TUMAKURU:SHAKTHIPEETA FOUNDATION
ಆರಂಭದಲ್ಲಿ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ನಾನು ಸಿಎಂ ಎಂದರೆ COMMON MAN ಎನ್ನುತ್ತಿದ್ದರು, ನೀವೂ ‘ಕಾಮನ್ ಮ್ಯಾನ್’ ಆಗುವುದು ಬೇಡ ‘ವಾಟರ್ ಮ್ಯಾನ್’ ಆಗಿ ಎಂಬುದು ಕರ್ನಾಟಕದ 6.50 ಕೋಟಿ ಜನರ ಆಶಯ.
2022 ರಲ್ಲಿ ಸ್ವಾತಂತ್ರ್ಯೋತ್ಸವದ 75 ವರ್ಷಾಚರಣೆ ಆಚರಿಸುತ್ತಿದ್ದೇವೆ. 100 ನೇ ವರ್ಷಾಚಾರಣೆಯನ್ನು 1948 ರಲ್ಲಿ ಆಚರಿಸಲು ಸಿದ್ಧತೆಯನ್ನು ನಡೆಸುತ್ತಿದ್ದಾರೆ ನಮ್ಮ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು.
2024 ರೊಳಗೆ ದೇಶದ ಪ್ರತಿಯೊಬ್ಬರ ಮನೆ-ಮನೆಗೂ ನಲ್ಲಿ ಮೂಲಕ ನೀರು ನೀಡುವುದಾಗಿ ಘೋಷಣೆ ಮಾಡಿದ್ದಾರೆ. ದೇಶಾಧ್ಯಂತ ಕಾಮಗಾರಿ ಭರದಿಂದ ಸಾಗುತ್ತಿದೆ.
ನೀರಾವರಿಯಲ್ಲಿ ರಾಜಸ್ಥಾನ ಬಿಟ್ಟರೆ ಕರ್ನಾಟಕ ಎರಡನೇ ಸ್ಥಾನದಲ್ಲಿ ಹಿಂದುಳಿದಿದೆ. ಅಂತರ್ಜಲ ಕುಸಿತದ ಹೊಡೆತ ನಲ್ಲಿಯಲ್ಲಿ ಮನೆ-ಮನೆಗೆ ನೀರು ಬರುವುದಿಲ್ಲಾ ಗಾಳಿÀ ಬರುತ್ತದೆ.
ಈ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿಯವರಾದ ಪುಣ್ಯಾತ್ಮ ಶ್ರೀ ಬಿ.ಎಸ್.ಯಡಿಯೂರಪ್ಪನವರು ಆದೇಶ ಮಾಡಿದ ರೀತಿ ‘ಊರಿಗೊಂದು ಕೆರೆ– ಆ ಕೆರೆಗೆ ನದಿ ನೀರು’ ಮತ್ತು ‘ರಾಜ್ಯದ ನದಿಜೋಡಣೆ’ ಯೋಜನೆ ರೂಪಿಸದೆ ಇದ್ದಲ್ಲಿ ಅದಕ್ಕಿಂತ ಘೋರ ಅಪರಾಧ ಇನ್ನೊಂದಿಲ್ಲ.
ಮಾನ್ಯ ಮುಖ್ಯಂಮತ್ರಿಯವರು ಸ್ವತಃ ನೀರಾವರಿ ತಜ್ಞರಾಗಿದ್ದಾರೆ, ಆ ಅವಧಿ ರಾಜ್ಯದ ‘ಜಲಗ್ರಂಥ’ ಬರೆಯಲು ಸುವರ್ಣ ಅವಕಾಶ, ಮುಂದಿನ ಆಯವ್ಯಯದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡುವುದು ಅಗತ್ಯವಾಗಿದೆ.
‘ಹೌದು ಎಲ್ಲಾ ಯೋಜನೆಗಳನ್ನು ಒಂದೇ ಭಾರಿ ಪೂಣಗೊಳಿಸಲು ಸಾಧ್ಯಾವಿಲ್ಲ. ಆದರೆ ಸಾಮಾಜಿಕ ನ್ಯಾಯದಡಿ ನದಿ ನೀರನ್ನು ರಾಜ್ಯದ ಪ್ರತಿ ಹಳ್ಳಿಗೂ ಹಂಚಿಕೆ ಮಾಡಲು ಯಾವುದೇ ಕಷ್ಟವಿಲ್ಲ, ರಾಜಕೀಯ ಇಚ್ಚಾಶಕ್ತಿ ಬೇಕು ಅಷ್ಟೆ. ನೆರೆ ರಾಜ್ಯಗಳ ನೀರಿನ ಖ್ಯಾತೆ ಇದ್ದೆ ಇರುತ್ತದೆ. ಅದು ಬಗೆ ಹರಿಯುವ ವೇಳೆಗೆ ರಾಜ್ಯದ ಹಣಕಾಸು ಸ್ಥಿತಿಗತಿ ಉತ್ತಮವಾಗುವ ಆಶಯವಿದೆ, ನೀರಿನ ಹಂಚಿಕೆ ಮಾಡಿದ ಕೀರ್ತಿ ಬೊಮ್ಮಾಯಿಯವರಿಗೆ ಬರಲಿದೆ, ಹಣೆ ಬರಹ ಯಾರಪ್ಪನದು’.
ಶ್ರೀ ಬಸವರಾಜ್ ಬೊಮ್ಮಾಯಿರವರು ರಾಜ್ಯದಲ್ಲಿ ಹಲವಾರು ಜಲಸಂಗ್ರಹಾಗಾರ ನಿರ್ಮಾಣ ಮಾಡಲು ಚಿಂತನೆ ಆರಂಭಿಸಿದ್ದಾರೆ. ಜಲಜೀವನ್ ಮಿಷನ್ ಕಾರಿಡಾರ್ ಯೋಜನೆ ರೂಪಿಸಿ ಕೇಂದ್ರದ ಅನುದಾನ ಪಡೆಯಲು ಚಿಂತನೆ ನಡೆಸುತ್ತಿದ್ದಾರಂತೆ. ನೀರಾವರಿಯಲ್ಲಿ ದಾಖಲೆ ಮಾಡುವ ಕೆಲಸ ಮಾಡುವರೇ ಕಾದು ನೋಡಬೇಕು?
ಶ್ರೀ ಬಿ.ಎಸ್.ಯಡಿಯೂರಪ್ಪನವರ ಅವಧಿಯಲ್ಲಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ತುಮಕೂರು ಜಿಲ್ಲಾ ದಿಶಾ ಸಮಿತಿ ನಿರ್ಣಯದಿಂದ ಆರಂಭಿಸಿ, ಮಾನ್ಯ ಮುಖ್ಯ ಮಂತ್ರಿಯವರಿಂದ ಪ್ರಧಾನ ಮಂತ್ರಿಯವರಿಗೆ ಪತ್ರ, ನ್ಯಾಷನಲ್ ಇನ್ಪಸ್ಟ್ರಚ್ಚರ್ ಪೈಪ್ ಲೈನ್ ಯೋಜನೆಯಡಿ ಸೇರ್ಪಡೆ ಆಗುವವರೆಗೂ ನಿರಂತರವಾಗಿ ನಿಯಾಮುನುಸಾರ ಏನೇನು ಮಾಡಬೇಕೋ ಅದನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.
ಸುಮಾರು 600 ಟಿಎಂಸಿ ಅಡಿ ನೀರಿನ ಯೋಜನೆ ರೂಪಿಸುವ ವಿಷಯ ಕೇಂದ್ರ ಸರ್ಕಾರದವರೆಗೂ ತಲುಪಿದೆ.ರಾಜ್ಯದಲ್ಲೂ ವರದಿ ಸಿದ್ಧಪಡಿಸಲು ಕ್ರಮಕೈಗೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಶ್ರೀ ಬಸವರಾಜ್ ರವರು ಜಲಸಂಪನ್ಮೂಲ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ರಾಜ್ಯದ ಪಾಲಿನ ಪ್ರತಿಯೊಂದು ಹನಿ ನೀರಿನ ಮಾಹಿತಿ ಕೋರಿದ್ದಾರೆ. ಜೊತೆಗೆ ಅವರು 2019 ರಿಂದ ಈ ವರೆಗೂ ಬರೆದಿರುವ ಪತ್ರಗಳ ಮೇಲೆ ಕೈಗೊಂಡಿರುವ ಮಾಹಿತಿಯನ್ನು ಕೋರಿದ್ದಾರೆ.
‘ಇದು ರಾಜ್ಯದ 40 ಜನ ಸಂಸದರು ಮಾನ್ಯ ಪ್ರಧಾನಿಯವರ ಬಳಿ ನಿಯೋಗ ಹೋಗಲು ವಸ್ತು ನಿಷ್ಠ ಕಲ್ಪನಾ ವರದಿಯಾಗಲಿದೆ. ಜೊತೆಗೆ ರಾಜ್ಯದ ಸರ್ವಪಕ್ಷಗಳು, ನೀರಾವರಿ ಯೋಜನೆಗಳ ಪರ ಮತ್ತು ವಿರೋಧ ಮಾಡುವವರಿಗೂ ಒಳ್ಳೆಯ ಮಾಹಿತಿ ಆಗಲಿದೆ.’