14th July 2024
Share

TUMAKURU:SHAKTHI PEETA FOUNDATION       

 ರಾಜ್ಯ ಸರಕಾರ ಗ್ರಾಮೀಣ ಪ್ರದೇಶದ ಅಭಿವೃಧ್ಧಿಗೆ ಒತ್ತು ನೀಡುವ ಬಗ್ಗೆ ಹೆಚ್ಚಿನ್ ಕ್ರಮವಹಿಸುತ್ತೇವೆಂದು ಹೇಳಿ ಮುಂಗಡಪತ್ರ ಮತ್ತು ಹಲವು ಯೋಜನೆಗಳನ್ನು ಪರಿಚಯಿಸಲಾಗುವುದು ಎಂದು ಹೇಳುತ್ತಿರುತ್ತದೆ.

 ಕಾರಣ ಭಾರತವು ಬಹುಪಾಲು ಗ್ರಾಮೀಣ ಭಾಗಹೊಂದಿರುವುದರಿಂದ ಗ್ರಾಮೀu ಭಾಗಗಳು ಅಭಿವೃಧ್ಧಿ ಆದರೆ ಬಹುಪಾಲು ಭಾರತ ಅಭಿವ್ರುಧ್ಧಿ ಆದಂತಯೇ. ಇದನ್ನು ಮಹಾತ್ಮಗಾಂಧಿಜಿ ಅವರ ಮಾತಿನಲ್ಲಿ ಹೇಳಬಹುದಾದರೆ ಜಸ್ಟ್ ಅಸ್ ದಿ ಯೂನಿವರ್ಸ್ ಈಸ್ ಕಂಟೈನಡ್ ಇನ್ ದಿ ಸೆಲ್ಫ್, ಸೊ ಈಸ್ ಇಂಡಿಯಾ ಕಂಟೈನಡ್ ಇನ್ ದಿ ವಿಲೇಜಸ್’ ಆದ್ದರಿಂದ ದೇಶದ ಜಿಡಿಪಿ ಸೂಚ್ಯ್ಂಕ ಏರುಮುಖ ಆಗಲು ಗ್ರಾಮೀಣ ಭಾರತದ ಸಂಪತ್ತು ಬೆಳೆಯಬೇಕು. 

 ಈ ಹಿನ್ನಲೆಯಲ್ಲಿ ಯಾವುದೇ ಸರ್ಕಾರ ವಿಷೇಶವಾಗಿ ಕೃಷಿ ಕ್ಷೇತ್ರಕ್ಕೆ ಮೀಸಲಾಗಿರುವ ಸದರಿ  ಕೃಷಿ ಕ್ಷೇತ್ರದ ಕಾಯಕಲ್ಪಕ್ಕೆ ಹಿಂದಿನ ಮುಂಗಡಪತ್ರದಲ್ಲಿ ನೀರಾವರಿ, ವಿದ್ಯುತ್,  ಕೃಷಿ ಕ್ಷೇತ್ರಗಳ ಬೆಳವಣಿಗೆ ಪೂರಕವಾದ ಇತರೆ ಚಟುವಟಿಕೆಗೆ ಅನುದಾನ ಗೊತ್ತುಪಡಿಸಲಾಗಿರುತ್ತದೆ.

  ಆದರೆ ವ್ಯವಸಾಯ ಚಟುವಟಿಕೆಗೆಗಳು ಕೃಷಿಕ್ಷೇತ್ರ ಸೀಮಿತವಾಗಿಲ್ಲದೇ  ಈ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿರುವ ಇತರೆ ಅಂಶಗಳಾದ ನೀರಾವರಿ ಅಬಿವೃಧ್ಧಿ/ಸಾವಯುವ/ರಾಸಾಯಿನಕ ಗೊಬ್ಬರದ ಉತ್ಪಾದನೆ ಮತ್ತುಬಳಕೆ/ಕ್ರಿಮಿನಾಶಕ ಉತ್ಪಾದನೆ ಮತ್ತು ಬಳಕೆ/ಗ್ರಾಮಾಂತರ ಪ್ರದೇಶದಲ್ಲಿ ರಸ್ತೆ ನಿರ್ಮಾಣ/ಉಗ್ರಾಣ ಅಭಿವೃಧ್ಧಿ/ ವಿದ್ಯುತ್ ಬಳಕೆ ಅಂಶ/ಬ್ಯಾಂಕಿನಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಒದಗಿಸಿರುವ  ನಾನಾ ಯೋಜನೆಯ ಅಡಿಯಲ್ಲಿ ಒದಗಿಸಿರುವ ಸಾಲದ ಅಂಶ/ ಮಾರುಕಟ್ಟೆ ಅವಕಾಶ/ ಕೃಷಿ ಸಲಕರಣೆ ಉತ್ಪನ್ನಗಳ ಅಭಿವೃಧ್ಧಿ/ಹೈನುಗಾರಿಕೆ  ಕ್ಷೇತ್ರ/ – ಹೀಗೆ ಎಲ್ಲಾಕ್ಷೇತ್ರದ ಮುನ್ನಡೆ ಮೌಲ್ಯ ಸೇರಿರುತ್ತದೆ.

 ಈ ಅಂಶಗಳನ್ನು ಅನುಸರಣೆ ಮಾಡಿ ಹಿಂದಿನ ವರ್ಷದ ಕೃಷಿ ಮುಂಗಡ ಪತ್ರದಲ್ಲಿ ನೀರಾವರಿಗೆ ,ಕೃಷಿ ಸಂಭಂದ ಮೂಲಭೂತ ಸೌಕರ್ಯ ಅಭಿವೃಧ್ಧಿಗೆ ವಿದ್ಯುತ್ ಕ್ಷೇತ್ರಕ್ಕೆ ಕೆರೆಗಳ ಪುನರ್ ಜೀವನಕ್ಕೆ, ಉಗ್ರಾಣ ನಿರ್ಮಾಣ, ಕೃಷಿ ಸಾಲದ ಬಡ್ಡಿದರದಲ್ಲಿ ಇಳಿಕೆ ಹೀಗೆ ಹಲವಾರು ವಿಭಾಗಗಳಿಗೆ ಅನುದಾನ ನೀಡಿ, ಈ ವಲಯದ ಬೆಳವಣಿಗೆಗೆ ಅನುಕೂಲಕರ ವಾತಾವರಣ ಸೃಜಿಸಬೇಕಾಗಿದೆ.

 ಪ್ರತಿ ವರ್ಷ ವಾಡಿಕೆಯಂತೆ    ಕೇಂದ್ರ ಸರಕಾರವು ಪ್ರತಿ ವರ್ಷದ ಮುಂಗಡ ಪತ್ರ ಮಂಡನೆ ಮುನ್ನಾ ದಿನ ಆರ್ಥಿಕ ಸಮೀಕ್ಷಾ ವರದಿಯ/ ಎಕನಾಮಿಕ್ ಸರ್ವೆ ವರದಿ ಬಿಡುಗಡೆ ಮಾಡುವಂತೆ, ಸರಕಾರದ ಮುಂಡಿಸಿದ ಮುಂಗಡ ಪತ್ರದಲ್ಲಿನ ಪ್ರಯತ್ನಗಳು ಪಲಕಾರಿಯಾಗಿದೆಯೇ ಅಂದರೆ ರೂರಲ್ ಕ್ಯಾಪಿಟಲ್ ಫ಼ಾರ್ ಮೇಶನ್ ಇಂಡೆಕ್ಸ್‌ನಲ್ಲಿ ಏರಿಕೆ ಅಂಶದ ಮೌಲ್ಯ ಕಂಡುಬರುತ್ತಿದೆಯೇ ಎಂಬುದನ್ನು ಲೆಕ್ಕೀಕರಿಸಲು ಭೌತಿಕ ಬೆಳವಣಿಗೆಗಳನ್ನು ಕ್ರೋಡೀಕರಿಸಿ ಪರಿಣತರಿಂದ ಸಮೀಕ್ಷೆ ವರದಿ ಸಿದ್ದಪಡಿಸಿ ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದರೆ   ಕೃಷಿ ಕ್ಷೇತ್ರದ ಮುನ್ನಡೆ/ಹಿನ್ನಡೆ ಕ್ರೋಡೀಕರಿಸಿರಲು ಅವಕಾಶವಾಗುತ್ತದೆ. 

  ಯಾವುದೇ ವೇದಿಕೆಯಲ್ಲಿ ಮೌಲ್ಯಾಧಾರಿತ ಮಾಹಿತಿ ಒದಗಿಸಲು ದಾಖಲೆಯಾಗುವ ಅನುಕೂಲದ, ಜೊತೆಗೆ ಬೆಳವಣಿಗೆಗಳನ್ನು ಕ್ರೋಡೀಕರಿಸಿ ಮುನ್ನಡೆ/ಹಿನ್ನಡೆಸಾಧಿಸಿರುವುದುನ್ನು ಲೆಕ್ಕೀಕರಿಸಿ,  ಹಿನ್ನಡೆಗೆ ಕಾರಣಗಳನ್ನು ಕೆದಕಿ ಹಾಗೂ ಉತ್ತಮ ಸಾಧನೆಗೆ ಪೂರಕ ಅಂಶಗಳನ್ನು ಅನುಸರಣೆ ಮಾಡಿ ಕೃಷಿವಲಯಕ್ಕೆ  ನೀಡಬೇಕಾದ ಸವಲತ್ತುಗಳ ಬಗ್ಗೆ  ಪ್ರತಿ ವರ್ಷದ ಕೃಷಿ ಸಂಭಂಧವಾಗಿ ಮುಂಗಡಪತ್ರದಲ್ಲಿ ಹೆಚ್ಚಿನ ಒತ್ತುಕೊಡಲು  ಅಗತ್ಯಕ್ರಮವಹಿಸಲು ಕಾರಣವಾಗುತ್ತದೆ.

 ಇಂತಹ ಪರಿಶೀಲನೆಗೆ ವ್ಯವಸಾಯ ಕ್ಷೇತ್ರದ ಕ್ಯಾಪಿಟಲ್ ಫ಼ಾರ್ಮೇಶನ್’ ಅಭ್ಯಾಸ ಮಾಡುವುದರಿಂದ ಕೃಷಿ ಕ್ಶೇತ್ರದ ಬೆಳವಣಿಗೆಯ ಭೌತಿಕ/ಸಾಮಾಜಿಕ ಮೌಲ್ಯಗಳ ಸೂಚ್ಯಂಕಗಳನ್ನು  ಕಂಡುಹಿಡಿಯ ಬಹುದಾದ್ದರಿಂದ ಬಡ್ಜೆಟ್ ನಲ್ಲಿಅಥವಾ ಯೋಜನೆಯ ಕೃಷಿ ಕ್ಷೇತದಲ್ಲಿನ ಯಾ ಕ್ಷೇತ್ರಕ್ಕೆ ಒದಗಿಸಬೇಕಾದ ಹೆಚ್ಚಿನ ಅಗತ್ಯನೆರವುಗಳ ಅಂಶವನ್ನು ಗುರುತಿಸಬಹುದಾಗಿದೆ. 

  ವ್ಯವಸಾಯ ಉತ್ಪನ್ನಗಳು ಹೆಚ್ಚಳ ಆಗಲು ವ್ಯವಸಾಯ ಕ್ಯಾಪಿಟಲ್ ಫ಼ಾರ್ಮೇಶನ್ ಅಂಶವು ಮೂಲಾಧಾರವಾಗಿದೆ. ರಾಜ್ಯಸರಕಾರಕಾರದ ಸಂಭಂಧಪಟ್ಟ ಸಚಿವಾಲಯವು ವ್ಯವಸಾಯ ಕ್ಷೇತ್ರಕ್ಕೆ ಒದಗಿಸುವ ಎಲ್ಲಾ ಯೋಜನೆಗಳ ಅರ್ಹತೆ ಉಳ್ಳ ಅನುಷ್ಟಾನ ಹಾಗೂ ಆ ಮೂಲಕಸಾಧಿಸಿದ ಪ್ರಗತಿ ಸೂಂಚ್ಯಂಕಗಳನ್ನು ಅನುಸರಣೆ ಮಾಡಿಕೊಂಡು ರೈತರಿಗೆ ಬೇಕಾದ ಉತ್ತಮ ಕೃಷಿಯೋಜನೆಗಳನ್ನು ಹಾಗೂ ಮುಂಬರುವ ಮುಂಗಡ ಪತ್ರದಲ್ಲಿ ಸರಕಾರ ಪರಿಚಯಿಸ/ಕ್ರಮವಹಿಸ ಬಹುದಾಗಿದೆ.

  ಇದರ ಜೊತೆಗೆ ಗ್ರಾಮೀಣ ಭಾಗದ ದೇಸಿ ಕುಲಕಸಬು ಕುಶಲಿಗಳಿಗೆ ಉತ್ತೇಜನ ಪೂರಕ ಕ್ರಮಗಳು ಪರಿಚಯಿಸುವುದರಿಂದ ಅವರ ಕೌಶಲ್ಯವನ್ನು ಮೊನೆಚು ಆಗುವಂತೆ ಮಾಡಿ, ಅವರ ಉತ್ಪನ್ನಗಳಿಗೆ ಜಾಗತಿಕ ಸವಾಲಗಳಿಗೆ ಸನ್ನದ್ದಮಾಡುವುದೂ ಸರಕಾರಗಳು ಆಲೋಚಿಸಬೇಕು. ಇದು ಆದರೆ ರೂರಲ್ ಕ್ಯಾಪಿಟಲ್ ಪಾರ್‌ಮೇಶನ್  ಜೊತೆಗೆ ಗ್ರಾಮೀಣ ಸಂಪತ್ತು ಸಹ ಬೆಳೆಯುತ್ತದೆ. ಕೊರೊನಾ ಹಿನ್ನಲೆಯಲ್ಲಿ ಈ ಯೋಜನೆಗಳಿಗೆ ಒತ್ತು ನೀಡಲಾಗಿದೆ.            

ಟಿ.ಆರ್.ರಘೋತ್ತಮ ರಾವ್