22nd November 2024
Share

TUMAKURU:SHAKTHI PEETA FOUNDATION

ವರದಿ: ಟಿ.ಆರ್.ರಘೋತ್ತಮರಾವ್. ದಿಶಾ ಸಮಿತಿ ಸದಸ್ಯರು. ತುಮಕೂರು ಜಿಲ್ಲೆ.

  ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ರಾಜ್ಯ ಮಟ್ಟದ ದಿಶಾ ಸಮಿತಿ ಅಧ್ಯಕ್ಷರಾದ  ಶ್ರೀ ಬಿ.ಎಸ್.ಯಡಿಯೂರಪ್ಪನವರ ಆದೇಶದ ಮೇರೆಗೆ ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯರಾಗಿ ಕುಂದರನಹಳ್ಳಿ ರಮೇಶ್‌ರವರನ್ನು ನೇಮಕ ಮಾಡಿದ್ದಾರೆ.

 ರಮೇಶ್‌ರವರು ಸುಮಾರು 4 ದಶಕಗಳ ಕಾಲ ಕುಂದರನಹಳ್ಳಿ ಗ್ರಾಮ ಸಮಗ್ರ ಅಭಿವೃದ್ಧಿ, ಚಿಕ್ಕನಾಯಕನಹಳ್ಳಿ ಶ್ರೀ ತೀರ್ಥರಾಮೇಶ್ವರ ವಜ್ರದ ಸಮಗ್ರ ಅಭಿವೃದ್ಧಿ, ತುಮಕೂರು ನಗರ ಸಮಗ್ರ ಅಭಿವೃದ್ಧಿ, ತುಮಕೂರು ಜಿಲ್ಲೆ ಸಮಗ್ರ ಅಭಿವೃದ್ಧಿ ಹಾಗೂ ಕರ್ನಾಟಕ ರಾಜ್ಯ ಸಮಗ್ರ ಅಭಿವೃದ್ಧಿ ಬಗ್ಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ.

 ಕೇಂದ್ರ ಸರ್ಕಾರದ ತುಮಕೂರು ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ಹಲವಾರು ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಇರುವ ಇವರು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಅಧ್ಯಕ್ಷರಾಗಿ ರಾಜ್ಯ ಮಟ್ಟದ ವಿಷನ್ ಡಾಕ್ಯುಮೆಂಟ್ – 2025 ಸಿದ್ಧಪಡಿಸಿದ್ದಾರೆ.

  ಸರ್ಕಾರಗಳ ಮಟ್ಟದಲ್ಲಿ ವಿಷನ್ ಡಾಕ್ಯುಮೆಂಟ್‌ನ ಎಲ್ಲಾ ವಿಷಯಗಳ ಜಾರಿಗಾಗಿ ಶಕ್ತಿಪೀಠ ಫೌಂಡೇಷನ್ ಸ್ಥಾಪಿಸಿ ನಿರಂತರವಾಗಿ ಶ್ರಮಿಸುವ ಇವರಿಗೆ ದಿಶಾ ಸಮಿತಿಯಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಲು ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು, ತುಮಕೂರು ಜಿಲ್ಲಾ ದಿಶಾ ಸಮಿತಿ ಅಧ್ಯಕ್ಷರು ಹಾಗೂ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿರಜನೀಶ್‌ರವರು ಸೇರಿದಂತೆ ಸಹಕರಿಸಿದ ಎಲ್ಲರಿಗೂ ತುಮಕೂರು ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಈಗಾಗಲೇ ಶಕ್ತಿಪೀಠ ಫೌಂಡೇಷನ್

  1. ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಕನಸಿನ ದಿಶಾ ಮಾರ್ಗ ಸೂಚಿಯಲ್ಲಿನ ಎಲ್ಲಾ ಅಂಶಗಳ ಅನುಷ್ಠಾನ ಮಾಡುವ ಮೂಲಕ ಶ್ರೀ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ   ದಿಶಾ ಸಮಿತಿ ದೇಶದಲ್ಲಿಯೇ ನಂಬರ್-1 ಆಗಲು ಶ್ರಮಿಸುವುದು.
  2. ದಿಶಾ ಮಾರ್ಗ ಸೂಚಿಗೆ ಅಗತ್ಯವಿರುವ ಅಮೆಂಡ್‌ಮೆಂಟ್ ಮಾಡಲು ರಾಜ್ಯ ಸರ್ಕಾರದಿಂದ ಶಿಫಾರಸ್ಸು ಮಾಡಲು ಶ್ರಮಿಸುವುದು.
  3. ಕರ್ನಾಟಕ ರಾಜ್ಯ ದೇಶದ ಎಲ್ಲಾ ರಾಜ್ಯಗಳಿಗಿಂತ ಹೆಚ್ಚಿನ ಅನುದಾನ ಪಡೆದ ರಾಜ್ಯವನ್ನಾಗಿಸಲು ನಿರಂತರವಾಗಿ ಶ್ರಮಿಸುವ ಕಾರ್ಯವನ್ನು ಆರಂಬಿಸಿದ್ದು ಅವರಿಗೆ ಸರ್ಕಾರದ ಜೊತೆ ಜೊತೆಯಾಗಿ ಶ್ರಮಿಸಲು ಹೆಚ್ಚಿನ ಅವಕಾಶ ದೊರೆತಿರುವದು ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದಿದ್ದಾರೆ.