TUMAKURU:SHAKTHI PEETA FOUNDATION
ಇಎಸ್ ಡಿಎಂ ಪ್ರಾಜೆಕ್ಟ ನ ಇಎಂಸಿ 2.0 ಯಲ್ಲಾದರ್‍ಲೂ ಪಡೆಯಲು ಯೋಗ ವಿದೆಯೇ ಬೇಕು ರಾಜ್ಯಸರಕಾರದ ಅನುಸರಣೆ ಕ್ರಮ
ಕರ್ನಾಟಕ ರಾಜ್ಯ ಇನ್ ಫ಼ಾರಮೇಶನ್ ಟೆಕ್ನಾಲಜಿ ಕ್ಷೇತ್ರದ ಕ್ಕ್‌ಕ್ಶೇ ಅಭಿವೃಧ್ಧಿಯಲ್ಲಿ ದೇಶಕ್ಕೆ ಮಾದರಿಯಾಗಿ ಬೆಳದು, ಅದರಲ್ಲೂ ಬೆಂಗಳೂರು ಭಾರತದ ಸಿಲಿಕಾನ್ ಸಿಟಿ ಎಂದು ಪ್ರಖ್ಯಾತಿಗಳಿಸಿದೆ. ಕೇಂದ್ರಸರ್ಕಾರ ಮಿನಿಸ್ಟ್ರಿ ಆಫ಼್ ಎಲೆಟ್ರಾನಿಕ್ಸ ಮತ್ತುಐ.ಟಿ ಸಚಿವಾಲಯ ದೇಶದಲ್ಲಿ ಉದ್ಯೋಗ ಸೃಷ್ಠಿ ಮತ್ತು 2020 ವರ್ಷದೊಳಗೆ 400 ಯುಎಸ್ ಬಿಲಿಯನ್ ಡಾಲರ್ಸ್ ಮೌಲ್ಯದ ಎಲೆಟ್ರಾನಿಕ್ಸ್ ಉತ್ಪನ್ನಗಳ ಉತ್ಪಾದನಗೆ ಸೌಕರ್ಯಕ್ಕಾಗಿ ಬ್ರೌನ್ ಫ಼ೀಲ್ಡ್ ಎಲೆಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್ /ಇಎಂಸಿ ಗಳನ್ನು ಸ್ಥಾಪಿಸಲು ಐಈಎಸ್‌ಎಮೂಲಕ ಇಎಂಸಿ ಸ್ಕೀಂನ್ನು 10/2012 ರಲ್ಲೇ ಜಾರಿಗೊಳಿಸಿತ್ತು.
ಅನುಸರಣೆಯಾಗಿ ಕೇಂದ್ರಸರ್ಕಾರ ಮಿನಿಸ್ಟ್ರಿ ಆಫ಼್ ಎಲೆಟ್ರಾನಿಕ್ಸ ಮತ್ತುಐ.ಟಿ ಸಚಿವಾಲಯ2013-14 ರ ಅವಧಿಯಲ್ಲಿ ಕರ್ನಾಟಕಕ್ಕೆ ಪ್ರಾಜೆಕ್ಟ ಐಡಿ ಕೆಕೆ 1,2,3,4 ರಲ್ಲಿ 6 ಸಂಖ್ಯೆ ಬ್ರೌನ್ ಫ಼ೀಲ್ಡ್ ಎಲೆಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್ /ಇಎಂಸಿ ಗಳನ್ನು ಸ್ಥಾಪಿಸಲು ನೋಟಿಫ಼ೈಡ್ ಆಗಿತ್ತು. ದಿನಾಂಕ:26.06>2013 ರಲ್ಲಿ ಮೊದಲನೆಯ ಕಂತು ಪ್ರಾಜೆಕ್ಟ ಐಡಿ ಕೆಕೆ-1 ಅಡಿಯಲ್ಲಿಬ್ರೌನ್ ಫ಼ೀಲ್ಡ್ ಎಲೆಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್ /ಇಎಂಸಿ ಸ್ಥಾಪನೆಗೆ ಬೆಂಗಳೂರು ನಗರಜಿಲ್ಲೆ,ಗ್ರಾಮಾಂತರ ಜಿಲ್ಲೆ ಮತ್ತು ತುಮಕೂರು ಜಿಲ್ಲೆ ಆಯ್ಕೆ ಆಗಿತ್ತು. ಆದರೆ ತುಮಕೂರು ಜಿಲ್ಲೆಗೆ ಇಎಂಸಿ ಸ್ಥಾಪನೆ ಆಗಲೇ ಇಲ್ಲ.
ಅದೂ ರಾಜ್ಯಸರಕಾರ ಹಾರ್ಡ್ ವೇರ್ ಪಾಲಿಸಿಯಲ್ಲಿ ಬೆಂಗಳೂರು-ತುಮಕೂರು ಪ್ರದೇಶವನ್ನು ಅಭಿವೃಧ್ಧಿ ಪಡಿಸಲು ಗುರುತಿಸಿದ್ದರೂ ಸಹಾ, ಇತ್ತೀಚಿನ ಬೆಳವಣಿಗೆಯಂತೆ ಕರ್ನಾಟಕ ಸರ್ಕಾರದ ಬಿಡುಗಡೆ ಮಾಡಿರುವ ಇಎಸ್ ಡಿಎಂ ಪ್ರಾಜೆಕ್ಟ ಮುನ್ನೋಟ ಅಡಿಯಲ್ಲಿ ಮತ್ತು ಐಟಿ ಪಾಲಿಸಿ 2020-25 ಕರಡು ಪ್ರಕಟಣೆಯಲ್ಲಿ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳನ್ನು ಗುರುತಿಸಿದ್ದು, ತುಮಕೂರು ಜಿಲ್ಲೆ ಕಂಡುಬರುತ್ತಿಲ್ಲ.ಯಾಕೋ ಗೊತ್ತಾಗುತ್ತಿಲ್ಲ.
2020 ರ ದಿನಾಂಕ ಎಪ್ರಿಲ್ 1 ರಂದು ಕೇಂದ್ರಸರಕಾರದ ಮಿನಿಸ್ಟ್ರಿ ಆಫ಼್ ಎಲೆಟ್ರಾನಿಕ್ಸ ಮತ್ತುಐ.ಟಿ ಸಚಿವಾಲಯಅಡಕವಾಗಿರುವ ಇಎಮ್ ಸಿ-2.0 /21.03.2020 ರ ಕೇಂದ್ರಸರಕಾರ ಸಂಪುಟ ಸಭೆಯಲ್ಲಿ ನಿರ್ಣಯಸಿ ಒಪ್ಪಿರುವ 40995 ಕೋಟಿ ರೂಗಳ ಯೋಜನೆಯ ವಿವರಣೆಯನ್ನು ನೋಟಿಫ಼ೈ ಮಾಡಿದೆ.
ಅದರಲ್ಲಿರುವಂತೆ ಎಲೆಟ್ರಾನಿಕ್ಸ್ ಡಿಸೈನ್ ಮ್ಯಾನ್ಯುಫ಼್ಯಾಕ್ಚರ್ ಕ್ಲಸ್ಟರ್ ನಿರ್ಮಾಣಕ್ಕೆ ರಾಜ್ಯಸರಕಾರ ನೇರವಾಗಿ ಅಥವಾ ಇಂಡಸ್ಟ್ರಿಯಲ್ ಕಾರಿಡಾರ್ ಸಂಬಂಧದ /ಇಂಡಸ್ಟ್ರಿಯಲ್ ನೋಡ್ ನಿಗಾ ಕ್ಕೆ ಇರುವ ಎಸ್‌ಸ್ಪಿಎ ಯನ್ನು ಸ್ಟೇಟ್ ಇಂಪ್ಲಿಮೆಂಟಿಂಗ್ ಎಜನ್ಸಿ ಗುರಿತಿಸಿಕೊಂಡು ಕೇಂದ್ರಸರಕಾರದ ಪ್ರಾಜೆಕ್ಟ್ ಇಂಪ್ಲಿಮೆಂಟ್ ಏಜನ್ಸಿ ಮೂಲಕ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಏಜನ್ಸಿಗೆ ಪ್ರಸ್ಥಾವನೆ ಸಲ್ಲಿಸಲು ಅವಕಾಶವಿದೆ.ಸದರಿ ಯೋಜನೆ ಪ್ರಸ್ಥಾವನೆಗೆ ಕನಿಷ್ಠ 200 ಎಕರೆ ಭೂ ಪ್ರದೇಶ ಮೀಸಲು ಇರಬೇಕು ಎಂದೂ ಸಹಾ ತಿಳಿಸಿದೆ.
ಈ ಹಿನ್ನಲೆಯಲ್ಲಿ ತುಮಕೂರು ನಗರ ಸಮೀಪದ ತುಮಕೂರು ಇಂಡಸ್ಟ್ರಿಯಲ್ ನೋಡ್ ಸಮೀಪದಲ್ಲೇ ಲಗತ್ತಾಗಿ ತುಮಕೂರು ಎಲೆಟ್ರಾನಿಕ್ಸ್ ಡಿಸೈನ್ ಮ್ಯಾನ್ಯುಫ಼್ಯಾಕ್ಚರ್ ಕ್ಲಸ್ಟರ್ ಸ್ಥಾಪಿಸಲು ಅಗತ್ಯವಾದ ಭೂಮಿ ಲಭ್ಯವಿದೆ., ಜೊತೆಗೆ ಈ ಪ್ರದೇಶವು ಬೆಂಗಳೂರಿಗೆ ಪಡಸಾಲೆ ನಗರವಾದ ತುಮಕೂರು ನಗರಕ್ಕೆ ಸಮೀಪವಾಗಿದೆ ಮತ್ತು ನ್ವೆಸರ್ಗಿಕವಾಗಿ ಎಲ್ಲಾ ಮೂಲಭೂತಸೌಕರ್ಯಗಳು ಹೊಂದಿದೆ. ಅಲ್ಲದೇ ಈ ಪ್ರದೇಶಕ್ಕೆ ಇದೆ ತುಮಕೂರು ಇಂಡಸ್ಟ್ರಿಯಲ್ ನೋಡ್ ಅವರಣದ ಹಿರಿಮೆ.
ಈ ಪ್ರದೇಶ ಚನ್ನೈ-ಬೆಂಗಳೂರು-ಚಿತ್ರದುರ್ಗ ಕೈಗಾರಿಕಾ ಕಾರಿಡಾರ್ ನಲ್ಲಿ ಬರುವ ತುಮಕೂರು ಇಂಡಸ್ಟ್ರಿಯಲ್ ನೋಡ್ ಸಮೀಪದಲ್ಲಿದೆ[ನ್ಯಾಷನಲ್ ಹೂಡಿಕೆ ಮತ್ತು ಉತ್ಪಾದನಾ ವಲಯ ನಿಮ್ಜ್-] ಮತ್ತುಬೆಂಗಳೂರು-ಮುಂಬೈ ಎಕನಾಮಿಕ್ ಕಾರಿಡಾರ್ ಗೂ ಲಗತ್ತಾಗಿದೆ. ಭವಿಷ್ಯದ ಡಿಫ಼ೆನ್ಸ್ ಕಾರಿಡಾರ್‌ಗೂ ಲಗತ್ತಾಗಿರುತ್ತದೆ.
ಬೆಂಗಳೂರು -ತುಮಕೂರು ನಡುವೆ ಉಪನಗರ ರೈಲು ಸೇವೆ ಎರಡನೆಯ ಹಂತದಲ್ಲಿ ಕೈಗೊಳ್ಳಲು ವರದಿ ಸಿದ್ದವಾಗಿದೆ. ಪರಿಣಿತಿ ಹೊಂದಿದ ಮಾನವಸಂಪನ್ಮೂಲ ಒದಗಿಸಲು ಜಿಲ್ಲೆಯಲ್ಲಿ 8 ಇಂಜನಿಯರಿಂಗ ಕಾಲೇಜುಗಳು ಇವೆ. ಭವಿಷ್ಯದಲ್ಲಿನ ರಾಜ್ಯದ ಮಹತಕಾಂಕ್ಶಿ ಯೋಜನೆ ಯಾದ ಐ.ಟಿ.ಐ.ಆರ್ ರೀಜನ್ ಮತ್ತು ಪ್ರಸ್ಥಾಪಿತ ಏರೋಸ್ಪೇಸ್ ಪಾರ್‍ಕ್‌ಗೆ,ಜಪಾನೀಸ್ ಕೈಗಾರಿಕಾ ಟೌನ್ ಶಿಪ್ ಗಳಿಗೆ ಲಗತ್ತಾಗಿದೆ. ಹೀಗೆ ಪಟ್ಟಿಮಾಡಿದರೆ ತುಮಕೂರು ಖಂಡಿತ ಎಲೆಟ್ರಾನಿಕ್ಸ್ ಮತ್ತು ಹಾರ್ಡ್ ವೇರ್ ಹಬ್ ಪಡೆಯಲು ಎಲ್ಲಾ ಅರ್ಹತೆ ಮೈಗೊಡಿಸಿಕೊಂಡಿದೆ. ಇಷ್ಟೆಲ್ಲಾ ನೈಸರ್ಗಿಕ ಮತ್ತು ಭೌತಿಕ ಮೂಲಭೂತಸೌಕರ್ಯ ವಿದ್ದರೂ ತುಮಕೂರಿಗೆ ಇಲ್ಲ ಇನ್ನೂ ಯೋಗ.
ಈ ಹಿಂದಿನ ರಾಜ್ಯಸರಕಾರ ಸಕ್ರಿಯ ಅನುಸರಣೆ ಇಲ್ಲದೆ ಇ ಎಮ್ ಸಿ 1.0 ರ ಅಡಿ ಪ್ರಾಜೆಕ್ಟ್ ಐಡಿ ಕೆಕೆ -1 ರೊಳಗೆ ಮಂಜೂರಾಗಿದ್ದ ಬೆಂಗಳೂರಿನ ಸಮೀಪದ ಇ.ಸಿಟಿ ಬೆಂಗಳೂರು,ಕೆ.ಐ.ಡಿ.ಬಿ ದೇವನಹಳ್ಳಿಪ್ರಾಜೆಕ್ಟ್ ಪ್ರಸ್ಥಾವನೆ ಇನ್ ಪ್ರಿನ್ಸಿಪಲ್ ಮಂಜೂರಾತಿ ಇದ್ದರೂ ಮತ್ತು ತುಮಕೂರು ಕ್ಲಸ್ಟರ್ ಯಾವುದೇ ಕೋರಿಕೆ ಇಲ್ಲದೇ ರದ್ದಾಗಿದ್ದು, ಪ್ರಾಜೆಕ್ಟ ಐಡಿ -2 ಮಂಜೂರಾಗಿದ್ದ ಕೇವಲ ಮೈಸೂರ ಕ್ಲಸ್ಟರ್ ಸಾಕಾರ ಆಗಿ ಉಳಿದೆಲ್ಲವೂ ಕೈ ತಪ್ಪಿದೆ.
31.05.2018 ಕೇಂದ್ರ ಸರಕಾರದ ಮಿನಿಸ್ಟ್ರಿ ಆಫ಼್ ಎಲೆಟ್ರಾನಿಕ್ಸ ಮತ್ತುಐ.ಟಿ ಸಚಿವಾಲಯಪ್ರಕಟಣೆಯಲ್ಲಿ ತಿಳಿದು ಬರುತ್ತದೆ. . ಈಗಲಾದರೂ 2020 ರ ದಿನಾಂಕ ಎಪ್ರಿಲ್ 1 ರಂದು ಕೇಂದ್ರಸರಕಾರದ ಮಿನಿಸ್ಟ್ರಿ ಆಫ಼್ ಎಲೆಟ್ರಾನಿಕ್ಸ ಮತ್ತುಐ.ಟಿ ಸಚಿವಾಲಯಅಡಕವಾಗಿರುವ ಇಎಮ್ ಸಿ-2.0 / 21.03.2020 ರ ಕೇಂದ್ರಸರಕಾರ ಸಂಪುಟ ಸಭೆಯಲ್ಲಿ ನಿರ್ಣಯಸಿ ಒಪ್ಪಿರುವ 40995 ಕೋಟಿ ರೂಗಳ ಯೋಜನೆಯ ವಿವರಣೆಯನ್ನು ನೋಟಿಫ಼ೈ ಮಾಡಿರುವ ಯೋಜನೆಯ ಲಾಭವನ್ನು ಈ ಬಾರಿ ಕರ್ನಾಟಕ ರಾಜ್ಯ ಪಡೆದೇ ಪಡೆಯುತ್ತದೆ ಎಂದು ಖಾತರಿ ಇದೆ.
ಆದರೆ ಇದಕ್ಕೆ ಬೇಕು ಇಎಮ್ ಸಿ-2.0 ಸೂಚಿಸಿರುವಂತೆ ಅನುಸರಣೆ ಕ್ರಮ. ಕಳೆದ ಬಾರಿ ಇಎಂಸಿ-1.೦ ರ ಅಡಿ ಪ್ರಾಜೆಕ್ಟ್ ಐಡಿ ಕೆಕೆ -1 ಅಡಿಯಲ್ಲಿ ಮಂಜೂರಾಗಿದ್ದ, ಕೈ ತಪ್ಪಿದಂತೆ ಆಗದೆ, ಈ ಬಾರಿ ತುಮಕೂರು ಕ್ಲಸ್ಟರ್ ಸಾಕರ ಆಗಲು ರಾಜ್ಯಸರಕಾರ ನೇರವಾಗಿ ಅಥವಾ ತುಮಕೂರು ಇಂಡಸ್ಟ್ರಿಯಲ್ ನೋಡ್ ನಿಗಾ ಕ್ಕೆ ಇರುವ ಎಸ್‌ಸ್ಪಿಎ ಯನ್ನು ಸ್ಟೇಟ್ ಇಂಪ್ಲಿಮೆಂಟ್ಂಗ್ ಎಜನ್ಸಿ ಆಗಿ ಗುರುತಿಸಿಕೊಂಡು ತುಮಕೂರು ಎಲೆಟ್ರಾನಿಕ್ಸ್‌ಡಿಸೈನ್ ಉತ್ಪಾದನಾ ಹಬ್ ನಿರ್ಮಾಣಕ್ಕೆ ಕೇಂದ್ರಸರಕಾರದ ಸಚಿವಾಲಯದ ಪ್ರಾಜೆಕ್ಟ್ ಇಂಪ್ಲಿಮೆಂಟ್/ ಮ್ಯಾನೇಜ್ಮೆಂಟ್ ಏಜನ್ಸಿ ಗೆ ಪ್ರಸ್ಥಾವನೆ ಸಲ್ಲಿಸಲು ಮನವಿ ಮಾಡಿದರೆ ಮಾತ್ರ ತುಮಕೂರು ಎಲೆಟ್ರಾನಿಕ್ಸ್ ಡಿಸೈನ್ ಮ್ಯಾನ್ಯುಫ಼್ಯಾಕ್ಚರ್ ಕ್ಲಸ್ಟರ್ ಸಾಕಾರ ಅಗುತ್ತದೆ.
ಈ ಬಗ್ಗೆ ತುಮಕೂರು ಸಂಸದರಾದ ಶ್ರೀಜಿ.ಎಸ್.ಬಸವರಾಜ್ ಅವರು ತಮ್ಮ ಹಿಂದಿನ ಅವಧಿಯಲ್ಲಿ ಮಂಜೂರು ಆಗಿದ್ದ ಕೇಂದ್ರಸರ್ಕಾರ ಮಿನಿಸ್ಟ್ರಿ ಆಫ಼್ ಎಲೆಟ್ರಾನಿಕ್ಸ ಮತ್ತುಐ.ಟಿ ಸಚಿವಾಲಯ ಕರ್ನಾಟಕಕ್ಕೆ ಪ್ರಾಜೆಕ್ಟ ಐಡಿ ಕೆಕೆ೧ ಬ್ರೌನ್ ಫ಼ೀಲ್ಡ್ ಎಲೆಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್ /ಇಎಂಸಿ ಗಳನ್ನು ಸ್ಥಾಪಿಸಲು 20123-14 ರ ನೋಟಿಫ಼ಿಕೇಶನ್ ಮಾಹಿತಿಯನ್ನು ಕೇಂದರಸರಕಾರದ ಹಾಗೂ ರಾಜ್ಯಸರಕಾರದ ಗಮನ ಸೆಳೆದು ಇ ಎಮ್ ಸಿ-2.0/2020 ರ ಅಡಿಯಲ್ಲಿ ತುಮಕೂರು ಎಲೆಟ್ರಾನಿಕ್ಸ್ ಡಿಸೈನ್ ಮ್ಯಾನ್ಯುಫ಼್ಯಾಕ್ಚರ್ ಕ್ಲಸ್ಟರ್ ಇಎಸ್ ಡಿಎಂ ಪ್ರಾಜೆಕ್ಟ -ಕೈಗೂಡಲು ಕೇಂದ್ರಸರ್ಕಾರ ಮಿನಿಸ್ಟ್ರಿ ಆಫ಼್ ಎಲೆಟ್ರಾನಿಕ್ಸ ಮತ್ತುಐ.ಟಿ ಸಚಿವಾಲಯ ಮತ್ತು ತುಮಕೂರು ತುಮಕೂರು ಇಂಡಸ್ಟ್ರಿಯಲ್ ನೋಡ್ ನಿಗಾಕ್ಕೆ ಇರುವ ಎಸ್‌ಸ್ಪಿಎ ಯನ್ನು ಸ್ಟೇಟ್ ಇಂಪ್ಲಿಮೆಂಟ್ಂಗ್ ಎಜನ್ಸಿ ಆಗಿ ಗುರುತಿಸಿಕೊಂಡು ಕ್ರಮವಹಿಸಲು ಆಗ್ರಹಿಸಿದ್ದಾರೆ.
ಈ ಕಾರಣಕ್ಕಾಗಿ ದಿನಾಂಕ 24.09.2020 ರಂದು ಮಾನ್ಯ ಸಂಸದ ರಾದ ಜಿಎಸ್.ಬಸವರಾಜ್ ಅವರಿಗೆ ಕೇಂದ್ರಸರ್ಕಾರದ ವಾಣಿಜ್ಯ ಸಚಿವಾಲಯ ಉತ್ತರಿಸಿ , ಈ ಬಗ್ಗೆ ರಾಜ್ಯಸರಕಾರ ಪ್ರಸ್ಥಾವನೆ ಸಲ್ಲಿಸಿದರೆ ಅಗತ್ಯಕ್ರಮ ತೆಗೆದುಕೊಳ್ಳಲಾಗುವುದು ತಿಳಿಸಿರುವುದರಿಂದ ರಾಜ್ಯಸರಕಾರದ ಮೇಲೆ ಒತ್ತಡ ಹೇರಬೇಕಾಗಿದೆ ಮತ್ತು ಐಟಿ ಪಾಲಿಸಿ2020-25 ಅಡಿ ಕರಡು ಪ್ರಕಟಣೆ ಯಲ್ಲಿ ತುಮಕೂರು ಜಿಲ್ಲೆ ಗುರುತಸದೇ ಇರುವುದನ್ನು ಅಂತಿಮ ಪ್ರಕಟಣೆಯಲ್ಲಿ ಸರಿಪಡಿಸಲು ಸಹಾ ಕ್ರಮ ವಹಿಸ ಬೇಕಾಗಿದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ಎಲೆಟ್ರಾನಿಕ್ಸ್ ಉತ್ಪಾದನಾ ಆವರಣದಲ್ಲಿ ಜಿಲ್ಲೆಗೆ ನಿರಾಶೆ ಕಾದಿದೆ.