14th January 2025
Share

TUMAKURU:SHAKTHIPEETA FOUNDATION

ಏಷ್ಯಾಖಂಡದಲ್ಲಿಯೇ ಅತ್ಯಂತ ಹೆಚ್ಚು ತೆಂಗು ಬೆಳೆಯುವ ತುಮಕೂರು ಜಿಲ್ಲೆಯಲ್ಲಿ ವಿಶ್ವ ಮಟ್ಟದ ತೆಂಗು ಮೆಗಾ ಪಾರ್ಕ್ ಅಥವಾ ತೆಂಗು ಸ್ಮಾರ್ಟ್ ವಿಲೇಜ್ ಅಥವಾ ಕೊಕೊನೆಟ್ ಸ್ಪೆಷಲ್ ಎಕನಾಮಿಕ್ ಝೋನ್’ ಸ್ಥಾಪಿಸುವುದು ಅಗತ್ಯವಾಗಿದೆ. 

  ಭಾರತ ದೇಶದಲ್ಲಿ ತೆಂಗು ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ ಭಾರತ ದೇಶದ ಅಂಡಮಾನ ಮತ್ತು ನಿಕೋಬಾರ್, ಚತ್ತೀಸ್‌ಗೃಹ, ಗೋವಾ, ಲಕ್ಷದ್ವೀಪ, ನಾಗಲ್ಯಾಂಡ್, ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಪುದುಚೇರಿ, ತ್ರಿಪುರ, ಒಡಿಸ್ಸಾ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗುಜರಾತ್ ಮತ್ತು ಅಸ್ಸಾಂ ಸೇರಿದಂತೆ 17 ರಾಜ್ಯಗಳಲ್ಲಿ ತೆಂಗು ಬೆಳೆಗಾರರು ಇದ್ದಾರೆ. 

   ಕರ್ನಾಟಕ ರಾಜ್ಯದ 17 ಜಿಲ್ಲೆಗಳಾದ ತುಮಕೂರು, ಹಾಸನ, ಮಂಡ್ಯ, ಮೈಸೂರು, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ. ಬೆಂಗಳೂರು ಗ್ರಾಮಾಂತರ, ರಾಮನಗರ, ದಕ್ಷಿಣ ಕನ್ನಡ, ಚಾಮರಾಜನಗರ, ಶಿವಮೊಗ್ಗ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ  ತೆಂಗು ಬೆಳೆಗಾರರಿದ್ದಾರೆ.

  ‘ ಒಂದು ಜಿಲ್ಲೆ- ಒಂದು ಉತ್ಪನ್ನ ಯೋಜನೆಯಡಿಯಲ್ಲಿ ತುಮಕೂರು ಜಿಲ್ಲೆಗೆ ತೆಂಗು ಆಯ್ಕೆಮಾಡಿರುವುದು. ಜಿಲ್ಲಾದ್ಯಾಂತ ತೆಂಗು ಬೆಳೆಗಾರರಲ್ಲಿ ಒಂದು ಆಶಾಭಾವನೆ ಮೂಡಿದೆ’.  ಬೆಳೆಗೆ ತಕ್ಕ ಬೆಲೆ ಬಂದು ನಾವು ಸಹ ಉತ್ತಮ ಜೀವನ ಸಾಗಿಸಬಹುದು ಎಂಬ ಭ್ರಮೆಯಲ್ಲಿದ್ದಾರೆ. ಕೇಂದ್ರ ಸರ್ಕಾರ, ರಾಜ್ಯಸರ್ಕಾರ ಮತ್ತು ರೈತರು ಪಿಪಿಪಿ ಮಾಡಲ್‌ನಂತೆ ಹೂಡಿಕೆಮಾಡಬೇಕು, ನೀರಾ ಸೇರಿದಂತೆ ಎಲ್ಲಾ ಉತ್ಪನ್ನಗಳ ತಯಾರಿಕೆ ಆಗಬೇಕು, ರೈತರೇ ರಫ್ತು ಮಾಡುವಂತಾಗಬೇಕು. ಹಾಲಿನಿಂದ ಪ್ರತಿ ದಿನ ಡೈರಿಗಳಿಂದ ಹಣ ಪಡೆಯುವ ಹಾಗೆ ತೆಂಗು ಉತ್ಪನ್ನಗಳಿಂದ ಪ್ರತಿದಿನ ರೈತರಿಗೆ ಹಣ ಬರುವಂತಾಗಬೇಕು. ಹಲವಾರು ಲಾಭಿಗಳನ್ನು ಎದುರಿಸಿ ಒಂದು ಭದ್ರವಾದ ತಳಪಾಯ ಹಾಕಲು ಚಿಂತನೆ ನಡೆಸಬೇಕಿದೆ.

  ಏಷ್ಯಾಖಂಡದಲ್ಲಿಯೇ ಅತ್ಯಂತ ಹೆಚ್ಚು ತೆಂಗು ಬೆಳೆಯುವ ತುಮಕೂರು ಜಿಲ್ಲೆಯಲ್ಲಿ ವಿಶ್ವ ಮಟ್ಟದ ತೆಂಗು ಮೆಗಾ ಪಾರ್ಕ್ ಅಥವಾ ತೆಂಗು ಸ್ಮಾರ್ಟ್ ವಿಲೇಜ್ ಅಥವಾ ಕೊಕೊನಟ್ ಎಸ್.ಇ.ಝಡ್’ ನ್ನು  ಸ್ಥಾಪಿಸಲು   ಸೂಕ್ತ ಕ್ರಮಕೈಗೊಳ್ಳಬೇಕಿದೆ.

   ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ ನಿಯಮಿತ ತನ್ನ ಕಂಪನಿ ಬೈಲಾದಲ್ಲಿ ತೆಂಗು ಮತ್ತು ನಾರಿನ ಉತ್ಪನ್ನಗಳ ಬಗ್ಗೆ ಮೌಲ್ಯವರ್ಧಿತ ಉತ್ಪನ್ನಗಳ ಘಟಕ ತೆರೆಯುವುದು ಸೇರಿದಂತೆ ತೆಂಗು ಮರದ ಎಲ್ಲಾ ಪತ್ಪನ್ನಗಳ ಮತ್ತು ಅಭಿವೃದ್ಧಿ ಬಗ್ಗೆ ಕನಸು ಕಂಡಿದೆ, ದುರಧೃಷ್ಠವಶಾತ್ ಈವರೆಗೂ ನಾರಿನ ಉದ್ದಿಮೆ ಬಿಟ್ಟರೆ ಬೇರೆ ಏನು ಮಾಡಿದಂತೆ ಕಾಣುತ್ತಿಲ್ಲ. ಹೆಸರು ಬದಲಾವಣಿ ಮಾಡಿ ತೆಂಗಿಗೆ ಮತ್ತು ನಾರಿಗೆ ಸಂಬಂದಿಸಿದ ಎಲ್ಲಾ ಯೋಜನೆಗಳನ್ನು ಆರಂಭಿಸಬಹುದಾಗಿದೆ.

    ಕೇಂದ್ರ ಸರ್ಕಾರದ ಕಾಯರ್ ಬೋರ್ಡ್, ಕೊಕೊನಟ್ ಡೆವಲಪ್ ಬೋರ್ಡ್ ಮತ್ತು ವಾಣಿಜ್ಯ ಇಲಾಖೆಗಳು ಹೂಡಿಕೆ ಮಾಡಲು ಮುಂದೆ ಬರಬೇಕಿದೆ. ಅವುಗಳಿಗೂ ಕೊಕೊನಟ್ ಎಸ್.ಇ.ಝಡ್ ನಲ್ಲಿ ಜಮೀನು ನೀಡಬೇಕಿದೆ.

   ತುಮಕೂರು ಜಿಲ್ಲೆಯ ಭಾಗಕ್ಕೆ ಮಂಜೂರಾಗಿರುವ ಎಲ್ಲಾ ಪಾರ್ಕ್‌ಗಳ ಕಾರ್ಯಾರಂಭ ಮತ್ತು ಕೊಕೊನಟ್ ಎಸ್.ಇ.ಝಡ್ ಆರಂಬಿಸಿ ಒಂದು ಬ್ರ್ಯಾಂಡ್ ಮಾಡ ಬಹುದಾಗಿದೆ, ಇಡೀ ಜಿಲ್ಲೆಯೇ ತೆಂಗು ಕ್ಲಸ್ಟರ್ ಆಗುವ ಅವಕಾಶಗಳಿವೆ.

ಹೊಸ ಪ್ರಸ್ಥಾವನೆಗಳು.

  1. ರಾಜ್ಯ ಸರ್ಕಾರ ಕೊಬ್ಬರಿ ಬೆಂಬಲ ಬೆಲೆಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ಥಾವನೆ ಬಗ್ಗೆ.
  2. ಕೊಕನಟ್ ಬೋರ್ಡ್ ವತಿಯಿಂದ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ಥಾವನೆ ಬಗ್ಗೆ.
  3. ತಿನ್ನುವ ಕೊಬ್ಬರಿ ಮಂಡಳಿ ಸ್ಥಾಪನೆ ಬಗ್ಗೆ.
  4. ತಿನ್ನುವ ಕೊಬ್ಬರಿ ಭೌಗೋಳಿಕ ಪ್ರದೇಶ ನಿಗದಿ ಪಡಿಸುವ ಬಗ್ಗೆ. 
  5. ಎಣ್ಣೆ ಕೊಬ್ಬರಿ ಮತ್ತು ತಿನ್ನುವ ಕೊಬ್ಬರಿಗೆ ಪ್ರತ್ಯೇಕವಾಗಿ ವೈಜ್ಞಾನಿಕ ಬೆಲೆ ನಿಗದಿಪಡಿಸುವುದು.
  6. ಹಾಲು ಉತ್ಪಾದಕರ ಸಹಕಾರ ಸಂಘಗಳ ಮಾದರಿಯಲ್ಲಿ ನೀರಾ ಉತ್ಪಾದಕರ ಸಹಕಾರ ಸಂಘಗಳು ಮತ್ತು ಫೆಡ್‌ರೇಷನ್ ಸ್ಥಾಪಿಸುವುದು.
  7. ತೆಂಗಿನ  ಎಲ್ಲಾ ಉತ್ಪನ್ನಗಳಿಗೆ ಮೌಲ್ಯವರ್ದಿತ ಬೆಲೆ ದೊರೆಯಲು ತೆಂಗು ಮೆಗಾ ಪಾರ್ಕ್ ಅಥವಾ ಕ್ಲಸ್ಟರ್ ಹಬ್ ಸ್ಥಾಪಿಸುವುದು.
  8. ನಾರಿನ ಎಲ್ಲಾ ಉತ್ಪನ್ನಗಳಿಗೆ ಮೌಲ್ಯವರ್ದಿತ ಬೆಲೆ ದೊರೆಯಲು ನಾರಿನ ಮೆಗಾ ಪಾರ್ಕ್ ಅಥವಾ ಕ್ಲಸ್ಟರ್ ಹಬ್ ಸ್ಥಾಪಿಸುವುದು.
  9. ಎಸ್.ಇ.ಝಡ್ ಮಾದರಿಯಲ್ಲಿ ತೆಂಗು ಮತ್ತು ನಾರಿನ ಉತ್ಪನ್ನಗಳ ರಫ್ತು ಕೈಗಾರಿಕಾ ವಸಾಹತು ಸ್ಥಾಪಿಸುವುದು.
  10. ತೆಂಗು ಬೆಳೆ ಆಧುನಿಕ ಕೃಷಿಗೆ ವಿಶೇಷ ಯೋಜನೆ ಮತ್ತು  ಮೌಲ್ಯವರ್ದಿತ ಉತ್ಪನ್ನಗಳನ್ನು ತಯಾರಿಸಲು ರೈತರಿಗೆ ವಿಶೇಷವಾಗಿ ಮಹಿಳೆಯರಿಗೆ ತರಬೇತಿ ನೀಡಲು ಕಾರ್ಯಕ್ರಮ ರೂಪಿಸಲಾಗುವುದು.
  11. ಎಳನೀರು ಸೇರಿದಂತೆ ತೆಂಗು ಔಷದೀಯ ಗುಣ ಹೊಂದಿದೆ ಇದಕ್ಕೆ ಬ್ರಾಂಡ್ ಮಾಡಿ ವಿಶ್ವದಾದ್ಯಂತ ಮಾರುಕಟ್ಟೆಗೆ ವ್ಯಾಪಕ ಪ್ರಚಾರ ಮಾಡುವುದು.
  12. ತೆಂಗು ಉತ್ಪನ್ನಗಳ ಅತಿಸಣ್ಣ ಉದ್ದಿಮೆದಾರರಿಗೆ ಲಿವಿಂಗ್ ಕಮ್ ವರ್ಕ್ಸ್ ಷೆಡ್ ನಿರ್ಮಿಸುವ ಬಗ್ಗೆ
  13. ಕಾಮನ್ ಫೆಸಿಲಿಟಿ ಯೋಜನೆಗಳ ಬಗ್ಗೆ.
  14. ತೆಂಗು ಬೆಳೆಗಾರರು, ತೆಂಗು ಉತ್ಪನ್ನಗಳ ಉದ್ದಿಮೆದಾರರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಎಸ್.ಪಿ.ವಿ ರಚನೆ ಬಗ್ಗೆ.
  15. ತೆಂಗಿನ ಬೆಳೆ, ವಿವಿಧ ತಳಿ, ಗೊಬ್ಬರ, ರೋಗ, ಔಷಧಿ ಮಣ್ಣು ಪರೀಕ್ಷೆ, ನೀರಿನ ಬಳಕೆ, ಬೆಳೆಗಾರರು,ಪರಿಣಿತ ತಜ್ಞರು, ಉದ್ದಿಮೆದಾರರು ಮತ್ತು ರಫ್ತುದಾರರು ಡೇಟಾ ಬೇಸ್ ಸಿದ್ದಪಡಿಸುವುದು.
  16. ಸ್ಟಾಟ್ ಅಫ್ ಯೋಜನೆಯಡಿ ಎಲ್ಲಾ ಕಂಪನಿಗಳನ್ನು ನೊಂದಾಯಿಸುವ ಬಗ್ಗೆ.
  17. FPC & CPC   ಕಂಪನಿಗಳ ಮಾರ್ಗದರ್ಶಿ ಮತ್ತು ತಾರತಮ್ಯದ ಬಗ್ಗೆ.
  18. ವಿಷನ್ 2030ಸಿದ್ದಪಡಿಸುವ ಬಗ್ಗೆ.
  19. ತುಮಕೂರು ವಿಶ್ವವಿದ್ಯಾಲಯ ತೆಂಗು ನಾರಿನ ಪದವಿ ಕಾಲೇಜು ಮತ್ತು ಸ್ಕಿಲ್ ಡೆವಲಪ್ ಮೆಂಟ್ ಕೋರ್‍ಸ್ ಆರಂಬಿಸಲು ಚಿಂತನೆ ನಡೆಸಿದೆ ವಿವಿಗೆ ಮೂಲಭೂತ ಸೌಲಭ್ಯ ಒದಗಿಸುವ ಬಗ್ಗೆ.
  20. ಕಂಪನಿ, ಫೆಡ್‌ರೇಷನ್ ಮತ್ತು ಸಂಘಗಳಿಗೆ ಸರ್ಕಾರಿ ಜಮೀನು ಮಂಜೂರು ಮಾಡುವ ಬಗ್ಗೆ.
  21. ರಾಜ್ಯದ ಎಲ್ಲಾ ಕೆಎಸ್‌ಆರ್‌ಟಿಸಿ ಬಸ್ ಸ್ಟ್ಯಾಂಡ್‌ಗಳಲ್ಲಿ ತೆಂಗು ಉತ್ಪನ್ನಗಳಿಗೆ ರಿಯಾಯಿತಿ ದರದಲ್ಲಿ ಮಳಿಗೆ ನೀಡುವ ಬಗ್ಗೆ.

ನೆನೆಗುದಿಗೆ ಬಿದ್ದಿರುವ ಯೋಜನೆಗಳು.

1.ರಾಜ್ಯ ಸರ್ಕಾರದ ಕೃಷಿ ಮಾರಾಟ ಇಲಾಖೆ ಯಿಂದ 2012-13  ನೇ ಸಾಲಿನಲ್ಲಿ ತಿಪಟೂರು ತಾಲ್ಲೂಕಿನ ಕೊನೆಹಳ್ಳಿಯ ಬಿದರೆಗುಡಿ ಕಾವಲ್‌ನಲ್ಲಿ  ತೆಂಗು ಟಿಕ್ನಾಲಜಿ ಪಾರ್ಕ್ ಘೋಷಣೆಯಾಗಿವೆ.

2.ರಾಜ್ಯ ಸರ್ಕಾರದ 2012-13  ನೇ ಸಾಲಿನ ಆಯವ್ಯಯ ಪತ್ರದಲ್ಲಿ ತೋಟಗಾರಿಕಾ ಇಲಾಖೆಯಿಂದ ತಿಪಟೂರು, ಕಿಬ್ಬನಹಳ್ಳಿ, ಕುಣಿಗಲ್‌ನಲ್ಲಿ ಮತ್ತು ಮಂಡ್ಯ ಜಿಲ್ಲೆಯಲ್ಲಿ ತೆಂಗು ಉತ್ಪನ್ನ ಉದ್ಯಾನಗಳು ಘೋಷಣೆಯಾಗಿವೆ.

3.ರಾಜ್ಯ ಸರ್ಕಾರದ 2014-15  ನೇ ಸಾಲಿನ ಆಯವ್ಯಯ ಪತ್ರದಲ್ಲ್ಲಿ ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ ನಿಯಮಿತದ ತೆಂಗು ನಾರಿನ ಟೆಕ್ನಲಾಜಿ ಪಾರ್ಕ್ ತುಮಕೂರು ತಾಲ್ಲೂಕಿನ  ವಿಜ್ಞಾನ ಗುಡ್ಡಕ್ಕೆ ಘೋಷಣೆಯಾಗಿದೆ.

4.ರಾಜ್ಯ ಸರ್ಕಾರದ 2013-14 ನೇ ಸಾಲಿನ ಆಯವ್ಯಯ ಪತ್ರದಲ್ಲಿ ಶಿರಾ ತಾಲ್ಲೋಕಿನಲ್ಲಿ ತೆಂಗು ಉತ್ಪನ್ನ ಉದ್ಯಾನ ಘೋಷಣೆಯಾಗಿದೆ.

5.ಕೇಂದ್ರ ಸರ್ಕಾರದಿಂದ ಗುಬ್ಬಿ ಮತ್ತು ತಿಪಟೂರು ತಾಲ್ಲೂಕುಗಳಲ್ಲಿ 4 ಕಾಯರ್ ಕ್ಲಸ್ಟರ್‍ಸ್ ಮಂಜೂರಾಗಿವೆ, ಅವುಗಳಿಗೆ ಮೂಲಭೂತ ಸೌಲಭ್ಯ ಒದಗಿಸುವ ಬಗ್ಗೆ.

6.ನಬಾರ್ಡ್ ವತಿಯಿಂದ ಜಿಲ್ಲೆಯಲ್ಲಿ ಕೆಲವು ಕ್ಲಸ್ಟರ್‌ಗಳು ಮಂಜೂರಾಗಿವೆ.

7.ಕೊಕನಟ್ ಡೆವಲಪ್‌ಮೆಂಟ್ ಬೋರ್ಡ್‌ನಿಂದ ಕೊಬ್ಬರಿ ಗೌಡಾನ್‌ಗೆ ಸಹಾಯಧನ ಪಡೆಯಲು ಬ್ಯಾಂಕ್‌ಗಳು ಸಾಲ ನೀಡುವ ಬಗ್ಗೆ.

8.ರಾಜ್ಯ ಸರ್ಕಾರದ 2020-2021 ನೇ ಸಾಲಿನ ಆಯವ್ಯಯ ಪತ್ರದಲ್ಲಿ  ತಿಪಟೂರಿನಲ್ಲಿ ತೆಂಗುಪಾರ್ಕ್  ಘೋಶಿಸಿದೆ.

ಹೀಗೆ ಏನೇನು ಮಾಡಲು ಸಾಧ್ಯವೋ ಅವುಗಳ ಬಗ್ಗೆ ಹಾಗೂ ಸಾಧ್ಯತೆ ಇರುವ ಎಲ್ಲಾ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಅನುಕೂಲ ಕಲ್ಪಿಸುವ ಹಿನ್ನೆಲೆಯಲ್ಲಿ   ತೆಂಗು ಬೆಳೆಗಾರರ ಪ್ರದೇಶದ ಸಂಸದರು, ಚುನಾಯಿತ ಜನಪ್ರತಿನಿಧಿಗಳು, ಪರಿಣಿತ ತಜ್ಞರು, ಬೆಳೆಗಾರರು ಮತ್ತು ಅಧಿಕಾರಿಗಳು ಚಿಂತನೆ ನಡೆಸುವುದು ಅಗತ್ಯ.