15th September 2024
Share
PRANESH RAO, KALAVATHI & KUNDARANAHALLI RAMESH

TUMAKURU:SHAKTHIPEETA FOUNDATION

ಸಂಸ್ಕೃತದಲ್ಲಿ  ‘DISHA’’ ಎಂದರೆ ದಿಕ್ಕು ಎಂದರ್ಥವಂತೆ. ಕರ್ನಾಟಕ ರಾಜ್ಯ ದಿಶಾ ಸಮಿತಿಗೆ ಇದುವರೆಗೂ ಇನ್ನೂ ದಿಕ್ಕೆ ಇಲ್ಲ’ ಎಂದರೆ ತಪ್ಪಾಗಲಾರದು. ದಿನಾಂಕ:27.06.2016  ರಂದು ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಕನಸಿನಿಂದ ದಿಶಾ ಜನ್ಮ ತಾಳಿತು. ದಿನಾಂಕ:10.01.2018   ಪರಿಷ್ಕೃತ ಗೊಂಡಿದೆ.

 ತುಮಕೂರು ಜಿಲ್ಲಾ ದಿಶಾ ಸಮಿತಿಗೆ ದಿನಾಂಕ:21.09.2019 ರಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ನನ್ನನ್ನು ಸದಸ್ಯನಾಗಿ ನೇಮಕ ಮಾಡಿದ್ದರೂ ನಾನು ಪ್ರಥಮ ಸಭೆಗೆ ಹಾಜರಾಗಿದ್ದು ದಿನಾಂಕ:21.10.2019  ರಂದು ನಡೆದ ಎರಡನೇ ಸಭೆ. ಅಂದಿನಿಂದಲೇ ನಾನು ರಾಜ್ಯ ಮಟ್ಟದ ದಿಶಾ ಸಮಿತಿಯ ಕಡೆ ಗಮನ ಹರಿಸಿದೆ.

  ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ದಿಶಾ ಸಮಿತಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ರಾಮಕೃಷ್ಣರವರು ನನಗೆ ಮೊದಲು ಹೇಳಿದ ಮಾತು ರಾಜ್ಯ ದಿಶಾ ಸಮಿತಿಗೆ ಸದಸ್ಯರನ್ನಾಗಿ ಮಾಡಲು ಕೇಳಲು ಕೆಲವರು ಇಲ್ಲಿಗೆ ಬಂದಿದ್ದಾರೆ. ಆದರೇ ರಾಜ್ಯ ದಿಶಾ ಸಮಿತಿ ಹೇಗೆ ಕಾರ್ಯನಿರ್ವಹಿಸುತ್ತಿದೆ. ಜಿಲ್ಲಾ ಮಟ್ಟದ ದಿಶಾ ಸಮಿತಿಗಳು ಯಾವ ರೀತಿ ನಡೆಯುತ್ತಿವೆ ಎಂದು ಯಾರಾದರೂ ಬಂದಿದ್ದರೇ ನೀವೇ?

 ನಿಮಗೇಕೆ ಈ ಹುಚ್ಚು? ಎಂದು ಪದೇ ಪದೇ ಅವರ ಬಳಿಗೆ ಹೋದಾಗ ಪ್ರಶ್ನಿಸಿದ್ದರು. ಕೇಂದ್ರ ಸರ್ಕಾರದಿಂದ ಮೂರು ಜನರು ನಾಮನಿದೇರ್ಶನ ಮಾಡಿಸಿಕೊಂಡು ಬಂದಿದ್ದಾರೆ. ಆದರೇ ರಾಜ್ಯದಲ್ಲಿ ಸಮಿತಿಯೇ ಆಗಿಲ್ಲ. ಅವರು ಮಾತ್ರ ಬಂದು ವಿಚಾರಿಸಿ ಹೋಗುತ್ತಿದ್ದಾರೆ ಎಂಬ ಅಂಶವನ್ನು ನನ್ನ ಗಮನಕ್ಕೆ ತಂದರು.

 ‘2016 ರಿಂದ ಮುಖ್ಯ ಮಂತ್ರಿಗಳಾಗಿದ್ದ ಶ್ರೀ ಸಿದ್ಧರಾಮಯ್ಯನವರು ಮತ್ತು ಶ್ರೀ ಕುಮಾರಸ್ವಾಮಿರವರ ಕಾರ್ಯ ವೈಖರಿಗೆ ಬೇಸರ ವ್ಯಕ್ತಪಡಿಸಲೇ ಬೇಕು. ಜೊತೆಗೆ ಬಿಜೆಪಿಯ ನಾಯಕರುಗಳ ತಪ್ಪು ಇದೆ. ಮಾನ್ಯ ಶ್ರೀ ನರೇಂದ್ರಮೋದಿಯವರು ಹುಟ್ಟು ಹಾಕಿದ ಸಮಿತಿಯ ಕಡೆ ಅವರು ಏಕೆ ಗಮನಹರಿಸಿಲ್ಲ ಎಂಬುದು ಒಂದು ಯಕ್ಷಪ್ರಶ್ನೆ’

 ಜೊತೆಗೆ ಬಿಜೆಪಿಯ ಆಗಿನ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರೊಂದಿಗೆ ಬಸವರಾಜ್ ರವರು ಮತ್ತು ನಾನು ಮೊದಲ ಭಾರಿ ಪ್ರಸ್ತಾಪ ಮಾಡಿ ರಾಜಕೀಯ ಪಕ್ಷಗಳಲ್ಲಿ ಅಧಿಕಾರ ಹಿಡಿಯಲು ಒಂದು ಸಂಘಟನೆ ಇರಬೇಕು. ಅದೇ ರೀತಿ ಅಭಿವೃದ್ಧಿಯ ಕಡೆ ಗಮನ ಹರಿಸಲು ಇನ್ನೊಂದು ವೇದಿಕೆಯೂ ಇರಬೇಕು ಎಂಬ ವಿಷಯಕ್ಕೆ ಸ್ಪಂಧಿಸಿದ ಬಿಎಸ್‌ವೈ ಅಭಿವೃದ್ಧಿ ಮಾಹಿತಿ ಪ್ರಕೋಷ್ಠಕ’ವನ್ನು ರಚಿಸಿದರು.

 ಬಿಜೆಪಿಯ ಇತಿಹಾಸದಲ್ಲೇ ಮೊದಲಭಾರಿ ಈ ಪ್ರಕೋಷ್ಠಕ ರಚನೆಯು ಆಯಿತು. ಮೊದಲ ಸಂಚಾಲಕರಾಗಿ ಶ್ರೀ ಜಿ.ಎಸ್.ಬಸವರಾಜ್‌ರವರನ್ನು ನೇಮಿಸಿ ಸಹ ಸಂಚಾಲಕರಾಗಿ ಹಲವಾರು ನಾಯಕರನ್ನು ನೇಮಿಸಿ ಆದೇಶ ಮಾಡಿಯೇ ಬಿಟ್ಟರು. ಆಗಲೂ ಸಹ ಈ ದಿಶಾ ಸಮಿತಿಯ ಕಡೆ ಗಮನಹರಿಸದೇ ಇರುವುದರಲ್ಲಿ ನನ್ನ ತಪ್ಪೂ ಇದೆ.

 ಅದೇನೆ ಇರಲಿ ನಾನೂ ಮತ್ತು ರಾಮಕೃಷ್ಣರವರು ಕುಳಿತು ಮಾತನಾಡಿಕೊಂಡೆವು ಈ ಸಮಿತಿಗೆ ಜೀವ ತುಂಬಲೇ ಬೇಕು. ಇದು ಬಹಳ ಉತ್ತಮವಾದ ಒಂದು ವೇದಿಕೆ, ಯಾವುದೇ ಸರ್ಕಾರಗಳಿದ್ದರೂ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಎಂಬ ಅಪವಾದ ಕೇಳಿ ಬರುತ್ತಲೇ ಇದೆ.

 ಮಾನ್ಯ ಮುಖ್ಯಮಂತ್ರಿಗಳು, ಎಲ್ಲಾ ರಾಜಕೀಯ ಪಕ್ಷಗಳ ಚುನಾಯಿತ ಜನಪ್ರನಿಧಿಗಳು, ಎಲ್ಲಾ ಇಲಾಖೆಯ ಉನ್ನತ ಮಟ್ಟದ ಅಧಿಕಾರಿ ವರ್ಗದವರು ಮತ್ತು ಪರಿಣಿತರು ಇರುವ ಈ ಸಮಿತಿ ಕೇಂದ್ರ ಸರ್ಕಾರದ ಅನುದಾನವನ್ನು ಖರ್ಚು ಮಾಡಿಸಲು, ದುರುಪಯೋಗವಾಗಿದ್ದರೇ ಕ್ರಮಕೈಗೊಳ್ಳಲು ಮತ್ತು ಇನ್ನೂ ಹೆಚ್ಚಿಗೆ ಅನುದಾನ ಪಡೆಯಲು ಇರುವ ನಿಯಮ ಬದ್ಧ ವೇದಿಕೆ.

 ಈ ಹಿನ್ನೆಲೆಯಲ್ಲಿ ಜಿ.ಎಸ್.ಬಸವರಾಜ್‌ರವರು ರಾಜ್ಯಮಟ್ಟದ ದಿಶಾ ಸಮಿತಿ ರಚನೆಗೆ, ಮಾನ್ಯ ಮುಖ್ಯ ಮಂತ್ರಿಗಳಿಗೆ ಹಲವಾರು ಪತ್ರ ಬರೆಯುವ ಮೂಲಕ ಚಾಲನೆ ನೀಡಿದರು ಇದು ಕಟು ಸತ್ಯ. ಕೊನೆಗೂ ರಾಜ್ಯದಲ್ಲಿ ಪ್ರಥಮ ಬಾರಿಗೆ ದಿಶಾ ಸಮಿತಿ ರಚನೆ ಆಗಿದೆ.

 ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಆದೇಶದ ಮೇರೆಗೆ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿರಜನೀಶ್‌ರವರು ಈ ಸಮಿತಿಗೆ ನನ್ನನ್ನು ದಿನಾಂಕ:24.09.2020 ರಂದು ನಾಮನಿರ್ದೇಶನ ಮಾಡಿದ್ದಾರೆ.

 ದಿನಾಂಕ:06.10.2020 ರಂದು ಪ್ರಥಮ ಸಭೆ ನಿಗದಿಯಾಗಿದ್ದರೂ ಚುನಾವಣೆ ನೀತಿಸಂಹಿತೆಯಿಂದ ಮುಂದೂಡಲಾಗಿದೆ. ನಾನಂತೂ ಸಭೆಗಳಿಗೆ ಕಾಯದೇ ದಿನಾಂಕ:17.10.2020 ರಂದು ಆರಂಭವಾಗುವ ಶರನ್ ನವರಾತ್ರಿಯ ಈ ಶುಭ ಸಂದರ್ಭದಿಂದ ಆರಂಭಿಸಲು ಹೆಜ್ಜೆ ಇಟ್ಟಿದ್ದೇನೆ.

 ಕಳೆದ ಒಂದು ವರ್ಷದಿಂದ ದೇಶದಲ್ಲಿಯೇ ಉತ್ತಮವಾದ ಜಿಲ್ಲಾಮಟ್ಟದ ದಿಶಾ ಸಮಿತಿ ಮಾಡಲು ಸಂಸದ ಶ್ರೀ ಜಿ.ಎಸ್.ಬಸವರಾಜ್‌ರವರ ಕನಸಿಗೆ ಒಂದು ತಂಡ ನಿರಂತರವಾಗಿ ಶ್ರಮಿಸಿದೆ. ನಾನೂ ಸಹ ಅದರಲ್ಲಿ ಇದ್ದೆ. ಈಗ ರಾಜ್ಯ ಮಟ್ಟದ ದಿಶಾ ಸಮಿತಿಗೆ ನೇಮಕ ಮಾಡಿರುವುದರಿಂದ ಸ್ವಲ್ಪ ಅಡಚಣೆಯಾಗಲೂ ಬಹುದು ಅಥವಾ ಇನ್ನೂ ಹೆಚ್ಚಿನ ಅನೂಕೂಲವೂ ಆಗಬಹುದು ಕಾದುನೋಡೋಣ?

 ಮಾನ್ಯ ಮುಖ್ಯ ಮಂತ್ರಿಯವರ ಕನಸಿನಂತೆ ದೇಶಕ್ಕೆ ಮಾದರಿ ದಿಶಾ ಸಮಿತಿ ನಮ್ಮ ರಾಜ್ಯ ಮಟ್ಟದ ದಿಶಾ ಸಮಿತಿ ಆಗಲೇಬೇಕು. ಯಾವುದೇ ಮೂಲವಾಗಲಿ ದೇಶದಲ್ಲಿಯೇ ಅತಿ ಹೆಚ್ಚು ಅನುದಾನ ಪಡೆದ ರಾಜ್ಯ ಕರ್ನಾಟಕ ಆಗುವವರೆಗೂ ನಮ್ಮ ಸಮಿತಿ ನಿರಂತರವಾಗಿ ಶ್ರಮಿಸಲೇ ಬೇಕು ಎಂಬ ಧೃಡ ನಿರ್ಧಾರವನ್ನು ದಿಶಾ ಸಮಿತಿಯ ಸದಸ್ಯರುಗಳಾದ ಶ್ರೀ ಶಿವಯ್ಯನವರು ಮತ್ತು ಶ್ರೀ ಸುರೇಶ್‌ರವರೊಂದಿಗೆ ನಡೆಸಿದ ಸಭೆಯಲ್ಲಿ ಕೈಗೊಂಡಿದ್ದೇವೆ’

  ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ದಿಶಾ ಸಮಿತಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಪ್ರಾಣೇಶ್‌ರಾವ್‌ರವರು ಮತ್ತು ಶ್ರೀಮತಿ ಕಲಾವತಿಯವರೊಂದಿಗೆ ದಿನಾಂಕ:15.10.2020 ರಂದು ನಡೆದ ಸಮಾಲೋಚನೆಯಲ್ಲಿ ಪ್ರಾಣೇಶ್‌ರಾವ್‌ರವರು ಹೇಳಿದ ಮಾತುಗಳನ್ನು ಇಲ್ಲಿ ಹೇಳಲೇಬೇಕು.

  1. ಅಭಿವೃದ್ಧಿ ಬಗ್ಗೆ ನಾವೂ ಎಷ್ಟೇ ಚರ್ಚೆ ಮಾಡಿದರು ಅದೂ ಅಭಿವೃದ್ಧಿ ಇನ್‌ವೆಸ್ಟ್‌ಮೆಂಟ್’ ಆಗುವುದೇ ಹೊರತು ಯಾವತ್ತೂ  ವ್ಯರ್ಥವಾಗುವುದಿಲ್ಲ.
  2. ‘ಸಂಘರ್ಷದಿಂದ ಅಭಿವೃದ್ಧಿ ಹಾದಿ ಸುಗುಮವಲ್ಲ’ ತಾಳ್ಮೆ ಮತ್ತು ಬೇರೆಯವರು ಹೇಳುವ ಮಾತನ್ನು ಕೇಳುವ ವ್ಯವಧಾನ ಅಧಿಕಾರದ ಚುಕ್ಕಾಣೆ ಹಿಡಿದವರಿಗೆ ಇರಬೇಕು.
  3. ನಮಗೆ ಸಮಯವಿಲ್ಲ ಇನ್ನೊಮ್ಮೆ ಬನ್ನಿ, ‘ಸಾರ್ವಜನಿಕರ ಭೇಟಿ ಮಧ್ಯಾಹ್ನ 3 ಘಂಟೆಗೆ ವ್ಯವಸ್ಥೆಯನ್ನು ಒದ್ದೋಡಿಸಬೇಕು
  4. ಕಚೇರಿಗೆ ಬಂದರವರನ್ನು ‘ಕುಳಿತುಕೊಳ್ಳಲು ಹೇಳಿ ಎರಡು ಮಾತನಾಡಿ ಕಳಿಸುವ ಜಾಣ್ಮೆ’ ಬಹುತೇಕ ಅಧಿಕಾರಿಗಳಿಗೆ ಬರಬೇಕು.
  5. ‘ದಿಶಾ ಮಾನಿಟರಿಂಗ್ ಸೆಲ್ ಮತ್ತು ನಿಮ್ಮ ವಿಷನ್ ಗ್ರೂಪ್ ‘ಚುರುಕಾದಲ್ಲಿ ನಿಮ್ಮ ಕನಸು ನನಸಾಗುವುದು.

ಕಾಕತಾಳೀಯ: ದಿನಾಂಕ:01.08.1988 ರಂದು ಕುಂದರನಹಳ್ಳಿಯ ‘ಗಂಗಮಲ್ಲಮ್ಮ ದೇವತೆಯನ್ನು ಪೂಜಿಸಿ’ ಬಿದರೆಹಳ್ಳಕಾವಲ್‌ನ ಸುಮಾರು 930 ಎಕರೆ ಸರ್ಕಾರಿ ಜಮೀನಿನಲ್ಲಿ ಯಾವುದಾದರೊಂದು ಬೃಹತ್ ಕೈಗಾರಿಕೆ ಆರಂಭಿಸಲು ಶ್ರಮಿಸಲು ಶಕ್ತಿಕೊಡು ತಾಯಿ ಎಂದು ಆರಂಭಿಸಿದ ಹೋರಾಟದ ಪ್ರತಿಫಲ, ಇಂದು ಸುಮಾರು ರೂ 6400 ಕೋಟಿ ವೆಚ್ಚದ ಹೆಲಿಕ್ಯಾಪ್ಟರ್ ತಯಾರಿಸುವ ಹೆಚ್.ಎ.ಎಲ್ ಘಟಕ ಉದ್ಘಾಟನೆ ಸಮಯದಲ್ಲಿ ದಿಶಾ ಸಮಿತಿಯ ಶ್ರಮದಿಂದ ದೇಶದಲ್ಲಿಯೇ ಅತಿ ಹೆಚ್ಚು ಅನುದಾನ ಪಡೆದ ರಾಜ್ಯವನ್ನಾಗಿಸಲು ‘108 ಶಕ್ತಿಪೀಠಗಳ ದೇವತೆಗಳಲ್ಲಿ ಪ್ರಾರ್ಥಿಸಿ’ ಶಕ್ತಿಪೀಠ ಫೌಂಡೇಷನ್ ವತಿಯಿಂದ ಆರಂಭಿಸಲಾಗಿದೆ.

 ಹೆಚ್.ಎ.ಎಲ್ ಘಟಕದ ಪಕ್ಕದಲ್ಲೇ ದಿಶಾ ಡೇಟಾ ಪಾರ್ಕ್’ ಜನ್ಮತಾಳಲಿದೆ. ನಮ್ಮೂರಿನ ಜನರೇ ನನಗೆ ಸ್ಪೂರ್ತಿ, 108 ಶಕ್ತಿಪೀಠಗಳ ದೇವತೆಯರ ಆಶಿರ್ವಾದದಂತೆ, ಇಚ್ಚೆಯಂತೆ  ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ ಕ್ಯಾಂಪಸ್‌’ ನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ಈಗಾಗಲೇ ಆರಂಭಿಸಲು ಕ್ರಮಕೈಗೊಳ್ಳಲಾಗಿದೆ.

 1990  ರಿಂದ ಶ್ರೀ ಜಿ.ಎಸ್.ಬಸವರಾಜ್‌ರವರ ಒಡನಾಟ ‘ತುಮಕೂರು ಜಿಲ್ಲೆಗೆ ಹಲವಾರು ಯೋಜನೆಗಳ ಜಾರಿಗೆ ಮುನ್ನುಡಿ’ ಬರೆದಿದೆ. ಇಂದೂ ಸಹ ಅವರ ಒಡನಾಟದ ಜೊತೆಗೆ ಮಾನ್ಯ ಮುಖ್ಯ ಮಂತ್ರಿಗಳೂ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ಚುನಾಯಿತ ಜನಪ್ರನಿಧಿಗಳ ಸಹಭಾಗಿತ್ವದ ಪ್ರತಿಫಲಕ್ಕೆ ಕಾಯಲೇಬೇಕು?

ಅಭಿವೃದ್ಧಿಗೆ ಕೈಜೋಡಿಸಲು ಮೂಲಕ ಕರೆ ನೀಡಲಾಗಿದೆ, ತಾವೂ ಬನ್ನಿ ನಿಮ್ಮ ಜ್ಞಾನವನ್ನು ಹಂಚಿಕೊಳ್ಳಿ. ದಿಶಾಗೆ ಒಂದು ದಿಕ್ಕನ್ನು ತೋರಿಸೋಣಾ!