25th July 2024
Share

TUMAKURU:SHAKTHIPEETA FOUNDATION

 ಇಂಡಿಯನ್ ಕೌನ್ಸಿಲ್ ಫ಼ಾರ್ ಅಗ್ರಿಕಲ್ಚರ್ ರೀಸರ್ಚ್ ಸಂಸ್ಧೆಯ ಅಂಗಸಂಸ್ಧೆಯಾದ ಕೇಂದ್ರಸರಕಾರದ ಒಣಬೇಸಾಯ ಸಂಶೋಧನೆ ಸಂಸೆ  Þ[Central Research Institute for Dryland Agriculture  (CRIDA)  ಯು ದೇಶದಲ್ಲಿನ ಒಣಬೇಸಾಯ ಮತ್ತು ಮಳೆನೀರು ಬೇಸಾಯ ಪದ್ದತಿಯಲ್ಲಿ ಮೂಲ ವಿಧಾನದ ಅಭ್ಯಾಸಗಳಲ್ಲಿ ಹಾಗೂ ಅನ್ವವಿಕ ಸಂಶೋದನೆ ಮೂಲಕ [basic and applied research] ಮೂಲಕ ಮಧ್ಯಕರ್ನಾಟಕ ಪ್ರದೇಶದ ರೈತ ರಿಗೆ ಒಣಬೇಸಾಯ ಕೇಂದ್ರಸರಕಾರದ ಒಣಬೇಸಾಯ ಸಂಶೋಧನೆ ಸಂಸ್ಧೆ ಮೂಲಕ  [Central Research Institute for Dryland Agriculture (CRIDA) ವ್ಯವಸಾಯದಲ್ಲಿ ಹೊಸ ಪದ್ದತಿಯಲ್ಲಿನ ಆಚರಣೆ ಪರಿಚಯಿಸುತ್ತಿದೆ.  ಮುಂದುವರೆದಂತೆ ಈ  ಸಂಸ್ದೆಯು ಒಣಭೂಮಿಯಲ್ಲಿನ ನೈಸರ್ಗಿಕ ವಾಗಿರುವ ಉತ್ಪತ್ತಿ ಗುಣ ಹೆಚ್ಚಿಸುವ ಕ್ರಮಗಳು, ಕೌಶಲ್ಯವಿಧಾನಗಳ ಅಭಿವೃಧ್ಧಿಪಡಿಸುವ  ಮೂಲಕ ಹೆಚ್ಚುಕಾಲ  ಸಂರಕ್ಷಣೆ, ಸಮರ್ಥವಾಗಿ ಒಣಭೂಮಿ ವ್ಯವಸಾಯಕ್ಕೆ ಬಳಸುವ ರೀತಿ ವಿಧಾನಗಳು,ಮಳೆನೀರಿನ ಸಂಪನ್ಮೂಲ ಕ್ರೋಡೀಕರಿಸುವ ವಿಧಾನಗಳು, ಬೆಳೆ ಪದ್ದತಿಗಳು, ಅದರಲ್ಲೂ ಓಣ ಭೂಮಿಯ ತೇವಾಂಶದ ಅಬ್ಯಾಸ  ಹೀಗೆ  ರೈತರು ಅಳವಡಿಸುಕೊಳ್ಳಬಹುದಾದ ವ್ಯವಸಾಯ ಪ್ರಾಕ್ಷಿಕೆ ಮೂಲಕ ಹಲವಾರು ವ್ಯವಸಾಯ ಮಾಡೆಲ್‌ಗಳನ್ನು ಪರಿಚಯಿಸಲಾಗುತ್ತಿದೆ.

                ಮಧ್ಯಕರ್ನಾಟಕ ಹೆಚ್ಚಿನ ಭಾಗದಲ್ಲಿ ಅದರಲ್ಲೂ ತುಮಕೂರು,ಕೋಲಾರ,ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಜಿಲ್ಲೆಗಳಲ್ಲಿ, ರಾಗಿ,ಕಡ್ಲೆಕಾಯಿ, ಬೆಳೆಯುವುದರಿಂದ, ಈ ರೈತರಿಗೆ ಕೇಂದ್ರಸರಕಾರದ ಒಣಬೇಸಾಯ ಸಂಶೋಧನೆ ಸಂಸೆ Central Research Institute for Dryland Agriculture (CRIDA)       ಮೂಲಕ ವ್ಯವಸಾಯದಲ್ಲಿ ಹೊಸ ಪದ್ದತಿಯಲ್ಲಿನ ಅಭ್ಯಾಸಗಳನ್ನು ಪರಿಚಯಿಸುವ ಅಗತ್ಯದೆ ಇದೆ. ಕರ್ನಾಟಕದಲ್ಲಿ ಈ ಸಂಸ್ಧೆಯನ್ನು ಪ್ರಾರಂಭಿಸಿದರೆ ಒಣಬೇಸಾಯ ಅವಲಂಬಿಸಿರುವ ಅದರಲ್ಲೂ ತುಮಕೂರು ಜಿಲ್ಲೆಯ ಸಿರಾ,ಮಧುಗಿರಿ,ಪಾವಗಡ  ಕೊರಟಗೆರೆ, ತಾಲ್ಲೂಕಿನ ರೈತರಿಗೆ ಒಣಬೇಸಾಯ ಮತ್ತು ಮಳೆನೀರು ಬೇಸಾಯ ಪದ್ದತಿಯಲ್ಲಿ ಮೂಲ ವಿಧಾನದ ಅಭ್ಯಾಸಗಳಲ್ಲಿ  ಸದರಿ ಸಂಸ್ಧೆ ಅಭಿವೃಧ್ಧಿ ಪಡಿಸಿರುವ ಹಲವಾರು  ವ್ಯವಸಾಯ ಮಾಡೆಲ್ ಗಳನ್ನು ಅಳವಡಿಸಿಕೊಂಡು  ಆರ್ಥಿಕ ಸದೃಡತೆ ಮೂಲಕ ಭರವಸೆಯ ಜೀವನ ಕಂಡುಕೊಳ್ಳಬಹುದಾಗಿದೆ. 

ಇಂತಹ ಕ್ರಮಗಳಿಂದ ಗ್ರಾಮೀಣ ಸಂಪತ್ತು ಬೆಳೆದು ದೇಶದ ಜಿಡಿಪಿ ಬೆಳವಣಿಗೆ ಆಗಲು ಸಹಕಾರಿ ಆಗುತ್ತದೆ. ಇಂತಹ ಸಂಸ್ಧೆಯನ್ನು ತುಮಕೂರು ಜಿಲ್ಲೆಯ ಸಿರಾ,ಮಧುಗಿರಿ,ಪಾವಗಡ  ಕೊರಟಗೆರೆ, ತಾಲ್ಲೂಕಿನ  ಯಾವುದಾದರು ಭಾಗದಲ್ಲಿ ಪರಿಚಯಿಸಲು ಕೇಂದ್ರಸರಕಾರದ ಕೃಷಿಸಚಿವಾಲಕ್ಕೆ ರಾಜ್ಯಸರಕಾರದಿಂದ ಆಗ್ರಹಿಸಬೇಕೆಂದು, ಈ ಹಿಂದೆ ೮/೨೦೧೩ ರಲಿ ಹಾಲಿ ಸಂಸದರು ಶ್ರೀ ಜಿಎಸ್.ಬಸವರಾಜ್ ರವರು ಈ ಹಿಂದಿನ ಮುಖ್ಯಂತ್ರಿಗಳಾಗಿದ್ದ ಸನ್ಮಾನ್ಯ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆಗ್ರಹಿಸಲಾಗಿದ್ದರು. ಪುನ: ಹಿಂದಿನ ವರ್ಷ ಅಂದರೆ ಜುಲೈ ೨೦೧೯ ರಲ್ಲಿ ಕೇಂದ್ರಸರಕಾರದ ಕೃಷಿ ಸಚಿವರು ಸನ್ಮಾನ್ಯ ಶ್ರೀ ನರೇಂದ್ರ ಸಿಂಗ್ ತೊಮರ್ ಅವರಿಗೆ ಪತ್ರಬರೆದು ಈ ಬಗ್ಗೆ ಗಮನ ಸೆಳೆದಿದ್ದು ಕಂಡು ಬಂದಿದ್ದು,ಸೆಪ್ಟೆಂಬರ್ ೨೦೧೯ ಕೇಂದ್ರಸರ್ಕಾರದಿಂದ ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಮುಂದಿನ ಕ್ರಮವಹಿಸುವುದಾಗಿ ತಿಳಿಸಿರುವುದು ಮಹಿತಿ ಇದೆ. ಈ ಬಗ್ಗೆ ರಾಜ್ಯಸರಕಾರ ದಿಂದ ಕೇಂದ್ರಸರಕಾರಕ್ಕೆ ಆಗ್ರಹಕ್ಕೆ ಅನುಸರಣೆ ಕ್ರಮಬೇಕಿದೆ.                                                                      

                                                                                                     ಟಿ.ಆರ್. ರಘೋತ್ತಮ ರಾವ್