26th July 2024
Share
G.S.YADAV IFS CCF & KUNDARNAHALII RAMESH

TUMAKURU:SHAKTHIPEETA FOUNDATION

ತುಮಕೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ವೃಕ್ಷಪ್ರಾಧಿಕಾರ ರಚಿಸಲು ಹಲವಾರು ವರ್ಷಗಳಿಂದ ಪರಿಸರಾಕ್ತರು ಹರಸಾಹಸ ಮಾಡುತ್ತಿದ್ದಾರೆ. ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು ಬಹಳ ದಿವಸಗಳೇ ಆಗಿದೆ.

 ಈ ಬಗ್ಗೆ ಬೆಂಗಳೂರಿನ ಅರಣ್ಯ ಭವನದಲ್ಲಿರುವ ಅರಣ್ಯ ಸಂಪನ್ಮೂಲ ನಿರ್ವಹಣೆಯ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಜಿ.ಎಸ್.ಯಾಧವ್ ಅವರನ್ನು ದಿನಾಂಕ:21.10.2020 ರಂದು ಭೇಟಿಯಾಗಿ ಸಮಾಲೋಚನೆ ನಡೆಸಲಾಯಿತು. ಜೊತೆಯಲ್ಲಿ ಶ್ರೀ ಪ್ರಮೋದ್ ಇದ್ದರು.

 ಅವರು ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ 1976 ಸೆಕ್ಷನ್ 3(2) (ಎ) ಗೆ ತಿದ್ದುಪಡಿ ಮಾಡಲು ಈಗಾಗಲೇ ಅಗತ್ಯ ಕ್ರಮಕೈಗೊಂಡಿರುವ ಬಗ್ಗೆ ದಾಖಲೆ ಸಹಿತ ಮಾಹಿತಿ ನೀಡಿದರು. ಜೊತೆಗೆ ತುಮಕೂರಿನ ವೃಕ್ಷಪ್ರಾಧಿಕಾರದ ಪ್ರಸ್ತಾವನೆಯ ಬಗ್ಗೆ ತುಮಕೂರಿನ ಪ್ರಾದೇಶಿಕ ಅರಣ್ಯ ವೃತ್ತದ ಅರಣ್ಯ ಅಧಿಕಾರಿಯವರೊಂದಿಗೆ ಮಾತನಾಡಿ ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದರು.

 ತಿದ್ದುಪಡಿ ಆಗುವವರೆಗೂ ಈ ಹಿಂದಿನ ಕಾಯ್ದೆ ಪ್ರಕಾರ ವೃಕ್ಷಪ್ರಾಧಿಕಾರ ರಚಿಸಲು ಯಾವುದೇ ಕಾನೂನು ಅಡ್ಡಬರುವುದಿಲ್ಲ, ಆದ್ದರಿಂದ ಡಿಸಿಎಫ್ ಶ್ರೀ ಗಿರೀಶ್‌ರವರು ಕಡತ ಅನುಸರಣೆ ಮಾಡುವುದು ಅಗತ್ಯವಾಗಿದೆ. ಈ ಬಗ್ಗೆ ಅವರೊಂದಿಗೂ ದೂರವಾಣಿ ಮೂಲಕ ಚರ್ಚಿಸಲಾಗಿದೆ.