24th July 2024
Share
ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಶ್ರೀ ಎಲ್.ಕೆ. ಅತೀಕ್‌ರವರು ಸಂಸದರ ಆದರ್ಶ ಗ್ರಾಮ ಯೋಜನೆಯ ಬಗ್ಗೆ ಸಮಾಲೋಚನೆ ನಡೆಸಿದ ಸಂದರ್ಭ. 8 ವಿಧಾನಸಭಾ ಕ್ಷೇತ್ರಗಳ ಒಂದೊಂದು ಗ್ರಾಮ ಪಂಚಾಯಿತಿಯನ್ನು ಈಗಲೇ ತೆಗೆದು ಕೊಳ್ಳಲು ಯಾವುದೇ ಅಡಚಣೆಯಿಲ್ಲ – ಅತೀಕ್

TUMAKURU:SHAKTHIPEETA FOUNDATION

ದಿನಾಂಕ:06.09.2020 ರಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರ ಅಧ್ಯಕ್ಷತೆಯಲ್ಲಿ ನಡೆದ ಮಾರಶೆಟ್ಟಿಹಳ್ಳಿ ಸಂಸದರ ಆದರ್ಶ ಗ್ರಾಮ ಯೋಜನೆ 5 ನೇ ಸಭೆಯಲ್ಲಿ ಚರ್ಚಿಸಿದ ವಿಚಾರಗಳು ಈ ಕೆಳಕಂಡಂತಿವೆ.

  ಕೊರೋನಾ ಹಿನ್ನಲೆಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಸಂಸದರು ಸಭೆಗೆ ಆಹ್ವಾನಿಸಿರಲಿಲ್ಲ. ಬಹುಷಃ ದಿನಾಂಕ:10.09.2020 ಅಥವಾ ಹಿಂದೆ ಮುಂದೆ ಮಾರಶೆಟ್ಟಿಹಳ್ಳಿಯಲ್ಲಿಯೇ ಈಗಾಗಲೇ ಅನುಮೋದನೆಯಾಗಿರುವ ಕಾಮಗಾರಿಗಳಿಗೆ ಚಾಲನೆ ನೀಡಲು ಸಂಸದರು ಸೂಚಿಸಿದ್ದಾರೆ.

 ಈ ವೇಳೆಗೆ 40 ಪುಟಗಳ ಸಂಸದರ ಆದರ್ಶ ಗ್ರಾಮ ಯೋಜನೆಯ ಮಾರ್ಗಸೂಚಿ ಮತ್ತು ಸಭೆಯ ಅಜೆಂಡಾದ 81 ವಿಷಯಗಳ ಬಗ್ಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಅಧ್ಯಯನ ಮಾಡಿ, ತಮ್ಮ ಇಲಾಖೆಗೆ ಸಂಬಂಧಿಸಿದ ಹಾಗೂ ಬೇರೆ ಇಲಾಖೆಗಳ ಯೋಜನೆಗಳ ಬಗ್ಗೆಯೂ ಸಲಹೆ ನೀಡಲು ಜಿಲ್ಲಾಧಿಕಾರಿಗಳಿಂದ ಅಥವಾ ಸಿಇಓ ರವರಿಂದ ಅಥವಾ ನೋಡೆಲ್ ಆಫೀಸರ್‌ರವರಿಂದ ಅಥವಾ ತಹಶೀಲ್ಧಾರ್ ರವರಿಂದ ಅಥವಾ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯಿಂದ ಲಿಖಿತ ಪತ್ರ ಬರಲಿದೆ.

  ಸಭೆ ನಡವಳಿಕೆ ಮತ್ತು ಪತ್ರವನ್ನು ಕಾಯದೇ ಎಲ್ಲಾ ಇಲಾಖೆಗಳ ಅಧಿಕಾರಿಗಳು ಯೋಜನೆಯ ಬಗ್ಗೆ ಚಿಂತನೆ ಆರಂಭಿಸಲು ಸಂಸದರು ಕರೆ ನೀಡಿದ್ದಾರೆ.

ದಿನಾಂಕ:06.09.2020 ರಿಂದ ದಿನಾಂಕ:06.10.2020 ರವರೆಗೆ ಸಂಸದರ ಆದರ್ಶ ಗ್ರಾಮ ಮಾಸ ಆಚರಣೆ ಅಂದೋಲನ ಹಮ್ಮಿಕೊಳ್ಳುವುದು.

  1. ಸಂಸದರ ಆದರ್ಶ ಗ್ರಾಮದ ಮಾರ್ಗ ಸೂಚಿಯಲ್ಲಿರುವ ಯೋಜನೆಗಳ ಬಗ್ಗೆ ವಿವರವಾದ ವರದಿ – ಪಿಡಿಓ.
  2. ಸಂಸದರ ಆದರ್ಶ ಗ್ರಾಮದ ಮಾರ್ಗ ಸೂಚಿಯಲ್ಲಿರುವ ಅನುಬಂಧ 2 ಪ್ರಕಾರ ಗ್ರಾಮ ಪಂಚಾಯಿತ್ ಮಟ್ಟದಲ್ಲಿ ಭರ್ತಿಮಾಡಬೇಕಾದ ಮೂಲಭೂತ ಸೌಕರ್ಯಗಳ ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ ನಕ್ಷೆ – ಪಿಡಿಓ
  3. ಸಂಸದರ ಆದರ್ಶ ಗ್ರಾಮದ ನೋಡೆಲ್ ಆಫೀಸರ್ ನಡೆಸಿರುವ ಸಭೆಗಳ ಮಾಹಿತಿ – ಪಿಡಿಓ
  4. ಮಾರಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದ ಪ್ರಥಮ ಸಭೆ – ಪಾಲಾನಾ ವರದಿ – ಪಿಡಿಓ
  5. ಗುಬ್ಬಿ ಸಿಐಟಿಯಲ್ಲಿ ನಡೆದ ಎರಡನೇ ಸಭೆ – ಪಾಲಾನಾ ವರದಿ – ಇಓ
  6. ಗುಬ್ಬಿ ಇಓ ರವರು ನಡೆದ ಮೂರನೇ ಸಭೆ – ಪಾಲಾನಾ ವರದಿ – ಇಓ
  7. ತುಮಕೂರಿನಲ್ಲಿ ನಡೆದ ನಾಲ್ಕನೇ ಸಭೆ ನಡವಳಿಕೆ – ಪಾಲಾನಾ ವರದಿ – ಪಿಡಿಓ
  8. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತ್ ಸಂಸದರ ಆದರ್ಶ ಗ್ರಾಮ ಯೋಜನೆಗೆ ತುಮಕೂರಿನ ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ  ಸೇವೆ ಪಡೆಯುತ್ತಿರುವ ಮಾಹಿತಿ  – ಪಿಡಿಓ
  9. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತ್ ಸಂಸದರ ಆದರ್ಶ ಗ್ರಾಮ ಯೋಜನೆಗೆ ಗುಬ್ಬಿ ಶ್ರೀ ಚನ್ನಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ದತ್ತು ಗ್ರಾಮ ಯೋಜನೆಗಳು, ಪ್ರಾಜೆಕ್ಟ್ ವರ್ಕ್ಸ್  ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಆಕ್ಟಿವಿಟಿ ಪಾಯಿಂಟ್ಸ್  ಸೇವೆ ಪಡೆಯುತ್ತಿರುವ ಮಾಹಿತಿ – ಪಿಡಿಓ
  10. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸಂಸದರ ಆದರ್ಶ ಗ್ರಾಮ ಯೋಜನೆಗೆ ಸಂಬಂಧಿಸಿದಂತೆ ಬಂದಿರುವ ಪತ್ರ ಮತ್ತು ಅವುಗಳಿಗೆ ಕೈಗೊಂಡಿರುವ ವರದಿ- ನೋಡೆಲ್ ಆಫೀಸರ್
  11. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಟೋಪೋಶೀಟ್‌ಗಳಲ್ಲಿರುವ  ಇಲಾಖಾವಾರು ಇತಿಹಾಸ ಸಹಿತ ಮಾಹಿತಿಯುಳ್ಳ ಜಿಐಎಸ್ ಲೇಯರ್ – ಪಿಡಿಓ
  12. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಗೂಗಲ್ ಇಮೇಜ್‌ವಾರು, ಇಲಾಖಾವಾರು ಇತಿಹಾಸ ಸಹಿತ ಮಾಹಿತಿಯುಳ್ಳ ಜಿಐಎಸ್ ಲೇಯರ್ – ಪಿಡಿಓ
  13. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತ್ ವ್ಯಾಪ್ತಿಯ ವಿಲೇಜ್ ಮ್ಯಾಪ್‌ವಾರು  ಇಲಾಖಾವಾರು ಇತಿಹಾಸ ಸಹಿತ ಮಾಹಿತಿಯುಳ್ಳ ಜಿಐಎಸ್ ಲೇಯರ್ – ಪಿಡಿಓ
  14. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ವ್ಯಕ್ತಿವಾರು ಪಲಾನುಭವಿಗಳ, ಇಲಾಖಾವಾರು ಇತಿಹಾಸ ಸಹಿತ ಮಾಹಿತಿಯುಳ್ಳ ಜಿಐಎಸ್ ಲೇಯರ್ – ಪಿಡಿಓ
  15. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಕುಟುಂಬವಾರು ಪಲಾನುಭವಿಗಳ, ಇಲಾಖಾವಾರು ಇತಿಹಾಸ ಸಹಿತ ಮಾಹಿತಿಯುಳ್ಳ ಜಿಐಎಸ್ ಲೇಯರ್ – ಪಿಡಿಓ
  16. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಖಾಸಗಿ ಸರ್ವೆನಂಬರ್‌ವಾರು ಇಲಾಖಾವಾರು ಇತಿಹಾಸ ಸಹಿತ ಮಾಹಿತಿಯುಳ್ಳ ಜಿಐಎಸ್ ಲೇಯರ್ – ತಹಶೀಲ್ಧಾರ್
  17. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಸರ್ಕಾರಿ ಸರ್ವೆನಂಬರ್‌ವಾರು ಇಲಾಖಾವಾರು ಇತಿಹಾಸ ಸಹಿತ ಮಾಹಿತಿಯುಳ್ಳ ಜಿಐಎಸ್ ಲೇಯರ್ – ತಹಶೀಲ್ಧಾರ್
  18. ಸಂಸದರ ಆದರ್ಶ ಗ್ರಾಮ ಯೋಜನೆ ಮಾರ್ಗಸೂಚಿ ಅಂಶಗಳ ಪ್ರಕಾರ ಇಲಾಖಾವಾರು ಅಧಿಕಾರಿಗಳ ಪಟ್ಟಿ ಮತ್ತು ಅವರು ಕೈಗೊಳ್ಳಲು ಉದ್ದೇಶಿಸಿರುವ ಯೋಜನೆಗಳ ಪ್ರಸ್ತಾವನೆ – ಇಓ
  19. ಸಂಸದರ ಆದರ್ಶ ಗ್ರಾಮದ ಆಕ್ಷನ್ ಪ್ಲಾನ್ – ನೋಡೆಲ್ ಆಫೀಸರ್.
  20. ಗ್ರಾಮ ಪಂಚಾಯಿತಿ ಕೆ.ಡಿ.ಪಿ. ಸಭೆಗೆ ಆಹ್ವಾನಿಸುವ ವಿವಿಧ ಇಲಾಖೆ ಅಧಿಕಾರಿಗಳ ಪಟ್ಟಿ – ಪಿಡಿಓ
  21. ಕೆ.ಡಿ.ಪಿ. ಪ್ರಕಾರ 5 ವರ್ಷದ ದೂರದೃಷ್ಠಿ ಯೋಜನೆ – ಪಿಡಿಓ
  22. ಮಿಷನ್ ಅಂತ್ಯೋದಯ ಡಾಕ್ಯುಮೆಂಟ್ – ಪಿಡಿಓ
  23. ನಮ್ಮ ಗ್ರಾಮ-ನಮ್ಮ ಯೋಜನೆ ವರದಿ – ಪಿಡಿಓ
  24. ಹೆಚ್.ಎ.ಎಲ್ ಸ್ಮಾರ್ಟ್ ವಿಲೇಜ್ ವರದಿ- ಎ.ಸಿ.
  25. ಸರ್ಕಾರಿ ಜಮೀನುಗಳ ಜಿಐಎಸ್ ಲೇಯರ್- ತಹಶೀಲ್ಧಾರ್
  26. ಜಲಸಂಗ್ರಹಾಗಾರಗಳು ಮತ್ತು ಕರಾಬು ಹಳ್ಳಗಳ ಒತ್ತುವರಿ ಮಾಹಿತಿ ಸಹಿತ ಜಿಐಎಸ್ ಲೇಯರ್ – ತಹಶೀಲ್ಧಾರ್.
  27. ಜಲಸಂಗ್ರಹಾಗಾರಗಳು ಮತ್ತು ಕರಾಬು ಹಳ್ಳಗಳ ಅಭಿವೃದ್ಧಿ ಮಾಹಿತಿ ಸಹಿತ ಜಿಐಎಸ್ ಲೇಯರ್ – ಎಇಇ ಜಿ.ಪಂ.
  28. ಚರಂಡಿಗಳ  ಅಭಿವೃದ್ಧಿ ಮಾಹಿತಿ ಸಹಿತ ಜಿಐಎಸ್ ಲೇಯರ್ – ಎಇಇ ಜಿ.ಪಂ.
  29. ಮಾರುಕಟ್ಟೆ ಅಭಿವೃದ್ಧಿ ಮಾಹಿತಿ ಸಹಿತ ಜಿಐಎಸ್ ಲೇಯರ್ – ಎಪಿಎಂಸಿ ಕಾರ್ಯದರ್ಶಿ.
  30. ಯುವಸಂಘಗಳ ಮತ್ತು ಆಟದ ಮೈದಾನಗಳ ಅಭಿವೃದ್ಧಿ ಮಾಹಿತಿ ಸಹಿತ ಜಿಐಎಸ್ ಲೇಯರ್ – ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ.
  31. ಸ್ತ್ರೀಶಕ್ತಿ ಸಂಘಗಳ, ಫೆಡ್‌ರೇಷನ್‌ಗಳ ಮತ್ತು ಉತ್ಪಾದಿಸುವ ಉತ್ಪನ್ನಗಳ ಅಭಿವೃದ್ಧಿ ಮಾಹಿತಿ ಸಹಿತ ಜಿಐಎಸ್ ಲೇಯರ್ – ಮಹಿಳಾ ಮತ್ತು ಮಕ್ಕಳ ಇಲಾಖೆ.
  32. ಅಂಗನವಾಡಿಗಳ ಅಭಿವೃದ್ಧಿ ಮಾಹಿತಿ ಸಹಿತ ಜಿಐಎಸ್ ಲೇಯರ್ – ಮಹಿಳಾ ಮತ್ತು ಮಕ್ಕಳ ಇಲಾಖೆ.
  33. ಹಿರಿಯನಾಗರೀಕರ ಸಲಹೆಗಳ ಮೇರೆಗೆ ಅಭಿವೃದ್ಧಿ ಮಾಹಿತಿ ಸಹಿತ ಜಿಐಎಸ್ ಲೇಯರ್ – ಹಿರಿಯ ನಾಗರೀಕ ಮತ್ತು ಅಂಗವಿಕಲ ಕಲ್ಯಾಣ ಇಲಾಖೆ.
  34. ಅಂಗವಿಕಲರ ಸಲಹೆಗಳ ಮೇರೆಗೆ ಅಭಿವೃದ್ಧಿ ಮಾಹಿತಿ ಸಹಿತ ಜಿಐಎಸ್ ಲೇಯರ್ – ಹಿರಿಯ ನಾಗರೀಕ ಮತ್ತು ಅಂಗವಿಕಲ ಕಲ್ಯಾಣ ಇಲಾಖೆ.
  35. ಸಮಾಜ ಕಲ್ಯಾಣ ಇಲಾಖೆಯ ಅಭಿವೃದ್ಧಿ ಮಾಹಿತಿ ಸಹಿತ ಜಿಐಎಸ್ ಲೇಯರ್ – ಸಮಾಜ ಕಲ್ಯಾಣ ಇಲಾಖೆ.
  36. ಬೆಸ್ಕಾಂ ಯೋಜನೆಗಳ ಜಿಐಎಸ್ ಲೇಯರ್ ಸಹಿತ ಪ್ರಸ್ತಾವನೆ- ಬೆಸ್ಕಾಂ ಇಲಾಖೆ.
  37. ಸ್ವಯಂ ಉದ್ಯೋಗದ ಹಾಲಿ ಇರುವ ಮತ್ತು ಹೊಸದಾಗಿ ಮಾಡಲು ಉದ್ದೇಶಿಸಿರುವ ಅಂಕಿ ಅಂಶಗಳ ಜಿಐಎಸ್ ಲೇಯರ್ ಸಹಿತ ಪ್ರಸ್ತಾವನೆ- ಕೈಗಾರಿಕಾ ಇಲಾಖೆ.
  38. ಕುಶಲಕರ್ಮಿಗಳ ಅಂಕಿ ಅಂಶಗಳ ಜಿಐಎಸ್ ಲೇಯರ್ ಸಹಿತ ಪ್ರಸ್ತಾವನೆ- ಕೈಗಾರಿಕಾ ಇಲಾಖೆ.
  39. ಎರಿಯಾ ಬ್ಯಾಂಕ್‌ಗಳ ವಿವಿದ ಸಾಲಗಳ ಅಂಕಿ ಅಂಶಗಳ ಜಿಐಎಸ್ ಲೇಯರ್ ಸಹಿತ ಪ್ರಸ್ತಾವನೆ- ಲೀಡ್ ಬ್ಯಾಂಕ್.
  40. ವಿವಿಧ ರೋಗಿಗಳ ಅಂಕಿ ಅಂಶಗಳ ಜಿಐಎಸ್ ಲೇಯರ್ ಸಹಿತ ಪ್ರಸ್ತಾವನೆ- ಆರೋಗ್ಯ ಇಲಾಖೆ.
  41. ವಲಸೆದಾರರ ಅಂಕಿ ಅಂಶಗಳ ಜಿಐಎಸ್ ಲೇಯರ್ ಸಹಿತ ಪ್ರಸ್ತಾವನೆ- ಪಿಡಿಓ
  42. ಬಗರ್ ಹುಕುಂ ಹಂಚಿಕೆ ಜಿಐಎಸ್ ಲೇಯರ್ ಸಹಿತ ಪ್ರಸ್ತಾವನೆ- ತಹಶೀಲ್ಧಾರ್.
  43. ವಿವಿಧ ರಸ್ತೆಗಳ ಮೇಲ್ದರ್ಜೆ ಜಿಐಎಸ್ ಲೇಯರ್ ಸಹಿತ ಪ್ರಸ್ತಾವನೆ- ಲೋಕೊಪಯೋಗಿ ಇಲಾಖೆ.
  44. ಎಂಪ್ಲಾಯಿಮೆಂಟ್ ಅಂಕಿ ಅಂಶಗಳ ಜಿಐಎಸ್ ಲೇಯರ್ ಸಹಿತ ಪ್ರಸ್ತಾವನೆ- ಉದ್ಯೋಗ ವಿನಿಮಯ ಇಲಾಖೆ.
  45. ನಬಾರ್ಡ್ ಅಂಕಿ ಅಂಶಗಳ ಜಿಐಎಸ್ ಲೇಯರ್ ಸಹಿತ ಪ್ರಸ್ತಾವನೆ- ನಬಾರ್ಡ್ ಅಧಿಕಾರಿ
  46. ಜಲಶಕ್ತಿ ಅಭಿಯಾನದ ಜಿಐಎಸ್ ಲೇಯರ್ ಸಹಿತ ಪ್ರಸ್ತಾವನೆ – ಹೇಮಾವತಿ ಇಲಾಖೆ.
  47. ಜಲಜೀವನ್ ಮಿಷನ್ ಜಿಐಎಸ್ ಲೇಯರ್ ಸಹಿತ ಪ್ರಸ್ತಾವನೆ- ಕುಡಿಯುವ ನೀರು ವಿಭಾಗ
  48. ಗ್ರಾಮ, ಕಾಲೋನಿ, ತಾಂಡವಾರು ನಿವೇಶನ ರಹಿತರ ಜಿಐಎಸ್ ಲೇಯರ್- ಪಿಡಿಓ
  49. ಗ್ರಾಮ, ಕಾಲೋನಿ, ತಾಂಡವಾರು ವಸತಿ ರಹಿತರ ಜಿಐಎಸ್ ಲೇಯರ್ – ಪಿಡಿಓ
  50. ಗ್ರಾಮ, ಕಾಲೋನಿ, ತಾಂಡವಾರು ಮನೆಗಳು ಬೀಳುವ ಸ್ಥಿತಿಯಲ್ಲಿರುವ ಜಿಐಎಸ್ ಲೇಯರ್ – ಪಿಡಿಓ
  51. ಗ್ರಾಮ, ಕಾಲೋನಿ, ತಾಂಡವಾರು ಅಲೆಮಾರಿ ವಸತಿಗಳ ಜಿಐಎಸ್ ಲೇಯರ್ – ಪಿಡಿಓ
  52. GOK ದಿನಾಂಕ: 27.08.2020  ರಂದು ನೀಡಿರುವ ಸುತ್ತೋಲೆ ಪ್ರಕಾರ ಗ್ರಾಮ ಪಂಚಾಯಿತಿ ಹಾಗೂ ಈ ಗ್ರಾಮಗಳ ವ್ಯಾಪ್ತಿಯ ಹೋಬಳಿ ಮಟ್ಟದ ಸಹಕಾರ ಸಂಸ್ಥೆಗಳ ಜಿಐಎಸ್ ಲೇಯರ್ – ಸಹಕಾರ ಇಲಾಖೆ ಸಿಡಿಓ
  53. ಗ್ರಾಮ, ಕಾಲೋನಿ, ತಾಂಡವಾರು ಮತ್ತು ಸರ್ವೆ ನಂಬರ್‌ಗಳಲ್ಲಿರುವ ಎಲ್ಲಾ ವಿಧವಾದ ಕಟ್ಟಡಗಳ ಜಿಐಎಸ್ ಲೇಯರ್ – ಪಿಡಿಓ
  54. ಗ್ರಾಮ, ಕಾಲೋನಿ, ತಾಂಡವಾರು ಮತ್ತು ಸರ್ವೆ ನಂಬರ್‌ಗಳಲ್ಲಿರುವ ಎಲ್ಲಾ ವಿಧವಾದ ಕಟ್ಟಡಗಳ -ಇ-ಸ್ವತ್ತು ಜಿಐಎಸ್ ಲೇಯರ್ – ಪಿಡಿಓ
  55. ಸೋಶಿಯಲ್ ಮೀಡಿಯಾ, ಗೋಡೆ ಬರಹ ಮತ್ತು ಇತರೆ ಪ್ರಚಾರಗಳ ಬಗ್ಗೆ ವರದಿ – ಪಿಡಿಓ
  56. ಗ್ರಾಮ ಪಂಚಾಯಿತಿಗೊಂದು ಕೃಷಿ ಪತ್ತಿನ ಸಹಕಾರ ಸಂಘದ ಪ್ರಸ್ತಾವನೆ – ಸಹಕಾರ ಇಲಾಖೆ ಸಿಡಿಓ
  57. ಕುಂದರನಹಳ್ಳಿ ಪೋಲೀಸ್ ಸ್ಟೇಷನ್ ಪ್ರಸ್ತಾವನೆ – ಪೋಲೀಸ್ ಇಲಾಖೆ
  58. ಅರಣ್ಯ ಇಲಾಖೆ ಜಿಐಎಸ್ ಲೇಯರ್ ಸಹಿತ ಪ್ರಸ್ತಾವನೆ – ಅರಣ್ಯ ಇಲಾಖೆ
  59. ಸಾಮಾಜಿಕ ಅರಣ್ಯ ಇಲಾಖೆ ಜಿಐಎಸ್ ಲೇಯರ್ ಸಹಿತ ಪ್ರಸ್ತಾವನೆ – ಸಾಮಾಜಿಕ ಅರಣ್ಯ ಇಲಾಖೆ
  60. ಪ್ರವಾಸೋಧ್ಯಮ ಇಲಾಖೆ ಜಿಐಎಸ್ ಲೇಯರ್ ಸಹಿತ ಪ್ರಸ್ತಾವನೆ – ಪ್ರವಾಸೋಧ್ಯಮ ಇಲಾಖೆ
  61. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಿಧವಾದ ರಸ್ತೆಗಳ ಜಿಐಎಸ್ ಲೇಯರ್ ಸಹಿತ ಪ್ರಸ್ತಾವನೆ – ಎಇಇ ಜಿಪಂ ನೋಡೆಲ್ ಆಫೀಸರ್ (ರೈಲ್ವೆ, ರಾಷ್ಟ್ರೀಯ ಹೆದ್ಧಾರಿ ಸೇರಿದಂತೆ ಎಲ್ಲಾ ಇಲಾಖೆಗಳು)
  62. ರೈತರ ಜಮೀನುಗಳಿಗೆ ಹಾಲಿ ಇರುವ/ ಹಾಲಿ ರೂಢಿಯಲ್ಲಿರುವ/ ಹೊಸದಾಗಿ ಮನವಿ ಸಲ್ಲಿಸಿರುವ ಸರ್ಕಾರ ಕರಾಬು ದಾರಿ ಜಿಐಎಸ್ ಲೇಯರ್ ಸಹಿತ ಪ್ರಸ್ತಾವನೆ- ತಹಶೀಲ್ಧಾರ್.
  63. ಆಸ್ಪತ್ರೆ ಪ್ರಸ್ತಾವನೆ – ಆರೋಗ್ಯ ಇಲಾಖೆ.
  64. ಕೃಷಿ ಬೆಳೆ ಮತ್ತು ಉತ್ಪನ್ನಗಳ ಕ್ಲಸ್ಟರ್ – ಕೃಷಿ ಇಲಾಖೆ.
  65. ತೋಟಗಾರಿಕಾ ಬೆಳೆ ಮತ್ತು ಉತ್ಪನ್ನಗಳ – ತೋಟಗಾರಿಕೆ ಇಲಾಖೆ.
  66. ಪಶುಸಂಗೋಪನಾ ಇಲಾಖೆಯ ಅಭಿವೃದ್ಧಿ ಜಿಐಎಸ್ ಲೇಯರ್ ಸಹಿತ ಪ್ರಸ್ತಾವನೆ – ಪಶುಸಂಗೋಪನಾ ಇಲಾಖೆ.
  67. ಮಿನುಗಾರಿಕಾ ಕ್ಲಸ್ಟರ್ – ಮೀನುಗಾರಿಕಾ ಇಲಾಖೆ.
  68. ಆಯುಷ್ ಆಸ್ಪತ್ರೆ – ಆಯುಷ್ ಇಲಾಖೆ.
  69. ಶಿಕ್ಷಣ ಸಂಸ್ಥೆಗಳ ಜಿಐಎಸ್ ಲೇಯರ್ ಸಹಿತ ಪ್ರಸ್ತಾವನೆ – ಬಿಇಓ
  70. ಘನ ತ್ಯಾಜ್ಯ ವಸ್ತು ಘಟಕ- ಪಿಡಿಓ
  71. ತಿಪ್ಪೆ ಗುಂಡಿಗಳ  ಜಿಐಎಸ್ ಲೇಯರ್ ಸಹಿತ ಪ್ರಸ್ತಾವನೆ – ಪಿಡಿಓ
  72. ಭಾರತ್ ನೆಟ್ ವರ್ಕ್ – ಬಿ.ಎಸ್.ಎನ್.ಎಲ್.
  73. ಜಿಐಎಸ್ ಲೇಯರ್ – ಎನ್.ಆರ್.ಡಿ.ಎಂ.ಎಸ್ ಜಿಪಂ/ಎನ್.ಐ.ಸಿ ಡಿಸಿ ಆಫೀಸ್/ತುಮಕೂರು-ಜಿಐಎಸ್ (ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಬೆಂಗಳೂರು)
  74. ಸಾಮಾಜಿಕ ಭಧ್ರತೆ ಜಿಐಎಸ್ ಲೇಯರ್ ಸಹಿತ ಪ್ರಸ್ತಾವನೆ- ತಹಶೀಲ್ಧಾರ್.
  75. ಎಫ್.ಐ.ಆರ್ ಜಿಐಎಸ್ ಲೇಯರ್ – ಪೋಲೀಸ್ ಇಲಾಖೆ.
  76. ಪೋಲೀಸ್ ಬೀಟ್ ಜಿಐಎಸ್ ಲೇಯರ್ – ಪೋಲೀಸ್ ಇಲಾಖೆ.
  77. ಸರ್ಕಾರಿ ಜಮೀನುಗಳಲ್ಲಿರುವ ಕಟ್ಟಡಗಳ ಜಿಐಎಸ್ ಲೇಯರ್ ಸಹಿತ ಪ್ರಸ್ತಾವನೆ – ಪಿಡಿಓ/ ತಹಶೀಲ್ಧಾರ್. (ರೆವಿನ್ಯೂ ಇಲಾಖೆಯಿಂದ ಬಿಡುಗಡೆ ಮಾಡಿ, ಗ್ರಾಮ ಪಂಚಾಯತ್ ಇಲಾಖೆಗೆ ವರ್ಗಾವಣೆ ಮಾಡುಲು ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ)
  78. ಪಶ್ಚಿಮ ಘಟ್ಟಗಳ ಮಾದರಿಯಲ್ಲಿ ಪೂರ್ವಘಟ್ಟಗಳ ಸಮಗ್ರ ಅಭಿವೃದ್ಧಿಗಾಗಿ ಜಿಐಎಸ್ ಲೇಯರ್ ಸಹಿತ ಪ್ರಸ್ತಾವನೆ- ಪ್ರವಾಸೋಧ್ಯಮ ಇಲಾಖೆ.
  79. ಮುಜರಾಯಿ ಇಲಾಖೆ ಜಿಐಎಸ್ ಲೇಯರ್ ಸಹಿತ ಪ್ರಸ್ತಾವನೆ- ಮುಜರಾಯಿ ಇಲಾಖೆ.
  80. ಹೆಚ್.ಎ.ಎಲ್ ಸ್ಮಾರ್ಟ್ ವಿಲೇಜ್ ವ್ಯಾಪ್ತಿಯ 71 ಗ್ರಾಮಗಳ ಲೇಯರ್- ಎಇಇ ಜಿ.ಪಂ.
  81. ಸಂಸದರ ಆದರ್ಶ ಗ್ರಾಮ ಮತ್ತು ಹೆಚ್.ಎ.ಎಲ್ ಸ್ಮಾರ್ಟ್ ವಿಲೇಜ್ ವ್ಯಾಪ್ತಿಯನ್ನು ಸ್ವಮಿತ್ವ ಯೋಜನೆಗೆ ಅಳವಡಿಸುವುದು.
  82. ಅಧ್ಯಕ್ಷರ ಅಪ್ಪಣೆ ಮೇರೆಗೆ ಬರುವ ಇತರೆ ವಿಚಾರಗಳು.

ಈ ಅಜೆಂಡಾ ಪ್ರತಿಯ ಮೇಲೆ ಸಂಸದರು ಪಿಡಿಓ ರವರಿಗೆ ಲಿಖಿತ ಸೂಚನೆ ನೀಡಿದ್ದಾರೆ.   

ಜೊತೆಗೆ ಆಸಕ್ತರು ಯೋಜನೆಯ ಮಾಸ್ಟರ್ ಪ್ಲಾನ್ ಕರಡು ಸಿದ್ಧಪಡಿಸಲು ತಮ್ಮ ಸಲಹೆಗಳನ್ನು ನಮ್ಮ ಸಂಸ್ಥೆ ಆಹ್ವಾನಿಸಿದೆ. ಇದು ವಿಶ್ವದ ಬೆಸ್ಟ್ ಪ್ರಾಕ್ಟಿಸ್ ಯೋಜನೆಗಳಲ್ಲಿ ಒಂದಾಗಲಿದೆ.