16th September 2024
Share
DEO S.KAVITHA & KUNDARANAHALLI RAMESH

TUMAKURU: SHAKTHIPEETA  FOUNDATION

ತುಮಕೂರು  ದಿಶಾ ಸಮಿತಿ ತುಮಕೂರು ಜಿಲ್ಲೆಯಲ್ಲಿ ಮಹತ್ತರವಾದ ಕಾರ್ಯವನ್ನು ಆರಂಭಿಸಿದೆ, ಪ್ರತಿಯೊಂದು ಇಲಾಖೆಯು ಜಿಐಎಸ್ ಲೇಯರ್‍ ಮಾಡುವ ಮೂಲಕ ಬೆರಳ ತುದಿಯಲ್ಲಿ ಡೇಟಾ ಸಿದ್ಧ ಪಡಿಸ ಬೇಕಿದೆ.

 ತುಮಕೂರು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗಾಧಿಕಾರಿಯಾಗಿರುವ ತಾವೂ ಯಾವ, ಯಾವ ಲೇಯರ್‍ ಮಾಡಿದ್ದೀರಿ ಮಾಹಿತಿ ನೀಡಿ ಎಂದು ಎಸ್.ಕವಿತರವರನ್ನು ಕೇಳಿದ ಪ್ರಶ್ನೆಗೆ ಉದ್ಯೋಗಾಧಿಕಾರಿಯ ಖಡಕ್ ಉತ್ತರ ನಿಮಗೆ ಯಾವ ಮಾಹಿತಿ ಬೇಕು, ಕೇಳಿ ಸಾರ್, ಆ ಮಾಹಿತಿಯನ್ನು ನೀಡಲು ಸದಾ ಸಿದ್ಧ.

 ‘ಕಳೆದ ದಿಶಾ ಸಮಿತಿಯಲ್ಲಿ ನಾನೂ ಭಾಗವಹಿಸಿದ್ದೆ, ನನಗೆ ಪ್ರಥಮ ದಿಶಾ ಸಭೆ, ಸಭೆಯಲ್ಲಿ ಕೇಳಿದ ಮಾಹಿತಿಗಳ ಕಣಜ ನೋಡಿ, ನನಗೂ ಎಲ್ಲಾ ವಿಧವಾದ ಮಾಹಿತಿ ಸಂಗ್ರಹಿಸಲು ಒಂದು ಮಾಸ್ಟರ್ ಪ್ಲಾನ್ ಸಿದ್ಧಪಡಿಸುತ್ತಿದ್ದೇನೆ ಸಾರ್ ಎಂದರು’

ಮುಂದಿನ ದಿಶಾ ಸಮಿತಿ ಸಭೆಯಲ್ಲಿ ತುಮಕೂರು ಜಿಐಎಸ್ ಪೋರ್ಟಲ್ ಲೋಕಾರ್ಪಣೆಯಾಗಲಿದೆ. ಅಂದು ನಿಮ್ಮ ಇಲಾಖೆಯ ಜಿಐಎಸ್ ಲೇಯರ್‍ಸ್‌ಗಳನ್ನು ಲೋಕಾರ್ಪಣೆ ಮಾಡುವ ಮೂಲಕ ತುಮಕೂರು ಜಿಲ್ಲೆಯನ್ನು ನಿರುದ್ಯೋಗ ರಹಿತ ಜಿಲ್ಲೆ’ ಮಾಡಲು ಅಂದಿನಿಂದಲೇ ಚಾಲನೆ ನೀಡುವ ಬಗ್ಗೆ ಸಮಾಲೋಚನೆ ನಡೆಸಲಾಯಿತು.

ಉದ್ಯೋಗಾಧಿಕಾರಿ ಮಾಡಬೇಕಿರುವ  ಜಿಐಎಸ್ ಲೇಯರ್‍

  1. ತುಮಕೂರು ಜಿಲ್ಲೆಯಲ್ಲಿರುವ 330 ಗ್ರಾಮಪಂಚಾಯಿತಿಗಳು ಮತ್ತು 11 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಕುಟುಂಬಗಳ ಗ್ರಾಮವಾರು, ವಾರ್ಡ್‌ವಾರು ಜಿಐಎಸ್ ಲೇಯರ್.
  2. ಕೃಷಿ ಉದ್ಯೋಗಿಗಳ ಜಿಐಎಸ್ ಲೇಯರ್.
  3. ಸ್ವಯಂ ಉದ್ಯೋಗಿಗಳ ಜಿಐಎಸ್ ಲೇಯರ್.
  4. ಖಾಸಗಿ ಉದ್ಯೋಗಿಗಳ ಜಿಐಎಸ್ ಲೇಯರ್.
  5. ಸರ್ಕಾರಿ ಉದ್ಯೋಗಿಗಳ ಜಿಐಎಸ್ ಲೇಯರ್.
  6. ಉದ್ಯೋಗಕ್ಕಾಗಿ ವಲಸೆದಾರರ ಜಿಐಎಸ್ ಲೇಯರ್.
  7. ಕೃಷಿ ಉದ್ಯೋಗಿಗಳ ಆಕಾಂಕ್ಷಿ ಜಿಐಎಸ್ ಲೇಯರ್.
  8. ಸ್ವಯಂ ಉದ್ಯೋಗಿಗಳ ಆಕಾಂಕ್ಷಿ ಜಿಐಎಸ್ ಲೇಯರ್.
  9. ಖಾಸಗಿ ಉದ್ಯೋಗಿಗಳ ಆಕಾಂಕ್ಷಿ ಜಿಐಎಸ್ ಲೇಯರ್.
  10. ಸರ್ಕಾರಿ ಉದ್ಯೋಗಿಗಳ ಆಕಾಂಕ್ಷಿ ಜಿಐಎಸ್ ಲೇಯರ್.
  11. ಉದ್ಯೋಗಕ್ಕಾಗಿ ವಲಸೆದಾರರ ಆಕಾಂಕ್ಷಿ ಜಿಐಎಸ್ ಲೇಯರ್.
  12. ತುಮಕೂರು ಜಿಲ್ಲೆಯಲ್ಲಿ ಉದ್ಯೋಗ ಸೃಷ್ಠಿಸಲು ಇರುವ ಅವಕಾಶಗಳು ಮತ್ತು ಯೋಜನೆಗಳ ಜಿಐಎಸ್ ಲೇಯರ್.
  13. ತುಮಕೂರು ಜಿಲ್ಲೆಯಲ್ಲಿ ನರೇಗಾ ಜಾಬ್‌ಕಾರ್ಡ್‌ದಾರರ ಜಿಐಎಸ್ ಲೇಯರ್.
  14. ಸರೋಜಿನಿ ಮಹಿಷಿ ವರದಿ ಪ್ರಕಾರ ಉದ್ಯೋಗ ನೀಡಿರುವ ಜಿಐಎಸ್ ಲೇಯರ್.
  15. ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕಿನ, ಹೆಚ್.ಎ.ಎಲ್ ಘಟಕಕ್ಕೆ ಸ್ಥಳೀಯ ಉದ್ಯೋಗಿಗಳ ಅಕಾಂಕ್ಷಿ  ಜಿಐಎಸ್ ಲೇಯರ್.
  16. ಗ್ರಾಮ-1 ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ಮಾಡಲು ಆಸಕ್ತಿ ಇರುವವರ ಗ್ರಾಮವಾರು ಜಿಐಎಸ್ ಲೇಯರ್.
  17. ಯಾವುದೇ ಉದ್ಯೋಗವೂ ಇಲ್ಲ, ಯಾವುದೇ ಅವಕಾಶವೂ ಇಲ್ಲ ಎಂಬ ನಿರ್ಗತಿಕರ ಜಿಐಎಸ್ ಲೇಯರ್.
  18. ತುಮಕೂರು ಜಿಲ್ಲೆಯ ನಿವೃತ್ತ ಅಧಿಕಾರಿಗಳ ಮತ್ತು ನೌಕರರ ಜಿಐಎಸ್ ಲೇಯರ್.
  19. ತುಮಕೂರು ಜಿಲ್ಲೆಯ ನಿವೃತ್ತ ಸೈನಿಕರ ಜಿಐಎಸ್ ಲೇಯರ್.
  20. ತುಮಕೂರು ಜಿಲ್ಲೆಯ ವಿದ್ಯಾರ್ಥಿಗಳು, ಬಿಡುವಿನ ಸಮಯದಲ್ಲಿ ದುಡಿಯಲು ಆಸಕ್ತಿ ಇರುವವರ   ಜಿಐಎಸ್ ಲೇಯರ್.
  21. ತುಮಕೂರು ಜಿಲ್ಲೆಯ ರಫ್ತುದಾರರ ಜಿಐಎಸ್ ಲೇಯರ್.
  22. ತುಮಕೂರು ಜಿಲ್ಲೆಯ ರಫ್ತುದಾರರ ಆಕಾಂಕ್ಷಿಗಳ ಜಿಐಎಸ್ ಲೇಯರ್.
  23. ಒಂದು ಜಿಲ್ಲೆ- ಒಂದು ಉತ್ಪನ್ನ ಉದ್ಯೋಗಾಂಕ್ಷಿಗಳ ಜಿಐಎಸ್ ಲೇಯರ್
  24. ಸ್ಟಾರ್ಟ್ ಅಫ್ ಉದ್ಯೋಗಾಂಕ್ಷಿಗಳ ಜಿಐಎಸ್ ಲೇಯರ್
  25. ಉದ್ಯೋಗಕ್ಕಾಗಿ ವಲಸೆ ಹೋಗಿ, ಕೊರೊನಾದಿಂದ ವಾಪಾಸ್ಸು ಗ್ರಾಮಗಳಿಗೆ ಬಂದಿರುವವರ ಜಿಐಎಸ್ ಲೇಯರ್

  ಸರಿ ಸಾರ್, ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ರವರೊಂದಿಗೆ ಮತ್ತು ನಮ್ಮ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಅವರ ಮಾರ್ಗದರ್ಶನ ಪಡೆದು, ಮುಂದಿನ ದಿಶಾ ಸಮಿತಿ ಸಭೆಯಲ್ಲಿ ನಾನು ಕೈಗೊಂಡಿರುವ ಕ್ರಮಗಳ ಬಗ್ಗೆ ಪಿಪಿಟಿ ಪ್ರದರ್ಶನ ಮಾಡುವೆ.

 ತುಮಕೂರು ಸ್ಮಾರ್ಟ್ ಸಿಟಿ ಇನ್‌ವೆಸ್ಟ್ ತುಮಕೂರು ವರದಿ ಸಿದ್ಧಪಡಿಸಲು ಸಲಹೆಗಾರರನ್ನು ನೇಮಿಸಿದೆ, ಅವರ ಸಹಕಾರ ಪಡೆಯಿರಿ ಹಾಗೂ ವಿವಿಧ ಇಲಾಖೆಗಳಿಂದ ಮಾಹಿತಿ ಪಡೆಯಿರಿ, ಒಂದು ಆಪ್ ಮಾಡಿ, ನೋಂದಾಯಿಸಿಕೊಳ್ಳುವ ಡಿಜಿಟಲ್ ಆಂದೋಲನ ‘ ಆರಂಭಿಸಿ ಎಂಬ ಸಲಹೆ ನೀಡಲಾಯಿತು.