25th April 2024
Share
SHAKTHIPEETA CAMPUS

TUMAKURU:SHAKTHIPEETA FOUNDATIN

ಶಕ್ತಿಪೀಠ ಕ್ಯಾಂಪಸ್ 1 ನೇ ಸಭೆ, ದಿನಾಂಕ:29.12.2020

ಕರ್ನಾಟಕ ರಾಜ್ಯದ 2020-2021 ನೇ ಸಾಲಿನ ಆಯವ್ಯಯದಲ್ಲಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮನವಿ ಮೇರೆಗೆ, ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಕನಸಿನ ಜಲಗ್ರಾಮ ಕ್ಯಾಲೆಂಡರ್ ಯೋಜನೆಯನ್ನು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಘೋಷಣೆ ಮಾಡಿದ್ದರು.

ಜಲಗ್ರಾಮ ಕ್ಯಾಲೆಂಡರ್ ಒಂದು ದೊಡ್ಡ ಸುದ್ದಿಯನ್ನೆ ಮಾಡಿತ್ತು. ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ರವರೊಂದಿಗೆ ಬಸವರಾಜ್‌ರವರು ಸಮಾಲೋಚನೆ ನಡೆಸಿದ್ದರು.

 ಈ ಯೋಜನೆಯನ್ನು ರಾಜ್ಯದಲ್ಲಿ ಯಾವ ಇಲಾಖೆ ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿತ್ತು. ಗ್ರಾಮೀಣಾಭಿವೃದ್ಧಿ ಇಲಾಖೆ ಅಥವಾ ಸಣ್ಣ ನೀರಾವರಿ ಇಲಾಖೆ ಅಥವಾ ಜಲಸಂಪನ್ಮೂಲ ಇಲಾಖೆ, ಈಗ ಏನಾಗಿದೆ ಎಂಬ ವಿಚಾರ ನನಗೂ ಗೊತ್ತಿಲ್ಲ.

ದಿನಾಂಕ:20.12.2020 ರಂದು ಶ್ರೀ ವೇದಾನಂದಾಮೂರ್ತಿಯವರು ದೂರವಾಣಿ ಕರೆ ಮಾಡಿ ಸಾರ್ ನಮ್ಮ ಸ್ನೇಹಿತರು ನಿಮ್ಮೊಂದಿಗೆ ಮಾತನಾಡಬೇಕು.ಎಲ್ಲಿದ್ದಿರಾ ಸಾರ್, ತುಮಕೂರು, ಬೆಂಗಳೂರು, ಊರೋ ಅಥವಾ ಶಕ್ತಿಪೀಠನೋ ಅಂದಾಗ ನಾನು ನಕ್ಕು ಶಕ್ತಿಪೀಠ ಅಂದೆ. ಅಲ್ಲಿಗೆ ಬರುತ್ತೇವೆ ಎಂದರು ಬನ್ನಿ ಎಂದು ಹೇಳಿದೆ.  

VEDANANDMURTHY, SRIKANTH, PRABHU & KUNDARANAHALLI RAMESH AT SHAKTHIPEETA CAMPUS

ಅವರ ಜೊತೆ ಇಬ್ಬರು ಸ್ನೇಹಿತರು ಬಂದರು. ನಮ್ಮ ಕ್ಯಾಂಪಸ್‌ನ ಕಾಮಗಾರಿ ನಡೆಯುತ್ತಿತ್ತು. ನಮ್ಮ ಕ್ಯಾಂಪಸ್ ರಿಂಗ್ ರಸ್ತೆಯನ್ನು ಒಂದು ಸುತ್ತು ಹಾಕಿಸಿ ಯೋಜನೆಯ ಬಗ್ಗೆ ಮಾಹಿತಿ ನೀಡಿದಾಗ. ಅವರಿಗೆ ವಿಚಿತ್ರ ಎನಿಸಿರ ಬಹುದು.

 ಸಾರ್ ನಾವು ಜಿಐಎಸ್ ಬಗ್ಗೆ ಕೆಲಸ ಮಾಡಿದ್ದೇವೆ. ಸರ್ಕಾರದ ಯಾವ ಇಲಾಖೆಯ ಯೋಜನೆಗಳನ್ನು ಮಾಡಿದ್ದೇವೆ ಎಂಬ ವಿಷಯ ಹಂಚಿಕೊಂಡರು. ನಂತರ ಅವರು ಮಾತು ಆರಂಭಿಸಿದ್ದು ಜಲಗ್ರಾಮ ಕ್ಯಾಲೆಂಡರ್ ಯೋಜನೆ ಬಗ್ಗೆ. ಇದೊಂದು ತುಂಬಾ ಒಳ್ಳೆಯ ಪರಿಕಲ್ಪನೆ, ಯಾವ ಹಂತದಲ್ಲಿದೆ ಎಂದಾಗ ನನಗೂ ಆಶ್ಚರ್ಯ ಆಯಿತು.

 ನಾನೂ ಸುಮಾರು ಹತ್ತಾರು ಜನರೊಂದಿಗೆ ಮಾತನಾಡಿದ್ದೇನೆ. ಈ ಯೋಜನೆ ಜಾರಿ ಮಾಡುವುದು ಬಹಳ ಕಷ್ಟದ ಕೆಲಸ. ಮಾತು ಆಡಿದಷ್ಟು ಸುಲಭವಲ್ಲ, ನಮ್ಮ ಸತ್ಯಾನಂದ್ ಮತ್ತು ಅವರ ಒಂದು ತಂಡ ಒಂದು ಗ್ರಾಮದ ಮಾದರಿ ಯೋಜನೆಯಾಗಿ ಮಾಡಿದ್ದು, ಇಲಾಖೆಗಳ ಮಾಹಿತಿ ಸಂಗ್ರಹಕ್ಕೆ ಪಟ್ಟ ಶ್ರಮ ನನಗೆ ಗೊತ್ತಿತ್ತು.

ಜಲಾಮೃತ ಮತ್ತು ಅಟಲ್ ಭೂಜಲ್ ಯೋಜನೆಯಡಿ ಆರಂಭಿಸಲು ಮನವಿ ಮಾಡಿದಾಗ ಎಲ್ಲರೂ ಸಕರಾತ್ಮಕವಾಗಿ ಸ್ಪಂದಿಸಿದರು.   ತುಮಕೂರು ಜಿಲ್ಲಾ ದಿಶಾ ಸಮಿತಿ ಕಳೆದ ಸಭೆಯಲ್ಲಿ, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಜೆ.ಸಿ.ಪುರ ಗ್ರಾಮಪಂಚಾಯಿತಿಯನ್ನು ಫೈಲಟ್ ಯೋಜನೆಯಾಗಿ ಮಾಡಿರುವುದಾಗಿ ಅಂತರ್ಜಲ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಪಿಪಿಟಿ ಪ್ರದರ್ಶಿಸಿದರು.

ನಾನು ಅವರನ್ನು ಒಂದು ಪ್ರಶ್ನೆ ಕೇಳಿದೆ. ಸಾರ್ ಜೆ.ಸಿ.ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಷ್ಟು ಕರಾಬು ಹಳ್ಳಗಳಿವೆ, ಎಷ್ಟು ಕೀಮೀ ಉದ್ದ ಇವೆ, ಎಷ್ಟು ಎಕರೆ ಪ್ರದೇಶದಲ್ಲಿ ಇವೆ. ಆ ಹಳ್ಳಗಲ್ಲಿ ಎಷ್ಟು ಪಿಕ್‌ಅಫ್‌ಗಳು ಇವೆ ಎಂದಾಗ ಆ ಮಾಹಿತಿ ಇಲ್ಲ ಸಾರ್ ಎಂದರು.

 ನನಗೆ ಆಶ್ಚರ್ಯ ಆಯಿತು, ಮತ್ತೆ ವಾಟರ್ ಬಡ್ಜೆಟ್ ಹೇಗೆ ಮಾಡುತ್ತೀರಿ ಎಂದಾಗ ಅಧಿಕಾರಿಯ ಮುಖದ ಭಾವನೆ ನನಗೆ ಅರ್ಥವಾಯಿತು. ಬಿಡಿ ಸಾರ್ ಎಂದು ಸುಮ್ಮನಾದೆ. ಅವರಿಗೂ ನನ್ನ ಪ್ರಶ್ನೆ ಅರ್ಥವಾಯಿತು. ಸಾರ್ ಮುಂದಿನ ಸಭೆಯಲ್ಲಿ ಸರಿಪಡಿಸಿ ಹೇಳುತ್ತೇವೆ ಎಂದರು. ನೋಡೋಣ ಏನು ಮಾಡುತ್ತಾರೆ.

ಈ ತಂಡಕ್ಕೆ ಈ ವಿಚಾರವನ್ನು ತಿಳಿಸಿದಾಗ ಅವರಿಗೂ ಆಶ್ಚರ್ಯ, ಕರ್ನಾಟಕದ ಅಟಲ್ ಭೂಜಲ್ ಯೋಜನೆ ಬಗ್ಗೆ  ವಿಶ್ವಸಂಸ್ಥೆ ಪ್ರಶಂಶೆ ನೀಡಿದೆ. ಏನು ಸಾರ್ ನೀವೂ ಹೀಗೆ ಹೇಳುತ್ತಿರಾ ಎಂದಾಗ, ನಾನು ಮಾತನಾಡಲಿಲ್ಲ, ಮೌನ ವಹಿಸ ಬೇಕಾಯಿತು.

 ನರೇಗಾ ಆಯುಕ್ತರಾದ ಶ್ರೀ ಅನಿರುದ್ಧ್‌ರವರ ಜೊತೆ ನಾನು ಮತ್ತು ಜಿ.ಎಸ್.ಬಸವರಾಜ್‌ರವರು ಮಾತನಾಡಿದ್ದೇವೆ. ಅವರು ನರೇಗಾ ಯೋಜನೆಯಡಿಯಲ್ಲಿ ಹಣ ನೀಡಲು ಒಪ್ಪಿದ್ದಾರೆ. ಪ್ರಸ್ತಾವನೆ ಸಲ್ಲಿಸಲು ತಿಳಿಸಿದ್ದಾರೆ. ಕೇಂದ್ರದ ಅನುಮತಿ ಅಗತ್ಯವಿದ್ದಲ್ಲಿ ಅನುಮತಿ ಕೊಡಿಸಲು ಸಂಸದರು ಶ್ರಮಿಸುತ್ತಾರೆ.

 ನೀವೂ ತುಮಕೂರು ಜಿಲ್ಲೆಯ ಒಂದು ಗ್ರಾಮಪಂಚಾಯಿತಿಯ ವ್ಯಾಪ್ತಿಯಲ್ಲಿ ಮಾಡುತ್ತಿರಾ? ಅಥವಾ ತುಮಕೂರು ಲೋಕಸಭಾ ಕ್ಷೇತ್ರದ 8 ವಿಧಾನಕ್ಷೇತ್ರಗಳಲ್ಲಿಯೂ ಒಂದೊಂದು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಮಾಡುವುದಾದರೆ ಒಂದು ಪ್ರಸ್ತಾವನೆಯನ್ನು ಸಿದ್ಧಪಡಿಕೊಂಡು ಬನ್ನಿ. ಸರ್ಕಾರದ ಹಂತದಲ್ಲಿ ಯಾವ ಸ್ಥಿತಿಯಲ್ಲಿದೆ ಎಂಬ ಬಗ್ಗೆ ನಾನು ವಿಚಾರಿಸುತ್ತೇನೆ.

ಗ್ರಾಮೀಣಾಭಿವೃದ್ದಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸೋಣ, ಸಂಸದರು ಈ ಬಗ್ಗೆ ಒಂದು ಸಭೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸಮಾಲೋಚನೆ ನಡೆಸೋಣ ಎಂದು ತಿಳಿಸಿದ್ದೇನೆ. ನೋಡೋಣ ಏನು ಮಾಡುತ್ತಾರೆ.