3rd March 2024
Share

TUMAKURU:SHAKTHIPEETA FOUNDATION

ರಾಜ್ಯ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಲು ಸಚಿವ ಸಂಪುಟ ದರ್ಜೆಯ ಶ್ರೀ ಶಂಕರಗೌಡ ಈ ಪಾಟೀಲ್ ರವರನ್ನು ದೆಹಲಿ ಪ್ರತಿನಿಧಿ ಆಗಿ ನೇಮಕಮಾಡಿದೆ. ಅವರನ್ನು ಭೇಟಿಯಾಗಲು ಹಲವಾರು ದಿವಸಗಳಿಂದ ಪ್ರಯತ್ನ ಮಾಡುತ್ತಿದ್ದೇನೆ ಈವರೆಗೂ ಸಾಧ್ಯವಾಗಿಲ್ಲ. 

 ದಿನಾಂಕ:21.10.2020 ರಂದು ಬೆಂಗಳೂರಿನ ವಿಧಾನಸೌಧದದಲ್ಲಿರುವ ಅವರ ಕಚೇರಿಯಲ್ಲಿ ಅವರ ಆಪ್ತಕಾರ್ಯದರ್ಶಿ ಶ್ರೀ ಸೊನ್ನದ್ ಅವರೊಂದಿಗೆ ಸಮಾಲೋಚನೆ ನಡೆಸಲಾಯಿತು. ದಿಶಾ ಮಾರ್ಗದರ್ಶಿಯನ್ನು ಅಧ್ಯಯನ ಮಾಡಿ ದೆಹಲಿ ಪ್ರತಿನಿಧಿ ಕಚೇರಿ ಯಾವ ರೀತಿ ತೊಡಗಿಸಿಕೊಳ್ಳಬಹುದು ಎಂಬ ಬಗ್ಗೆ ಚರ್ಚಿಸಲಾಯಿತು. ಶೀಘ್ರದಲ್ಲಿ ದೆಹಲಿ ಪ್ರತಿನಿಧಿಯವರ ಭೇಟಿಗೆ ಸಮಯ ನಿಗದಿ ಮಾಡುವ ಭರವಸೆ ನೀಡಿದ್ದಾರೆ.

  ನಾನು ಬಹಳ ವರ್ಷಗಳಿಂದ ಗಮನಿಸುತ್ತಿದ್ದೇನೆ, ಹಲವಾರು ದೆಹಲಿ ಪ್ರತಿನಿಧಿಗಳೊಂದಿಗೆ ಚರ್ಚಿಸಿದ್ದೇನೆ, ಆದರೇ ಕ್ರಮಬದ್ಧವಾಗಿ ಕಾರ್ಯನಿರ್ವಹಿಸಲು ಅವರಿಗೆ ಸಾಧ್ಯಾವಾಗಿಲ್ಲ ಎಂದರೆ ತಪ್ಪಾಗಲಾರದು. ‘ಹುದ್ದೆ ಒಂದು ತರಹ ಗಂಜಿಕೇಂದ್ರವಾಗಿದೆ’ ಎಂದು ಹಲವಾರು ಜನ ಮಾತನಾಡುತ್ತಾರೆ.

 ಆದರೆ ನನ್ನ ಪ್ರಕಾರ ಇದು ಅತ್ಯಂತ ಒಳ್ಳೆಯ ಹುದ್ದೆ, ಶ್ರೀ ಶಂಕರಗೌಡ ಪಾಟೀಲ್‌ರವರು ಯಾವ ರೀತಿ ಪರಿಗಣಿಸಿದ್ದಾರೆ ಎಂಬ ಬಗ್ಗೆ ಅವರೊಂದಿಗೆ ಚರ್ಚಿಸಿದ ನಂತರ ಅಭಿಪ್ರಾಯ ವ್ಯಕ್ತಪಡಿಸಬಹುದಾಗಿದೆ.

About The Author