29th March 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆಯಲ್ಲಿ ರೇಷ್ಮೆ ಕೃಷಿಯಿಂದ ಹಾಗೂ ರೇಷ್ಮೆ ಮೌಲ್ಯವರ್ಧಿತ ಉತ್ಪನ್ನಗಳಿಂದ ದೊರಕಿರುವ ಉದ್ಯೋಗ ಎಷ್ಟು? ಜಿಲ್ಲೆಯಲ್ಲಿ ಎಷ್ಟು ರೇಷ್ಮೇ ಫಾರಂಗಳಿವೆ, ಎಷ್ಟು ಕಟ್ಟಡಗಳಿವೆ, ಎಷ್ಟು ಜಮೀನು ಒತ್ತುವರಿಯಾಗಿವೆ, ಎಂಬ ಪ್ರಶ್ನೆಗಳನ್ನು ಮಾನ್ಯ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಕೇಳಿದರು.

ಸಭೆಯಲ್ಲಿ ಭಾಗವಹಿಸಿದ್ಧ ಅಧಿಕಾರಿಗೆ ಅಧ್ಯಕ್ಷರು ಕೇಳಿದ ಮಾಹಿತಿ ಬಗ್ಗೆ ಸ್ವಲ್ಪ ಗೊಂದಲವಾಗಿರಬೇಕು. ಅವರು ಈ ಕೆಲಸವನ್ನು  ಈ ಜನಾಂಗದವರು ಮಾಡಲ್ಲ, ಅವರು ಮಾಡುತ್ತಾರೆ ಎಂಬ ಉತ್ತರ ನೀಡಿದ್ದು ನನಗಂತೂ ಸರಿಕಾಣಲಿಲ್ಲ.

 ಸಭೆಯ ನಂತರ ಒಂದು ಪತ್ರ ಬರೆದಿದ್ದಾರೆ, ಈ ಪತ್ರವನ್ನು ನೋಡಿದರೆ ನನಗೆ ನಗು ಬರುತ್ತದೆ. ರೇಷ್ಮೆ ಇಲಾಖೆಯ ಸ್ವಂತ ಆಸ್ತಿಗಳ ಜಿಐಎಸ್ ಲೇಯರ್ ಮಾಡಿ, ತುಮಕೂರು ಜಿಐಎಸ್‌ನಲ್ಲಿ ವಿವರಗಳನ್ನು ಅಫ್ ಲೋಡ್ ಮಾಡುವ ಬದಲು  ಈ ರೀತಿ ಪತ್ರ ಅಗತ್ಯವಿತ್ತೇ?

 ಎಲ್ಲಾ ಆಸ್ತಿಗಳ ಮಾಹಿತಿಗಳನ್ನು ನೀಡಿದಾಗ ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿಗಳು ಕೆಲವು ಆಯ್ದ ಸ್ಥಳಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಇದು ಸಭೆಯಲ್ಲಿ ಆದ ನಿರ್ಣಯ. ಆದರೇ ಇಲ್ಲಿ ರಾಜ್ಯ ವಲಯ ಅಥವಾ ಕೇಂದ್ರವಲಯದ ಅನುದಾನದ ಚರ್ಚೆಯಲ್ಲ. ಆಸ್ತಿಗಳ ಡಿಜಿಟಲ್ ದಾಖಲೆ, ಸಂರಕ್ಷಣೆ ಮತ್ತು ಉದ್ಯೋಗ ಸೃಷ್ಟಿಗೆ ಚಿಂತನೆ.

ದಿನಾಂಕ:21.11.2020 ರಂದು ನಡೆದ ತುಮಕೂರು ಜಿಲ್ಲಾ ದಿಶಾ ಸಮಿತಿ ಸಭೆಯಲ್ಲಿ ಈ ವಿಚಾರ ಚರ್ಚೆಯಾದಾಗ ಕುಂದರನಹಳ್ಳಿ ರಮೇಶ್ ವೈಕೆಆರ್ ಸಾಧನೆ ಬಗ್ಗೆ ಗುಣಗಾನ ಮಾಡಿದ್ದು ಅಧಿಕಾರಿಗಳ ಗಮನಕ್ಕೆ ಬಂದಿರ ಬಹುದು.

‘ದಿ.ವೈ.ಕೆ ರಾಮಯ್ಯನವರಿಗೆ ಜನತೆ ರೇಷ್ಮೆ ರಾಜ ಎಂದು ಕರೆಯುತ್ತಿದ್ದರು’ ಅವರ ಕಾಲದಲ್ಲಿ ಬಹಳಷ್ಟು ಕಟ್ಟಡಗಳು, ರೇಷ್ಮೆ ಫಾರಂಗಳು ಜನ್ಮತಾಳಿದವು. ಅವುಗಳ ಸ್ಥಿತಿಗತಿ ಏನು. ಈ ಆಸ್ತಿಗಳಿಂದ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಠಿಸಲು ಸಾಧ್ಯಾವಿಲ್ಲವೇ? ಆಧುನಿಕ ಜಗತ್ತಿನಲ್ಲಿ ಈಗ ಏನೇನು ಮಾಡಬಹುದು ಎಂಬ ಬಗ್ಗೆ ಮಾಹಿತಿ ನೀಡುವುದು ಸೂಕ್ತವಾಗಿದೆ.

ರೇಷ್ಮೆ ಇಲಾಖೆಯ ಆಸ್ತಿಗಳ ಸ್ಥಿತಿ ಗತಿ ಬಗ್ಗೆ, ಮುಂದಿನ ಬಳಕೆ ಬಗ್ಗೆ ಅಥವಾ ಇರುವ ಪರ್‍ಯಾಯ ಯೋಜನೆ ಬಗ್ಗೆ ಡಿಜಿಟಲ್ ಮಾಹಿತಿ ಸಂಗ್ರಹ ಅಗತ್ಯವಾಗಿದೆ. ಮುಂದಿನ ಸಭೆಯಲ್ಲಿ ಅಧಿಕಾರಿಗಳು ಯಾವ ರೀತಿ ಮಾಹಿತಿ ನೀಡುವರು ಕಾದು ನೋಡೋಣ.

ಕೇಂದ್ರ ಸರ್ಕಾರದಿಂದ ಯಾವ ಯೋಜನೆ ರೂಪಿಸಬಹುದು ಎಂಬ ಬಗ್ಗೆ, ರೇಷ್ಮೆ ಕೃಷಿಯಲ್ಲಿನ ಪರಿಣಿತರೂ, ಉದ್ಯಮಿಗಳು, ಅಧಿಕಾರಿಗಳು ಮತ್ತು ಪ್ರಗತಿಪರ ರೈತರು ಸಲಹೆ ನೀಡಲು ಮನವಿ.