12th September 2024
Share

TUMAKURU:SHAKTHI PEETA FOUNDATION

ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ತುಮಕೂರು ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ಬೃಹತ್ ಯೋಜನೆ ರೂಪಿಸಲು ಈ ಹಿಂದೆ ಸಮಾಲೋಚನೆ ನಡೆಸಿದ್ದರು. ಯಾವುದೋ ಕಾರಣದಿಂದ ಸ್ಕಿಲ್‌ಸಿಟಿ ನೆನೆಗುದಿಗೆ ಬಿತ್ತು.

‘ತುಮಕೂರು ಜಿಲ್ಲೆಯನ್ನು ನಿರುದ್ಯೋಗಿ ರಹಿತ ಜಿಲ್ಲೆ’ ಯಾಗಿ ಮಾಡಲು ಹಲವಾರು ವರ್ಷಗಳಿಂದ ಕನಸು ಕಾಣುತ್ತಿದ್ದ ನನಗೆ ಏನಾದರೂ ಮಾಡಲೇ ಬೇಕು ಎನಿಸಿತು. ಜಿ.ಎಸ್.ಬಸವರಾಜ್‌ರವರು ಜಿಲ್ಲೆಯ ಎಲ್ಲಾ ಪರೀಣಿತರ ಸಹಕಾರ ಪಡೆದು ಒಂದು ವರದಿ ಸಿದ್ದಪಡಿಸಲು ಸೂಚಿಸಿದರು. ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ಇನ್‌ವೆಸ್ಟ್ ತುಮಕೂರು ಕಾಲ್ಪನಿಕ ಪ್ರಸ್ತಾವನೆ ಸಿದ್ಧಪಡಿಸಲು ನಿರ್ಣಯ ಕೈಗೊಳ್ಳಲಾಯಿತು.

 ತುಮಕೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ರಂಗಸ್ವಾಮಿಯವರು ಮತ್ತು ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕರಾದ ನಾಗೇಶ್‌ರವರು ಸಮಾಲೋಚನೆ ನಡೆಸಿ ಹೊರಗುತ್ತಿಗೆ ಆಧಾರದಲ್ಲಿ ಪ್ರಸ್ತಾವನೆ ಸಿದ್ಧಪಡಿಸಲು ಪ್ರಮೋದ್‌ರವರನ್ನು ಸಲಹೆಗಾರರಾಗಿ ಈಗಾಗಲೇ ಆಯ್ಕೆ ಮಾಡಿದ್ದಾರೆ.

 ಕಳೆದ ದಿಶಾ ಸಮಿತಿ ಸಭೆಯಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಅಶ್ವಿನ್‌ರವರು ಪಿಪಿಟಿ ಪ್ರದರ್ಶನ ಮಾಡಿದಾಗ, ಜಿಲ್ಲಾಧಿಕಾರಿಗಳಾದ ಡಾ.ರಾಕೇಶ್ ಕುಮಾರ್ ಒಳ್ಳೆಯ ಯೋಚನೆ ಮಾದರಿಯಾಗಿ ಮಾಡೋಣ ಎಂಬ ಸಲಹೆ ನೀಡಿದರು. ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕರಾದ ನಾಗೇಶ್‌ರವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಲು ಸಭೆಯಲ್ಲಿ ಪ್ರಸ್ತಾಪ ಮಾಡಲಾಯಿತು.

 ಜಿಲ್ಲಾಧಿಕಾರಿಗಳು ನನ್ನ ಅಧ್ಯಕ್ಷತೆಯಲ್ಲಿ ಇರುವ ಸಮಿತಿಯಲ್ಲಿ ಪ್ರಗತಿ ಪರೀಶಿಲನೆ ಮಾಡೋಣ. ಹಲವಾರು ಇಲಾಖೆಗಳ ಸಹಕಾರ ಬೇಕು. ಕೇಂದ್ರ ಸರ್ಕಾರದ ನೂತನ ಯೋಜನೆಗಳಾದ ಎಕ್ಸ್‌ಪೋರ್ಟ್ ಹಬ್, ಒಂದು ಜಿಲ್ಲೆ – ಒಂದು ಉತ್ಪನ್ನ ಎರಡು ಯೋಜನೆಗಳಿಗೂ ನನ್ನ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಸಮಿತಿ ರಚಿಸಲು ಸೂಚಿಸಿದೆ.  ಸಮಿತಿ ರಚನೆಯೂ ಆಗಿದೆ ಎಂಬ ಉತ್ತಮವಾದ ಸಲಹೆ ನೀಡಿದರು.

ಈ ಹಿನ್ನೆಲೆಯಲ್ಲಿ ಇನ್‌ವೆಸ್ಟ್ ತುಮಕೂರು ವಿಷನ್ ಗ್ರೂಪ್’ ರಚಿಸಲಾಗಿದೆ. ಮಾನ್ಯ ಜಿಲ್ಲಾಧಿಕಾರಿಗಳೇ ನೇತೃತ್ವ ವಹಿಸಿರುವುದರಿಂದ ಸಂಬಂದಿಸಿದ ಎಲ್ಲಾ ಇಲಾಖಾ ಅಧಿಕಾರಿಗಳು ಸಲಹಾಗಾರರು ಕೇಳುವ ಮಾಹಿತಿ ನೀಡುವುದು ಸೂಕ್ತವಾಗಿದೆ.

ಪರಿಣಿತರು ಯಾರೇ ಆಗಲಿ, ಎಲ್ಲೇ ಇರಲಿ, ಡಿಜಿಟಲ್ ರೂಪದಲ್ಲಿ ಸಲಹೆ ನೀಡಬಹುದಾಗಿದೆ, ಇದೊಂದು ಡಿಜಿಟಲ್ ಆಂದೋಲನವಾಗಿದೆ.  ಜಿಲ್ಲಾಧಿಕಾರಿಗಳ ಸಲಹೆ ಮೇರೆಗೆ ಇತರೆ ಇಲಾಖೆಗಳ ಅಧಿಕಾರಿಗಳನ್ನು ಸೇರ್ಪಡೆ ಮಾಡಬೇಕಿದೆ.

 ನೋಡೆಲ್ ಅಧಿಕಾರಿಯಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಎಸ್.ಕವಿತಾರವರನ್ನು ಮಾಡುವುದು ಸೂಕ್ತವಾಗಬಹುದು, ಇದು ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದು. ಈ ಇಲಾಖೆಗೆ ಜಡ್ಡು ಹಿಡಿದಿದೆ, ಈ ಮೂಲಕ ಚುರುಕು ಮಾಡಬೇಕು. ನಿರುದ್ಯೋಗಿಗಳ ಹಿತ ಕಾಪಾಡುವ ಇಲಾಖೆ ಕಚೇರಿಗೆ ಒಂದು ಸ್ವಂತ ಕಟ್ಟಡವಿಲ್ಲ ಇದೂ ಒಂದು ದುರಂತ.

ಸರ್ಕಾರಿ ಜಾಗ ನೀಡಲು ಸಂಸದರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಜಿಲ್ಲಾಧಿಕಾರಿಗಳಿಗೆ ಪತ್ರಬರೆದಿದ್ದಾರೆ. ಜಿಲ್ಲಾಧಿಕಾರಿಗಳು ಶೀಘ್ರವಾಗಿ ಜಮೀನು ನೀಡುವ ಭರವಸೆಯಿದೆ.

ಎಕ್ಸ್‌ಪೋರ್ಟ್ ಹಬ್, ಒಂದು ಜಿಲ್ಲೆ – ಒಂದು ಉತ್ಪನ್ನ’ ಈ ಎರಡು ಯೋಜನೆಗಳನ್ನು ದೇಶಕ್ಕೆ ಮಾದರಿಯಾಗಿಸಲು ಈ ವಿಷನ್ ಗ್ರೂಪ್ ಶ್ರಮಿಸಲಿ ಎಂಬುದು ಜನತೆಯ ಕನಸು.