22nd December 2024
Share

TUMAKURU:SHAKTHIPEETA FOUNDATION

ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯನಾಗಿ ಇಂದಿಗೆ(24.10.2020) ಒಂದು ತಿಂಗಳಾಯಿತು. ಸುಮಾರು 9 ಪತ್ರಗಳನ್ನು ದಿಶಾ ಸಮಿತಿಯ ಸದಸ್ಯಕಾರ್ಯದರ್ಶಿಯವರಿಗೆ ಬರೆಯುವ ಮೂಲಕ ದಿಶಾ ಸಮಿತಿ ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂಬ ಬಗ್ಗೆ ನಮ್ಮ ಸಂಸ್ಥೆಗಳಾದ ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂಗಳ ಸ್ಪಷ್ಠ ಅಭಿಪ್ರಾಯವನ್ನು ದಿಶಾ ಸಮಿತಿಯ ಸದಸ್ಯನಾಗಿ ತಿಳಿಸಿದ್ದೇನೆ.

ಮುಂದಿನ 100 ದಿವಸಗಳಲ್ಲಿ ನಾನು ಬರೆದ 9 ಪತ್ರಗಳ ಪ್ರತಿಯೊಂದು ವಿಷಯಗಳ ಸಾಧಕ-ಭಾದಕಗಳ ಬಗ್ಗೆ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಬೇಕಿದೆ. ಅಂತಿಮ ತೀರ್ಮಾನವನ್ನು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರೇ ಆದೇಶಿಸಬೇಕು’

 ನಮ್ಮ ಸಂಸ್ಥೆಯ ಮೂಲಕ ದಿಶಾ ಡೇಟಾ ಪಾರ್ಕ್’ ಸ್ಥಾಪಿಸುವ ಪರಿಕಲ್ಪನೆಗೂ ಚಾಲನೆ ದೊರಕಿದೆ, ಅದು ಅಷ್ಟು ಸುಲಭದ ಕೆಲಸವಲ್ಲ ಎನ್ನುವುದೂ ಗೊತ್ತಿದೆ. ನಮ್ಮ ವಿಷನ್ ಗ್ರೂಪ್‌ನಲ್ಲಿ ಮುಖ್ಯ ಸಲಹೆಗಾರರಾಗಿ ಶ್ರೀ ಟಿ.ಆರ್.ರಘೋತ್ತಮರಾವ್, ಸದಸ್ಯರಾಗಿ ಶ್ರೀ ಸತ್ಯಾನಂದ್, ಶ್ರೀ ಪ್ರಮೋದ್ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 ಇನ್ನೂ ಆನೇಕರು ವಿಷಯವಾರು ಅಧ್ಯಯನ ಮಾಡುವ ಮೂಲಕ ಸಹಕರಿಸುತ್ತಿದ್ದಾರೆ. ನಾವೂ ಮುಂದಿನ ನೂರು ದಿವಸಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಗೊಬ್ಬ ಪರಿಣಿತರನ್ನು ಆಯ್ಕೆ ಮಾಡುವ ಗುರಿ ಹೊಂದಿದ್ದೇವೆ, 

  ನಮ್ಮ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಎಲ್ಲವೂ ಪ್ರಕಟವಾಗಲಿದೆ. ಈ ಕೆಲಸವನ್ನು ಶ್ರೀ ಸತ್ಯಾನಂದ್, ಶ್ರೀ ಪ್ರಮೋದ್, ಶ್ರೀಮತಿಶ್ರುತಿ, ಭರತ್‌ಕುಮಾರ್ ಮತ್ತು ಸಾಗರ್ ಆರಂಭಿಸಲಿದ್ದಾರೆ. ರಘೋತ್ತಮರಾವ್ ಎಲ್ಲವನ್ನೂ ಗಮನಿಸಲಿದ್ದಾರೆ. ಅವರ ಆದೇಶವಿಲ್ಲದೆ ಯಾವ ಕೆಲಸವನ್ನು ಮಾಡುವ ಹಾಗಿಲ್ಲ.

  ‘ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಕನಸಿನ ಮಾದರಿಯಲ್ಲಿ ದಿಶಾ ಸಾಗಲಿದೆ. ದೇಶಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸುವ ಭರವಸೆ ನಮ್ಮದಾಗಿದೆ. ಸದಸ್ಯ ಕಾರ್ಯದರ್ಶಿ ಸೇರಿದಂತೆ ಎಲ್ಲರೂ ಇಡೀ ತಂಡವಾಗಿ ಕಾರ್ಯನಿರ್ವಹಿಸುವ ಆಸಕ್ತಿ ತೋರುತ್ತಿದ್ದಾರೆ. ಇಲ್ಲಿ ಎಲ್ಲಾ ಇಲಾಖೆಗಳ ಸಮನ್ವಯತೆಯೇ ದೊಡ್ಡ ಸಾಹಸ’

 ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್. ಬಸವರಾಜ್‌ರವರಿಗೆ 80 ವರ್ಷ ತುಂಬಿದ ಸಂದರ್ಭದಲ್ಲಿ ಅಭಿನಂದನಾ ಸ್ಮರಣ ಸಂಚಿಕೆ ಹೊರತರುವ ಕೆಲಸವನ್ನು ಅವರ ಹಿತೈಷಿಗಳು ಆರಂಭಿಸಿದ್ದಾರೆ. ಅವರ 60 ನೇ ವರ್ಷದ ಜನ್ಮ ದಿವಸ ಆರಂಭವಾದ  ಅಭಿವೃದ್ಧಿ ರೆವೂಲ್ಯೂಷನ್ ಫೋರಂ 20 ವರ್ಷಗಳನ್ನು ದಿನಾಂಕ:04.05.2021 ಕ್ಕೆ ಪೂರೈಸಲಿದೆ.

 20 ವರ್ಷ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ ನಾನು ಅಂದೇ ನನ್ನ ಹೊಣೆಗಾರಿಕೆಯಿಂದ ನಿವೃತ್ತನಾಗಲೂ ಬಯಸಿದ್ದೇನೆ. ಈ ಸಂಸ್ಥೆಯ ಜವಾಬ್ಧಾರಿಯನ್ನು ಇನ್ನೂ ಮುಂದೆ ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ವಹಸಿಕೊಳ್ಳಲಿ ಎಂಬ ಕನಸು ನನ್ನದಾಗಿದೆ.

 ಅವರಿಗೆ ಒಂದು ಸಂಸ್ಥೆಯ ಮೂಲಕ ದೇಶಕ್ಕೆ ಏನಾದರೂ ಒಂದು ಬೃಹತ್ ಕೊಡುಗೆ ನೀಡುವ ಪರಿಕಲ್ಪನೆ ಅವರಿಗಿದೆ. ನನ್ನ ಬಳಿ ಹಲವಾರು ಭಾರಿ ಹಂಚಿಕೊಂಡಿದ್ದಾರೆ. ಅವರ ತಂದೆಯವರ 60 ನೇ ವರ್ಷದ ದಿವಸ ಆರಂಭವಾಗಿ 20 ವರ್ಷ ಪೂರೈಸಿರುವ ಸಂಸ್ಥೆಗಿಂತ ಇನ್ನೊಂದು ಸಂಸ್ಥೆಯ ಅವಶ್ಯಕತೆಯಿಲ್ಲ.

  ಬಸವರಾಜ್‌ರವರಿಗೆ 80 ವರ್ಷ ವಯಸ್ಸಾಗಿದೆ, ಈ ಹಾಳಾದ ಕೊರೊನಾ, ಅವರನ್ನು ಕಚೇರಿ, ಕಚೇರಿಗೆ ಭೇಟಿ ಮಾಡಿಸುವ ಕೆಲಸ ಸರಿಯಲ್ಲ. ಅಗತ್ಯವಿದ್ದಾಗ ಮಾತ್ರ ಹೋಗಬೇಕಾಗುವುದು. ಈ ಕೆಲಸವನ್ನು ಇನ್ನೂ ಮುಂದೆ ಜ್ಯೋತಿಗಣೇಶ್ ವಹಸಲೇ ಬೇಕಿದೆ. ಅವರೇ ಅವರ ತಂದೆಯವರ ಅಭಿವೃದ್ಧಿ ಕನಸುಗಳಿಗೆ ಚಾಲನೆ ನೀಡುವುದು ಅಗತ್ಯವಾಗಿದೆ.

 ಅವರು ಸಹ ಒಬ್ಬ ಅಭಿವೃದ್ಧಿ ರಾಜಕಾರಣಿ, ರಾಜಕೀಯದಲ್ಲಿ ಅಭಿವೃದ್ಧಿಯೇ ಅವರ ಗುರಿಯಾಗಿದೆ, ಆ ದಿಕ್ಕಿನಲ್ಲಿ ಸಾಗಿದ್ದಾರೆ, ಅಬ್ಬರ ಆಡಂಬರವಿಲ್ಲದೆ ಅಭಿವೃದ್ಧಿಯಲ್ಲಿ ಎರೆಹುಳುವಿನಂತೆ ಕೆಲಸ ಮಾಡುತ್ತಿದ್ದಾರೆ.

 ‘ದಿವಸ ಒಂದು ದಿಶಾ ಅಭಿವೃದ್ಧಿ ಗ್ರಂಥವನ್ನು ಬಿಡುಗಡೆ ಮಾಡಲು ಬಯಸಿದ್ದೇವೆ. ಇದು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು 2022 ರೊಳಗೆ ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಕನಸಿನಂತೆ ಅವರು ಘೋಶಿಸರುವ ಯೋಜನೆಗಳ ಅನುಷ್ಠಾನದ ಪ್ರಗತಿಯನ್ನು ಬಿಂಬಿಸುವ ಕೈಪಿಡಿಯಾಗಲಿದೆ’

 ನಮ್ಮ ಸಂಸ್ಥೆಯ ಉದ್ದೇಶವೇ ಹಾಗಿದೆ, ಯಾವ ಕೆಲಸ ಮಾಡಬೇಕೆಂದರೂ ಒಂದು ಕೈಪಿಡಿ ಮಾಡಿ ಹಂಚಿ ನಾವು ಈ ಕೆಲಸ ಮಾಡುತ್ತೇವೆ ಎಂದು ಹೇಳುವುದು ನಮ್ಮ ಅಭ್ಯಾಸ. ಸುಮಾರು 9 ಪುಸ್ತಕಗಳನ್ನು ಈಗಾಗಲೇ ಬಿಡುಗಡೆ ಮಾಡಿದ್ದೇವೆ, ಬಹುತೇಕ ಗುರಿ ಸಾಧಿಸಿದ್ದೇವೆ, ವಿಜ್ಞಾನ ಗುಡ್ಡ ಮಾತ್ರ ಕನಸಾಗಿಯೇ ಉಳಿದಿದೆ. 10 ನೇ ಪುಸ್ತಕದ ಜೊತೆಗೆ ಡಿಜಿಟಲ್ ದಾಖಲೆ ಸಂಸ್ಥೆಯ ದಾಖಲೆಯೂ ಆಗಲಿದೆ.

 75 ನೇ ವರ್ಷದ ಸ್ವಾತಂತ್ರ್ಯದ ದಿನದ ವೇಳೆಗೆ ಕರ್ನಾಟಕ ರಾಜ್ಯ ಮಾನ್ಯ ಪ್ರಧಾನಿಯವರ ಕನಸಿನ ಯೋಜನೆಗಳ ಅನುಷ್ಠಾನದ ಮಂಚೂಣಿಯಲ್ಲಿರಬೇಕು ಎಂಬ ಕನಸು ನಮ್ಮ ಸಂಸ್ಥೆಯದ್ದಾಗಿದೆ, ತಾವೂ ಸಹ ಕೈಜೋಡಿಸಲು ನಮ್ರತೆಯ ಮನವಿ.

‘ಮಾನ್ಯ ಮುಖ್ಯಮಂತ್ರಿಯವರ ಅಭಿವೃದ್ಧಿ ಹೆಗಲಿನ ಹೊರೆಗೆ, ರಾಜ್ಯದ ಸಾವಿರಾರು ಜನರು ಸಹಕರಿಸಬೇಕಲ್ಲವೇ? ಕೊರೋನಾ ಅಡ್ಡವಾದರೂ ಅದರಲ್ಲೂ ಉತ್ತಮ ಪ್ರಗತಿ ಸಾಧ್ಯ, ಇದೇ ನಮ್ಮ ನಿಮ್ಮೆಲ್ಲರ ಕನಸು’

  ದಿಶಾ ದಿಕ್ಸೂಚಿ ಕೈಪಿಡಿಯ ಬರವಣಿಗೆ 2020  ನೇ ಸಾಲಿನ ನವರಾತ್ರಿಯ ಪೂಜೆಯೊಂದಿಗೆ ಶುಭಾರಂಭವಾಗಿದೆ.