11th December 2024
Share

TUMAKURU:SHAKTHIPEETA FOUNDATION

ದಿ. ಬಂಗಾರಪ್ಪನವರು ಮುಖ್ಯ ಮಂತ್ರಿಗಳಾಗಿದ್ದಾಗ ವಿಶ್ವ ಯೋಜನೆ ಜಾರಿಗೊಳಿಸಿದ್ದರು, ಆ ಅವಧಿಯಲ್ಲಿ ತುಮಕೂರು ಜಿಲ್ಲೆ ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ದಿ. ಜಿ.ಎಸ್.ಶಿನಂಜಪ್ಪನವರ ಜೊತೆ ನಮ್ಮೂರಿಗೆ ಒಂದು ವಿಶ್ವ ಯೋಜನೆ ಜಾರಿಗೊಳಿಸಿ ಎಂದು ಮನವಿ ಮಾಡಿದ್ದೆ.

 ನನ್ನ ಮನವಿಗೆ ಸ್ಪಂಧಿಸಿದ ಶಾಸಕರು ನಮ್ಮೂರಿಗೂ ಒಂದು ಯೋಜನೆ ಮಂಜೂರು ಮಾಡಿದ್ದರು. 1992 ರಲ್ಲಿಯೇ ಚಾಲನೆ ನೀಡಲಾಗಿತ್ತು. ಸಣ್ಣ ಕೈಗಾರಿಕಾ ಇಲಾಖೆಗೆ ಕಟ್ಟಡ ಮಂಜೂರು ಮಾಡಲು ನೀಡಿದ್ದರು. ಅವರು ಈ ಜಾಗ ಸರಿಯಿಲ್ಲ ಎಂದಾಗ, ನಾನೇ ಸ್ವತಃ ಅಂದು ಸುಮಾರು 2 ಎಕರೆ ಜಮೀನು ಗಡಿ ಗುರಿತಿಸಿ ಬೇಲಿ ತೆಗೆಸಿ ನನ್ನ ಹಣವನ್ನು ವ್ಯಯಮಾಡಿದ್ದು ಇತಿಹಾಸ.

 ಸರ್ಕಾರದ ಬೇಜವಾಬ್ಧಾರಿ ತನದಿಂದ ಯೋಜನೆ ಹಾಳಾಯಿತು. ರಾಜ್ಯದ ಸುಮಾರು 850 ವಿಷ್ವಶೆಡ್‌ಗಳನ್ನು ಮಾರಿಕೊಂಡರು. ನಮ್ಮೂರಿನ ಷೆಡ್ ಮತ್ತು ಜಮೀನನ್ನು ಮಾರಿದರು. ಈ ಗ್ರಾಮಪಂಚಾಯಿತಿ ಅಧಿಕಾರಿಗಳು ತೆರಿಗೆ ಕಟ್ಟಿಸಿಕೊಳ್ಳುವಾಗ ನಿವೇಶನದ ವಿಸ್ತೀರ್ಣ ಬಿಟ್ಟು ಕಟ್ಟಡಗಳ ಅಳತೆಯನ್ನು ಮಾತ್ರ ದಾಖಲೆಯಲ್ಲಿ ನಮೂದಿಸುತ್ತಾರೆ.

 ಈ ರೀತಿ ದಾಖಲೆ ಮಾಡಿರುವುದರಿಂದ, ಸ್ವಮಿತ್ವ ಯೋಜನೆ ಜಾರಿಗೆ ಬಂದಾಗ ಪ್ರತಿ ಗ್ರಾಮದಲ್ಲೂ ಕುರುಕ್ಷೇತ್ರವಾಗಲಿದೆ. ಗ್ರಾಮಪಂಚಾಯಿತಿ ನಿಯಮದ ಪ್ರಕಾರ ತೆರಿಗೆಗೆ ಕಟ್ಟಡದ ವಿಸ್ತೀರ್ಣ ಮಾತ್ರ ಬರಲಿದೆ. ಈ ಷೆಡ್ ಮತ್ತು ಜಮೀನು ಕುಂದರನಹಳ್ಳಿ ಸರ್ವೇ ನಂಬರ್ 12 ರಲ್ಲಿದೆ. ನಿಯಮ ಪ್ರಕಾರ ಕೆಎಸ್‌ಎಸ್‌ಐಡಿಸಿ ಯಿಂದ ಶ್ರೀ ಟಿ.ಎಂ.ಕರುಣ್‌ರವರು 2011 ರಲ್ಲಿ ಕೊಂಡಿದ್ದಾರೆ.

ಶ್ರೀ ಟಿ.ಎಂ.ಕರುಣ್‌ರವರು ಇದೂವರೆಗೂ ಕ್ರಯ ಮಾಡಿಕೊಟ್ಟಿಲ್ಲ ಎಂದು ರಾಜ್ಯ ಹೈಕೋರ್ಟ್‌ನಲ್ಲಿ ಕೇಸ್ ಹಾಕಿದ್ದಾರೆ. ದಿನಾಂಕ:09.11.2019 ರಲ್ಲಿ ಮಾನ್ಯ ನ್ಯಾಯಾಧೀಶರಾದ ಶ್ರೀ ಬಿ.ವೀರಪ್ಪನವರು  8 ವಾರದೊಳಗೆ ಅಗತ್ಯಕ್ರಮಕೈಗೊಳ್ಳಲು ಸಂಭಂದಿಸಿದ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

 ಆದೇಶ ನೀಡಿ ಒಂದು ವರ್ಷ ಕಳೆದಿದೆ. ದಾಖಲೆ ಮಾಡಿಲ್ಲ, ಕಾರಣ ತಿಳಿದಿಲ್ಲ, ಈಗ ಗ್ರಾಮಪಂಚಾಯಿತಿ ಚುನಾವಣೆ ಬಂದಿದೆ, ಗುಡಿಸಲು ಹಾಕಲು, ಮನೆ ನಿರ್ಮಾಣ ಮಾಡಲು ಸ್ಪರ್ಧಾ ಆಕಾಂಕ್ಷಿಗಳು, ಕೆಲವರು ಕುಮ್ಮಕ್ಕು ನೀಡಿದ್ದಾರಂತೆ. ಶ್ರೀ ಟಿ.ಎಂ.ಕರುಣ್ ರವರು ಸಂಭಂಧಿಸಿದ ಎಲ್ಲಾ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದಾರೆ.

 ಈಗ ಅತಿಕ್ರಮಣ ಮಾಡಿರುವವರನ್ನು ತೆರವುಗೊಳಿಸಿ, ನ್ಯಾಯಾಲಯದ ಆದೇಶ ಪಾಲಿಸುವುದು. ಜಮೀನು ರಕ್ಷಣೆ ಮಾಡುವುದು ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಶೀಲ್ಧಾರ್‌ರವರು, ರೆವಿನ್ಯೂ ಇನ್‌ಸ್ಪೆಕ್ಟರ್, ವಿಲೇಜ್ ಅಕೌಂಟೆಂಟ್, ಪೋಲೀಸ್ ಇಲಾಖೆ ಮತ್ತು  ಕೆಎಸ್‌ಎಸ್‌ಐಡಿಸಿ ಅಧಿಕಾರಿಗಳ ಹೊಣೆಗಾರಿಕೆಯಾಗಿದೆ.

ಉದ್ದಿಮೆದಾರರಿಗೆ ಈ ರೀತಿ ಕಿರುಕೊಳ ಕೊಡುವುದು ಎಷ್ಟು ಸರಿ, ಜಿಲ್ಲಾಧಿಕಾರಿಗಳೇ ನಿಮ್ಮ ಗಮನಕ್ಕೆ ಬಂದಿದೇಯೇ?

 ಉದ್ದಿಮೆದಾರರಿಗೆ ಕ್ರಯ ಮಾಡಿ, ಇಲ್ಲವೇ ಸರ್ಕಾರಿ ಆಸ್ತಿಯಾಗಿ ಉಳಿಸಿ ಸ್ವಾಮಿ. ಇದು ಯಾವ ನ್ಯಾಯ?