27th July 2024
Share

TUMAKURU:SHAKTHIPEETA FOUNDATION

  ದೇಶದ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಇಡೀ ವಿಶ್ವದ ಹೂಡಿಕೆದಾರರನ್ನು ಭಾರತಕ್ಕೆ ಆಕರ್ಷಿಸಲು ಕಸರತ್ತು ನಡೆಸುತ್ತಿದ್ದಾರೆ. ರಾಜ್ಯದ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮತ್ತು ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್‌ರವರು ಸಹ ಇಡೀ ವಿಶ್ವದ ಹೂಡಿಕೆದಾರರನ್ನು ಕರ್ನಾಟಕ ರಾಜ್ಯಕ್ಕೆ ಆಕರ್ಷಿಸಲು ಕಸರತ್ತು ನಡೆಸುತ್ತಿದ್ದಾರೆ.

 ತುಮಕೂರು ಜಿಲ್ಲಾ ದಿಶಾ ಸಮಿತಿಯ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್‌ರವರು ತುಮಕೂರಿನ ವಸಂತನರಸಾಪುರದ ಕೈಗಾರಿಕಾ ಪ್ರದೇಶ ಗ್ರೇಟರ್ ನೊಯಿಡಾ ಬಿಟ್ಟರೆ, ದೇಶಕ್ಕೆ ಎರಡನೇ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಲಿದೆ ಎಂದು 2009 ರಿಂದಲೂ ತುಮಕೂರಿಗೆ ತರಲು ನಿರಂತರವಾಗಿ ಶ್ರಮಿಸಿದ್ದಾರೆ.

ಮೊದಲ ಹಂತದಲ್ಲಿ ಯುಪಿಎ ಸರ್ಕಾರ ದೇಶದಲ್ಲಿ 10 ನಿಮ್ಜ್‌ಗಳನ್ನು ಮಂಜೂರು ಮಾಡಿತ್ತು. ಇದರಲ್ಲಿ ದಕ್ಷಿಣ ಕರ್ನಾಟಕಕ್ಕೆ ಕೇವಲ ಒಂದೇ ಒಂದು ನಿಮ್ಜ್ ಅದು ತುಮಕೂರಿಗೆ. ಉಳಿದ ಎಲ್ಲಾ ನಿಮ್ಜ್‌ಗಳು ಉತ್ತರ ಇಂಡಿಯಾಕ್ಕೆ ಮಂಜೂರಾಗಿದ್ದು ಇತಿಹಾಸ.

 ಇದೂ ದಕ್ಷಿಣ ಭಾರತದ ಲೋಕಸಭಾ ಸದಸ್ಯರುಗಳ ಶಕ್ತಿ ಏನೆಂದು ತೋರಿಸಲು ಇನ್ನೇನು ಉದಾಹರಣೆ ಬೇಕು. ಸುಮಾರು 15000 ಎಕರೆಯಲ್ಲಿ ಕೈಗಾರಿಕೆ ಮತ್ತು ಉದ್ದೇಶಿತ ಇಂಟರ್ ನ್ಯಾಷನಲ್ ಏರ್‌ಪೋರ್ಟ್-2 ಆಗುವ ಸಂಭವವಿದೆ.

 ಇಲ್ಲಿಗೆ ಕುಡಿಯುವ ನೀರು ಅಲೋಕೇಷನ್ ಮಾಡದಿದ್ದರೇ ಕೈಗಾರಿಕಾ ವಲಯ ಬರಡು ಭೂಮಿಯಾಗಲಿದೆ. ಕೇಂದ್ರ ಸರ್ಕಾರ ಅನುದಾನ ನೀಡಲು ನೀರಿನ ಅಲೋಕೇಷನ್ ಮುಖ್ಯ. ಇದೂವರೆಗೂ ನಡೆದ ಎಲ್ಲಾ ದಿಶಾ ಸಭೆಗಳಲ್ಲಿ ಎತ್ತಿನಹೊಳೆ ನೀರು ಅಲೋಕೇಷನ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಸಹ ಎತ್ತಿನಹೊಳೆಯಿಂದ   ನೀರನ್ನು ಅಲೋಕೇಷನ್ ಮಾಡಲು ಸೂಚಿಸಿದ್ದಾರೆ.

 ಈ ಹಿನ್ನಲೆಯಲ್ಲಿ ದಿನಾಂಕ:08.12.2020 ರಂದು ಸಭೆ ನಡೆಯಲಿದೆ. ಕೈಗಾರಿಕಾ ಇಲಾಖೆಯವರು ಉದ್ದೇಶಿತ ಪ್ರದೇಶಕ್ಕೆ ಇರುವ ನೀರಿನ ಅಗತ್ಯ, ಹಾಲಿ ಇರುವ ನೀರಿನ ಮೂಲಗಳು, ಅಲೋಕೇಷನ್ ಮಾಡಬೇಕಾಗಿರುವ ನೀರಿನ ಬಗ್ಗೆ ಸರಿಯಾದ ಮಾಹಿತಿ ನೀಡುವ ಮೂಲಕ ನದಿ ನೀರಿನ ಅಲೋಕೇಷನ್ ಬಗ್ಗೆ ಮಾಹಿತಿ ನೀಡುವುದು ಅಗತ್ಯವಾಗಿದೆ.

 ಕೆಐಡಿಬಿ ಈಗಾಗಲೇ ಯಾವ, ಯಾವ ಕೆರೆಯಲ್ಲಿ ನೀರು ಸಂಗ್ರಹಿಸಬಹುದು ಎಂಬ ಮಾಹಿತಿಯನ್ನು ಸಿದ್ಧಪಡಿಸಿದೆ. ಮುಂದಿನ 50 ವರ್ಷಗಳ ಅವಧಿಗೆ ಯೋಜನೆ ರೂಪಿಸಿ ಸಭೆಯಲ್ಲಿ ಮಂಡಿಸುವುದು ಅಗತ್ಯವಾಗಿದೆ.

ಇಲ್ಲದ ನೀರಿಗೆ ಕಿತ್ತಾಡುವ ಚುನಾಯಿತ ಜನಪ್ರತಿನಿಧಿಗಳಿಗೆ, ಹೊಸದಾಗಿ ಯೋಜನೆ ರೂಪಿಸಲು ಶ್ರಮಿಸಿ, ತಮ್ಮ ಕೇತ್ರಕ್ಕೆ ಅಗತ್ಯವಿರುವ ನದಿ ನೀರು ಪಡೆಯಲಿ. ಪಾಪದ ಕೆಲಸ ಯಾರಿಗೂ ಒಳ್ಳೆಯದಲ್ಲ. ದೇವರು ಇವರಿಗೆ ಒಳ್ಳೆಯ ಬುದ್ದಿ ಕೊಡಲಿ ಎಂದು ಪ್ರಾರ್ಥಿಸುವೆ’