15th September 2024
Share
G.S.BASAVARAJ, T.R.RAGHOTTAMARAO, AJAY & KUNDARNAHALLI RAMESH

TUMAKURU: SHAKTHIPEETA FOUNDATION

ದಿನಾಂಕ:10.12.2020 ರಂದು ತುಮಕೂರಿನ ಎನ್.ಐ.ಸಿಯಲ್ಲಿ ಸಂಸದ ಶ್ರೀ ಜಿ.ಎಸ್.ಬಸವರಾಜ್‌ರವರು ಪ್ರಗತಿ ಪರಿಶೀಲನೆ ಮಾಡಿದರು. ಎನ್.ಐ.ಸಿಯ ಅಧಿಕಾರಿ ಅಜಯ್‌ರವರೊಂದಿಗೆ ಮಾತನಾಡಿ ಬಹಳ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಎನ್.ಐ.ಸಿ. ದೇಶದ ಯಾವ ಜಿಲ್ಲೆಯಲ್ಲಿದೆ.

ದಿಶಾ ಸಮಿತಿಯ ಬಗ್ಗೆ ಕೇಂದ್ರ ಸರ್ಕಾರದಿಂದ ಬಂದಿರುವ ಪತ್ರಗಳ ಮೇಲೆ ಏನು ಕ್ರಮಕೈಗೊಳ್ಳಲಾಗಿದೆ, ಜಿಲ್ಲೆಯ ಇತರೆ ಇಲಾಖೆಗಳಲ್ಲಿರುವ ಡಾಟಾ ಆಪರೇಟರ್‌ಗಳು ಕಾರ್ಯ ನಿರ್ವಹಿಸಿರುವ ಪ್ರಗತಿ ಪರಿಶೀಲನೆ ಯಾರು ಮಾಡುವರು ಎಂದು ಹಲವಾರು ಪ್ರಶ್ನೆಗಳನ್ನು ಕೇಳುವ ಮೂಲಕ ಅಧಿಕಾರಿಯನ್ನೆ ಚಕಿತಗೊಳಿಸಿದರು.

ಅಜಯ್‌ರವರು ಮಾತನಾಡಿ, ಕೇಂದ್ರ ಸರ್ಕಾರದಿಂದ ಬಂದ ಪತ್ರವನ್ನು ಈಗಾಗಲೇ ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾಧಿಕಾರಿಗಳ ಕಚೇರಿಗೆ ರವಾನಿಸಿದ್ದೇನೆ, ಅವರು ಮಾಹಿತಿ ನೀಡಿದ ತಕ್ಷಣ ಎಲ್ಲಾ ಇಲಾಖೆಗಳಿಗೂ ಪಾಸ್‌ವಾರ್ಡ್ ನೀಡಲಾಗುವುದು.

ನಾನು ಮಂಡ್ಯದಲ್ಲಿ ಕಾರ್ಯನಿರ್ವಹಿಸುವಾಗ, ಆ ಜಿಲ್ಲೆಯಲ್ಲಿನ ಎಲ್ಲಾ ಇಲಾಖೆಗಳ ಡಾಟಾ ಆಪರೇಟರ್‍ಸ್‌ಗಳ ತಿಂಗಳ ಪ್ರಗತಿ ಪರಿಶೀಲಿಸಿದ ನಂತರ, ಅವರಿಗೆ ವೇತನ ಪಾವತಿ ಮಾಡಲಾಗುತ್ತಿತ್ತು, ಆದರೇ ಇಲ್ಲಿ ಆ ವ್ಯವಸ್ಥೆ ಇಲ್ಲ ಎಂದು ತಿಳಿಸಿದರು.

 ತಕ್ಷಣವೇ ಜಿಲ್ಲಾ ಪಂಚಾಯತ್ ಸಿ.ಇ.ಓ ರವರಿಗೆ ಮಾತನಾಡಿ ಮುಂದಿನ ತಿಂಗಳಿನಿಂದ ತುಮಕೂರಿನಲ್ಲೂ ಈ ವ್ಯವಸ್ಥೆ ಜಾರಿ ಮಾಡಲು ತಿಳಿಸಿದಾಗ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಸಿಇಓಶುಭಕಲ್ಯಾಣ್ ರವರೊಂದಿಗೆ ಸಭೆಯಲ್ಲಿ ದೂರವಾಣಿ ಮೂಲಕ ಚರ್ಚಿಸಿದರು.

 ಜಿಲ್ಲಾ ಪಂಚಾಯತ್ ಪಿಡಿಯವರಾದ ಮೋಹನ್ ಕುಮಾರ್‌ರವರೊಂದಿಗೂ ಸಮಾಲೋಚನೆ ನಡೆಸಿ, ಎಲ್ಲಾ ಇಲಾಖೆಗಳ ಡಾಟಾ ಅಪರೇಟರ್‍ಸ್ ಪಟ್ಟಿ ಸಿದ್ಧಪಡಿಸಿ ಕೂಡಲೇ ಸಭೆ ನಡೆಸುವುದು, ತುಮಕೂರು ಜಿ.ಐಎಸ್ ಲೋಕಾರ್ಪಣೆ ಮಾಡುವ ದಿವಸ ರಾಜ್ಯಮಟ್ಟದ ಎನ್.ಐ.ಸಿ ಅಧಿಕಾರಿ, ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಧಿಕಾರಿ, ಕೆಎಂಡಿಎಸ್ ಅಧಿಕಾರಿ ಮತ್ತು ಎನ್.ಆರ್.ಡಿ.ಎಂ.ಎಸ್ ಅಧಿಕಾರಿಗಳನ್ನು ಆಹ್ವಾನಿಸಲು ಸಲಹೆ ನೀಡಿದರು.

 ತುಮಕೂರು ಜಿ.ಐಎಸ್ ಲೋಕಾರ್ಪಣೆ ಮಾಡುವ ಮುನ್ನ ಇವರುಗಳೊಂದಿಗೆ ಸಮಾಲೋಚನೆ ನಡೆಸಿ, ಎಲ್ಲಾ ಇಲಾಖೆಗಳು ಸಮನ್ವಯತೆ ಕಾಪಾಡಲು ಹಾಗೂ ಜಿಲ್ಲೆಯಲ್ಲಿರುವ ಎಲ್ಲಾ ಇಲಾಖೆಗಳ ಡಾಟಾ ಆಪರೇಟರ್ ಸಭೆ ನಡೆಸಿ, ಪ್ರತಿ ತಿಂಗಳೂ ಅವರ ಕೆಲಸದ ಬಗ್ಗೆ ಪರಿಶೀಲನೆ ನಡೆಸುವ ಮೂಲಕ ದಿಶಾ ಸಮಿತಿಯಲ್ಲಿಯೂ ವಿಷಯ ಚರ್ಚಿಸಲು ಸೇರ್ಪಡೆ ಮಾಡಲು ಸಂಸದರು ಸೂಚಿಸಿದರು.

 ಸಂಪನ್ಮೂಲ ಕೇಂದ್ರದ ಕಟ್ಟಡದಲ್ಲಿ ತುಮಕೂರು ಜಿಐಎಸ್ ಕಚೇರಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಿ, ರಾಜ್ಯಕ್ಕೆ ಮಾದರಿಯಾಗಿ ಎನ್.ಆರ್.ಡಿ.ಎಂಸ್ ಕಚೇರಿ ಸ್ಥಾಪಿಸಿ, ಕಚೇರಿಯ ಉದ್ಘಾಟನೆಯನ್ನು ತುಮಕೂರು ಜಿಐಎಸ್ ಲೋಕಾರ್ಪಣೆ ದಿವಸ ಮಾಡಲು ಸಂಸದರು ಸೂಚಿಸಿದರು. ಆರ್ಥಿಕವಾಗಿ ಚರ್ಚಿಸುವ ಅಗತ್ಯವಿದ್ದಲ್ಲಿ ಜಿಲ್ಲಾಧಿಕಾರಿಗಳಾದ ಡಾ.ರಾಕೇಶ್ ಕುಮಾರ್, ಸಿಇಓ ಶುಭಕಲ್ಯಾಣ್ ಮತ್ತು ದಿಶಾ ಸಮಿತಿ ಸದಸ್ಯರುಗಳು ಸಮಾಲೋಚನೆ ನಡೆಸಲು ಸೂಚಿಸಿದರು. ನಗರದಲ್ಲಿ ನೀತಿ ಸಂಹಿತೆ ಇಲ್ಲದಿದ್ದರೆ ನಾನೂ ಸಹ ಸಭೆಗೆ ಬರುತ್ತೇನೆ, ಕೂಡಲೇ ಸಭೆ ನಿಗದಿಗೊಳಿಸಿ ಎಂದು ಪಿಡಿಯವರಿಗೆ ಸೂಚಿಸಿದರು.  

ಈ ಸಂದರ್ಭದಲ್ಲಿ ಎನ್.ಐ.ಸಿಯ ಅಧಿಕಾರಿ ಅಜಯ್, ರಾಜ್ಯ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್, ಜಿಲ್ಲಾ ದಿಶಾ ಸಮಿತಿ ಸದಸ್ಯ ಟಿ.ಆರ್.ರಘೋತ್ತಮರಾವ್, ಯುವಮುಖಂಡ ರಕ್ಷಿತ್ ಮತ್ತು ಉಮಾಶಂಕರ್‌ರವರು ಇದ್ದರು.