22nd November 2024
Share
ನಾನು ಬರೆದಿರುವ ಪುಸ್ತಕದ ಪುಟ

TUMAKURU:SHAKTHIPEETA FOUNDATION

ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ವರದಿ ಆಧಾರಿತ ನೇತ್ರಾವತಿ ತಿರುವು ಯೋಜನೆಗೆ ಬದಲಾಗಿ ಎತ್ತಿನಹೊಳೆ ಯೋಜನೆ ಜಾರಿ ಬಗ್ಗೆ ಹೆಜ್ಜೆ ಇಡಲು ಸರ್ಕಾರ ಚಿಂತನೆ ನಡೆಸಲಾಯಿತು – ಪರಿಸರವಾದಿಗಳಿಗೆ ಸಮಾಧಾನವಾಗುವುದಾದರೆ ಹೆಸರು ಕಟ್ಟಿಕೊಂಡು ನಮಗೇನು? ಹೆಸರು ಬದಲಾದರೆ  ತೊಂದರೆ ಏನು? ಅದಕ್ಕೂ ಸೈ ಎಂದೆವು.

ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ವರದಿ ಆಧಾರಿತ 140 ಟಿಎಂಸಿ ಅಡಿ ನೀರಿನ ಯೋಜನೆಯ ಬದಲಾಗಿ 24 ಟಿಎಂಸಿ ಅಡಿ ನೀರಿನ ಯೋಜನೆಗೆ ಚರ್ಚೆ ಶುರುವಾಯಿತು – ಎಷ್ಟೆ ಪ್ರಮಾಣದ ನೀರಿನ ಯೋಜನೆಯಾಗಲಿ, ಯಾವುದೋ ಒಂದು ಹೆಸರಿನ ಯೋಜನೆ ಆರಂಭವಾಗಲಿ ಎಂಬ ಭಾವನೆ ನಮ್ಮದಾಯಿತು ಅದಕ್ಕೂ ಸೈ ಎಂದೆವು. ಜಿ.ಎಸ್.ಪರಮಶಿವಯ್ಯನವರ ಒಪ್ಪಿಗೆ ಇರಲಿಲ್ಲ.

ಜಿ.ಎಸ್.ಪರಮಶಿವಯ್ಯ ವರದಿ ಆಧಾರಿತ ಗಾರ್ಲೆಂಡ್ ಕೆನಾಲ್‌ನಿಂದ ಗುರುತ್ವಾಕರ್ಷಣೆ ಬದಲಾಗಿ ಲಿಪ್ಟ್ ಮಾಡಲು ಯೋಜನೆ ರೂಪಿಸಲಾಯಿತು. ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ನೀರಿನ ಯೋಜನೆಗೆ ಚಾಲನೆ ದೊರೆಯಲಿ ಎಂಬ ದೃಷ್ಠಿಯಿಂದ ಅದಕ್ಕೂ ಸೈ ಎಂದೆವು.

  ಈ ಮೇಲ್ಕಂಡ ಎಲ್ಲಾ ಯೋಜನೆಗಳಿಗೆ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಪ್ರಭಲ ವಿರೋಧ ಇತ್ತು. ಕಾರಣ ಪರಮಶಿವಯ್ಯನವರು ಹುಟ್ಟಿದ ದಿನ 12.02.1919  ಮರಣ 11.03.2014   ಸುಮಾರು 95 ವರ್ಷ ಬದುಕಿದ್ದರು. ಅವರಿಗೆ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ನೀರಿನ ಯೋಜನೆಯ ಯೋಚನೆ ಬಂದಿದ್ದು ಅವರಿಗೆ 25 ವರ್ಷ ವಯಸ್ಸಾಗಿದ್ದಾಗ. ಅಂದರೆ ಅವರು ಸುಮಾರು 70 ವರ್ಷಗಳ ಕಾಲ ತಪಸ್ಸು ಮಾಡಿದ್ದಾರೆ. ಅದಕ್ಕೆ  ಅವರನ್ನು ಕೆಲವರು ಜಲ ಋಷಿ’& ’ಟೋಪೋಶೀಟ್  ಬ್ರಹ್ಮ’ ಎಂದು ಕರೆಯುವುದು.

ಅವರು ಲಿಂಗಾಯಿತರಾಗಿದ್ದು, ನಿವೃತ್ತಿ ಹೊಂದಿದಾಗ ಎಸ್.ಆಗಿದ್ದು, ಅವರ ಅಪಾರ ಬುದ್ದಿವಂತಿಕೆ ಅವರ ಮೇಲೆ ಇಂಜಿನಿಯರಿಂಗ್ ದ್ವೇಷ ಬೆಳೆಯಲು ಕಾರಣವಾಯಿತು. ಅವರಿಗೆ ದೃಢ ನಿಲುವು ಇತ್ತು, ಅಧ್ಯಯನ ಮಾಡುವವರಿಗೆ ದಿನಕ್ಕೊಂದು ಯೋಚನೆ ಬರುತ್ತದೆ, ಹೊಸ, ಹೊಸ ಐಡಿಯಾ ಬರುವುದು ಸಹಜ’

ನನಗೆ-ಅವರಿಗೆ ಪರಿಚಯವಾಗಿದ್ದು 1977 ರಲ್ಲಿ  ಸುಮಾರು 16 ವರ್ಷ ಒಡನಾಟ ನಿರಂತರವಾಗಿತ್ತು.  ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ಅವರ ಒಡನಾಟ ಸುಮಾರು ನವತ್ತು ವರ್ಷ ನಿರಂತರವಾಗಿ ನಡೆದಿತ್ತು.

ನಾನು ಶ್ರೀ ಜಿ.ಎಸ್.ಬಸವರಾಜ್‌ರವರಿಗೆ ಮನವರಿಕೆ ಮಾಡಿದ್ದು ಇಷ್ಟೆ. ನೋಡಿ ಸಾರ್ ಪರಮಶಿವಯ್ಯನವರು ನೇತ್ರಾವತಿ ನೀರನ್ನು ಭಾಗಕ್ಕೆ ತರಲು ಸುಮಾರು 70 ವರ್ಷದಿಂದ ಹರಸಾಹಸ ಮಾಡುತ್ತಿದ್ದಾರೆ. ಅವರೇ ರೂಪಿಸಿರುವ ಯೋಜನೆಯ ಕೆಲವು ಭಾಗದ ಯೋಜನೆಗೆ ಸರ್ಕಾರ ಮುಂದಾಗಿರುವುದರಿಂದ ನಾವು ಬೆಂಬಲಿಸುವುದು ಸರಿ.  ಶ್ರೀ ಹೆಚ್.ಕೆ.ಪಾಟೀಲ್‌ರವರು ಈಗಲೂ ನನ್ನನ್ನೇ ಬೈಯುತ್ತಾರೆ, ನೇತ್ರಾವತಿ ಯೋಜನೆಯ ನೀರಿನ ಯೋಜನೆಯಾಗಿದ್ದರೆ ಅವರ ಕಾಲದಲ್ಲೇ ಯೋಜನೆಗೆ ಶಂಕುಸ್ಥಾಪನೆ ಮಾಡಬಹುದಿತ್ತು. ಆಗಲೂ ಪರಮಶಿಯ್ಯನವರು ಭಧ್ರಾ, ತುಂಗಾ ಮತ್ತು ನೇತ್ರಾವತಿ ನೀರಿನ ಸಂಯುಕ್ತ ಯೋಜನೆ ರೂಪಿಸಿದ್ದು ಮುಳುವಾಯಿತು ’

 ಪರಮಶಿವಯ್ಯನವರಿಗೂ ವಯಸ್ಸಾಗಿದೆ ಅವರ ಕಣ್ಣೆದುರಿಗೆ ನೀರು ನೋಡಲಿ, ಅಲ್ಲದೆ ಅವರಿಗೂ ಪೆನ್ಷೆನ್ ಬರುತ್ತದೆ, ನಿಮಗೂ ಪೆನ್ಷೆನ್ ಬರುತ್ತದೆ ಜೊತೆಗೆ ಅಧಿಕಾರವೂ ಬರುತ್ತಿರುತ್ತದೆ. ನಾನೂ ಮಾತ್ರ  ಹಗಲಿರಳು ಮನೆ ಮಠ ಬಿಟ್ಟು ನಾಯಿ ತಿರುಗಿದ ಹಾಗೆ ತಿರುಗುತ್ತಿದ್ದೇನೆ. ನಾವು ಈ ಯೋಜನೆ ನೀರು ನೋಡಬೇಡವೇ?  ನಾವು ಹೇಳಿದ್ದೆ ನಡೆಯಬೇಕು ಎಂದರೆ ಹೇಗೆ ಸಾರ್ ಎಂದಾಗ ಅವರು ಸುಮಾರು 10 ನಿಮಿಷ ಮೌನವಾಗಿ ಯೋಚಿಸಿ, ಪರಮಶಿವಯ್ಯನವರು ಬೇಜಾರು ಮಾಡಿಕೊಳ್ಳುವುದಿಲ್ಲವಾ ಎಂದರು.

 ಏಕೆ ಬೇಜಾರು ಮಾಡಿಕೊಳ್ಳುತ್ತಾರೆ ಸಾರ್ ಅವರದ್ದೇ ಯೋಜನೆ, ಅವರದ್ದೇ ಕನಸು ಎಂದಾಗ ನೀನೇ ಮಾತನಾಡು ಎಂದರು, ನನ್ನ ಪ್ರಸ್ತಾವನೆಯಿಂದ ಕೊನೆಯಲ್ಲಿ ಎರಡು ವರ್ಷ ಪರಮಶಿವಯ್ಯನವರಿಗೂ ನನಗೂ ಆತ್ಮೀಯವಾದ ಮಾತು ಕತೆಯೇ ನಿಂತು ಹೋಗಿತ್ತು. ಹೆಚ್.ಬಿ.ಮಲ್ಲೇಶ್‌ರವರು ಇಂದಿಗೂ ಸಾಕ್ಷಿಯಾಗಿದ್ದಾರೆ’

 ಎತ್ತಿನಹೊಳೆ ಯೋಜನೆಯಲ್ಲಿ ಕೋಲಾರದವರೆಗೂ ಪೈಪ್‌ಲೈನ್ ಮೂಲಕ ನೀರು ತೆಗೆದುಕೊಂಡು ಹೋಗಲು ವ್ಯವಸ್ಥಿತವಾದ ಚರ್ಚೆ ಆರಂಭವಾಯಿತು. ‘ಈ ಯೋಜನೆಗೆ ವಿರೋಧವಾಗಿ ಜಿ.ಎಸ್.ಬಸವರಾಜ್ ರವರು ತೊಡೆ ತಟ್ಟಿ ನಿಂತರು’ ಕೊನೆಗೂ ಸುಮಾರು 249 ಕೀಮೀ ಗುರುತ್ವಾಕರ್ಷಣೆ ಕಾಲುವೆಗೆ ಸರ್ಕಾರ ಒಪ್ಪಿಗೆ ನೀಡಿತು. ಆದರೂ ಇಲ್ಲಿ ಒಂದು ದೊಡ್ಡ ಪ್ರಮಾದ ನಡೆದು ಹೋಗಿದೆ. ಇದಕ್ಕಾಗಿ ಬಹುದೊಡ್ಡ ಹೋರಾಟವಾಯಿತು. ‘ನಾನು ಬರೆದಿರುವ ಪುಸ್ತಕದ ಪುಟ ಹಾಕಿದ್ದೇನೆ ಅದನ್ನು ಓದಿ

 ಗುರುತ್ವಾಕರ್ಷಣೆ ಕಾಲುವೆ  ತೃಪ್ತಿ ತಂದರೂ ಅನಗತ್ಯವಾಗಿ 900 ಮೀ ಬದಲಾಗಿ 965 ಮೀ ಎತ್ತರಕ್ಕೆ ನೀರು ಲಿಪ್ಟ್ ಮಾಡುವುದು ಮತ್ತು 10000 ಕ್ಯುಸೆಕ್ಸ್ ಸಾಮಾರ್ಥ್ಯದ ’ಕರ್ನಾಟಕ ವಾಟರ್ ಗ್ರಿಡ್ ಕೆನಾಲ್’ ಬದಲಾಗಿ 3300 ಕ್ಯುಸೆಕ್ಸ್ ಸಾಮಾರ್ಥ್ಯ ಇಟ್ಟಿರುವುದು ಈಗಲೂ ವಿರೋಧವಿದೆ’

 ಈ ಗುರುತ್ವಾಕರ್ಷಣೆ ಕಾಲುವೆಯ ವಿಶೇಷ ಆರಂಭದಿಂದ ಬೈರಗೊಂಡ್ಲುವರೆಗೂ ಒಂದೇ ಸಮನಾಗಿ ಅಂದರೆ 3300 ಕ್ಯುಸೆಕ್ಸ್ ಸಾಮಾರ್ಥ್ಯ ಇಟ್ಟಿರುವುದು ತುಸು ನೆಮ್ಮದಿ ತಂದಿದೆ. ಫ್ರೀ ಬೋರ್ಡ್ ಸೇರಿದಂತೆ 3800 ಕ್ಯುಸೆಕ್ಸ್ ನೀರು ಹರಿಸಬಹುದು ಎಂದು ಕೆಲವು ಇಂಜಿನಿಯರ್ ಹೇಳುತ್ತಾರೆ. 

 ಒಂದು ವರ್ಷ ಪೂರ್ತಿ ನೀರು ಹರಿಸುವ ಯೋಜನೆ ರೂಪಿಸಿದಲ್ಲಿ ಇದೇ ಕಾಲುವೆಯಲ್ಲಿ ವರ್ಷದಲ್ಲಿ ಸುಮಾರು 100 ರಿಂದ 120 ಟಿಎಂಸಿ ಅಡಿ ನೀರು ಹರಿಸಬಹುದಾಗಿದೆ. ಪರಮಶಿವಯ್ಯನವರ ಕನಸು ಸಂಪೂರ್ಣವಾಗಿ ನನಸಾಗದೆ ಇರಲಾರದು ಎಂಬ ಭಾವನೆ ನನ್ನದಾಗಿದೆ’

– ಮುಂದುವರೆಯುವುದು.