28th March 2024
Share

ದಿನಾಂಕ:27.10.2020 ಮತ್ತು 28.10.2020 ರಂದು ಎರಡು ದಿವಸ ಹಾಸನ ಮತ್ತು ಕೊಡಗು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಎತ್ತಿನಹೊಳೆ ಯೋಜನೆ ಕಾಮಗಾರಿಯ ಬಗ್ಗೆ ಸಲಹೆಗಾರರಾದ ಶ್ರೀ ಡಿ.ಎಸ್.ಹರೀಶ್ ರವರೊಂದಿಗೆ ಮಾಹಿತಿ ಪಡೆಯುತ್ತಿರುವುದು.

HASSAN:SHAKTHIPEETA FOUNDATION

ಕೇಂದ್ರ ಸರ್ಕಾರ 2023 ರೊಳಗೆ ದೇಶದ ಎಲ್ಲಾ ಮನೆ ಮನೆಗೆ ಕುಡಿಯುವ ನೀನ್ನು ಸರಬಾರಾಜು ಮಾಡುವುದಾಗಿ ಘೋಷಿಸಿದೆ. ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರ ಈ ಕನಸಿನ ಯೋಜನೆಯನ್ನು ಶೇ 100 ರಷ್ಟು ಪ್ರಗತಿ ಸಾಧಿಸಲು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂಪ್ಪನವರು ರೂಪುರೇಷೆ ನಿರ್ಧರಿಸುವತ್ತ ವಿಶೇಷ ಗಮನ ಹರಿಸಿದ್ದಾರೆ.

ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಯೋಜನೆ ಆಧಾರಿತ  ನೇತ್ರಾವತಿ ತಿರುವು ಯೋಜನೆ, ಎತ್ತಿನಹೊಳೆ ಯೋಜನೆ ಬಹಳ ಸದ್ಧು ಮಾಡಿದೆ, ಇನ್ನೂ ಸುದ್ದಿ ಮಾಡುತ್ತಲೇ ಇದೆ. ಅಭಿವೃದ್ಧಿ ರೆವೂಲ್ಯೂಷನ್ ಫೊರಂ ಸುಮಾರು 1997 ರಿಂದಲೂ ಜಿ.ಎಸ್.ಬಸವರಾಜ್‌ರವರು ಮತ್ತು ಜಿ.ಎಸ್.ಪರಮಶಿವಯ್ಯನವರ ಜೊತೆ ನಿರಂತರವಾಗಿ ಹಲವಾರು ಸಂಘಸಂಸ್ಥೆಗಳ ನೇತೃತ್ವದಲ್ಲಿ ಈ ಯೋಜನೆ ಜಾರಿಗೆ ಶ್ರಮಿಸುತ್ತಾ ಬಂದಿದೆ.

ಇದೂವರೆಗೂ ನನ್ನ ಬಹುದೊಡ್ಡ ಸಮಸ್ಯೆ ಎಂದರೆ ಯಾವುದೇ ಯೋಜನೆ ಮಂಜೂರಾತಿ ಆಗುವವರೆಗೂ ನಿರಂತರವಾಗಿ ಶ್ರಮಿಸಿ, ಯೋಜನೆ ಕಾಮಗಾರಿ ಆರಂಭಿಸಿದಾಗ ದೂರವಿರುವುದು. ಪ್ರಸ್ತುತ ರಾಜ್ಯದ ಸುಮಾರು ಎರಡು ಕೋಟಿ ಜನತೆಗೆ ಕುಡಿಯುವ ನೀರು ಒದಗಿಸುವ ಈ ಯೋಜನೆ ಮತ್ತು ರಾಜ್ಯದ ವಿವಿಧ ಕುಡಿಯುವ ನೀರಿನ ಯೋಜನೆ ಅನುಷಾನಕ್ಕೆ  ಶ್ರಮಿಸುವುದು ರಾಜ್ಯ ದಿಶಾ ಸಮಿತಿ ಸದಸ್ಯನಾಗಿ ಆಧ್ಯ ಕರ್ತವ್ಯವೂ ಆಗಿದೆ.

 ಎತ್ತಿನಹೊಳೆ ಯೋಜನೆ ಬಗ್ಗೆ ವಿವರವಾದ ಸರಣಿ ವರದಿ ನೀಡಲು ಸಂಪೂರ್ಣವಾಗಿ ಕಾಮಗಾರಿಗಳನ್ನು ಪರಿಶೀಲನೆ ನಡೆಸುವ ಮತ್ತು ಸಾಧಕ-ಭಾದಕಗಳ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ.ಎತ್ತಿನಹೊಳೆ ಯೋಜನೆಯ ಉನ್ನತ ಮಟ್ಟದ ಅಧಿಕಾರಿಗಳು ಬಹಳ ದಿನಗಳಿಂದಿಂದ ಭೂ ಸ್ವಾಧೀನದ ಕಡೇ ವಿಶೇಷ ಗಮನ ಹರಿಸಲು ನನಗೆ ಹಲವಾರು ಭಾರಿ ಸಲಹೆ ನೀಡಿದ್ದರು. ನಾನೂ ವಿವಿಧ ಕಾರಣಗಳಿಂದ ಈ ಬಗ್ಗೆ ಗಮನ ಹರಿಸಿರಲಿಲ್ಲ.

ಕೋರೊನಾ ಮಾಹಾಮಾರಿಗಿಂತಲೂ ಭಯಾನಕವಾದ ಭೂಸ್ವಾಧೀನ ದಂಧೆಯ ಕಡೆ ಗಮನ ಹರಿಸದಿದ್ದರೇ ಇನ್ನೂ ಯೋಜನೆ ಮರೀಚಿಕೆ ಎಂಬ ಅರಿವು ನನಗೆ ಬಂದಿದೆ.  ಭಾಸ್ವಾಧೀನ ವಿಚಾರದಲ್ಲಿ ಪಾರದರ್ಶಕತೆಗೆ ಮೊದಲ ಆಧ್ಯತೆ ಜಾರಿಯಾಗಲೇ ಬೇಕು.

 ಪ್ರತಿಯೊಬ್ಬ ಇಂಜನಿಯರ್ ವಿಭಾಗವಾರು ಸಮಸ್ಯೆಗಳಿಗೆ ಕೈಗೊಂಡ ವಿಷಯಗಳ ಬಗ್ಗೆ ಯಾವ ಟೇಬಲ್‌ನಲ್ಲಿ ಎಷ್ಟು ದಿವಸ ಯಾವ ಉದ್ದೇಶಕ್ಕೆ ಕಡತ ಇಟ್ಟುಕೊಳ್ಳಲಾಗಿದೆ ಎಂಬ ಬಗ್ಗೆ ಡಿಜಿಟಲ್ ಮಾಹಿತಿಯನ್ನು ಮಾನ್ಯ ಮುಖ್ಯ ಮಂತ್ರಿಗಳ ಗಮನಕ್ಕೆ ತರುವುದು ನನ್ನ ಹೊಣೆಗಾರಿಕೆಯೂ ಹೌದು

 ಈ ಯೋಜನೆ ವ್ಯಾಪ್ತಿಗೆ ಹಾಸನ, ತುಮಕೂರು ಮತ್ತು ಚಿಕ್ಕಬಳ್ಳಾಪುರದ ಮೂರು ಜನ  ಭೂಸ್ವಾಧೀನ ಅಧಿಕಾರಿಗಳು ಇದ್ದಾರೆ, ಒಳ್ಳೆಯವರು ಇದ್ದಾರೆ ‘ಎಂಜಲ ಕಾಸಿಗಾಗಿ ರೈತರ ಜೀವ ಹಿಂಡುವವರು‘ಇದ್ದಾರೆ. ಜಮೀನು ಕಳೆದುಕೊಳ್ಳುವ ಜೊತೆಗೆ ಪರಿಹಾರಕ್ಕೆ ಜೀವನವನ್ನೇ  ತೊರೆಯುವ ಯೋಚನೆ ಮಾಡುತ್ತಿರುವ ರೈತರೂ ಇದ್ದಾರೆ.

 ಎತ್ತಿನಹೊಳೆ ಯೋಜನೆಯ ನೀರಿನ ಲಭ್ಯತೆಯ ಬಗ್ಗೆಯೂ ವಿಶೇಷ ಗಮನ ಹರಿಸಿ, ಓದುಗರಿಗೂ ಯೋಜನೆಯ ವಿಶೇಷತೆ ಬಗ್ಗೆ ಸರಣಿ ವರದಿ ನೀಡಲಾಗುವುದು. ಈ ಭಾಗದ ಸಂಸದರ ಗಮನಕ್ಕೂ ತರಲಾಗುವುದು. ಈ ಭಾಗದ ಸಂಸದರು ಈ ಯೋಜನೆಯನ್ನು ಜಲಜೀವನ್ ಮಿಷನ್ ಯೋಜನೆಯಾಗಿ ಪರಿವರ್ತಿಸಲು ಒಗ್ಗಟ್ಟು ಪ್ರದರ್ಶಿಸುವ ಅನಿವಾರ್‍ಯತೆ ಇದೆ.