20th December 2024
Share

2020-2021  ನೇ ಸಾಲಿನ ಆಯವ್ಯಯದಲ್ಲಿ ’ಜಲಗ್ರಾಮ ಕ್ಯಾಲೆಂಡರ್ ಮತ್ತು ವಿಲೇಜ್-1’ ಯೋಜನೆ ಘೋಶಿಸಿರುವುದಕ್ಕೆ ಮಾನ್ಯ ಶ್ರೀ ಬಿ.ಎಸ್.ಯಡಿಯೂಪ್ಪನವರನ್ನು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ಕುಂದರನಹಳ್ಳಿ ರಮೇಶ್ ರವರು ಹೃದಯಪೂರ್ವಕವಾಗಿ ಅಭಿನಂದಿಸಿದ್ದು.

TUMAKURU:SHAKTHI PEETA FOUNDATION

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕರ್ನಾಟಕ ರಾಜ್ಯದಲ್ಲಿ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ರಚಿಸಿರುವ ರಾಜ್ಯ ಮಟ್ಟದ ದಿಶಾ ಸಮಿತಿಯ ಮೊದಲ ಸಭೆಯನ್ನು ದಿನಾಂಕ:06.10.2020 ರಂದು ಆಯೋಜಿಸಿದ್ದಾರೆ.

ರಾಜ್ಯದ 2020-2021  ನೇ ಸಾಲಿನ ಆಯವ್ಯಯದಲ್ಲಿ ಈಗಾಗಲೇ ಮಂಡಿಸಿರುವಂತೆ ಜಲಗ್ರಾಮ ಕ್ಯಾಲೆಂಡರ್ ಮತ್ತು ವಿಲೇಜ್-1’ ಬಹುಪಯೋಗಿ ಯೋಜನೆಗಳಿಗೆ ಚಾಲನೆ ನೀಡಲು ವ್ಯಾಪಕ ಜನಾಂದೋಲನ ಹಮ್ಮಿಕೊಳ್ಳುವ ಬಗ್ಗೆ ಚರ್ಚೆ ನಡೆಯಲಿದೆಯಂತೆ.

 ರಾಜ್ಯದ ಒಂದು ಹನಿ ನೀರಿನ ಮತ್ತು ಕೇಂದ್ರ ಸರ್ಕಾರದ ನದಿ ಜೋಡಣೆಯಿಂದ ದೊರೆಯಬಹುದಾದ ನದಿ ನೀರಿನ ಲೆಕ್ಕವುಳ್ಳ ಜಲಗ್ರಾಮ ಕ್ಯಾಲೆಂಡರ್’ ಗಳನ್ನು ರಾಜ್ಯದ 29340  ಗ್ರಾಮಗಳಲ್ಲೂ ತಾಜಾ ಡೇಟಾದೊಂದಿಗೆ ರಚಿಸುವುದು ಮತ್ತು ಪ್ರತಿಯೊಂದು ಗ್ರಾಮದಲ್ಲೂ ವಿಲೇಜ್-1’ ಸ್ಥಾಪಿಸಿ, ಜನತೆಯ ಮನೆ ಬಾಗಿಲಿಗೆ ಸರ್ಕಾರಿ ಸೇವೆ ಮತ್ತು ತಾಜಾ ಡಿಜಿಟಲ್ ಲೈವ್ ಡೇಟಾ ಪಡೆಯುವ ಚಿಂತನೆ ಬಿ.ಎಸ್.ವೈ ರವರದ್ದಾಗಿದೆಯಂತೆ.

 ರಾಜ್ಯದ ರೈತರ ಋಣ ತೀರಿಸಲು ಯಡಿಯೂರಪ್ಪನವರು ಬೃಹತ್ ಯೋಜನೆ ರೂಪಿಸಲು ಇದು ಮೊದಲ ಮೆಟ್ಟಿಲು ಆಗುವುದರಲ್ಲಿ ಸಂಶಯವಿಲ್ಲ, ದಿನಾಂಕ:06.10.2020 ರಿಂದ ಆರಂಭಿಸಿ 06.10.201 ರೊಳಗೆ ಸ್ಪಷ್ಟ ಚಿತ್ರಣದ ಮಾಹಿತಿಯನ್ನು ಪೂರ್ಣ ಗೊಳಿಸಲು ಕಾಲಮಿತಿ ನಿಗದಿಗೊಳಿಸಲು ಯೋಚಿಸಿದ್ದಾರಂತೆ’

 ಕೇಂದ್ರ ಸರ್ಕಾರದ 2020-2021 ನೇ ಸಾಲಿನ ಆಯವ್ಯಯದಲ್ಲಿ ಈಗಾಗಲೇ ಮಂಡಿಸಿರುವಂತೆ ಪಿಪಿಪಿ ಮಾದರಿಯಲ್ಲಿ ಡೇಟಾ ಪಾರ್ಕ್’ ಸ್ಥಾಪಿಸುವ ಮೂಲಕ ಈ ಎರಡು ಯೋಜನೆಗಳಿಗೆ ಚಾಲನೆ ನೀಡಲು ಚಿಂತನೆ ನಡೆದಿದೆಯಂತೆ.

 ನರೇಗಾ ಯೋಜನೆಯಡಿ ಜಲಗ್ರಾಮ ಕ್ಯಾಲೆಂಡರ್’ ರಚಿಸಲು ನಿಯಮ ರೂಪಿಸಲು ಆಯುಕ್ತರಾದ ಶ್ರೀ ಅನಿರುದ್ಧ್ ರವರೊಂದಿಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸಮಾಲೋಚನೆ ನಡೆಸಿದಾಗ ಇದೊಂದು ವಿನೂತನ ಯೋಜನೆ, ಪ್ರಸ್ತಾವನೆ ಬಂದರೆ ಪರೀಶಿಲನೆ ನಡೆಸಿ ಕೇಂದ್ರ ಸರ್ಕಾರದ ಅನುಮತಿ ಪಡೆಯುವುದಾಗಿ ತಿಳಿಸಿದ್ದಾರೆ.

 ಈ ಸಭೆಯಲ್ಲಿ ರಾಜ್ಯದಲ್ಲಿ ಜಲಶಕ್ತಿ ಅಭಿಯಾನವನ್ನು ಯಶಸ್ವಿಗೊಳಿಸಲು, ರಾಜ್ಯ ಮಟ್ಟದಿಂದ ಜಿಲ್ಲಾ ಮಟ್ಟದ ದಿಶಾ ಸಮಿತಿಗಳಿಗೆ ಮುಖ್ಯ ಇಂಜಿನಿಯರ್ ಸಿವಿಲ್ ರವರನ್ನು ನೇಮಕ ಮಾಡುವ ಪ್ರಸ್ತಾಪವಿದೆ.

 ‘ಮುಖ್ಯ ಇಂಜಿನಿಯರ್ ನೇಮಕ ಮಾಡುವಾಗ ಪದನಿಮಿತ್ತವಾಗಿ ನೇಮಿಸದೆ ಆಸಕ್ತಿ ಇರುವ ಇಂಜಿನಿಯರ್ ಗಳನ್ನು ನೇಮಿಸುವುದು ಸೂಕ್ತವಾಗಿದೆ. ಅದೇ ಜಿಲ್ಲೆಯವರು ಅಥವಾ ಆಯಾ ಜಿಲ್ಲೆಯ ಮೇಲೆ ಅವಿನಾಭಾವ ಸಂಬಂಧವಿರುವವರನ್ನು ನೇಮಿಸಿದರೇ ಪ್ರಯೋಜನವಾಗಬಹುದು’

   ಈ ಎರಡು ಯೋಜನೆಗಳ ಮಾತೃ ಇಲಾಖೆ ಯಾವುದಾಗಬೇಕು ಎಂಬ ಬಗ್ಗೆ ಈಗಾಗಲೇ ಸರ್ಕಾರದ ಹಂತದಲ್ಲಿ ಬಹಳಷ್ಟು ಚರ್ಚೆಯಾಗಿದೆ. ಮೊದಲ ದಿಶಾ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬರುವುದರಿಂದ ಈ ಯೋಜನೆಗೆ ಸಂಬಂಧಿಸಿದ ಕೆಳಕಂಡ ಇಲಾಖೆಗಳು ಸ್ಪಷ್ಟ ಅಭಿಪ್ರಾಯಗಳೊಂದಿಗೆ ಸಭೆಗೆ ಮಾಹಿತಿ ನೀಡುವುದು ಅಗತ್ಯವಾಗಿದೆ.

 ಸಾಧ್ಯಾವಾದಲ್ಲಿ ಜಿಲ್ಲಾವಾರು ಮುಖ್ಯ ಇಂಜಿನಿಯರ್‌ಗಳನ್ನು ನೇಮಿಸಲು ಪಟ್ಟಿ ಮಾಡಿ, ಅವರ ಜೊತೆ ಸಮಾಲೋಚನೆ ನಡೆಸಿ ಮಾನ್ಯ ಮುಖ್ಯ ಮಂತ್ರಿಯವರಿಗೆ ಮಾಹಿತಿ ನೀಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆಯಂತೆ.

 ಕೆಳಕಂಡ ಎಲ್ಲಾ ಇಲಾಖೆಗಳ ಮುಖ್ಯಸ್ಥರು ರಾಜ್ಯ ಮಟ್ಟದ ದಿಶಾ ಸಭೆಯ ವೇಳೆಗೆ ಒಂದೆರಡು ಭಾರಿ ಸಮಾಲೋಚನೆ ನಡೆಸುವುದು ಒಳ್ಳೆಯದು.

ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ- ಶ್ರೀ ರಾಕೇಶ್ ಸಿಂಗ್

ಜಲ ಸಂಪನ್ಮೂಲ ಇಲಾಖೆ   ಕಾರ್ಯದರ್ಶಿ- ಶ್ರೀ ಅನಿಲ್ ಕುಮಾರ್

ಯೋಜನಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ – ಶ್ರೀಮತಿ ಶಾಲಿನಿ ರಜನೀಶ್

ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನಕಾರ್ಯದರ್ಶಿ – ಶ್ರೀ ಎಲ್.ಕೆ.ಅತೀಕ್

ಜಲಗ್ರಾಮ ಕ್ಯಾಲೆಂಡರ್ ಬಗ್ಗೆ ಸಣ್ಣ ನೀರಾವರಿ ಕಾರ್ಯದರ್ಶಿ ಶ್ರೀ ಮೃತ್ಯುಂಜಯಸ್ವಾಮಿರವರು ಚರ್ಚಿಸುತ್ತಿರುವ ಸಭೆ ಚಿತ್ರ.

ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ – ಶ್ರೀ ಮೃತ್ಯುಂಜಯ ಸ್ವಾಮಿ

ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ – ಶ್ರೀ ಗುರುಪ್ರಸಾದ್