28th March 2023
Share

TUMAKURU:SHAKTHIPEETA FOUNDATION

ಸರ್ಕಾರಿ ಪಾಠಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳು, ದೇವಾಲಯಗಳು, ಅಂಗನವಾಡಿಗಳು, ಹೀಗೆ ಯಾವುದೇ ಸರ್ಕಾರಿ  ಯೋಜನೆಗಳಿಗೆ ಭೂಮಿ ಧಾನ ಮಾಡಿರುವವರ ಜಿಐಎಸ್ ಲೇಯರ್ ಮಾಡುವುದು ಅಗತ್ಯವಾಗಿದೆ.

 ಹೆಸರು ಹೇಳಲು ಇಚ್ಚಿಸಿದ ರಾಜ್ಯ ಮಟ್ಟದ ಅಧಿಕಾರಿಯೊಬ್ಬರೂ ನೀಡಿದ ಮಹತ್ತರವಾದ ಸಲಹೆ ಇದೆ. ಸಲಹೆಯಷ್ಟೆ ಅಲ್ಲ ಅಂತಹ ಕುಟುಂಬವರನ್ನು ಗುರುತಿಸಿ ಸನ್ಮಾನ ಮಾಡಬೇಕು, ಅದಕ್ಕೆ ಅಗತ್ಯವಿರುವ ಆರ್ಥಿಕ ನೆರವನ್ನು ಸಂಗ್ರಹಿಸಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

 ಜೊತೆಗೆ ಸಾಹಿತ್ಯ ಪ್ರಾವೀಣ್ಯತೆ ಪಡೆದಿರುವ ಇಬ್ಬರು ಇಂಜಿನಿಯರ್‌ಗಳ ಬರವಣಿಗೆ ದಾನವನ್ನು ಮಾಡಿಸಲಾಗುವುದು ಎಂದು ತಿಳಿಸಿದ್ದಾರೆ. ಇದು ಒಂದು ಒಳ್ಳೆಯ ಸಲಹೆಯಾಗಿದೆ.

 ಒಂದು ಪತ್ರಿಕೆಯಲ್ಲಿ ನಾನು ಓದಿದ ಅಂಶವೊಂದು ನನೆಪಿಗೆ ಬಂತು. ಒಂದು ಶಾಲೆಗೆ ಭೂಧಾನ ಮಾಡಿದ ಒಂದು ಕುಟುಂಬದ ಆಸ್ತಿಯಲ್ಲಿಯೇ, ಇನೊಬ್ಬ ಭೂಗಳ್ಳ ಒತ್ತುವರಿ ಮಾಡಿ ಮನೆ ಕಟ್ಟಿಕೊಂಡಿರುವಂತಹ ಮಹಾನ್ ಸಾಧಕರು ಇದ್ದಾರಂತೆ.

ಭೂಮಿಧಾನ ನೀಡಿದವರ ಕುಟುಂಬಕ್ಕೆ ‘ಸನ್ಮಾನ’ ಮಾಡುವುದರ ಜೊತೆಗೆ, ಅಂತಹ ಭೂಮಿಯಲ್ಲಿ ಒತ್ತುವರಿ ಮಾಡಿಕೊಂಡಿರುವವರಿಗೆ ‘ಛೀಮಾರಿ’ ಹಾಕಲೇ ಬೇಕಲ್ಲವೇ? ಅದೇನೆ ಇರಲಿ ತುಮಕೂರು ಜಿಐಎಸ್‌ನಲ್ಲಿ ಭೂಧಾನ ಲೇಯರ್ ಮಾಡಿಸುವ ಮೂಲಕ ಯೋಜನೆಗೆ ಚಾಲನೇ ನೀಡಬೇಕಾಗಿದೆ.

ತುಮಕೂರು ಜಿಲ್ಲೆಯ  ಅಧಿಕಾರಿಗಳು, ತಮ್ಮ ಇಲಾಖೆಗಳ ಯೋಜನೆಗಳಿಗೆ ಭೂಮಿಧಾನ ಮಾಡಿರುವವರ ಇತಿಹಾಸ ಸಹಿತ ಜಿಐಎಸ್ ಲೇಯರ್ ಮಾಡಲು ಕ್ರಮಕೈಗೊಳ್ಳಲು, ತುಮಕೂರು ಜಿಲ್ಲಾ ದಿಶಾ ಸಮಿತಿಗೆ ಸಲಹೆ ನೀಡಲಾಗಿದೆ.

ಈ ಯೋಜನೆ ಬಗ್ಗೆ ಅಭಿಪ್ರಾಯಗಳು ಮತ್ತು ಮಾಹಿತಿ ಇದ್ದಲ್ಲಿ ನೀಡಲು ಮನವಿ.