29th March 2024
Share

TUMAKURU:SHAKTHIPEETA FOUNDATION

 ನವರಾತ್ರಿಯ ಹಬ್ಬವನ್ನು ವಿಶ್ವದ್ಯಾಂತ ಆಚರಿಸುತ್ತಾರೆ ಎಂಬ ಸುದ್ದಿಯಿದೆ. ವಿಶ್ವದ ಭಾರತ,    ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ, ಶ್ರೀಲಂಕಾ ಮತ್ತು ಟಿಬಿಟ್ ಸೇರಿದಂತೆ 6 ದೇಶಗಳಲ್ಲಿ ಶಕ್ತಿಪೀಠಗಳು ಇವೆ. ಈ ದೇಶಗಳ ಜನರು ವಿಶ್ವದ್ಯಾಂತ ವಾಸವಿರುವುದರಿಂದ ವಿಶ್ವದಲ್ಲಿ ಈ ನವರಾತ್ರಿಯ ಒಂಭತ್ತು ದಿವಸಗಳು ಪ್ರಸಿದ್ಧಿ ಎಂಬ ಭಾವನೆ ಇದೆ.

 108 ಶಕ್ತಿಪೀಠಗಳಲ್ಲಿ, 4 ಆದಿ ಶಕ್ತಿಪೀಠ, 9 ನವದುರ್ಗೆಯರು, 18 ಮಹಾಶಕ್ತಿಪೀಠ, 51 ಅಕ್ಷರ ಪೀಠಗಳು, ಮತ್ತು ಇತರೆ 57 ಉಪ ಪೀಠಗಳು ಎಂಬುದು ನಂಬಿಕೆ. ಕೆಲವರು 72 ಶಕ್ತಿಪೀಠಗಳಿವೆ ಎಂತಲೂ, ಕೆಲವರು 51 ಶಕ್ತಿಪೀಠಗಳಿವೆ ಎಂತಲೂ ದಾಖಲಿಸಿದ್ದಾರೆ. ಕೆಲವು ಸಿದ್ಧಿಪೀಠಗಳು ಎಂದು ಕರೆಯುತ್ತಾರೆ. ಈ ಬಗ್ಗೆ ವಿವರವಾದ ಅಧ್ಯಯನದೊಂದಿಗೆ ಮಾಹಿತಿಗಳ ಸಂಗ್ರಹ ಆರಂಭವಾಗಿದೆ. 

  ಭಾರತ ದೇಶದಲ್ಲಿ-41 ಅಕ್ಷರ ಪೀಠಗಳು, ಬಾಂಗ್ಲಾದೇಶದಲ್ಲಿ-4, ನೇಪಾಳದಲ್ಲಿ-3, ಪಾಕಿಸ್ತಾನದಲ್ಲಿ-3, ಶ್ರೀಲಂಕಾದಲ್ಲಿ-1 ಮತ್ತು ಟಿಬಿಟ್‌ನಲ್ಲಿ -1 ಸೇರಿದಂತೆ ಒಟ್ಟು 51 ಅಕ್ಷರ ಪೀಠಗಳು ಮತ್ತು ಉಳಿದ 57 ಶಕ್ತಿ ಪೀಠಗಳು ಹಾಗೂ ಉಪಶಕ್ತಿಪೀಠಗಳು ಭಾರತದಲ್ಲಿನ ವಿವಿಧ ರಾಜ್ಯಗಳಲ್ಲಿವೆ ಎಂಬ ಮಾಹಿತಿ ಸಂಗ್ರಹಿಸಿ, ಅವುಗಳ ಸ್ಥಳ ಮತ್ತು ಎಲ್ಲಾ ಮಾಹಿತಿಗಳ ಸಂಗ್ರಹ ಕಾರ್ಯ ಹಾಗೂ ಅಧ್ಯಯನ ಬಹುತೇಕ ಪೂರ್ಣಗೊಂಡಿದೆ.

 ‘ಈಗಲೂ ಬಹಳಷ್ಟು ಗೊಂದಲಗಳಿವೆ, ನಿಖರವಾದ ಮಾಹಿತಿ ಸಂಗ್ರಹಿಸಲು ಆರ್.ಎಸ್.ಎಸ್ ಸರಿಯಾದ ಸಂಘಟನೆ. ಎಲ್ಲಾ ದೇಶಗಳ ಎಲ್ಲಾ ಭಾಗಗಳಲ್ಲೂ ಸಂಘದ ಕಾರ್ಯಕರ್ತರಿದ್ದಾರೆ ಎಂಬ ಭಾವನೆಯಿಂದ ನಮ್ಮ ಕರ್ನಾಟಕದವರೇ ಆದ ಉನ್ನತ ಸ್ಥಾನದಲ್ಲಿರುವ ಶ್ರೀ ಬಿ.ಎಲ್.ಸಂತೋಷ್‌ಜಿರವರಿಗೆ ನಮ್ಮ ಸಂಸ್ಥೆಯ ವತಿಯಿಂದ ನಮ್ಮ ವಿಷನ್‌ಗ್ರೂಪ್ ಸಿದ್ಧಪಡಿಸಿರುವ ಶಕ್ತಿಪೀಠಗಳ ಪಟ್ಟಿ ಸಲ್ಲಿಸಿ, ಸರಿ ಆಗಿವೆಯೇ ಅಥವಾ  ಬದಲಾಗಿವೆಯೇ ಎಂಬ ಮಾಹಿತಿ ಸಂಗ್ರಹಿಸಿ ನೀಡಲು ಸೂಕ್ತ ವ್ಯಕ್ತಿಗೆ ಸೂಚಿಸಲು ಮನವಿ ಮಾಡಲಾಗಿದೆ.’

 ಶಕ್ತಿಫೀಠ ಫೌಂಡೇಷನ್‌ನ ಶಕ್ತಿಪೀಠ ವಿಷನ್ ಗ್ರೂಪ್’ನಲ್ಲಿ ಶ್ರೀ ಎಲ್.ಕೆ.ಆಶೋಕ್ ದಂಪತಿಗಳು, ಡಾ/ಮುರಳೀಧರ್, ಶ್ರೀ ಚಿದಾನಂದ್ ದಂಪತಿಗಳು,  ಶ್ರೀ ಸತ್ಯಾನಂದ್ ದಂಪತಿಗಳು, ಶ್ರೀ ಬಸವರಾಜ್ ಸುರಣಗಿ ದಂಪತಿಗಳು, ಶ್ರೀಮತಿಶ್ರುತಿ ದಂಪತಿಗಳು, ಶ್ರೀ ವಿನಯ್ ದಂಪತಿಗಳು, ಶ್ರೀ ಮಹೇಂದ್ರ ದಂಪತಿಗಳು, ಕು.ಐಶ್ವರ್ಯ, ಶ್ರೀ ನರೇಶ್ ದಂಪತಿಗಳು, ಶ್ರೀ ಭರತ್‌ಕುಮಾರ್, ಶಕ್ತಿಪೀಠ ಮತ್ತು ನದಿಗಳ ವಿಷನ್ ಗ್ರೂಪ್’ ನಲ್ಲಿ ಶ್ರೀ ಹರೀಶ್ ದಂಪತಿಗಳು, ಶ್ರೀ ಮಲ್ಲೇಶ್ ದಂಪತಿಗಳು, ನಮ್ಮ ಕ್ಯಾಂಪಸ್‌ನ ಸಿಇಓ ಚಿ. ಕೆ.ಆರ್.ಸೋಹನ್,  ಬೆಂಗಳೂರು ಕಚೇರಿಯ ಸಿಇಓ ಶ್ರೀಮತಿ ಆರ್.ಇಂಚರ ದಂಪತಿಗಳು ಸೇರಿದಂತೆ ಹಲವಾರು ಜನ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದಲೂ ಶ್ರಮಿಸುತ್ತಿದ್ದಾರೆ.

 ಶ್ರೀಮತಿ ಲಲಿತಾ ಶೇಷಾದ್ರಿಯವರು ವಿಷನ್ ಗ್ರೂಪ್‌ನಲ್ಲಿ ಸೇವೆ ಸಲ್ಲಿಸಲು ಮುಂದಾಗಿದ್ದಾರೆ. ಅವರು ಪುಸ್ತಕ ಬರೆಯುವುದಾಗಿಯೂ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯದ, ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೂಕು, ಜವಗೊಂಡನಹಳ್ಳಿ(ಜೆಜಿಹಳ್ಳಿ)  ಹೋಬಳಿ, ವಡ್ಡನಹಳ್ಳಿ ಪಕ್ಕದಲ್ಲಿರುವ ಬಗ್ಗನಡು ಕಾವಲ್‌ನಲ್ಲಿ ನೆಲದ ಮೇಲೆ ಭಾರತ ನಕ್ಷೆ ಮಾಡಿ 108 ಶಕ್ತಿಪೀಠಗಳ ಪಾರ್ಕ್‌ನ್ನು ಒಂದೇ ಕಡೆ ಮಾಡಲಾಗುವುದು. ಆಡಳಿತ ಕಚೇರಿ ತುಮಕೂರು ನಗರದಲ್ಲಿದೆ.

  108 ಶಕ್ತಿಪೀಠಗಳಿಗೂ ಯಾತ್ರೆ ಮಾಡಲು ಉದ್ದೇಶಿಸಿದ್ದು ಈಗಾಗಲೇ ಉತ್ತರಖಾಂಡ ರಾಜ್ಯದ ಪ್ರವಾಸ ಪೂರ್ಣಗೊಳಿಸಲಾಗಿದೆ. ಉಳಿದ ಶಕ್ತಿಪೀಠಗಳ ಪ್ರವಾಸದ ಪ್ಯಾಕೇಜ್ ಸಿದ್ಧವಾಗುತ್ತಿದೆ. ಕೊರೊನಾ ನಂತರದ ಮಾತು.

ಆಸಕ್ತರು ಸೇವೆ ಸಲ್ಲಿಸ ಬಹುದಾಗಿದೆ.

ಹೆಚ್ಚಿನ ವಿವರಗಳಿಗೆ   www.shakthipeeta.in   ನೋಡಬಹುದು.