತಿ ಪರಿಶೀಲನೆ, ಯೋಜನೆಗಳ ಆಯ್ಕೆ, ಪಲಾನುಭವಿಗಳ ಆಯ್ಕೆಯಲ್ಲಿನ ಲೋಪದೋಷಗಳು, ಹೊಸ ಅವಿಷ್ಕಾರಗಳ ಚಿಂತನೆಗಾಗಿ ಆಯಾ ಕ್ಷೇತ್ರಗಳ ಲೋಕಸಭಾ ಸದಸ್ಯರ  ಅಧ್ಯಕ್ಷತೆಯಲ್ಲಿ ದಿಶಾ ಸಮಿತಿಯನ್ನು ರಚಿಸಿದೆ.

 ದಿನಾಂಕ:13.06.2018 ರಂದು ರಾಜ್ಯಗಳಿಗೆ ಪತ್ರ ಬರೆದು, ಆಯಾ ಜಿಲ್ಲೆಗಳ ಪ್ರತಿಯೊಂದು ಇಲಾಖೆಯ ಅಧಿಕಾರಿಗಳ ಹಾಗೂ ಇಲಾಖಾವಾರು ನೋಡೆಲ್ ಆಫೀಸರ್‍ಸ್‌ಗಳ ಹೆಸರು, ಪದನಾಮ, ಮೊಬೈಲ್ ಸಂಖ್ಯೆ, ಇ- ಮೇಲ್ ಐಡಿ ಇತ್ಯಾದಿ ಮಾಹಿತಿಗಳನ್ನು ಆಯಾ ಜಿಲ್ಲೆಯ NIC  ಗಳಲ್ಲಿ ಅಫ್‌ಡೇಟ್ ಮಾಡಲು ಸೂಚಿಸಿದ್ದಾರೆ.

 ದಿಶಾ ಸಮಿತಿಗಳ ಸಭೆಗಾಗಿ  MEETING MANAGEMENT SOFTWARE  ಮಾಡಿದ್ದಾರೆ. ಇಲ್ಲಿ ಈ ಮಾಹಿತಿ ಇರುವುದು ಪ್ರಮುಖ ಅಂಶವಾಗಿದೆ. ಆದರೆ ತುಮಕೂರಿನ ದಿಶಾ ಸಮಿತಿಯಲ್ಲಿ ಈ ಕೆಲಸ ನಮಗೆ ಸಂಬಂಧಿಸಿಲ್ಲ ಎಂದುಕೊಂಡಿರ ಬಹುದು.

 ಕಳೆದ ಎರಡು ದಿಶಾ ಸಮಿತಿ ಸಭೆಗಳಲ್ಲಿ ಇಲಾಖಾವಾರು ನೋಡೆಲ್ ಆಫಿಸರ್‍ಸ್ ನೇಮಕದ ಬಗ್ಗೆ ಚರ್ಚೆಯಾಗಿತ್ತು, ಆಗಲೂ ಸಹ ಕೇಂದ್ರ ಸರ್ಕಾರದಿಂದ ಈ ಮಾಹಿತಿ ಸಂಗ್ರಹಿಸಲು ಪತ್ರಬಂದಿದೆ ಎಂದು ಯಾವೊಬ್ಬ ಅಧಿಕಾರಿಯೂ ಹೇಳಲಿಲ್ಲ. ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿಯಾದ ಶ್ರೀಮತಿ ಶುಭಕಲ್ಯಾಣ್‌ರವರೇ ಈಗಲಾದರೂ ಬಗ್ಗೆ ಗಮನ ಹರಿಸುವಿರಾ?

ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿರಜನೀಶ್ ರವರೇ ಎಲ್ಲಾ ಜಿಲ್ಲೆಗಳ ದಿಶಾ ಸಮಿತಿಗಳು ಬಗ್ಗೆ ಏನು ಮಾಡಿವೆ ಗಮನಿಸುವಿರಾ?

 ಇಲಾಖಾವಾರು ನೋಡೆಲ್ ಆಫಿಸರ್‍ಸ್‌ಗಳ ಸೋಶಿಯಲ್ ಮೀಡಿಯಾ ಗ್ರೂಪ್ ರಚಿಸಲು ದಿಶಾ ಸಭೆಯಲ್ಲಿ ಸೂಚಿಸಿದರೂ ಇದೂವರೆಗೂ ರಚಿಸಿದ ಹಾಗೆ ಕಾಣಲಿಲ್ಲ.

 ಹೀಗೆ ದಿಶಾ ಸಮಿತಿಗೆ ಸಂಬಂಧಿಸಿದ ಆನೇಕ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಲು ಮತ್ತು ನಿರಂತರವಾಗಿ  ಇಲಾಖೆಗಳ ಸಮನ್ವಯತೆ ಮತ್ತು  ತಾಜಾ ಮಾಹಿತಿ  DISHA MONITORING CELL # DISHA TASK FORCE ರಚಿಸಲು ರಾಜ್ಯ ದಿಶಾ ಸಮಿತಿ ಪ್ರಸ್ತಾವನೆ ಸಿದ್ಧಪಡಿಸಲು ಚಿಂತನೆ ನಡೆಸಿದೆಯಂತೆ.

  ತುಮಕೂರಿನ ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಈ ಬಗ್ಗೆ ತನ್ನದೇ ಆದ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲು ಆರಂಭಿಸಿದೆ. ಈ ಹಿನ್ನಲೆಯಲ್ಲಿ NIC ಗೆ ಭೇಟಿನೀಡಿದಾಗ ಈ ಪತ್ರ ದೊರೆಯಿತು. ತುಮಕೂರು ಜಿಲ್ಲಾ ದಿಶಾ ಸಮಿತಿ ಚಿಂತನೆಗೂ  ಮೊದಲೇ ಕೇಂದ್ರ ಸರ್ಕಾರ ಈ ಬಗ್ಗೆ ಸುತ್ತೋಲೆ ಹೊರಡಿಸಿರುವುದು ಮನಸ್ಸಿಗೆ ಖುಷಿ ತಂದಿತು.

 ಪ್ರಸ್ತಾವನೆ ಸಿದ್ಧಪಡಿಸಲು ಒಂದು ವಿಷನ್ ಗ್ರೂಪ್ ರಚಿಸಲು ಮುಂದಾಗಿದ್ದೇವೆ. ಆಸಕ್ತರು ಈ ಸಮಿತಿಯ ಕಾರ್ಯಕ್ರಮಗಳು ಹೇಗಿರಬೇಕು ಎಂಬ ಬಗ್ಗೆ ಸಲಹೆ ನೀಡುವ ಮೂಲಕ ನೋಂದಾಯಿಸಿಕೊಳ್ಳಲು ಮನವಿ.