TUMAKURU:SHAKTHIPEETA FOUNDATION
ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿಪೀಠಗಳ ಕ್ಯಾಂಪಸ್‌ನಲ್ಲಿ ಸುಮಾರು ಒಂದು ಎಕರೆ ಜಾಗದಲ್ಲಿ ಭಾರತ ನಕ್ಷೆ ಬರಲಿದೆ. ಭಾರತ ವಾಸ್ತು ಪ್ರಕಾರ ಇಲ್ಲ. ಉತ್ತರದಲ್ಲಿ ಹಿಮಾಲಯ ಪರ್ವತವಿದ್ದರೆ, ದಕ್ಷಿಣ ಸೇರಿದಂತೆ ಮೂರು ಕಡೆಯೂ ನೀರು ಇದೆ.
ಭೂಮಿಯ ಮೇಲೆ ಭಾರತ ನಕ್ಷೆಯನ್ನು ಗುರುತಿಸಿ, ನಂತರ ಡ್ರೋನ್ ಸರ್ವೆಮಾಡಿಸಿ, ಪುನಃ ತಾಳೆಹಾಕಿ ನಕ್ಷೆಯನ್ನು ಅಂತಿಮಗೊಳಿಸಲಾಗುತ್ತಿದೆ.
ಭೂಮಿಯ ಮೇಲೆ ಕೃತಕವಾಗಿ ನಿರ್ಮಿಸಿರುವ ಅರಬ್ಭಿ ಸಮುದ್ರ, ಹಿಂದೂ ಮಹಾಸಾಗರ ಮತ್ತು ಬಂಗಾಳಕೊಲ್ಲಿಗಳ ತೂಬಿನ ಮಟ್ಟ ಸಮುದ್ರ ಮಟ್ಟದಿಂದ 604.40 ಮೀ ಎತ್ತರವಿದೆ. ಇದಕ್ಕೆ ಅನುಗುಣವಾಗಿ ಕೃತಕ ಭಾರತದ ನಕ್ಷೆಯನ್ನು ಸಮುದ್ರ ಮಟ್ಟದಿಂದ ಸುಮಾರು 605 ಮೀ ಎತ್ತರಕ್ಕೆ ಸಮತಟ್ಟು ಮಾಡುವ ಕೆಲಸ ಬಹುತೇಕ ಈ ವಾರ ಪೂರ್ಣಗೊಳ್ಳಲಿದೆ.
ಇದರ ಜೊತೆಗೆ ಭಾರತ ನಕ್ಷೆಯ ಗಡಿ ಭಾಗದಲ್ಲಿ ’ಆವರಣ ಗೋಡೆ’ಯನ್ನು ಭೂಮಿಯ ಮಟ್ಟದಿಂದ ಸುಮಾರು ಎರಡು ಅಡಿ ಎತ್ತರ ಅಂದರೆ ಸುತ್ತಲೂ ಕುಳಿತು ಕೊಳ್ಳುವ ಹಾಗೆ ನಿರ್ಮಾಣ ಮಾಡಲು ಉದ್ದೇಶಿಸಿರುವುದರಿಂದ ತೂಬಿನ ಮಟ್ಟದಿಂದ ಒಟ್ಟು ಒಂದು ಮೀಟರ್ ಎತ್ತರವಾಗಲಿದೆ.
ಎಂತಹ ಪ್ರವಾಹದ ಸಂದರ್ಭದಲ್ಲೂ ಭಾರತ ನಕ್ಷೆಯ ಮೇಲೆ ಮಳೆ ನೀರು ನುಗ್ಗಬಾರದು ಎಂಬ ಚಿಂತನೆ ಕಾಡುತ್ತಿದೆ. ಸುಮಾರು ೫೮೩ ಕ್ಯುಸೆಕ್ಸ್ ಮಳೆ ನೀರು ಇಲ್ಲಿ ಹರಿಯಲಿದೆ. ಭಾರತ ನಕ್ಷೆಯ ಸುತ್ತಲೂ ನಿರ್ಮಾಣ ಮಾಡುತ್ತಿರುವ ರಿಂಗ್ ರಸ್ತೆಯು ಈಶಾನ್ಯ ಭಾಗದಲ್ಲಿ ಸಮುದ್ರ ಮಟ್ಟದಿಂದ ಸುಮಾರು 605 ಮೀ ಎತ್ತರಕ್ಕೆ ನಿಗದಿಗೊಳಿಸಲು ಚಿಂತನೆ ನಡೆಸಲಾಗಿದೆ.
ಒಂದು ವೇಳೆ ಯಾವುದೋ ಒಂದು ವರ್ಷ ಅತಿ ಹೆಚ್ಚು ಹುಚ್ಚು ಮಳೆಯಾದಾಗ ಪ್ರವಾಹದ ಹೆಚ್ಚುವರಿ ನೀರು ವೃತ್ತದ ಈಶಾನ್ಯ ಭಾಗದಿಂದ ಹರಿಯುವ ಹಾಗೆ ಮಾಡುವ ಬಗ್ಗೆಯೂ ಚಿಂತನೆ ಆರಂಭವಾಗಿದೆ.
ಭಾರತ ನಕ್ಷೆಯಲ್ಲಿ ಪ್ರಮುಖ ನದಿಗಳು ಹುಟ್ಟುವ ಜಾಗ ಮತ್ತು ಅವುಗಳು ಹರಿದು ಸಮುದ್ರ ಸೇರುವ ಜಾಗದಲ್ಲಿ ನಕ್ಷೆಯ ಗಡಿಯಲ್ಲಿ ಪೈಪ್ ಹಾಕಲು ಉದ್ದೇಶಿಸಲಾಗಿದೆ. ಜೊತೆಗೆ ಸುತ್ತಲೂ ನೀರು ಹರಿಯುವ ಹಾಗೆ ಹೊಳೆ ಮಾಡಲು ಯೋಚಿಸಲಾಗಿದೆ. ಇಲ್ಲಿಂದಲೂ ಪ್ರವಾಹದ ಸಂದರ್ಭದಲ್ಲಿ ನೀರು ಭಾರತ ನಕ್ಷೆಯ ಒಳಭಾಗಕ್ಕೆ ನುಗ್ಗದಂತೆ ಎತ್ತರದ ನಿಗದಿ ಬಗ್ಗೆಯೂ ಚಿಂತನೆ ಆರಂಭವಾಗಿದೆ.
‘ನಂತರ ದೇಶದ ನದಿಜೋಡಣೆ ಪ್ರಾತ್ಯಕ್ಷಿಕೆಯನ್ನು ನಕ್ಷೆಯಲ್ಲಿ ಗುರುತಿಸುವ ಕೆಲಸ ಆರಂಭವಾಗಲಿದೆ. ಕಾಕತಳೀಯ ಎಂಬಂತೆ ಕರ್ನಾಟಕ ರಾಜ್ಯ ಸರ್ಕಾರವೂ ನದಿ ಜೋಡಣೆಯ ಸಂಪೂರ್ಣ ಮಾಹಿತಿ ಕಲೆಹಾಕುತ್ತಿದೆ. ನಮ್ಮ ಶಕ್ತಿಪೀಠ ಫೌಂಡೇಷನ್ ಸಹ ನದಿ ಜೋಡಣೆಯ ಪ್ರಾತ್ಯಕ್ಷಿಕೆಗೆ ಲೈವ್ ಆರ್ & ಡಿ ಮಾಡುತ್ತಿದೆ. ಕರಾರು ವಕ್ಕಾದ ತಾಜಾ ಮಾಹಿತಿ ದೊರೆಯುವ ನೀರೀಕ್ಷೆಯಿದೆ’
ಆಸಕ್ತರು ಸ್ಥಳವೀಕ್ಷಣೆ ಮಾಡಿ, ಉತ್ತಮ ಸಲಹೆ ನೀಡಲು ಮನವಿ ಮಾಡಲಾಗಿದೆ.