30th September 2023
Share

TUMAKURU:SHAKTHIPEETA FOUNDATION

 ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು, ಬಿದರೆ ಹಳ್ಳಕಾವಲ್‌ನಲ್ಲಿ ಹೆಲಿಕ್ಯಾಪ್ಟರ್ ಉತ್ಪದಾನಾ ಘಟಕ ಶೀಘ್ರವಾಗಿ ಆರಂಭವಾಗಲಿದೆ ಎಂಬ ಸುದ್ದಿ ಗರಿಗೆದರುತ್ತಿದೆ. ವಿವಿಧ ಯುದ್ದ  ಹೆಲಿಕ್ಯಾಪ್ಟರ್‌ಗಳನ್ನು ತಯಾರಿಸಲು ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆ ವರ್ಕ್ ಆರ್ಡರ್ ಕೊಡುವುದು ಒಂದೇ ಬಾಕಿಯಿದ್ದು ಉಳಿದ ಎಲ್ಲಾ ಪ್ರಕ್ರಿಯೇಗಳು ಮುಗಿದಿವೆ ಎಂಬ ವಿಚಾರ ತಿಳಿದು ಬಂದಿದೆ.

2016 ರಲ್ಲಿ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಶಂಕುಸ್ಥಾಪನೆ ಮಾಡಿ, 2018 ರಲ್ಲಿ ಘಟಕ ಆಂಭವಾಗಲಿದೆ ಎಂದು ಘೋಶಿಸಿದ್ದರು. ನಿಗದಿಯಂತೆ 2018 ರಲ್ಲಿ ಒಂದು ಹೆಲಿಕ್ಯಾಪ್ಟರ್‌ನ್ನು ಜೋಡಿಸಿ, ಹಾರಿಸಿ ದಾಖಲೆಯಲ್ಲಿ ಘಟಕ ಆರಂಭವಾಗಿದೆಯಂತೆ.

 ವಿವಿಧ ಪ್ಯಾಕೇಜ್‌ಗಳ ಕಾಮಗಾರಿಗಳು ಇನ್ನೂ ಪ್ರಗತಿಯ ಹಂತದಲ್ಲಿವೆ. ಕೆಲವು ಪ್ಯಾಕೇಜ್‌ಗಳು ಆರಂಭವಾಗಬೇಕಿವೆ. ಆದರೂ ಘಟಕ ಆರಂಭವಾಗಲು ಬೇಕಿರುವಷ್ಟು ಕಾಮಗಾರಿಗಳು ಪೂರ್ಣಗೊಂಡಿವೆಯಂತೆ.

ಮೋದಿಯವರು ಶಂಕುಸ್ಥಾಪನೆ ದಿವಸ ಘೋಷಣೆ ಮಾಡಿದಂತೆ ಸ್ಥಳೀಯ ರೈತರ ಮಕ್ಕಳಿಗೂ ಉದ್ಯೋಗ ದೊರೆಯಲಿದೆ, ಎಂಬ ಹೇಳಿಕೆಯ ಆಧಾರದ ಮೇಲೆ ಸ್ಥಳೀಯ ನಿರುದ್ಯೋಗಿಗಳು ಹಾಗೂ ಹೆಚ್.ಎ.ಎಲ್.ಉದ್ಯೋಗ ಆಕಾಂಕ್ಷಿಗಳು ಜಾತಕ ಪಕ್ಷಿಗಳಂತೆ ಕಾಯುತ್ತಾ ಕುಳಿತಿದ್ದಾರೆ.

ಕೇಂದ್ರ ರಕ್ಷಣಾ ಸಚಿವರಾದ ಶ್ರೀ ರಾಜನಾಥಸಿಂಗ್‌ರವರು ಶೀಘ್ರವಾಗಿ ಘಟಕ ಆರಂಭಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಶೀಘ್ರವಾಗಿ ಸಭೆ ನಡೆಸಿ ಸ್ಥಳೀಯ ರೈತ ಸಂತ್ರಸ್ಥರ ಬೇಡಿಕೆ ಹೀಡೇರಿಸಲು ಅಗತ್ಯಕ್ರಮ ಕೈಗೊಳ್ಳಬೇಕಿದೆ.

ಅಂದುಕೊಂಡಂತೆ ಆದರೆ 2021 ರಲ್ಲಿ ಹೆಚ್.ಎ.ಎಲ್. ಘಟಕ ಲೋಕಾರ್ಪಣೆಯಾಗಲಿದೆ ಎಂಬ ಶುಭ ಸುದ್ದಿಯಿದೆ.

About The Author