ಶ್ರೀ ನರೇಂದ್ರ ಮೋದಿಯವರ ಕಾಲದ ಯೋಜನೆ-2020- 2021
TUMAKURU:SHAKTHI PEETA FOUNDATION
PM PROJECT-5
ಕೇಂದ್ರ ಸರ್ಕಾರ ದೇಶದ ಪ್ರತಿ ಜಿಲ್ಲೆಯನ್ನೂ ಒಂದು ರಫ್ತು ಜಿಲ್ಲೆಯಾಗಿ ಘೋಶಿಸಲು ಮತ್ತು ಜಿಲ್ಲೆಗೊಂದು District Level Export Promotion Committee (DLEPC) ಸಮಿತಿ ರಚಿಸುವ ಮಹತ್ದದ ಯೋಜನೆ ರೂಪಿಸಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ಈ ಸಮಿತಿಗೆ. ಆಯಾ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
‘ತುಮಕೂರು ಜಿಐಎಸ್’ ತುಮಕೂರು ಜಿಲ್ಲೆಯಲ್ಲಿರುವ ರಫ್ತುದಾರರ ಜಿಐಎಸ್ ಲೇಯರ್ ಮಾಡುವುದು ಅಗತ್ಯವಾಗಿದೆ. ಈ ಯೋಜನೆಯಡಿಯಲ್ಲಿ ಡೇಟಾಬೇಸ್ ಸಿದ್ಧಪಡಿಸುವುದು ಒಂದು ಕಾಯಕ್ರಮವಿದೆ. ’ಇನ್‌ವೆಸ್ಟ್ ತುಮಕೂರು’ ಯೋಜನೆಯಡಿಯಲ್ಲಿ, ಈ ಮಾಹಿತಿಗಳ ಸಂಗ್ರಹ ಮಾಡಲು ಮುಂದಾಗಲಿ.
ಜೊತೆಗೆ ಜಿಲ್ಲೆಯಲ್ಲಿ ಹೊಸದಾಗಿ ರಫ್ತು ಮಾಡುವ ಘಟಕಗಳಿಗೆ ವಿಶೇಷ ಆಧ್ಯತೆ ನೀಡಲು ಜಿಲ್ಲಾಧಿಕಾರಿಗಳು ಮುಂದಾಗಿದ್ದಾರೆ. ಅಂತಹವರ ಪಟ್ಟಿ ಮಾಡಿ ಅವರಿಗೆ ಎಲ್ಲಾ ವಿಧವಾದ ತರಬೇತಿ ಮತ್ತು ಮೂಲಸೌಕರ್ಯ ಒದಗಿಸುವ ಹೊಣೆಗಾರಿಕೆ ಈ ಸಮಿತಿಗಿದೆ.
ಇದೂವರೆಗೂ ದಿಶಾ ಸಮಿತಿಯಲ್ಲಿ ಈ ಯೋಜನೆ ಬಗ್ಗೆ ಚರ್ಚೆಯೇ ನಡೆದಿಲ್ಲ. ಕೇಂದ್ರ ಸರ್ಕಾರದ ಯೋಜನೆಯಾದರೂ ದಿಶಾ ಗಮನಕ್ಕೆ ಬರದೇ ಇರುವುದು ಆಶ್ಚರ್ಯವಾಗಿದೆ. ಇನ್ನೂ ಮುಂದೆ ತುಮಕೂರು ಜಿಲ್ಲಾ ದಿಶಾ ಸಮಿತಿ ಈ ಯೋಜನೆಯ ಯಶಸ್ವಿಗೆ ವಿಶೇಷ ಗಮನಹರಿಸಲಿದೆ.
‘ ಕೇಂದ್ರ ಸರ್ಕಾರದ ಯಾವುದೇ ಒಂದು ಸಣ್ಣ ಯೋಜನೆಯೂ ಕೂಡ ದಿಶಾ ಸಮಿತಿ ವ್ಯಾಪ್ತಿಗೆ ಬರಬೇಕು ಎನ್ನುವ ಕೇಂದ್ರ ಸರ್ಕಾರದ ಚಿಂತನೆಗೆ, ಇನ್ನೂ ಹಲವಾರು ಇಲಾಖೆಗಳ ಹಲವಾರು ಯೋಜನೆಗಳ ಮಾಹಿತಿ ಕ್ರೋಡೀಕರಿಸಿಲ್ಲ, ಎನ್ನುವುದು ಒಂದು ದುರಂತ.’
ಆಯಾ ಇಲಾಖಾ ಅಧಿಕಾರಿಗಳು ಮಾಹಿತಿ ನೀಡುವಾಗ, ಕೇಂದ್ರದ ಪ್ರತಿಯೊಂದು ಯೋಜನೆಗಳ ಮಾಹಿತಿಯನ್ನು ದಿಶಾ ಸಮಿತಿಗೆ ನೀಡಬೇಕು ಎಂದು ಹಲವಾರು ಭಾರಿ ಹೇಳಿದರೂ, ಇನ್ನೂ ಅಧಿಕಾರಿಗಳ ಹಂತದಲ್ಲಿ ಚಾಲನೆ ದೊರೆತಿಲ್ಲ ಎಂಬುದಕ್ಕೆ ಈ ಯೋಜನೆಯೂ ಒಂದು ಉದಾಹರಣೆ.
‘ಎಲ್ಲಾ ಇಲಾಖಾ ಅಧಿಕಾರಿಗಳು ಸ್ಪಂಧಿಸಬೇಕು, ಹಣವಿದ್ದರೆ ಮಾತ್ರ ಯೋಜನೆ ಎಂಬ ಭಾವನೆ ಇರಬಾರದು, ಕೇಂದ್ರ ಸರ್ಕಾರದ ಒಂದು ಘೋಷಣೆ ಅಥವಾ ಒಂದು ಆಂದೋಲನವೂ ಒಂದು ಯೋಜನೆಯೇ. ಅದನ್ನು ಯಶಸ್ವಿ ಮಾಡುವುದು ಆಯಾ ಸಂಸದರ ಕರ್ತವ್ಯ ಅಲ್ಲವೇ.’