12th September 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಡ್ಯಾಂ ವ್ಯಾಪ್ತಿಯ ಸರ್ಕಾರಿ ಜಮೀನಿನಲ್ಲಿ ವಾಟರ್ ಯೂನಿವರ್ಸಿಟಿ ಮಾಡಲು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ಆಗಿನ ಮುಖ್ಯ ಮಂತ್ರಿಯವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮನವಿ ಮೇರೆಗೆ ಪತ್ರ ಬರೆದಿದ್ದು ಇತಿಹಾಸ.

ಕಡತಕ್ಕೆ ಉತ್ತಮವಾದ ವರದಿ ನೀಡಿದ ಭಧ್ರಾಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಶ್ರೀ ಶಿವಕುಮಾರ್‌ರವರು ವಿವಿ ಕನಸು ಕಂಡಿದ್ದರು. ಕಡತ ಸರ್ಕಾರದ ಹಂತದಲ್ಲಿ ನನೆಗುದಿಗೆ ಬಿದ್ದಿತ್ತು. ನಂತರ ಚಿತ್ರದುರ್ಗದ ಮಠದ ಶ್ರೀಗಳು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆದು ವಿವಿ ಮಾಡಲು ಸಲಹೆ ನೀಡಿದ್ದರು.

ಸ್ನೇಹಿತ ಶ್ರೀ ರಕ್ಷಿತ್‌ರವರು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ರಾಮಲುರವರಿಂದ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆಸಿದ್ದರು.

 ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರಿಗೆ ಪತ್ರಬರೆದು ವಾಟರ್ ಯೂನಿವರ್ಸಿಟಿ ಮಾಡಲು ಮನವಿ ಮಾಡಿದ್ದರು. ಪ್ರಧಾನಿಯವರು ವರದಿ ನೀಡಲು ಕರ್ನಾಟಕ ಸರ್ಕಾರಕ್ಕೆ ಸೂಚಿಸಿದ್ದಾರೆ.

ಐಐಟಿ ಮಾದರಿಯಲ್ಲಿ ಕೇಂದ್ರ ಸರ್ಕಾರವೇ ವಾಟರ್ ಯೂನಿವರ್ಸಿಟಿ ಮಾಡಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಆತ್ಮೀಯ ಸ್ನೇಹಿತರಾದ ಶ್ರೀ ಮೊಹನ್‌ರವರು ಉತ್ತಮವಾದ ಸಲಹೆ ನೀಡಿದ್ದಾರೆ. ಶ್ರೀ ಮನೋಹರ್‌ರವರು ಸೂಕ್ತ ಪ್ರಸ್ತಾವನೆ ಸಲ್ಲಿಸಲು ಅಗತ್ಯ ಕ್ರಮಕೈಗೊಳ್ಳಲು ದಿನಾಂಕ:17.12.2020 ರಂದು ಸಮಾಲೋಚನೆ ಮಾಡಲಾಗಿದೆ.

ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ ಶ್ರೀ ರಾಕೇಶ್‌ಸಿಂಗ್‌ರವರು ಅಗತ್ಯ ಕ್ರಮಕೈಗೊಳ್ಳ ಬೇಕಿದೆ.

ಕೇಂದ್ರ ಸರ್ಕಾರ  ಅಂತರರಾಷ್ಟ್ರೀಯ ಮಟ್ಟದ 200 ವಿಶ್ವವಿದ್ಯಾನಿಲಯ ಸ್ಥಾಪಿಸಲು ಘೋಷಣೆ ಮಾಡಿದೆ. ನೀರೇ ಎಲ್ಲಾ ಆಗಿರುವಾಗ ನೀರಿನ ರಕ್ಷಣೆ, ಸಂರಕ್ಷಣೆ, ಬಳಕೆಗಾಗಿ ವಿವಿ ಸ್ಥಾಪನೆ ಅತ್ಯಗತ್ಯವಾಗಿದೆ. ಕೂಡಲೇ ರಾಜ್ಯಮಟ್ಟದ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿರವರಾದ ಶ್ರೀಮತಿ ಶಾಲಿನಿರಜನೀಶ್‌ರವರು ಕಾರ್ಯೋನ್ಮುಖರಾಗಬೇಕಿದೆ.

  ಕೇಂದ್ರ ಜಲಶಕ್ತಿ ಸಮಿತಿಯ ಸದಸ್ಯರು ಹಾಗೂ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಶೀಘ್ರವಾಗಿ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ಮುಂದಿನ ವಾರ ರಾಜ್ಯ ಮಟ್ಟದ ಅಧಿಕಾರಿಗಳ ಸಭೆ ನಡೆಸಲು ಚಿಂತನೆ ಮಾಡಿದ್ದಾರೆ. ಇನ್ನೊಬ್ಬ ಕೇಂದ್ರ ಜಲಶಕ್ತಿ ಸಮಿತಿಯ ಸದಸ್ಯರು ಹಾಗೂ ಹಾವೇರಿ ಲೋಕಸಭಾ ಸದಸ್ಯರಾದ ಶ್ರೀ ಶಿವಕುಮಾರ್ ಉದಾಸಿರವರು ಸಹ ಸಭೆಗೆ ಭಾಗಿಯಾಗುವ ನೀರಿಕ್ಷೆಯಿದೆ.