3rd March 2024
Share

TUMAKURU:SHAKTHIPEETA FOUNDATION

 ಕೇಂದ್ರ ಸರ್ಕಾರ ಬಹಳ ನೀರಿಕ್ಷೆಯಿಂದ    DISHA- District Development Coordination And Monitoring Committee ಸಮಿತಿಯನ್ನು ದೇಶದ ಎಲ್ಲಾ ರಾಜ್ಯಗಳ, ಕೇಂದ್ರಾಡಳಿತ ಪ್ರದೇಶಗಳ ಮತ್ತು ಜಿಲ್ಲಾ ಮಟ್ಟದಲ್ಲಿ ರಚಿಸಿದೆ.

ಈ ಕೆಳಕಂಡ ಸಂಸ್ಥೆಗಳ ಕೆಲಸ ಏನು? ಯಾರು ಯಾರು ಏನು ಮಾಡುತ್ತಿದ್ದಾರೆ ಮತ್ತು ಇವುಗಳಲ್ಲದೆ ಬಹುತೇಕ ಎಲ್ಲಾ ಇಲಾಖೆಗಳು, ಒಬ್ಬ ಅಧಿಕಾರಿ ಆಯಾ ಇಲಾಖೆಗೆ ಬಂದಾಗ ಅವರಿಗೆ ಬಂದ ಹಾಗೆ ಡಿಜಿಟಲ್ ವ್ಯವಸ್ಥೆಗಾಗಿ  ಕೋಟಿಗಟ್ಟಲೇ ಹಣ ವ್ಯಯಿಸಿದ್ದಾರೆ ಎಂಬ ಆಪಾದನೆ ಇದೆ.

ಇದು ಸತ್ಯವೂ ಇರಬಹುದು ಅಥವಾ ಸುಳ್ಳು ಇರಬಹುದು, ಒಂದೇ ಕೆಲಸವನ್ನು ಎರಡು ಮೂರು ಇಲಾಖೆಗಳು ಟೆಂಡರ್ ಕರೆದು ಮಾಡುತ್ತಲೇ ಇವೆ, ಯಾವೂದೂ ಸರಿಯಾಗಿಲ್ಲ, ಒಂದಕ್ಕೊಂದು ಮ್ಯಾಚ್ ಆಗುತ್ತಿಲ್ಲ, ಹೆಸರಿಗೆ ಡಿಜಿಟಲ್ ಯುಗ, ಜಿಐಎಸ್ ಯುಗ ಎಂದು ಕೆಲವು ಅಧಿಕಾರಿಗಳು ಕೊರುಗುತ್ತಾರೆ. ಹೀಗೆ ಆದರೇ ದಿಶಾ ಸಮಿತಿಯ ಉದ್ದೇಶ ಏನು ಎಂಬುದು ಅರ್ಥವಾಗುತ್ತಿಲ್ಲ.

 ಮೊದಲು ಈ ಕೆಳಕಂಡ ಸಂಸ್ಥೆಗಳ ಸಮನ್ವಯತೆ ಆಗಲೇ ಬೇಕು, ಇದೂವರೆಗೂ ಈ ಎಲ್ಲಾ ಇಲಾಖೆಗಳು ಕೈಗೊಂಡಿರುವ ಯೋಜನೆಗಳ ಪರಾಮರ್ಶೆ ಆಗುವುದು ಒಳ್ಳೆಯದು ಅಥವಾ ಹಿಂದಿನದು ಹಾಳಾಗಿ ಹೋಗಲಿ ಇನ್ನೂ ಮುಂದಾದರೂ ದಿಶಾ ಸಮಿತಿಯ ಅಡಿಯಲ್ಲಿ ಡಿಜಿಟಲ್ ಸಮನ್ವಯ ಸಮಿತಿ’ ರಚಿಸಿ, ಚರ್ಚಿಸಿ ನಂತರ ಯೋಜನೆಗಳಿಗೆ ಚಾಲನೆ ನೀಡುವ ಪರಿಪಾಠ ಆರಂಭವಾಗಲಿ ಎಂದು ಹೆಸರು ಹೇಳಲು ಇಚ್ಚಿಸಿದ ಉನ್ನತ ಅಧಿಕಾರಿಗಳ ಅಂತರಾಳದ ಮಾತು.

  1. NIC – National Informatics Centre
  2. NRDMS- Natural Resources Data Management System
  3. ICCC-Integrated Command & Control Center
  4. KMDS- Karnataka Municipal Data Society
  5. CSG-Centre for Smart Governance Karnataka
  6. KSWAN- Karnataka State Wide Area Network
  7. CeG- Centre for e-Governance
  8. NICSI-National informatics centere services inc.
  9. KSRSAC-Karnataka State Remote Sensing Application centere.

 ನನಗೆ ಗೊತ್ತಿರುವ ಸಂಸ್ಥೆಗಳ ಪಟ್ಟಿ ಮಾಡಿದ್ದೇನೆ, ಇವುಗಳನ್ನು ಹೊರತುಪಡಿಸಿ, ಇದೇ ಉದ್ದೇಶಕ್ಕಾಗಿ ಇನ್ನೂ ಯಾವುದಾದರೂ ಸಂಸ್ಥೆಗಳು ಇದ್ದಲ್ಲಿ ಉದಾಃ ರಾಜ್ಯ ಜಲಸಂಪನ್ಮೂಲ ಇಲಾಖೆಯಲ್ಲಿ Geometic Center ಇದೆ. ಈ ರೀತಿ ಇರುವ ಎಲ್ಲಾ ಸಂಸ್ಥೆಗಳು ಒಂದೇ ವೇದಿಕೆಗೆ ಬರುವುದು ಉತ್ತಮವಾಗಿದೆ.

 ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಯೋಜನಾ ಇಲಾಖೆಗೆ ದಿಶಾ ಸದಸ್ಯ ಕಾರ್ಯದರ್ಶಿ ಹುದ್ದೆಯನ್ನು ವರ್ಗಾವಣೆ ಮಾಡಿರುವ ಉದ್ದೇಶವೂ ಇದೆ ಆಗಿದೆ. ಪ್ಲಾನಿಂಗ್ ಇಲಾಖೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಮಾಹಿತಿ ಒಂದೇ ಕಡೆ ದೊರೆಯಲಿದೆ. ಜಿಲ್ಲಾ ಮಟ್ಟದಲ್ಲಿ ಅಂಕಿ ಅಂಶಗಳ ಇಲಾಖೆಯ ಅಧಿಕಾರಿಗಳನ್ನು  ದಿಶಾ ಸಮಿತಿಯ ಅಂಕಿಅಂಶಗಳ ನೋಡೆಲ್ ಆಫೀಸರ್ ಆಗಿ ನೇಮಿಸುವುದು ಉತ್ತಮ. ತಾಜಾ ಡಿಜಿಟಲ್ ಲೈವ್ ಡೇಟಾ ದೊರೆಯುವಂತಾಗಬೇಕಲೇ ಬೇಕು.

 ರಾಜ್ಯದ ಎಲ್ಲಾ ಗ್ರಾಮಗಳಲ್ಲೂ ‘ವಿಲೇಜ್-1’ ರಚಿಸಿ, ನಿರಂತರವಾಗಿ ಎಲ್ಲಾ ಡೇಟಾಗಳನ್ನು ಅಫ್‌ಡೇಟ್ ಮಾಡುವ ಮೂಲಕ, ಇಡೀ ರಾಜ್ಯದ ಎಲ್ಲಾ ಯೋಜನೆಗಳು ಒಂದೇ ನಕ್ಷೆಯಲ್ಲಿ ಒಂದೇ ಮಾದರಿಯಲ್ಲಿ ಡೇಟಾ-1, ಸ್ಟೇಟ್ –1’ ರೀತಿ ಇದ್ದಲ್ಲಿ ಮಾತ್ರ ದಿಶಾ ಉದ್ದೇಶ ಸಫಲವಾಗುವುದು.

ಆದರೂ ನಮ್ಮ ರಾಜ್ಯ ಡಿಜಿಟಲ್‌ನಲ್ಲಿ ಮಂಚೂಣೆಯಲ್ಲಿದೆ ಎಂಬುದು ಒಂದು ಹೆಮ್ಮೆ.

About The Author