12th September 2024
Share

TUMAKRU: SHAKTHI PEETA  FOUNDATION

ತುಮಕೂರು ನಗರಕ್ಕೆ ಬೆಂಗಳೂರಿನಿಂದ ಬರಬೇಕಾದರೆ ಒಂದು ಒಳ್ಳೆಯ ಮಹಾಧ್ವಾರ/ ಉತ್ತಮವಾದ ಎಂಟ್ರಿ ನಿರ್ಮಾಣ ಮಾಡಲು ಅವಕಾಶವಿಲ್ಲ ಎಂದು ಇಂಜಿನಿಯರ್‌ಗಳು ಹೇಳುತ್ತಲೇ ಇದ್ದಾರೆ. ಯಾವೊಬ್ಬ ಈ ರೀತಿ ಮಾಡಬಹುದು ಎಂದು ಹೇಳುವ ಗೋಜಿಗೆ ಹೋಗಿಲ್ಲ.

 ಪ್ರಸ್ತುತ ತುಮಕೂರು ನಗರದ ವ್ಯಾಪ್ತಿಯಷ್ಟೆ ಪ್ರದೇಶದಲ್ಲಿ TUMKURU #NODE# NIMZ # CBCI CORRIDOR   ಯಾವುದೇ ಹೆಸರಿನ ಕೈಗಾರಿಕಾ ವಲಯಕ್ಕೆ ಬೆಂಗಳೂರು- ಪುಣೆ ರಾಷ್ಟ್ರೀಯ ಹೆದ್ಧಾರಿಯಿಂದ ಅತ್ಯುತ್ತಮವಾದ ಮಹಾಧ್ವಾರ/ ಉತ್ತಮವಾದ ಎಂಟ್ರಿ ನಿರ್ಮಾಣ ಮಾಡುವ ಸಂಬಂಧ ಬೆಂಗಳೂರಿನ ಖನಿಜಭವನದಲ್ಲಿರುವ ಕೆಐಡಿಬಿಯಲ್ಲಿ ದಿನಾಂಕ: 08.10.2020 ರಂದು ಸಭೆ ನಡೆಯಿತು.

ಈ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು

  1. ತುಮಕೂರು ವಸಂತನರಾಸಪುರದ ಕೈಗಾರಿಕಾ ವಲಯಕ್ಕೆ ಬೆಂಗಳೂರು- ಪುಣೆ ರಾಷ್ಟ್ರೀಯ ಹೆದ್ಧಾರಿಯಿಂದ ಮಹಾಧ್ವಾರ/ ಉತ್ತಮವಾದ ಎಂಟ್ರಿ ನಿರ್ಮಾಣ ಮಾಡುವುದು.
  2. ಕೈಗಾರಿಕಾ ಪ್ರದೇಶ ಎರಡು ಭಾಗಗಳಂತಾಗಿದ್ದು ಈ ಎರಡನ್ನು ಸಂಪರ್ಕಿಸುವ ರಸ್ತೆ ಅಥವಾ ಎರಡು ಕಡೆಯು  ಮಹಾಧ್ವಾರ/ ಉತ್ತಮವಾದ ಎಂಟ್ರಿ ನಿರ್ಮಾಣ ಮಾಡುವುದು.
  3. ತುಮಕೂರು ನಗರ ಮತ್ತು ತುಮಕೂರು ವಸಂತನರಾಸಪುರದ ಕೈಗಾರಿಕಾ ವಲಯವನ್ನು ಕೇಂದ್ರವಾಗಿಟ್ಟುಕೊಂಡು ಭವಿಷ್ಯದಲ್ಲಿ ಸುತ್ತಲೂ ನಿರ್ಮಾಣ ಮಾಡಲು ಉದ್ಧೇಶಿಸಿರುವ ರಿಂಗ್ ರಸ್ತೆ ಅಥಾವ ಫೆರಿ ಫೆರಿಯಲ್ ರಿಂಗ್ ರಸ್ತೆಯಿಂದ ಬರುವ ಎಲ್ಲಾ ರೇಡಿಯಲ್ ರಸ್ತೆಗಳ ಅಭಿವೃದ್ಧಿ ಮತ್ತು ಪ್ರತಿ ರಸ್ತೆಯಲ್ಲೂ ಮಹಾಧ್ವಾರ/ ಉತ್ತಮವಾದ ಎಂಟ್ರಿ ನಿರ್ಮಾಣ ಮಾಡಲು ಪ್ರಸ್ತಾವನೆ ಸಿದ್ಧಪಡಿಸುವುದು.
  4. ಉದ್ದೇಶಿತ ಬೆಂಗಳೂರಿನ ಫೆರಿ ಫೆರಿಯಲ್ ರಿಂಗ್ ರಸ್ತೆ ಮತ್ತು ಉದ್ದೇಶಿತ ತುಮಕೂರಿನ ಫೆರಿ ಫೆರಿಯಲ್ ರಿಂಗ್ ರಸ್ತೆಗೆ ಸಂಪರ್ಕ ರಸ್ತೆಯ ಅಭಿವೃದ್ಧಿಗೆ ಪ್ರಸ್ತಾವನೆ ಸಿದ್ಧಪಡಿಸುವುದು.
  5. ತುಮಕೂರು ನಗರ, ತುಮಕೂರು ವಸಂತನರಾಸಪುರದ ಕೈಗಾರಿಕಾ ವಲಯ ಮತ್ತು ಈ ಎರಡು ಪ್ರದೇಶಗಳ ಮಧ್ಯೆ ನಿರ್ಮಾಣ ವಾಗುತ್ತಿರುವ ಅನಧಿಕೃತ ನಗರವೂ ಸೇರಿದಂತೆ ಮುಂದೊಂದು ದಿವಸ ತುಮಕೂರು ತ್ರಿವಳಿ’ ನಗರವಾಗಲಿದೆ. ಆದ್ದರಿಂದ ಎಲ್ಲಾ ರೇಡಿಯಲ್ ರಸ್ತೆಗಳ ಮಹಾಧ್ವಾರದಲ್ಲಿ ಬೆಂಚ್ ಮಾರ್ಕ್ ಜಿಐಎಸ್ ಲೇಯರ್ ಮಾಡುವುದು.

 ಈ ರಸ್ತೆಗಳಿಗೆ ಸಂಬಂಧಿಸಿದ ಎಲ್ಲಾ ಇಲಾಖೆಯ ಇಂಜಿನಿಯರ್‌ಗಳ ಸಭೆ ನಡೆಸಿ ಈ ಪ್ರಸ್ತಾವನೆಯನ್ನು ಸಿದ್ಧಪಡಿಸಲು ಈಗಾಗಲೇ ದಿಶಾ ಸಮಿತಿ ಸಭೆಯಲ್ಲಿ ಲೋಕೊಪಯೋಗಿ ಇಇ ಶ್ರೀ ಸಂಜೀವರಾಜು ಮತ್ತು ತುಮಕೂರು ಸ್ಮಾರ್ಟ್ ಸಿಟಿ ಅಡೈಸರಿ ಫೋರಂ ಸಭೆಯಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಇಇ ಶ್ರೀ ಬಸವರಾಜೇಗೌಡರವರಿಗೆ ಸಂಸದರು ಸೂಚಿಸಿದ್ದರು. ಈ ಸಭೆಯಲ್ಲಿ ಎನ್.ಹೆಚ್.ಎ.ಐ ಇಂಜಿನಿಯರ್ ಶ್ರೀ ಅಜಿತ್‌ರವರಿಗೂ ಸಂಸದರು ಸೂಚಿಸಿದ್ದಾರೆ.

ನೋಡೋಣ ಯಾರು ಯಾರು ಏನು ಮಾಡಿದ್ದಾರೆ ಅಥವಾ ಮಾಡುತ್ತಾರೆ?

 ಈ ಸಭೆಯಲ್ಲಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು, ರಾಜ್ಯ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್, ಕೆಐಡಿಬಿ ಮುಖ್ಯ ಇಂಜಿನಿಯರ್, ಅಧಿಕಾರಿಗಳಾದ ಶ್ರೀ ಗಂಗಾಧರಯ್ಯ, ಶ್ರೀ ಸುನಿಲ್ ಎನ್.ಹೆಚ್.ಎ.ಐ ಇಂಜಿನಿಯರ್‌ಗಳಾದ ಶ್ರೀ ಅಜಿತ್ ಸಲಹಾಗಾರರಾದ ಶ್ರೀ ಗೀರಿಶ್, ಶ್ರೀ ರಾಜಶೇಖರ್ ಇನ್ನೂ ಮುಂತಾದವರು ಭಾಗವಹಿಸಿದ್ದರು.