4th February 2025
Share
G.S.BASAVARAJ.M.P.TUMAKURU. MANJULA M.D.KPTCL & KUNDARANAHALLI RAMESH

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನಲ್ಲಿ ಮೈದನಹಳ್ಳಿ ಜಿಂಕೆ ವನದ ಪಕ್ಕ ಸೋಲಾರ್ ಪಾರ್ಕ್ ಸ್ಥಾಪಿಸಿ, ರೈತರಿಗೆ ಮತ್ತು ನಿರುದ್ಯೋಗಿಗಳಿಗೆ ಅನೂಕೂಲ ಮಾಡಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಮಂಜುಳರವರೊಂದಿಗೆ ಸಮಾಲೋಚನೆ ನಡೆಸಿದರು.

ಅವರು ದಿನಾಂಕ:15.12.2020 ರಂದು ಬೆಂಗಳೂರಿನ ಕೆಪಿಟಿಸಿಎಲ್ ಕಚೇರಿಗೆ ತೆರಳಿ, ಪಾವಗಡ ತಾಲ್ಲೂಕಿನ ಮಾದರಿಯಲ್ಲಿಯೇ ಸೋಲಾರ್ ಪಾರ್ಕ್ ಮಾಡಿದರೆ ರೈತರಿಗೆ ಅನೂಕೂಲವಾಗಲಿದೆ. ಜಿಂಕೆಗಳು ರೈತರ ಜಮೀನಿನನಲ್ಲಿ ಬೆಳೆ ಹಾಳುಮಾಡುತ್ತಿವೆ. ಈ ಭಾಗದ ರೈತರ ಜೀವನಕ್ಕೂ ಕಷ್ಟವಾಗಿದೆ. ನಿರಂತರವಾಗಿ ಬಾಡಿಗೆ ಬಂದಲ್ಲಿ ರೈತರಿಗೂ ಅನೂಕೂಲವಾಗಲಿದೆ. ಉದ್ಯೋಗವೂ ಸೃಷ್ಟಿ ಆಗಲಿದೆ.

ಆದ್ದರಿಂದ ಯೋಜನೆಯ ಸಾಧಕ-ಭಾದಕಗಳ ಬಗ್ಗೆ ಕಲ್ಪನಾ ವರದಿ ಸಿದ್ಧಪಡಿಸಲು ತಿಳಿಸಿದಾಗ, ಮಂಜುಳರವರು ಉನ್ನತ ಮಟ್ಟದಲ್ಲಿ ಒಂದು ಸಭೆ ನಡೆಸಿ, ಸಭೆಯ ನಿರ್ಣಯ ಮಾಡುವುದು ಅಗತ್ಯವಾಗಿದೆ. ಸಭೆಯ ನಿರ್ಣಯದ ನಂತರ ಸಂಬಂಧಿಸಿದ ಎಲ್ಲಾ ಇಲಾಖೆಗಳು ಸೇರಿ ಸೂಕ್ತ ಕ್ರಮಕೈಗೊಳ್ಳಬಹುದಾಗಿದೆ ಎಂದು ತಿಳಿಸಿದರು.