23rd December 2024
Share
CE MADHAV, CHANNAVEERAIAH E.E, HARISH & KUNDARANAHALLI RAMESH

TUMAKURU:SHAKTHI PEETA FOUNDATION

ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಜಲಜೀವನ್ ಮಿಷನ್ ಅಡಿ ತುಮಕೂರು ಜಿಲ್ಲೆಯಲ್ಲಿ ಮನೆ ಮನೆಗೆ ಕುಡಿಯುವ ನೀರಿನ ನಲ್ಲಿ ಹಾಕುವ ಯೋಜನೆ ಬಗ್ಗೆ ಸಮಾಲೋಚನೆ ನಡೆಸಲಾಯಿತು.

  ದಿನಾಂಕ:20.10.2020 ರಂದು ಎತ್ತಿನಹೊಳೆ ಮುಖ್ಯ ಇಂಜಿನಿಯರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಎತ್ತಿನಹೊಳೆ ಮುಖ್ಯ ಇಂಜಿನಿಯರ್ ಮಾಧವ, ಸಲಹೆಗಾರರಾದ ಶ್ರೀ ಹರೀಶ್, ಇಇ ಚನ್ನವೀರಯ್ಯ ಮತ್ತು ದಿಶಾ ರಾಜ್ಯ ಸಮಿತಿಯ ಸದಸ್ಯ ಕುಂದರನಹಳ್ಳಿ ರಮೇಶ್ ಇದ್ದರು.

 ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರ ಮನವಿಮೇರೆಗೆ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಆದೇಶದ ಮೇರೆಗೆ ಮತ್ತು ದಿಶಾ ಸಮಿತಿಯಲ್ಲಿ ಚರ್ಚಿಸಿದ ವಿಷಯಗಳ ಬಗ್ಗೆ ಕೈಗೊಂಡ ಕ್ರಮಗಳ ಮಾಹಿತಿಯನ್ನು ಗ್ರಾಮೀಣ ಕುಡಿಯುವ ನೀರಿನ ಇಲಾಖೆಯ ಇಇ ಚನ್ನವೀರಯ್ಯನವರು ಸಭೆಗೆ ತಿಳಿಸಿದರು.

 ಈ ಕೆಳಕಂಡ ಜಿಐಎಸ್ ಆಧಾರಿತ ಲೇಯರ್‌ಗಳನ್ನು ವಿವರವಾದ ಮಾಹಿತಿಗಳೊಂದಿಗೆ ಮಾಡಲೇ ಬೇಕು, ಇದನ್ನು ಇಲಾಖೆಯ ಇಂಜಿನಿಯರ್‌ಗಳು ಮಾಡುವುದಾದರೆ ಅವರಿಂದ ಮಾಡಿಸಿ, ಸಾಧ್ಯಾವಿಲ್ಲ ಎಂದಾದರೆ ಹೊರಗುತ್ತಿಗೆ ಆಧಾರದ ಮೇಲೆ ನೀಡಲು ಅಗತ್ಯ ಕ್ರಮಕೈಗೊಳ್ಳಿ ಎಂಬ ಅಭಿಪ್ರಾಯ ವ್ಯಕ್ತವಾಯಿತು.

  1. ತುಮಕೂರು ಜಿಲ್ಲೆಯಲ್ಲಿ ಹಾಲಿ ಇರುವ ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆಗಳ ಜಿಐಎಸ್ ಲೇಯರ್ ಮಾಡುವುದು.
  2. ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ಗ್ರಾಮಪಂಚಾಯಿತಿವಾರು ಯಾವ ಕೆರೆಗೆ ಯಾವ ನದಿ ನೀರಿನ ಅಲೋಕೇಷನ್ ಇದೆ ಎಂಬ ಮಾಹಿತಿ ಸಿದ್ಧವಿದೆ, ಅದನ್ನು ಬಳಸಿಕೊಂಡು ಯಾವ ಕೆರೆಯಿಂದ ಯಾವ ಗ್ರಾಮಪಂಚಾಯಿತಿಗೆ ಕುಡಿಯುವ ನೀರು ಸರಬರಾಜು ಮಾಡಬಹುದು ಎಂಬ ಬಗ್ಗೆ ಗ್ರಾಮಪಂಚಾಯಿತಿವಾರು ಜಿಐಎಸ್ ಲೇಯರ್ ಮಾಡುವುದು.
  3. ಗ್ರಾಮಪಂಚಾಯಿತಿವಾರು ನೀರು ಸರಬರಾಜು ಮಾಡಲು ಯಾವುದೇ ಜಲಸಂಗ್ರಹಾಗಾರಗಳಿಗೆ ನದಿ ನೀರಿನ ಅಲೋಕೇಷನ್ ಇಲ್ಲದ ಕಡೆ ಎಲ್ಲಿ ಜಲಸಂಗ್ರಹಾಗಾರ ಮಾಡಬಹುದು, ಎಷ್ಟು ನದಿ ನೀರಿನ ಅವಶ್ಯಕತೆ ಇದೆ ಎಂಬ ಜಿಐಎಸ್ ಲೇಯರ್ ಮಾಡುವುದು.
  4. ಹಾಲಿ ಯಾವ ಗ್ರಾಮಪಂಚಾತಿಯಿಯಲ್ಲಿ ಈಗಾಗಲೇ ಮನೆ ಮನೆಗೆ ನಲ್ಲಿ ಸರಬರಾಜು ಮಾಡಲಾಗುತ್ತಿದೆ, ಹೊಸದಾಗಿ ಮಾಡುವ ಅಗತ್ಯವಿಲ್ಲ ಎಂಬ ಬಗ್ಗೆ ಜಿಐಎಸ್ ಲೇಯರ್ ಮಾಡುವುದು.
  5. ತುಮಕೂರು ಜಿಲ್ಲೆಯ ಹಿಂದೆ ಇದ್ದ ಅಥವಾ ಹಾಲಿ ಇರುವ ನೀರಿನ ವ್ಯವಸ್ಥೆಗಳು, ಒಣಗಿರುವ ಮತ್ತು ಬದುಕಿರುವ ಬೋರ್ ವೆಲ್‌ಗಳ ಜಿಐಎಸ್ ಲೇಯರ್ ಮಾಡುವುದು.
  6. ತುಮಕೂರು ಜಿಲ್ಲೆಯ ಹಿಂದೆ ಇದ್ದ ಅಥವಾ ಹಾಲಿ ಇರುವ ನೀರಿನ ವ್ಯವಸ್ಥೆಗಳು, ಒಣಗಿರುವ ಮತ್ತು ಬದುಕಿರುವ ಬಾವಿಗಳ ಜಿಐಎಸ್ ಲೇಯರ್ ಮಾಡುವುದು.
  7. ಗುಬ್ಬಿ ತಾಲ್ಲೂಕು  ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿಯ ಸಂಸದರ ಆದರ್ಶ ಗ್ರಾಮ ಯೋಜನೆಯ ವ್ಯಾಪ್ತಿಯ ಯೋಜನೆ ಜಿಐಎಸ್ ಲೇಯರ್ ಮಾಡುವುದು. (ಫೈಲೆಟ್ ಯೋಜನೆಯಾಗಿ ಮಾಡಬಹುದು)
  8. ಕೊರಟಗೆರೆ ತಾಲ್ಲೂಕು  ಕುರುಂಕೋಟೆ ಗ್ರಾಮಪಂಚಾಯಿತಿಯ ಸಂಸದರ ಆದರ್ಶ ಗ್ರಾಮ ಯೋಜನೆಯ ವ್ಯಾಪ್ತಿಯ ಯೋಜನೆ ಜಿಐಎಸ್ ಲೇಯರ್ ಮಾಡುವುದು. (ಫೈಲೆಟ್ ಯೋಜನೆಯಾಗಿ ಮಾಡಬಹುದು)
  9. ಆರ್.ಓ. ಪ್ಲಾಂಟ್ ಸೇರಿದಂತೆ ಇದೂವರೆಗೂ ಕುಡಿಯುವ ನೀರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವುದೇ ಯೋಜನೆ ಕೈಗೊಂಡಿದ್ದರೂ ಅವು ನಡೆಯುತ್ತಿರಲಿ ಅಥವಾ ಹಾಳಾಗಿರಲಿ ಅವೆಲ್ಲವುಗಳ ಜಿಐಎಸ್ ಲೇಯರ್ ಮಾಡುವುದು.

ಯಾವುದಾದರೂ ಒಂದು ತಾಲ್ಲೂಕು ಅಥವಾ ಸಂಸದರ ಆದರ್ಶ ಗ್ರಾಮಗಳಲ್ಲಿ ಫೈಲೆಟ್ ಯೋಜನೆ ಮಾಡಿ, ಸಾಧಕ-ಬಾಧಕಗಳನ್ನು ನೋಡಿಕೊಂಡು ನಂತರ ಯೋಜನೆಯ ತುಮಕೂರು ಜಿಲ್ಲೆಯ ಡಿಪಿಆರ್ ಮಾಡಿಸಿ ಪ್ರಸ್ತಾವನೆ ಸಲ್ಲಿಸಲು ಸೂಕ್ತ ಎಂಬ ಅಭಿಪ್ರಾಯವನ್ನು ಮಾಧವರವರು ನೀಡಿದರು.