26th December 2024
Share

TUMAKURU:SHAKTHI PEETA FOUNDATION

ಕೇಂದ್ರ ಸರ್ಕಾರ ದೇಶದ ಎಲ್ಲಾ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ದಿಶಾ ಸಮಿತಿಗಳನ್ನು ರಚಿಸಿದೆ. ದಿಶಾ ಸಮಿತಿಯ ಪ್ರಮುಖ ಉದ್ದೇಶ ಕೇಂದ್ರ ಸರ್ಕಾರದ ಯೋಜನೆಗಳ ಯಶಸ್ವಿ ಅನುಷ್ಠಾನ, ಕಾಲಮಿತಿಯೊಳಗೆ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿದೆ.

 ಕೇಂದ್ರ ಸರ್ಕಾರ ಜಲಶಕ್ತಿ ಅಭಿಯಾನ ಅರಂಭಿಸಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಅಟಲ್ ಭೂಜಲ್ ಯೋಜನೆ ಹೀಗೆ ಹಲವಾರು ಯೋಜನೆ ಜಾರಿಗೊಳಿಸಿದೆ, ಜಲಜೀವನ್ ಮಿಷನ್ ಯೋಜನೆಯಡಿ ದೇಶದ ಪ್ರತಿ ಮನೆ ಮನೆಗೂ 2023 ರೊಳಗೆ ನಲ್ಲಿ ಮೂಲಕ ಶಾಶ್ವತವಾದ ಶುದ್ಧಕುಡಿಯುವ ನೀರು ಸರಬರಾಜು ಮಾಡಲು ಕಾಲಮಿತಿ ನಿಗದಿಗೊಳಿಸಿದೆ.

 ಕಾಲಮಿತಿ ನಿಗದಿಗೊಳಿಸಿರುವ ಜಲಶಕ್ತಿ ಸಚಿವಾಲಯದ ಯೋಜನೆಗಳ ಶೇ 100 ರಷ್ಟು ಜಾರಿಗೊಳಿಸುವ ಮೂಲಕ ಇತಿಹಾಸ ಸೃಷ್ಠಿಸಲು ಬಿ ಎಸ್ ವೈ ಮುಂದಾಗಿದ್ದಾರೆ. ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ಮಟ್ಟದ ದಿಶಾ ಸಮಿತಿಗಳಿಗೆ ರಾಜ್ಯದಿಂದ ಒಬ್ಬೊಬ್ಬ ಸದಸ್ಯರನ್ನು ನೇಮಿಸಬೇಕಿದೆ.

  ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ದಿಶಾ ಸಮಿತಿಗಳಿಗೆ ಸಿವಿಲ್ ಇಂಜಿನಿಯರ್ ವಿಭಾಗದ ಮುಖ್ಯ ಇಂಜನಿಯರ್‌ಗಳನ್ನು ಸದಸ್ಯರಾಗಿ ನೇಮಿಸಿ. ಜಲಶಕ್ತಿ ಸಚಿವಾಲಯದ ಯೋಜನೆಗಳನ್ನು ದಿಶಾ ಸಮಿತಿ ಸಭೆಗಳಲ್ಲಿ ಚರ್ಚಿಸಿ ಉತ್ತಮವಾದ ನೀಡ್ ಬೇಸ್ಡ್ ಯೋಜನೆಗಳನ್ನು ಸಿದ್ಧಪಡಿಸಲು ಚಿಂತನೆ ನಡೆಸಿದ್ದಾರೆ.

 ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳು, ನಗರ ಸ್ಥಳೀಯ ಸಂಸ್ಥೆಗಳು, ತಾಲ್ಲೂಕು ಪಂಚಾಯಿತಿಗಳು, ಜಿಲ್ಲಾ ಪಂಚಾಯಿತಿಗಳು, ಹೋರಾಟಗಾರರು, ಸರ್ವಪಕ್ಷಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ಎಲ್ಲರೂ ಒಪ್ಪುವ ಯೋಜನೆಯ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವ ಮೂಲಕ ದೇಶಕ್ಕೆ ಮಾದರಿ ಯೋಜನೆ ರೂಪಿಸಲಿದ್ದಾರೆ.

 ಪೂರಕವಾಗಿ ಹಲವಾರು ಯೋಜನೆಗಳನ್ನು 2020-2021 ನೇ ಸಾಲಿನ ಆಯವ್ಯಯದಲ್ಲೂ ಈಗಾಗಲೇ ಮಂಡಿಸಿದ್ದಾರೆ. ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರಿಗೂ ನದಿಜೋಡಣೆ, ರಾಜ್ಯದ ಎಲ್ಲಾ ಕೆರೆಗಳಿಗೆ ನದಿ ನೀರು ತುಂಬಿಸುವುದು, ಸುಮಾರು 484 ಟಿ.ಎಂ.ಸಿ ಅಡಿ ನೀರಿನ ಯೋಜನೆಯನ್ನು ರಾಜ್ಯದ ನದಿ ಪಾತ್ರಗಳ ಜೋಡಣೆ ಮಾಡಲು ಎನ್.ಪಿ.ಪಿ. ಯೋಜನೆಯಡಿಯಲ್ಲಿ ಕೈಗೊಳ್ಳಲು ಮೂರು ಪತ್ರಗಳನ್ನು ಬರೆಯುವ ಮೂಲಕ ಮನವಿ ಮಾಡಿದ್ದಾರೆ.

  ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ದಿನಾಂಕ: 06.10.2020 ರಂದು ಪ್ರಥಮ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ. ನೀರಾವರಿ ಯೋಜನೆಗಳಿಗೆ ಸಂಭಂಧಿಸಿದ ಎಲ್ಲಾ ಸಚಿವರು ಸಮೋರಾಪದಿಯಲ್ಲಿ ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ.