27th July 2024
Share

TUMAKURU:SHAKTHIPEETA FOUNDATION

ತುಮಕೂರು ಎಲೆಕ್ಟ್ರಾನಿಕ್ಸ್  ಸಿಸ್ಟಂ ಡಿಸೈನ್ ಮ್ಯಾನ್ಯುಫ಼್ಯಾಕ್ಚರ್ ಕ್ಲಸ್ಟರ್  ಪ್ರಾಜೆಕ್ಟ ಪ್ರಸ್ಥಾವಕ್ಕೆ ಮೂಡಿದೆ ತುಸು ಭರವಸೆ.

 2020 ರ ದಿನಾಂಕ ಎಪ್ರಿಲ್ 1 ರಂದು ಕೇಂದ್ರ ಸರಕಾರದ ಮಿನಿಸ್ಟ್ರಿ ಆಫ಼್ ಎಲೆಕ್ಟ್ರಾನಿಕ್ಸ್  ಮತ್ತು ಐ.ಟಿ ಸಚಿವಾಲಯ ಅಡಕವಾಗಿರುವ   ಇಎಮ್ ಸಿ-2.೦ / 21.03.2020 ರ  ಯೋಜನೆಯನ್ನು ನೋಟಿಫ಼ೈ ಮಾಡಿ ಇಎಸ್ ಡಿಎಂ ಕ್ಲಸ್ಟರ್ ನಿರ್ಮಾಣಕ್ಕೆ ರಾಜ್ಯ ಸರಕಾರ ನೇರವಾಗಿ ಅಥವಾ ಇಂಡಸ್ಟ್ರಿಯಲ್ ಕಾರಿಡಾರ್ ಸಂಬಂಧದ /ಇಂಡಸ್ಟ್ರಿಯಲ್ ನೋಡ್ ನಿಗಾಕ್ಕೆ ಇರುವ ಎಸ್.ಪಿ.ವಿ ಯನ್ನು ಸ್ಟೇಟ್ ಇಂಪ್ಲಿಮೆಂಟಿಂಗ್ ಎಜನ್ಸಿ ಗುರಿತಿಸಿಕೊಂಡು ಕೇಂದ್ರ ಸರಕಾರದ ಪ್ರಾಜೆಕ್ಟ್ ಇಂಪ್ಲಿಮೆಂಟ್ ಏಜನ್ಸಿ ಮೂಲಕ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಏಜನ್ಸಿಗೆ ಪ್ರಸ್ಥಾವನೆ ಸಲ್ಲಿಸಲು  ತಿಳಿಸಿದೆ.

 ಈ ಬಗ್ಗೆ ದಿನಾಂಕ:16.08.2020 ರಂದು  ಮಾನ್ಯ ಸಂಸದರಾದ ಜಿ.ಎಸ್.ಬಸವರಾಜ್‌ರವರು ಪತ್ರ ಬರೆದು ತುಮಕೂರು ಇ.ಎಸ್.ಡಿ.ಎಂ ಕ್ಲಸ್ಟರ್ ಸ್ಥಾಪನೆ ಬಗ್ಗೆ ಕೇಂದ್ರ ಸರಕಾರಕ್ಕೆ  ಆಗ್ರಹಿಸಿದ್ದರು. ಕೇಂದ್ರ ಸರ್ಕಾರ ಮಿನಿಸ್ಟ್ರಿ ಆಫ಼್ ಎಲೆಟ್ರಾನಿಕ್ಸ ಮತ್ತುಐ.ಟಿ ಸಚಿವರು ತುಮಕೂರು ಇಎಸ್ ಡಿಎಂ ಕ್ಲಸ್ಟರ್ ನಿರ್ಮಾಣಕ್ಕೆ ತಾವು ಕೋರಿರುವಂತೆ ಕ್ರಮವಹಿಸಲು ಬದ್ದತೆ ಇರುವುದಾಗಿ ತಿಳಿಸಿ ಅದಕ್ಕೆ ಪೂರಕ ಕ್ರಮವಹಿಸಲು ತಿಳಿಸಿ ಇಎಮ್ ಸಿ-2.೦  ಅಡಿ ಪ್ರಸ್ಥಾವನೆ ಎದರು ನೋಡುತ್ತಿರುವುದಾಗಿ ದಿನಾಂಕ:24.10.2020  ರಂದು ಉತ್ತರಿಸಿದ್ದಾರೆ.

 ಆದ್ದರಿಂದ ಈಗ ರಾಜ್ಯಸರಕಾರವೇ ನೇರವಾಗಿ ಅಥವಾ ಇಂಡಸ್ಟ್ರಿಯಲ್ ಕಾರಿಡಾರ್ ಸಂಬಂಧದ /ಇಂಡಸ್ಟ್ರಿಯಲ್ ನೋಡ್ ನಿಗಾಕ್ಕೆ ಇರುವ ಎಸ್.ಪಿ.ವಿ ಯನ್ನು ಸ್ಟೇಟ್ ಇಂಪ್ಲಿಮೆಂಟಿಂಗ್ ಎಜನ್ಸಿ ಗುರಿತಿಸಿಕೊಂಡು ಕೇಂದ್ರ ಸರಕಾರದ ಪ್ರಾಜೆಕ್ಟ್ ಇಂಪ್ಲಿಮೆಂಟ್ ಏಜನ್ಸಿ ಮೂಲಕ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಏಜನ್ಸಿಗೆ ಪ್ರಸ್ಥಾವನೆ ಸಲ್ಲಿಸಲು ರಾಜ್ಯ ಸರಕಾರ ಕ್ರಮವಹಿಸಿದರೆ ಇಎಮ್‌ಸಿ-2.೦ / 21.03.2020 ರ  ಯೋಜನೆ ಅಡಿ ತುಮಕೂರು ಇ.ಎಸ್ ಡಿ.ಎಂ ಕ್ಲಸ್ಟರ್ ಸಾಕಾರ ಆಗುವುದರಲ್ಲಿ ಸಂಶಯವಿಲ್ಲ.

 ಆದ್ದರಿಂದ ಮಾನ್ಯ ಸಂಸದರಾದ ಶ್ರೀ ಬಸವರಾಜ್ ರವರು, ತುಮಕೂರು ನಗರ ವಿಧಾನಸಭಾ ಸದಸ್ಯರಾದ ಶ್ರೀ ಜ್ಯೋತಿಗಣೇಶ್ ರವರು, ಈಗಷ್ಟೇ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯರಾಗಿರುವ ಶ್ರೀ ಕುದರನಹಳ್ಳಿ ರಮೇಶ್ ರವರು ಈ ಬಗ್ಗೆ ಅನುಸರಣೆ ಕ್ರಮ ಮಾಡಿ ರಾಜ್ಯ ಸರಕಾರದ ಇನ್ಫ಼ಾರಮೇಶನ್ ಟೆಕ್ನಾಲಜಿ ಸಚಿವಾಲಯದ ಸಚಿವಾಲಯದ ಮೇಲೆ ಒತ್ತಡ ತಂದು ಕೇಂದ್ರ ಸರಕಾರಕ್ಕೆ ಅಗತ್ಯ ಪ್ರಸ್ಥಾವನೆ ಸಲ್ಲಿಸುವುದಕ್ಕೆ ಕಾರಣ ಆಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

                                                ಟಿ.ಆರ್.ರಘೋತ್ತಮರಾವ್