12th July 2024
Share

TUMAKURU:SHAKTHIPEETA FOUNDATION

ರೈತ ನಮ್ಮ ದೇಶದ ಬೆನ್ನೆಲಬು, ರೈತ ಈ ದೇಶದ ಅನ್ನದಾತ, ಎಂಬ ಘೋಷಣೆಗಳು, ನೋಡುತ್ತಿರುತ್ತೇವೆ. ನಮ್ಮ ದೇಶದಲ್ಲಿ ದೇಶಾದ್ಯಂತ ಹಲವಾರು ಅನೇಕ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗಳು ಮತ್ತು ಅಭಿವೃಧ್ಧಿ ಸಂಸ್ಧೆಗಳಲ್ಲಿ ರೈತ ಪರವಾದ ಹಾಗೂ ಕೃಷಿ ಕ್ಷೇತ್ರಕ್ಕೆ ಪೂರಕವಾಗುವ ಕಾರ್ಯಕ್ರಮ ರೂಪಿಸಲು, ಸರಕಾರಗಳಿಗೆ ಸಲಹೆ ಮೂಲಕ ಕಾರ್ಯಕ್ರಮ ನೀಡುವ ಕೃಷಿ ತಜ್ಞರು/ಪರಿಣತರ ಆಕೃತಿಗಳು ಇಲ್ಲಿ ಸೃಷ್ಠಿ ಆಗಲು ಕಾರಣ ಆಗಿವೆ.

 ನಾವು ಕಾಣುತ್ತಿರುವಂತೆ ರೈತ ಪರವಾದ ವಿಚಾರ ಧಾರೆಗಳು, ಸುಲಭ ದರದಲ್ಲಿ ಸರಕಾರದ ವತಿಯಿಂದ ರೈತ ಸಾಲ ಯೊಜನೆಗಳು. ರೈತಭಾಂಧವರಿಗೆ ಭರವಸೆ ಹಾಗೂ ಆತ್ಮವಿಶ್ವಾಸ ತುಂಬುವ ಕಾರ್ಯಕ್ರಮಗಳು,ಯೋಜನೆಗಳು ಇದ್ದರ ಜೊತೆಗೆ ಹಲವಾರು ಆಂದೋಲನಾ ಕ್ರಮಗಳು ಸರ್ಕಾರದ ವತಿಯಿಂದ ನಡೆಯುತ್ತಿದ್ದರೂ,    ಕೆಲವೊಮ್ಮೆ ರೈತರು  ಮನಕಲಕುವಂತಹ ಆತ್ಮಹತ್ಯಾ ಕ್ರಿಯೆಗೆ ಶರಣಾಗುತ್ತಿರುವುದು ಕಾಣುತ್ತಿರುತ್ತೇವೆ. ಇದಕ್ಕೆ ಕಾರಣಗಳು ಹಲವಾರು ಇರಬಹುದು.

 ಅದರಲ್ಲೂ ಮಹಾರಾಷ್ಟ್ರದ ವಿಧರ್ಭಭಾಗದಲ್ಲಿ ಹೆಚ್ಚಾಗಿ ಇಂತಹ ಪ್ರಕರಣಗಳು ಕಾಣುತ್ತಿರುತ್ತೇವೆ. ಆದ್ದರಿಂದ ಅಲ್ಲಿನ ಕೃಷಿ ಪರಿಣತರು ಕೃಷಿಕರಿಗೆ ವೈಶಿಷ್ಟ್ಯ ಪೂರ್ಣ ವ್ಯವಸಾಯದ ಅಭ್ಯಾಸದ ಮೂಲಕ  ಅವರ ಕಸುಬುನಲ್ಲೇ  ಪರಿಣಿತಿಗೊಳಿಸುವುದು, ಪ್ರಾಕ್ರತಿಕ ಸಂಪನ್ಮೂಲಗಳನ್ನು ಅಭಿವೃಧ್ಧಿಪಡಿಸುವುದು, ಉತ್ಪಾದನಾ ತಂತ್ರಜ್ಞಾನಬಳಕೆ ಮೂಲಕ ಅರಿವು ಸಾಮರ್ಥ್ಯ ಹೆಚ್ಚಿಸುವುದು, ಕೃಷಿ ಲಾಭದಾಯಕ ವೃತ್ತಿಯನ್ನಾಗಿಸುವ ವೃತ್ತಿಪಾಠ, ಪ್ರಾಕ್ಷಕಿಕೆ ಮೂಲಕ ಇಂತಹ ಕ್ರಮಗಳಿಂದ ಪರಿಪೂರ್ಣ ರೈತನ್ನಾಗಿ ಸೃಷ್ಟಿಸಿ ಆರ್ಥಿಕ ಸದೃಡತೆಗೊಳ್ಳುವಂತೆ ಮಾರ್ಪಡಿಸಿ ಆತ್ಮವಿಶ್ವಾಸದ ಮತ್ತು ಭರವಸೆ ಬದುಕು ಕಂಡುಕೊಳ್ಳಬಹುದು   ಎಂಬುದೇ    ಮಹಾರಾಷ್ಟ್ರದಲ್ಲಿಇಂತಹ ಪ್ರಯತ್ನ ನಡೆದಿದೆ,  ಅದೇ ಈ ಲೇಖನದ ಚರ್ಚಿತ ಅಂಶಗಳಾಗಿವೆ.

 ಪರಿಪೂರ್ಣ ರೈತರನ್ನಾಗಿಸಲು ಅವರಿಗೆ ಹೊಸ ಬೇಸಾಯ ಪದ್ದತಿಯನ್ನು ಅಳವಡಿಸಿಕೊಳ್ಳಲು ಮತ್ತು ಆಧುನಿಕ ವ್ಯವಸಾಯ ಉಪಕರಣ ತಮ್ಮ ವ್ಯವಸಾಯ ಅಭ್ಯಾಸಗಳಲ್ಲಿ ಅಳವಡಿಸಿ ಕೊಳ್ಳಲು, ಜೊತೆಯಲ್ಲೇ ವ್ಯವಸಾಯಕ್ಕೆ ನೀರನ್ನು ಪೋಲುಮಾಡದೇs ಸದ್ಬಳಕೆ ಮಾಡಿಕೊಳ್ಳುವ ಕ್ರಮಗಳು, ರೈತ ತನ್ನ ವ್ಯವಸಾಯ ಭೂಮಿಯ ಗುಣಗಳ ಅಧ್ಯಯನ, ಒಣಬೇಸಾಯ ಪದ್ದತಿಯ ಹೊಸ ಬೆಳವಣಿಗೆ, ಭೂಮಿಯ ಮೇಲೆ ಅಬೊಟಿಕ್ ಒತ್ತಡಗಳಾದ ಬರ, ಪ್ರವಾಹ, ಆಮ್ಲದ ಅಂಶ, ಭೂಮಿ ಉಷ್ಣತೆ-ನಿವಾರಿಸುವ ಬಗ್ಗೆ ಅಧ್ಯಯನದ ಅರಿವು, ಹಸಿರು ಹೊದಿಕೆ ಪರಿಕಲ್ಪನೆ ಬಗ್ಗೆ ಕ್ರಮವಹಿಸಬೇಕಾದ ಅನುಸರಣೆಕ್ರಮಗಳನ್ನು ಮನಗಾಣಿಸಬೇಕು.

 ಮುಂದುವರೆದಂತೆ ವ್ಯವಸಾಯಕ್ಕೆ ವಿದ್ಯುತ್ ಪಂಪ್‌ಸೆಟ್ಟು ಬಳುಸುವ ರೈತರು ಗುಣಮಟ್ಟದ ವಿದ್ಯುತ್ ನೀರಾವರಿ ಪಂಪುಗಳನ್ನು ಜೋಡಿಸಿ ವಿದ್ಯುತ್ ಉಳಿತಾಯ ಮತ್ತು ವಿದ್ಯುತ್ ನಷ್ಟ ಕಡಿಮೆ ಮಾಡುವಲ್ಲಿ ರೈತರ ಪಾತ್ರ ಎಂಬುದರ ಬಗ್ಗೆ  ಅನುಸರಣೆ ಕ್ರಮಗಳನ್ನು ಪರಿಣಿತರಿಂದ ಪ್ರಾತ್ಯಕ್ಷಿಕೆ ಮೂಲಕ ಮನವರಿಕೆ ಮಾಡಬೇಕಾಗಿದೆ.

 ಸರಕಾರಿ ಯೋಜನೆಗಳ ಅರಿವು, ಬ್ಯಾಂಕುಗಳ ಮೂಲಕ ಸರಕಾರದ ವಿವಿಧ ಯೋಜನೆ ಆಡಿಯಲ್ಲಿನ ಆರ್ಥಿಕ ಸಹಾಯ ವಿವರಗಳು, ಮಾರುಕಟ್ಟೆ ಲಿಂಕೇಜ್, ಸಾರ್ಟಿಂಗ್, ಗ್ರೇಡಿಂಗ್ ಅಭ್ಯಾಸ ಹೀಗೆ ರೈತರಿಗೆ  ಮಾಹಿತಿ ಸಂಪನ್ಮೂಲ ಅರಿವು, ಹೊಸ ಬೇಸಾಯ ಪದ್ದತಿಯನ್ನು ಅಳವಡಿಸಿಕೊಳ್ಳಲು ಮತ್ತು ಆಧುನಿಕ ವ್ಯವಸಾಯ ಉಪಕರಣ ಉಪಯೋಗದ ಅಭ್ಯಾಸ ತರಬೇತಿ ಪಡೆದು ದೇಶಕ್ಕೆ ಹೆಚ್ಚು ವ್ಯವಸಾಯ ಉತ್ಪನ್ನಗಳನ್ನು ಬೆಳೆದು ದೇಶಕ್ಕೆ ಆಹಾರ ಭದ್ರತೆ ಯೋಜನೆಗೆ ಸಹಕಾರಿ ಆಗುವುದರ ಜೊತೆಗೆ ತಾವೂ ಸಹ ಆರ್ಥಿಕ ಸದೃಡತೆ ಕಂಡು ಕೊಳ್ಳಬಹುದಾಗಿದೆ ಎಂಬುದನ್ನು ವಿವರಿಸಬೇಕಾಗಿದೆ.

 ಇಂತಹ ಅಭ್ಯಾಸಗಳಲ್ಲಿ ರೈತರು ತೊಡಗಿಸಲು ಒಂದು ವಿಶಿಷ್ಟವಾದ ಆವರಣದಲ್ಲಿ ಪರಿಣಿತರಿಂದ ವ್ಯವಸಾಯ ಪದ್ದತಿಯಲ್ಲಿನ ಉನ್ನತ ಹಾಗೂ ಇತ್ತೀಚಿನ ಆಧುನಿಕ ವ್ಯವಸಾಯ ಉಪಕರಣ ಬಳಕೆ ಅರಿವು ಮೈಗೂಡಿಸು ಮೂಲಕ ಮಾದರಿ ರೈತ ಸೃಷ್ಟಿ ಆಗಲು  ರೈತರಿಗೆ ಪ್ರವೇಶದ ಅವಕಾಶ ಇರುವ ವಿವಿಧ ಸೌಕರ್ಯದ ಆವರಣವುಳ್ಳ ವೈಶಿಷ್ಟ್ಯ ಪೂರ್ಣ ಮುಕ್ತ ಕೃಷಿ ವಿಶ್ವವಿದ್ಯಾಲಯ ರಾಜ್ಯಕ್ಕೆ ಬೇಕಾಗಿದೆ ಎಂಬುದು ಚರ್ಚಿತ ಅಂಶದಲ್ಲಿಅಭಿಪ್ರಾಯಿಸಲಾಗಿದೆ.

 ಇಂತಹದೇ ಪರಿಕಲ್ಪನೆಯಲ್ಲಿ, ದೇಶದಲ್ಲೇ ಮೊದಲಬಾರಿಗೆ ಪ್ರವೇಶ ಪಡೆಯಲು ವಯೋಮಿತಿ ಆಧಾರ ಇಲ್ಲದ ಮತ್ತು ಯಾವುದೇ ವಿದ್ಯಾರ್ಹತೆ ಬೇಕಾಗದ ವೈಶಿಷ್ಟ್ಯ ಪೂರ್ಣ ಮುಕ್ತ ಕೃಷಿ ವಿಶ್ವವಿದ್ಯಾಲಯವನ್ನು  ಮಹಾರಾಷ್ಟ್ರದ ನಾಗಪುರ ಬಳಿಯ ಕಟೋಲದಲ್ಲಿ ಈಗಾಗಲೇ ಇದೆ’

 ಈ ಮುಕ್ತ ಕೃಷಿ ವಿಶ್ವವಿದ್ಯಾಲಯವು ರೈತರಿಗೆ ಮತ್ತು ರೈತ ಮಕ್ಕಳಿಗೆ ವಯೋಮಿತಿ ಇಲ್ಲದ,  ಯಾವುದೇ ವಿದ್ಯಾರ್ಹತೆ ಇಲ್ಲದೇ ಪ್ರವೇಶ ನೀಡಲು ಬಾಗಿಲು ತೆರೆದಿದೆ.  ಯಾವುದೇ ಪದವಿ ಪಡೆಯದ ರೈತರು ಮತ್ತು ರೈತ ಮಕ್ಕಳು, ಕೃಷಿ ವ್ಯವಸಾಯ ಪದ್ದತಿ ಹಾಗೂ ಹೊಸ ಅವಿಷ್ಕಾರದ ಕೃಷಿ ಸಲಕರಣೆ ಉಪಯೊಗಿಸುವ ಅಭ್ಯಾಸದಲ್ಲಿ ಇತ್ತೀಚಿನ ಬೆಳವಣಿಗೆಯ ಅರಿವು ಪಡೆಯಲು ಇತರೆ ಕೃಷಿ ವಿಶ್ವವಿದ್ಯಾಲಯ ಜೊತೆಗೆ ಸಹಭಾಗಿತ್ವದೊಡನೆ ಒಪ್ಪಂದ ಮಾಡಿಕೊಂಡಿದೆ.

 ಈ ಮುಕ್ತ ಕೃಷಿ ವಿಶ್ವವಿದ್ಯಾಲಯದ ಪಠ್ಯಕ್ರಮ ಸದ್ಯ ಕೃಷಿ ವಿಶ್ವವಿದ್ಯಾಲಯ ಪಠ್ಯಕ್ರಮ ಆಗಿರದೇ ಬೇರೆಯೇ ಆಗಿದೆ. ಈ ವೈಶಿಷ್ಟ್ಯಪೂರ್ಣ ಮುಕ್ತ ಕೃಷಿ ವಿಶ್ವವಿದ್ಯಾಲಯ ಅಭ್ಯಾಸ ಪಠ್ಯಕ್ರಮವು ವಿಶ್ವವಿದ್ಯಾಲಯದ ಅಭ್ಯಾಸದ ತರಗತಿಗಳು ಬಹು ಭಾಗ ಸೂರಿನಡೆಯಿಲ್ಲದೇ ಇಲ್ಲದೇ, ಈ ಸಂಸ್ಧೆಯು ನಿರ್ವಹಿಸುವ ಅಂಗಳ ದಲ್ಲಿನ ಹೊಲ, ಗದ್ದೆ, ತೋಟಗಳಲ್ಲಿ ರೈತರಿಗೆ ಹೊಸ ವ್ಯವಸಾಯ ಪದ್ದತಿಯನ್ನು ಪ್ರಮಾಣಿಕರಣ ಮೂಲಕ [ಡೆಮಾನ್ಸಸ್ಟ್ರೇಶನ್] ಮೂಲಕ ಮನವರಿಕೆ ಮಾಡಲಾಗತ್ತಿದೆ.

  ಜೊತೆಗೆ ವ್ಯವಸಾಯ ಪದ್ದತಿಯಲ್ಲಿನ ತೊಂದರೆ ಗಳನ್ನು, ಅದರಲ್ಲೂ ನೀರಿನ ಬಳಕೆ, ವಿಧಿ, ವಿಧಾನಗಳ ಅರಿವು, ವ್ಯವಸಾಯ ಉತ್ಪನ್ನಗಳ ಮಾರುಕಟ್ಟೆಯಲ್ಲಿನ ಆಡಚಣೆಗಳನ್ನು ನಿವಾರಿಸಿಕೊಳ್ಳುವ ಅಭ್ಯಾಸ ಕ್ರಮಗಳನ್ನು ಹೇಳಿಕೊಡಲಾಗುತ್ತದೆ.  ಮುಂದುವರೆದಂತೆ ಪ್ರವೇಶ ಪಡೆದ ರೈತರು ತಮಗೆ ಗೊತ್ತು ಪಡಿಸಿದ ತರಬೇತಿ ಅವಧಿಯನ್ನು ಯಶಸ್ವಿಯಾಗಿ ಮುಗಿಸಿದವರಿಗೆ ವಿಶ್ವವಿದ್ಯಾಲಯದಲ್ಲಿ ನೀಡುವ ಪದವಿಯಂತೆ ಇಲ್ಲೂ ಸಹಾ ರತ್ನ’ ಎಂಬ ಶ್ರೇಣಿಯ ಪದನಾಮದ ಪದವಿಗಳನ್ನು ನೀಡಲಾಗುತ್ತದೆ.

 ವ್ಯವಸಾಯ ಪದ್ದತಿಯಲ್ಲಿ ಹೊಸತನ ಅಳವಡಿಸಿಕೊಂಡಿರುವುದನ್ನು ಪ್ರತ್ಯಕ್ಷವಾಗಿ ನೋಡಿ ಅನುಭವ ಪಡೆಯಲು ಫ಼ೀಲ್ಡ್ ವಿಸಿಟ್ ಮೂಲಕ ಅರಿವು ಉಂಟು ಮಾಡಲಾಗುತ್ತದೆ. ಪ್ರವೇಶ ಪಡೆದಿರುವ ರೈತರಿಂದ ಸದರಿ ವೈಶಿಷ್ಟ್ಯಪೂರ್ಣ ಮುಕ್ತ ಕೃಷಿ ವಿಶ್ವವಿದ್ಯಾಲಯ ನಿರ್ವಹಿಸುವ ಹೊಲ, ಗದ್ದೆ, ತೋಟಗಾರಿಕೆ ಆವರಣದಲ್ಲಿ ನವೀನ ತಂತ್ರಜ್ಞಾನದ ಕೃಷಿ ಉಪಕರಣ ಬಳಕೆ ಮತ್ತು ಹೊಸ ಪದ್ದತಿಯ ವ್ಯವಸಾಯ ಕ್ರಮವಹಿಸಿ ಅಲ್ಲಿ ಕೃಷಿ ಉತ್ಪನ್ನ ಬೆಳೆಯುವ ಮೂಲಕ, ಮಾರ್ಕೆಟಿಂಗ್ ಲಿಂಕೇಜ್ ಅರಿವು ಮೂಡಿಸಿ ರೈತರು ಆರ್ಥಿಕ ಸದೃಡತೆ ಕಂಡು ಕೊಳ್ಳುವ ಅಭ್ಯಾಸಗಳನ್ನು ಹೇಳಿಕೊಡಲಾಗುತ್ತದೆ ರೈತರಿಗೆ ಭರವಸೆ ಮೂಡಿಸಲಾಗುತ್ತಿದೆ.

 ರಾಜ್ಯದಲ್ಲೂ, ರೈತರಿಗಾಗಿ ರಾಜ್ಯ ಸರಕಾರವು ಪ್ರವೇಶಕ್ಕೆ ವಯೋಮಿತಿ ಇಲ್ಲದ ಮತ್ತು ಯಾವುದೇ ವಿದ್ಯಾರ್ಹತೆ ಬೇಕಿಲ್ಲದ ವೈಶಿಷ್ಟ್ಯ ಪೂರ್ಣ ಮುಕ್ತ ಕೃಷಿ ವಿಶ್ವವಿದ್ಯಾಲಯ ಪರಿಚಯಿಸಿ ರಾಜ್ಯದಲ್ಲಿ ಆದರ್ಶ ರೈತರ ಸೃಷ್ಟಿಗೆ ಆಲೋಚಿಸಬೇಕಾಗಿದೆ. ರಾಜ್ಯದಲ್ಲಿ ಈ ವಿಶ್ವವಿದ್ಯಾಲಯ ಪ್ರಾರಂಭಕ್ಕೆ ರಾಜ್ಯಾದಂತ,  ಫೂರ್ಣವಾಗಿ ಬಳಸದೇ ಇರುವ ತೋಟಗಾರಿಕೆ ವಶದಲ್ಲಿರುವ ಸಾವಿರಾರು ಎಕರೆ ಭೂಮಿ ಲಭ್ಯವಿದ್ದ್ಲು, ತುಮಕೂರು ಜಿಲ್ಲೆಯಲ್ಲಿನ ಇಂತಹ ಆವರಣ ಗುರುತಿಸಬಹುದಾದರೆ ಕೊರಟಗೆರೆ ತಾಲ್ಲೂಕಿನಲ್ಲಿನ ವಡ್ಡಗೆರೆ ಫ಼ಾರಂ ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಧರ್ಮವೀರಾ ಫ಼ಾರಂ ವಿಶಾಲ ಭೂಮಿ  ಪೂರ್ಣವಾಗಿ ಬಳಸದೇ ಇರುವ ಸ್ಥಿತಿಯಲ್ಲಿದೆ.

 ಇಂತಹ ಆವರಣದಲ್ಲಿ ವೈಶಿಷ್ಟ್ಯಪೂರ್ಣ ಮುಕ್ತ ಕೃಷಿ ವಿಶ್ವವಿದ್ಯಾಲಯವನ್ನು ರಾಜ್ಯದಲ್ಲಿ ಕೃಷಿ ವಿದ್ಯಾಲಯದ ಸಹಭಾಗಿತ್ವದೊಡನೆ ಪ್ರಾರಂಭಿಸಿ ರಾಜ್ಯದ  ಆಸಕ್ತ ರೈತರಿಗೆ ತಂಡ ತಂಡವಾಗಿ ಆಯ್ಕೆಯ ಮೂಲಕ ಪ್ರವೇಶ ನೀಡಿ ಹೊಸ ಪದ್ದತಿಯ ವ್ಯವಸಾಯ  ಪದ್ದತಿಯ ಅಭ್ಯಾಸವನ್ನು ಪ್ರಾತ್ಯಕ್ಷಿಕೆ ಮೂಲಕ ಹಾಗೂ ನವೀನ ತಾಂತ್ರಿಕತೆಯ ಕೃಷಿ ಉಪಕರಣ ಬಳಸಿ ಹೆಚ್ಚು ಕೃಷಿ ಉತ್ಪನ್ನ ಬೆಳೆಯುವ ಪದ್ದತಿ, ಮಾರ್ಕೆಟಿಂಗ್ ಲಿಂಕೇಜ್ ಅರಿವು ಮೂಡಿಸಿ ರೈತರು ಆರ್ಥಿಕ ಸದೃಡತೆ ಕಂಡುಕೊಳ್ಳುವ ಅಭ್ಯಾಸಗಳನ್ನು ಹೇಳಿ ಕೊಡಲಾಗಬಹುದಾಗಿದೆ.

 ಮುಂದವರೆದಂತೆ ಮಹಾರಾಷ್ಟ್ರದಲ್ಲಿ ಸದ್ಯ ಕಾರ್ಯನಿರ್ವಹಿ ಸುತ್ತಿರುವ  ಮಾದರಿಯಲ್ಲಿಯೇ ಮುಕ್ತ ವಿಶ್ವವಿದ್ಯಾಲಯದಲ್ಲಿನ ಅಭ್ಯಾಸ ಕ್ರಮವಲ್ಲದೇ, ಚರ್ಚಿಸಿರುವ ವಿಷಯದಂತೆ ಪ್ರವೇಶಕ್ಕೆ ವಯೋಮಿತಿ ಇಲ್ಲದ ಹಾಗೂ ಯಾವುದೇ ವಿದ್ಯಾರ್ಹತೆ ಬೇಕಾಗದ ವೈಶಿಷ್ಟ್ಯ ಪೂರ್ಣ ಮುಕ್ತ ಕೃಷಿ ವಿಶ್ವವಿದ್ಯಾಲಯದಲ್ಲಿ ಹೆಚ್ಚುವರಿಯಾಗಿ ವಿಶಿಷ್ಟವಾಗಿರುವಂತೆ ಕೇಂದ್ರ ಸರಕಾರದ ಕೃಷಿ ಸಚಿವಾಲಯದ ಅಧೀನದಲ್ಲಿ ದೇಶದಲ್ಲಿನ ಫ಼ಾರಂ ಮೆಷನರಿ ಮತ್ತು ಟೆಸ್ಟಿಂಗ್ ಕೇಂದ್ರದ ಜೊತೆಯಲ್ಲೂ ಸಹಭಾಗಿತ್ವದ ಒಪ್ಪಂದ ಬೇಕಿದೆ.

  ನಮ್ಮ ರಾಜ್ಯದ ರೈತರು ವ್ಯವಸಾಯ ಕ್ಷೇತ್ರದಲ್ಲಿ ಯಾಂತ್ರೀಕೃತ ಉಪಕರಣಗಳ ಅಭ್ಯಾಸಗಳನ್ನು ಅಳವಡಿಸಿಕೊಂಡು ಆಧುನಿಕ ತಂತ್ರಜ್ಞಾನದ ಉಪಯೊಗಗಳನ್ನು ಪಡೆದು ವ್ಯವಸಾಯ ಉತ್ಪನ್ನಗಳ ಅಂಶ ಹೆಚ್ಚಿಸಲು ಮತ್ತು ರೈತರಿಗೆ ಆಧುನಿಕ ಬೇಸಾಯ ಪದ್ದತಿಯನ್ನು ಪರಿಚಯಿಸಲು ಫ಼ಾರಂ ಮೆಷನರಿಗಳ ಬಗ್ಗೆ ಉಪಯೋಗದ ಬಗ್ಗೆ/ರಿಪೇರಿ/ಟೆಸ್ಟಿಂಗ್‌ಗಳ ಬಗ್ಗೆ ತರಬೇತಿ ನೀಡಲು ಈ ತರಬೇತಿ ಕೇಂದ್ರದ ಸೌಕರ್ಯಗಳನ್ನು ಬಳಸಬಹುದಾಗಿದೆ.

 ಹಾಗೆಯೇ ಇಂಡಿಯನ್ ಕೌನ್ಸಿಲ್ ಫ಼ಾರ್ ಅಗ್ರಿಕಲ್ಚರ್ ರೀಸರ್ಚ್ ಸಂಸ್ಧೆಯ ಅಂಗಸಂಸ್ಧೆಯಾದ ಕೇಂದ್ರ ಸರಕಾರದ ಒಣಬೇಸಾಯ ಸಂಶೋಧನೆ ಸಂಸ್ಧೆ [Central Research Institute for Dryland Agriculture  (CRIDA) ಇದ್ದು ಅದರೊಂದಿಗೂ ಸಹಭಾಗಿತ್ವದ ಒಪ್ಪಂದ ಮೇಲೆ ವಿಶ್ವವಿದ್ಯಲಯದಲ್ಲಿ ಪ್ರವೇಶ ಪಡೆದ ರೈತರು ಒಣಬೇಸಾಯ ಮತ್ತು ಮಳೆ ನೀರು ಬೇಸಾಯ ಪದ್ದತಿಯಲ್ಲಿ ಮೂಲ ವಿಧಾನದ ಅಭ್ಯಾಸಗಳಲ್ಲಿ ಹಾಗೂ ಅನ್ವವಿಕ ಸಂಶೋದನೆ ಮೂಲಕ  [Basic And Applied Research] ಹೊಸ ಪದ್ದತಿಯಲ್ಲಿನ ಆಚರಣೆಗೆ ಪರಿಚಯಿಸಬಹುದಾಗಿದೆ.

  ಶಿಶುಕ್ಷಿಗಳಾಗಿ ಸೇರಿದ ರೈತರಿಗೆ ಈ  ಸಂಸ್ದೆಯು ಪರಿಣಿತರಿಂದ ಒಣ ಭೂಮಿಯಲ್ಲಿನ ನೈಸರ್ಗಿಕವಾಗಿರುವ ಉತ್ಪತ್ತಿ ಗುಣ ಹೆಚ್ಚಿಸುವ ಕ್ರಮಗಳು, ಕೌಶಲ್ಯ ವಿಧಾನಗಳ ಅಭಿವೃಧ್ಧಿಪಡಿಸುವ ಮೂಲಕ ಹೆಚ್ಚುಕಾಲ  ಸಂರಕ್ಷಣೆ, ಸಮರ್ಥವಾಗಿ ಒಣಭೂಮಿ ವ್ಯವಸಾಯಕ್ಕೆ ಬಳಸುವ ರೀತಿ ವಿಧಾನಗಳು, ಮಳೆನೀರಿನ ಸಂಪನ್ಮೂಲ ಕ್ರೋಡೀಕರಿಸುವ ವಿಧಾನಗಳು, ಬೆಳೆ ಪದ್ದತಿಗಳು, ಅದರಲ್ಲೂ ಒಣ ಭೂಮಿಯ ತೇವಾಂಶದ ಅಭ್ಯಾಸ ಹೀಗೆ  ರೈತರು ಅಳವಡಿಸುಕೊಳ್ಳಬಹುದಾದ ವ್ಯವಸಾಯ ಪ್ರಾತ್ಯಕ್ಷಿಕೆ ಮೂಲಕ ಹಲವಾರು ವ್ಯವಸಾಯ ಮಾಡೆಲ್‌ಗಳನ್ನು ಪರಿಚಯಿಸಬಹುದಾಗಿದೆ.

 ಭಾರತ ಸರ್ಕಾರದ ಕೃಷಿ ಸಚಿವಾಲಯದ ಐಸಿಎಆರ್ ಗೆ ಸೇರಿದ ಇನ್ನೊಂದು ಸಂಸ್ಧೆಯಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ಼್ ಅಬೋಟಿಕ್ ಸ್ಟ್ರೆಸ್ ಮ್ಯಾನೇಜ್ಮೆಂಟ್  [National Institue of Abotic stress Management] ಜೊತೆಯೂ ಸಹ ಒಪ್ಪಂದ ಮಾಡಿಕೊಂಡು ಅಲ್ಲಿ ಅಧ್ಯಯನ ಮಾಡುವ  ಭೂಮಿ ತಾಯಿಯ ಅಬೋಟಿಕ್ ಸ್ಟ್ರೆಸ್  [Abotic Stress] ಗಳಾದ ಬರ, ಬೆಳೆ ಭೂಮಿಯಲ್ಲಿ ನದಿ ಪ್ರವಾಹದ ಒತ್ತಡ, ಭೂಮಿ ಕಾವೇರುವುದು, ಭೂಮಿಯ ಆಮ್ಲತೆ, ಇಂದಿನ ಒತ್ತಡಗಳು ಮತ್ತು ಅಪಾಯಗಳ ನಿರ್ವಹಣೆ ಬಗ್ಗೆ ರೈತರಿಗೆ ವ್ಯವಸಾಯ ಪದ್ದತಿಯಲ್ಲಿ ನಿವಾರಣೆ ಮಾಡಿ ಕೊಳ್ಳಬಹುದಾಗಿದೆ ಎಂಬುದನ್ನೂ ಸಹಾ ಪರಿಣಿತರಿಂದ ವಿವರಿಸಲು ಅಭ್ಯಾಸಗಳಲ್ಲಿ ಸೇರ್ಪಡೆ ಮಾಡಬಹುದಾಗಿದೆ. 

 ಈ ವಿಶ್ವವಿಧ್ಯಾಲಯದಲ್ಲಿ ಪ್ರವೇಶ ಪಡೆದ ರೈತರು ತಮ್ಮ ಉತ್ಪನ್ನಗಳಿಗೆ ಹೆಚ್ಚು ಬೆಲೆ ಪಡೆಯಲು ಮಾರ್ಕೆಟ್ ಇಂಟೆಲಿಜೆನ್ಸ್ ಅಭಾಸಗಳನ್ನು ಪರಿಣಿತರಿಂದ  ಅರಿವು ಮೂಡಿಸಲು ಅಭ್ಯಾಸದಲ್ಲಿ ಈ ಅಂಶವನ್ನು ಸೇರ್ಪಡೆ ಮಾಡಬಹುದಾಗಿದೆ. ರಾಜ್ಯ ಸರಕಾರದ ಮತ್ತು ಕೇಂದ್ರ ಸರಕಾರದ ರೈತರಿಗಾಗಿ ಇರುವ ಯೋಜನೆಗಳ ಸ್ಥೂಲ ಪರಿಚಯ, ಬ್ಯಾಂಕುಗಳಿಂದ ಸರಕಾರಿ ಯೋಜನೆ ಮೂಲಕ ಲಭ್ಯ ದೊರಕುವ  ಧನ ಸಹಾಯದ ವಿವರಗಳನ್ನು ಜೊತೆಗೆ ಕೇಂದ್ರ ಸರಕಾರ ರೈತರ ಅದಾಯ ದುಪ್ಪಟ್ಟು ಮಾಡಲು ಪೂರಕ ಎಂದು ಹೇಳಲಾಗುವ ಹಲವಾರು ಪ್ರಯತ್ನಗಳನ್ನು ಅಭ್ಯಾಸಗಳಲ್ಲಿ ಸೇರ್ಪಡೆ ಮಾಡಬಹುದಾಗಿದೆ.

ಒಟ್ಟಿನಲ್ಲಿ ನಮ್ಮ ರೈತರನ್ನು ಪರಿಪೂರ್ಣತೆ ಮಾಡಿ ತಮ್ಮಕಾಯಕದಲ್ಲಿ ಭರವಸೆ ಮೂಡಿಸುವುದೇ ಆಗಬೇಕಿದೆ’

                                                                                                ಟಿ.ಆರ್.ರಘೋತ್ತಮ ರಾವ್