27th July 2024
Share

TUMAKURU:SHAKTHI PEETA FOUNDATION

ದಿನಾಂಕ:30.06.2020  ರಂದು ದಿಶಾ ಸಮಿತಿ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್‌ರವರ ಅಧ್ಯಕ್ಷತೆಯಲ್ಲಿ ನಡೆದ ತುಮಕೂರು ಜಿಲ್ಲಾ ದಿಶಾ ಸಮಿತಿಯ ಸಭೆಯಲ್ಲಿ ಜಿಲ್ಲೆಯ ನಿರುದ್ಯೋಗಿಗಳಿಗೆ ಮತ್ತು ರೈತರ ಬೆಳೆಗಳಿಗೆ ಮೌಲ್ಯವರ್ಧಿತ ಬೆಲೆ ದೊರಕಿಸಲು ಇನ್‌ವೆಸ್ಟ್ ತುಮಕೂರು ನಡೆಸಲು ಅಗತ್ಯವಿರುವ ಮಾಹಿತಿ ಸಂಗ್ರಹಿಸಲು ಮಹತ್ವದ ನಿರ್ಣಯ ಕೈಗೊಳ್ಳಲಾಗಿತ್ತು. ಜಿಲ್ಲಾಧಿಕಾರಿಗಳಾದ ಶ್ರೀ ಡಾ.ರಾಕೇಶ್ ಕುಮಾರ್ ರವರು, ಸಿಇಓ ಶ್ರೀಮತಿ ಶುಭಕಲ್ಯಾಣ್ ರವರು ಸಹಮತ ವ್ಯಕ್ತಪಡಿಸಿದ್ದರು.

 ’ಇನ್‌ವೆಸ್ಟ್ ತುಮಕೂರು ಯೋಜನೆಗೆ ಪೂರಕವಾಗಿ ತುಮಕೂರು ಜಿಲ್ಲೆಯ ಪ್ರತಿಯೊಂದು ಗ್ರಾಮದ ತಾಜಾ ಮಾಹಿತಿ ಸಂಗ್ರಹಿಸಲು ತುಮಕೂರು ಜಿಲ್ಲಾ ದಿಶಾ ಸಮಿತಿ, ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ತುಮಕೂರು ಸ್ಮಾರ್ಟ್ ಸಿಟಿ ಸಂಯುಕ್ತವಾಗಿ ಶ್ರಮಿಸಲು ಪಣ ತೊಟ್ಟಿವೆ. ಇನ್‌ವೆಸ್ಟ್ ತುಮಕೂರು ಅಂದರೆ ಸಭೆ ಮಾಡಿ ತಿಂದು ಉಂಡು ಢಾಂ, ಢೂಂ ಅನ್ನಿಸುವುದಲ್ಲ. ಇಂತಿಷ್ಟು ಉದ್ಯೋಗ ನೀಡಲಾಗಿದೆ ಎಂಬ ಸಾಧನೆಯೇ ಇನ್‌ವೆಸ್ಟ್ ತುಮಕೂರು’

 ತುಮಕೂರು ಸ್ಮಾರ್ಟ್ ಸಿಟಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಹಲವಾರು ಯೋಜನೆಗಳನ್ನು ರೂಪಿಸಲು ಮುಂದಾಗಿದೆ. ಜಿಲ್ಲೆಯ ಬಹುತೇಕ ಭಾಗದ ಯುವಜನತೆ, ಮಹಿಳಾ ಸಂಘ ಸಂಸ್ಥೆಗಳು, ಸ್ತ್ರಿ ಸಂಘಗಳ ಫೆಡರೇಷನ್  ಮತ್ತು ರೈತರು ತುಮಕೂರು ನಗರದಲ್ಲಿ ಉದ್ಯೋಗ ಹರಿಸಿ ಬಂದಿದ್ದಾರೆ. ಹಾಗೇಯೇ ತುಮಕೂರು ನಗರದಲ್ಲಿ ವಾಸವಾಗಿರುವ ಹಲವಾರು ಉದ್ಯೋಗ ಆಕಾಂಕ್ಷಿಗಳು  ಜಿಲ್ಲೆಯ ಮೂಲೆ, ಮೂಲೆಗಳಲ್ಲೂ ಉದ್ದಿಮೆ ಆರಂಭಿಸಿದ್ದಾರೆ.

 ಆದ್ದರಿಂದ ತುಮಕೂರು ಜಿಲ್ಲೆಯನ್ನೆ ಒಂದು ಯುನಿಟ್ ಆಗಿ ಭಾವಿಸಿ, ಡುಡಿಯುವ ಎಲ್ಲಾ ವರ್ಗದ ಜನತೆಗೆ ಹಾಗೂ ಜಿಲ್ಲೆಯಲ್ಲಿ ಬಂಡವಾಳ ಹೂಡಿಕೆ ಮಾಡುವವರಿಗೆ ಬೆರಳ ತುದಿಯಲ್ಲಿ ತಾಜಾ ಡಿಜಿಟಲ್ ಮಾಹಿತಿ ಲಭ್ಯವಾಗುವ ಪೋರ್ಟಲ್ ರಚನೆ ಮಾಡಲು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಸಲಹೆ ನೀಡಿದ್ದಾರೆ.

 ಈ ಪೋರ್ಟಲ್ ಅನ್ನು ಸಿದ್ಧಪಡಿಸಲು ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ,  ಶಕ್ತಿಪೀಠ ಫೌಂಡೇಷನ್ ಮತ್ತು ನೆದರ್ಲ್ಯಾಂಡ್‌ನ ವಿವಿಧ ಕಂಪನಿಯ ಸಲಹಗಾರಾರದ  ತುಮಕೂರಿನ ಲೈವ್‌ಗ್ರೀನ್ ಸಂಸ್ಥೆಯ ಶ್ರೀ ಪ್ರಮೋದ್‌ರವರು ವಿಶೇಷ ಆಸಕ್ತಿವಹಿಸಿದ್ದಾರೆ.

ಶ್ರೀ ಪ್ರಮೋದ್‌ರವರು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೆಶಕರಾದ ಶ್ರೀ ನಾಗೇಶ್‌ರವರು ಮತ್ತು ತುಮಕೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೆಶಕರಾದ ಶ್ರೀ ರಂಗಸ್ವಾಮಿರವರೊಂದಿಗೆ ಮನವಿ ಸಲ್ಲಿಸಿ ನಮ್ಮೆಲ್ಲರ ಕನಸುಗಳನ್ನು ಹಂಚಿಕೊಂಡಿದ್ದರು, ನಾವೆಲ್ಲರೂ  ಸಮಾಲೋಚನೆ ನಡೆಸಿ ಅಕ್ಟೋಬರ್ 2 ರಂದು ಗಾಂಧಿ ಜಯಂತಿಯಂದು  ಇನ್‌ವೆಸ್ಟ್ ತುಮಕೂರು ಜನಾಂದೋಲನ’ ಕ್ಕೆ ಅಧಿಕೃತ ಚಾಲನೆ ನೀಡಲು ಚಿಂತನೆ ನಡೆಸಿದ್ದೆವು.

 ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕೈ ಕಟ್ಟಿಹಾಕಿದ್ದರೂ ಮೌನವಾಗಿ ಪೂರ್ವ ಸಿದ್ಧತೆಗಳು ಆರಂಭವಾಗಿವೆ.  ಮುಂದಿನ ವರ್ಷದ ಗಾಂಧಿ ಜಯಂತಿಯ ವೇಳೆಗೆ ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲಿ, ಕಾಲೋನಿಯಲ್ಲಿ, ತಾಂಡಾದಲ್ಲಿ ಕೇಂದ್ರ ಸರ್ಕಾರದ ಮಿಷನ್ ಅಂತ್ಯೋದಯ ಯೋಜನೆಯಡಿಯಲ್ಲಿನ ಮಾಹಿತಿಗಳು ಸೇರಿದಂತೆ ಮೂಲಭೂತ ಸೌಕರ್ಯಗಳೊಂದಿಗೆ ಜಿಐಎಸ್ ಆಧಾರಿತ ವಿವಿಧ ಲೇಯರ್‌ಗಳ ಮಾಹಿತಿ ಲಭ್ಯವಾಗಲಿದೆ.

 ವರ್ಷದ 365   ದಿವಸಗಳು ಸಹ ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳು, 11 ನಗರ ಸ್ಥಳೀಯ ಸಂಸ್ಥೆಗಳು, 10 ತಾಲ್ಲೂಕು ಪಂಚಾಯಿತಿಗಳು, ಒಂದು ಜಿಲ್ಲಾ ಪಂಚಾಯತ್, 11 ವಿಧಾನಸಭಾ ಕ್ಷೇತ್ರಗಳು, 3 ಲೋಕಸಭಾ ಕ್ಷೇತ್ರಗಳು ಸೇರಿದಂತೆ ಸುಮಾರು 366 ಚುನಾಯಿತ ವರ್ಗದವರ ಮತ್ತು ಅಧಿಕಾರಿಗಳ ನಿರಂತರ ಸಂಪರ್ಕದಿಂದ ಯೋಜನೆಯನ್ನು ಪರಿಪೂರ್ಣವಾಗಿ ಪೂರ್ಣಗೊಳಿಸಲು ಕಾಲಮಿತಿ ನಿಗದಿಗೊಳಿಸಲಾಗಿದೆ.

ವಿಲೇಜ್ –1 ಮೂಲಕ ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲೂ ಕನಿಷ್ಠ ಎರಡು ಸ್ವಯಂ ಉದ್ಯೋಗ ಸೃಷ್ಠಿಯಾಗಲಿವೆ. ಆಯಾ ಗ್ರಾಮದ ವಿಲೇಜ್ –1 ಫಾರ್‌ವಾರ್ಡ್ ಮತ್ತು ಬ್ಯಾಕ್‌ವಾರ್ಡ್ ಲಿಂಕೇಜ್ ಸಂಪರ್ಕ ಸೇತುವೆ ಆಗಲಿವೆ. ಯೋಜನೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಪಿಪಿಪಿ ಯೋಜನೆಯಾಗಲಿದೆ’

ತಾಜಾ ಡಿಜಿಟಲ್ ಮಾಹಿತಿಯೊಂದಿಗೆ, ಜಿಐಎಸ್ ಲೇಯರ್‌ವಾರು  ರಾಜ್ಯ ಸರ್ಕಾರದ ಮೂಲಕ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಮುಂದಿನ ವರ್ಷದ ಗಾಂಧಿ ಜಯಂತಿ ವೇಳೆಗೆ ಕೇಂದ್ರ ಸರ್ಕಾರದ ಅನುಮತಿ ಪಡೆಯುವ ಕಾಲಮಿತಿಯೊಂದಿಗೆ ಚಾಲನೆ ನೀಡಲಾಗಿದೆ.

ಈ ಯೋಜನೆ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಜಿಯವರ 2022 ರ ಕನಸಿನ ಯೋಜನೆಯಾಗಲಿದೆ, ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಸಂಪೂರ್ಣ ಸಹಕಾರ ದೊರೆಯಲಿದೆ ದೇಶಕ್ಕೆ ಮಾದರಿಯಾಗಲಿದೆ ಎಂಬ ಆಶಾಭಾವನೆ ನಮ್ಮದಾಗಿದೆ.

  ‘ಈಗಾಗಲೇ ಸಂಸದರ ಆದರ್ಶ ಗ್ರಾಮ ಯೋಜನೆಯ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯಿಂದ ಸಮೀಕ್ಷೆ ಆರಂಭವಾಗಿದೆ ಎಂದು ತಿಳಿಸಲು ಹರ್ಷವಾಗುತ್ತಿದೆ’