23rd April 2024
Share

TUMAKURU:SHAKTHIPEETA FOUNDATION

 ‘ನಿಜಕ್ಕೂ ಇದೊಂದು ಅದ್ಭುತವಾದ ಯೋಜನೆ’  ಕೇಂದ್ರ ಜಲಶಕ್ತಿ ಸಚಿವರಿಗೊಂದು ಸಲಾಂ. ಕರ್ನಾಟಕ ರಾಜ್ಯದಲ್ಲಿ ಈ ಆಂದೋಲನ ಶೇ 100 ರಷ್ಟು ಜಾರಿಯಾಗಲೇ ಬೇಕು. ನಾವು ಕಳೆದ ತುಮಕೂರು ಜಿಲ್ಲಾ ದಿಶಾ ಸಮಿತಿ ಸಭೆಯಲ್ಲಿ ಈ ವಿಚಾರದ ಬಗ್ಗೆ ನಿರ್ಣಯ ಕೈಗೊಂಡಿದ್ದೆವು. 

ತುಮಕೂರು ಜಿಲ್ಲಾ ಬಿಜೆಪಿ ಐಟಿ ಸೆಲ್ ಶ್ರೀ ಗುರು ಆಗಾಗ ಹೇಳುತ್ತಿರುತ್ತಾರೆ. ಸಾರ್ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ನೀವು ಹೇಳಿದ ಆನೇಕ ಯೋಜನೆಗಳನ್ನು ನಮ್ಮ ಪಕ್ಷ/ ನಮ್ಮ ಸರ್ಕಾರ ಜಾರಿಗೆ ಘೋಷಣೆ ಮಾಡುತ್ತಿದೆ ಇದರ ಗುಟ್ಟು ಏನು ಸಾರ್ ಎನ್ನುತ್ತಾರೆ.

 ನಾನು ಅವರಿಗೆ ಹೇಳುತ್ತೇನೆ ಅದು ಸಿಕ್ರೇಟ್, ನೋಡಿ ಗುರು ನಾವೂ ಸಹ ಈ ಯೋಜನೆ ಬಗ್ಗೆ ಚಿಂತನೆ ಮಾಡಿದ್ದೇವೆ. ಜೊತೆಗೆ ನಿವೇಶನ ರಹಿತರಿಗೆ ನಿವೇಶನ ಗುರುತಿಸಲು 100 ದಿವಸಗಳ ಜನಾಂದೋಲನವನ್ನು ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರು ಘೋಶಿಸಿದ್ದಾರೆ.

‘ಅಧಿಕಾರಿಗಳು ಮಾತ್ರ ನಿದ್ದೆಯಿಂದ ಹೊರಬಂದಿಲ್ಲ?’

ದಿನಾಂಕ:30.06.2020   ರಂದು ತುಮಕೂರು ಜಿಲ್ಲಾ ದಿಶಾ ಸಮಿತಿ ನಿರ್ಣಯ ನೋಡಿ?

27.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ:

 ಉಪನಿರ್ದೇಶಕರು ಮಾತನಾಡಿ, ಇಲಾಖಾ ಕಾರ್ಯಕ್ರಮಗಳ ಪ್ರಗತಿ ಮಾಹಿತಿಯನ್ನು ಸಭೆಗೆ ವಿವರಿಸಿದರು.  ಮುಂದುವರೆದು, ಕೋವಿಡ್-19 ರ ಹಾವಳಿಯಿಂದಾಗಿ ಅಂಗನವಾಡಿ ಮಕ್ಕಳಿಗೆ ಮತ್ತು ಗರ್ಭಿಣಿ/ಬಾಣಂತಿಯರಿಗೆ ಮನೆಗೆ ಆಹಾರ ವಿತರಣೆ ಮಾಡಲಾಗುತ್ತಿದೆ; ಜಿಲ್ಲೆಯಲ್ಲಿ ಪ್ರಸ್ತುತ 4109 ಅಂಗನವಾಡಿ ಕೇಂದ್ರಗಳು ಅಸ್ತಿತ್ವದಲ್ಲಿವೆ. ಈ ಪೈಕಿ 2781   ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡಗಳನ್ನು ಹೊಂದಿವೆ; 569   ಅಂಗನವಾಡಿ ಕೇಂದ್ರಗಳಿಗೆ ನಿವೇಶನ ಲಭ್ಯವಿರುತ್ತದೆ; 2636   ಅಂಗನವಾಡಿ ಕೇಂದ್ರಗಳಿಗೆ ಶೌಚಾಲಯ ನಿರ್ಮಿಸಲಾಗಿದೆ; 1520   ಅಂಗನವಾಡಿ ಕೇಂದ್ರಗಳಿಗೆ ನೀರಿನ ಸೌಲಭ್ಯ ಕಲ್ಪಿಸಲಾಗಿದೆ; 816 ಅಂಗನವಾಡಿ ಕೇಂದ್ರಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ; ಉಳಿದ ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಸಭೆಗೆ ಮಾಹಿತಿ ವಿವರಿಸಿದರು.

 ಪೂರಕವಾಗಿ ಮಾನ್ಯ ಸದಸ್ಯರಾದ ಶ್ರೀ ಕುಂದರನಹಳ್ಳಿ ರಮೇಶ್‌ರವರು ಮಾತನಾಡಿ, ವಿದ್ಯುತ್ ಸಂಪರ್ಕಕ್ಕೆ ಬಾಕಿ ಇರುವ ಎಲ್ಲಾ ಅಂಗನವಾಡಿ ಕೇಂದ್ರ ಕಟ್ಟಡಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಮತ್ತು ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಕುಡಿಯುವ ನೀರು ಸರಬರಾಜು’ ಮಾಡಲು ಅಗತ್ಯ ಕ್ರಮವಹಿಸಬೇಕೆಂದು ಉಪನಿರ್ದೇಶಕರಿಗೆ ತಿಳಿಸಿದರು. ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿರವರು ಮಾತನಾಡಿ ಶೇಕಡ 100   ರ ಗುರಿ ಸಾಧಿಸಲು ಅಗತ್ಯಕ್ರಮಕೈಗೊಳ್ಳಲಾಗುವುದು ಎಂದು ಸಭೆಯ ಗಮನಕ್ಕೆ ತಂದರು.

   ಮಾನ್ಯ ಸದಸ್ಯರಾದ ಶ್ರೀ ಕುಂದರನಹಳ್ಳಿ ರಮೇಶ್ ರವರು ಮಾತನಾಡಿ, ಅಂಗನವಾಡಿ ಕಟ್ಟಡಗಳಿಗೆ, ಗ್ರಾಮ ಪಂಚಾತಿಯಿತಿಗಳ ಕಟ್ಟಡಕ್ಕೆ ಸ್ವಂತ ಜಾಗ ನೀಡಬೇಕೆಂದು ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಕೋರಿದರು. ಪೂರಕವಾಗಿ ಮಾನ್ಯ ಜಿಲ್ಲಾಧಿಕಾರಿಯವರು ಮಾತನಾಡಿ, ಜಾಗ ನೀಡುತ್ತಿರುವುದಾಗಿ ತಿಳಿಸಿ, ಆದಷ್ಟು, ಗ್ರಾಮದ ಒಳಗೇ ಇರುವಂತಹ ಜಾಗ ನೀಡಬೇಕಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪೂರಕವಾಗಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶೇ.95 ರಷ್ಟು ಜಾಗ ಲಭ್ಯವಿರುವುದಾಗಿ ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಜಿಐಎಸ್ ಪೋರ್ಟಲ್‌ನಲ್ಲಿ ಲೇಯರ್‍ಸ್ ಮಾಡಿಸಬೇಕೆಂದು ಉಪ ಕಾರ್ಯದರ್ಶಿರವರಿಗೆ ತಿಳಿಸಲಾಯಿತು.

  ಮಾನ್ಯ ಸದಸ್ಯರಾದ ಶ್ರೀ ಕುಂದರನಹಳ್ಳಿ ರಮೇಶ್‌ರವರು ಮಾತನಾಡಿ, ಅಕ್ಷರ ದಾಸೋಹ ಕಾರ್ಯಕ್ರಮದಡಿ ಅಂಗನವಾಡಿಗಳ ಪ್ರಸ್ತುತ ಅವಶ್ಯವಿರುವ 577  ಅಡುಗೆ ಕೋಣೆಗಳನ್ನು ನರೇಗಾ ಕಾರ್ಯಕ್ರಮದಡಿ ಅನುಷ್ಟಾನಗೊಳಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪೂರಕವಾಗಿ ಮಾನ್ಯ ಜಿಲ್ಲಾಧಿಕಾರಿಯವರು ಮಾತನಾಡಿ, ಸದರಿ 577   ಅಡುಗೆ ಕೋಣೆಗಳನ್ನು ನರೇಗಾ ಕಾರ್ಯಕ್ರಮದಡಿ ಅನುಷ್ಟಾನಗೊಳಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

   ಮಾನ್ಯ ವಿಧಾನಪರಿಷತ್ ಸದಸ್ಯರು ಮಾತನಾಡಿ, ಎಷ್ಟೋ ಅಂಗನವಾಡಿ ಕಟ್ಟಡಗಳಲ್ಲಿ ವಿದ್ಯುತ್ ಬಿಲ್ ಪಾವತಿಸದೆ ಸಂಪರ್ಕ ಕಡಿತವಾಗಿರಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿ, ಆ ಕುರಿತು ಪರಿಶೀಲಿಸಬೇಕೆಂದು ಉಪನಿರ್ದೇಶಕರಿಗೆ ತಿಳಿಸಿದರಲ್ಲದೆ, ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಗ್ರಾಮದ ಒಳಗೇ ಜಾಗ ನೀಡಬೇಕೆಂದು ಮಾನ್ಯ ಜಿಲ್ಲಾಧಿಕಾರಿಯವರಿಗೆ ತಿಳಿಸಿದರು.

 ಪ್ರತಿಯಾಗಿ ಮಾನ್ಯ ಜಿಲ್ಲಾಧಿಕಾರಿಯವರು ಮಾತನಾಡಿ, ರಸ್ತೆ ಬದಿ ಇರುವ ಜಾಗವನ್ನು ಗುರುತಿಸಿ, ದಾನಿಗಳನ್ನು ಸಂಪರ್ಕಿಸಿದರೆ, ಜಾಗ ನೀಡುತ್ತಾರೆ; 30×40 ಅಡಿ ಜಾಗ ದೊರೆತರೆ ಅಂಗನವಾಡಿ ಕಟ್ಟಡ ನಿರ್ಮಿಸಲು ಜಾಗ ಸಾಕಾಗುತ್ತದೆಯಾದ್ದರಿಂದ ಈ ಕುರಿತು ಹೆಚ್ಚಿನ ಒತ್ತು ನೀಡಿ ಸಂಬಂಧಪಟ್ಟ ಗ್ರಾಮಲೆಕ್ಕಿಗರಿಗೆ ಮಾನ್ಯ ತಹಶೀಲ್ದಾರ್‌ರವರುಗಳ ಮೂಲಕ ಸೂಕ್ತ ಸೂಚನೆ ನೀಡಿ ಮುಂದಿನ ಅಗತ್ಯ ಕ್ರಮವಹಿಸಬೇಕೆಂದು ಉಪನಿರ್ದೇಶಕರಿಗೆ ತಿಳಿಸಿದರು.