21st November 2024
Share

TUMAKURU: SHAKTHIPEETA FOUNDATION

ದಿನಾಂಕ:06.09.2020 ನೇ ಭಾನುವಾರ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮಾರಶೆಟ್ಟಿಹಳ್ಳಿ ಸಂಸದರ ಆದರ್ಶ ಗ್ರಾಮದ 5 ನೇ ಸಭೆಯನ್ನು ಕರೆದಿದ್ದಾರೆ. ಪಿಡಿಓ ಮತ್ತು ಆಡಳಿತಾಧಿಕಾರಿ, ಗುಬ್ಬಿ ಇಓ, ಸಂಸದರ ಆದರ್ಶ ಗ್ರಾಮದ ನೋಡೆಲ್ ಆಫೀಸರ್‌ರವರನ್ನು ಆಹ್ವಾನಿಸಿದ್ದಾರೆ.

 ಮಾರಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆಸಿದ ಪ್ರಥಮ ಸಭೆ, ಗುಬ್ಬಿ ಸಿಐಟಿಯಲ್ಲಿ ನಡೆಸಿದ್ದ ಎರಡನೇ ಸಭೆ, ಗುಬ್ಬಿ ಇಓ ರವರು ನಡೆಸಿದ್ದ ಮೂರನೇ ಸಭೆ ಮತ್ತು ತುಮಕೂರಿನಲ್ಲಿ ನಡೆಸಿದ್ದ ನಾಲ್ಕನೇ ಸಭೆ ನಡವಳಿಕೆ, ಪಾಲಾನಾ ವರದಿ ಮತ್ತು ಆಕ್ಷನ್ ಪ್ಲಾನ್ ಹಾಗೂ ಸಂಸದರ ಆದರ್ಶ ಗ್ರಾಮದ ಮಾರ್ಗ ಸೂಚಿಯಲ್ಲಿರುವ ಯೋಜನೆಗಳ ಬಗ್ಗೆ ವಿವರವಾದ ವರದಿ ಮತ್ತು ಜಿಐಎಸ್ ಲೇಯರ್ ಸಹಿತ ನಕ್ಷೆಯೊಂದಿಗೆ ಹಾಜರಾಗಲು ಸೂಚಿಸಿದ್ದಾರೆ. ಈ ಸಭೆ ಹೊರತು ಪಡಿಸಿ ನೋಡೆಲ್ ಆಫೀಸರ್ ನಡೆಸಿರುವ ಸಭೆಗಳ ಮಾಹಿತಿಯನ್ನು ತರಲು ಸೂಚಿಸಲಾಗಿದೆ.

HOUSING FOR ALL 2022 – 9TH  MEETING: ಜಿ.ಎಸ್.ಬಸವರಾಜ್

 ತುಮಕೂರು ನಗರ, ತುಮಕೂರು ತಾಲ್ಲೂಕು ಮತ್ತು ಗುಬ್ಬಿ ತಾಲ್ಲೂಕಿನ ವಸತಿಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ನಿವೇಶನ ನೀಡಲು ರೆವಿನ್ಯೂ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಒಂಬತ್ತನೇ ಸಭೆಯನ್ನು   ಕರೆದಿದ್ದಾರೆ.

  ಆಯುಕ್ತರು, ಚೀಫ್ ಆಫಿಸರ್, ಇಓ ಮತ್ತು ಪಿಡಿಓಗಳು ನಿವೇಶನ ರಹಿತರ ಪಟ್ಟಿಯೊಂದಿಗೆ ಹಾಜರಾಗಲು ಮತ್ತು ಆಯಾ ಗ್ರಾಮಗಳಲ್ಲಿ ಲಭ್ಯವಿರುವ ಸರ್ಕಾರಿ ಜಮೀನುಗಳ ಮಾಹಿತಿಯೊಂದಿಗೆ ರೆವಿನ್ಯೂ ಅಧಿಕಾರಿಗಳು  ಹಾಜರಾಗಲೂ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

  ತುಮಕೂರು ಉಪವಿಭಾಗಾಧಿಕಾರಿಗಳಾದ ಶ್ರೀ ಅಜಯ್‌ರವರು ಮತ್ತು ಅವರ ರೆವಿನ್ಯೂ ತಂಡ ಅವರ ವ್ಯಾಪ್ತಿಯ ಗ್ರಾಮಗಳ ಮತ್ತು ನಗರ ಪ್ರದೇಶಗಳಿಗೆ ಅಗತ್ಯವಿರುವ ನಿವೇಶನ ನೀಡಲು ದೃಢ ನಿರ್ಧಾರ ಕೈಗೊಂಡು ಅವಿರತವಾಗಿ ಶ್ರಮಿಸುತ್ತಿದ್ದಾರೆ.

  ಈ ಯೋಜನೆಗೆ ನೋಡೆಲ್ ಆಫೀಸರ್ ಆಗಿ ತುಮಕೂರು ಉಪವಿಭಾಗಾಧಿಕಾರಿಗಳಿಗೆ ಜವಾಬ್ಧಾರಿ ನೀಡಲಾಗಿದೆಯಂತೆ. ನಂತರ ಜಿಲ್ಲೆಯ ಉಳಿದ ಎರಡು ಉಪವಿಭಾಗಗಳ ಮಟ್ಟದ ಸಭೆ ನಡೆಸಲು ಸಂಸದರು ಚಿಂತನೆ ನಡೆಸಿದ್ದಾರೆ. 2022 ವೇಳೆಗೆ ಎಲ್ಲರಿಗೂ ಸೂರು ಪ್ರಧಾನಿ ಶ್ರೀ ನರೆಂದ್ರಮೋದಿಯವರ ಕನಸು ನನಸು ಮಾಡಲು ಪಣ ತೊಟ್ಟಿದ್ದಾರೆ.

 ಆಯಾ ಕ್ಷೇತ್ರದ ಶಾಸಕರುಗಳ ಮೌನ ಸರಿಯಲ್ಲ, ಅವರು ಸಹ ಎಲ್ಲರಿಗೂ ಸೂರು’ ಈ ಆಂದೋಲನದಲ್ಲಿ ಭಾಗಿಯಾಗುವುದು ಸೂಕ್ತವಾಗಿದೆ.