12th September 2024
Share

TUMAKURU:SHAKTHI PEETA FOUNDATION

ಮೋದಿಯವರು ದೇಶದ ಜನತೆಗೆ ನೀಡಿರುವ ಲೆಕ್ಕ ಇದು. ತುಮಕೂರು ಜಿಲ್ಲೆಯಲ್ಲೂ ಇದೇ ರೀತಿ ಸಾಧನೆ ಪಟ್ಟಿ ಮಾಡಿ ನೀಡಿ 11 ಜನ  ಶಾಸಕರೇ?

ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರು 2022 ರೋಳಗೆ ದೇಶದಲ್ಲಿ ಯಾವುದೇ ಒಂದು ಕುಟುಂಬ ನಮಗೆ ನಿವೇಶನವಿಲ್ಲ ಅಥವಾ ಮನೆಯಿಲ್ಲ ಎಂದು ಕೊರಗ ಬಾರದು. ಕಡೇ ಪಕ್ಷ ಸ್ವಾತಂತ್ರ್ಯ ಬಂದು 75 ನೇ ವರ್ಷಕ್ಕಾದರೂ  ಕುಟುಂಬಕ್ಕೆ ಒಂದು ಸೂರು ಇರಲೇ ಬೇಕು ಎಂದು ಘೋಷಣೆ ಮಾಡಿದ್ದಾರೆ.

ಕೇಂದ್ರ ಸರ್ಕಾರವೇ ಪೋರ್ಟಲ್ ಮಾಡಿ ವಸತಿ ರಹಿತ ಪಲಾನುಭವಿಗಳು ಅಫ್ ಲೋಡ್ ಮಾಡಲು ಕಾಲಮಿತಿ ನಿಗದಿ ಮಾಡಿದ್ದರು. ಸುಮಾರು 2014 ರಲ್ಲಿಯೇ ವಸತಿ ರಹಿತರು ನೋಂದಾವಣೆ ಮಾಡಿಕೊಂಡಿದ್ದಾರೆ. ಪುನಃ ಮತ್ತೊಮ್ಮೆ ನೋಂದಾವಣೆ ಮಾಡಲು ಅವಕಾಶ ನೀಡಿದ್ದು ಇತಿಹಾಸ. ಈಗ ಇನ್ನೊಮ್ಮೆ ಅವಕಾಶ ನೀಡಲು ಒತ್ತಾಯ ಕೇಳಿ ಬರುತ್ತದೆ.

ಆದರೇ ನಾಚಿಕೆಯಾಗಬೇಕು, ಇದೂವರೆಗೂ ಎಷ್ಟು ಜನ ಅರ್ಜಿಹಾಕಿದ್ದಾರೆ, ಎಷ್ಟು ಅರ್ಜಿ ಬೋಗಸ್, ಎಷ್ಟು ಪಲಾನುಭವಿಗಳು ಅರ್ಹರು ಎಂಬ ಪಟ್ಟಿಯನ್ನೆ ತಪಾಸಣೆ ಮಾಡಿರಲಿಲ್ಲ. ತುಮಕೂರು ಜಿಲ್ಲಾ ದಿಶಾ ಸಮಿತಿ ಕಟ್ಟು ನಿಟ್ಟಿನ ಖಡಕ್ ನಿರ್ಧಾರ ಕೈಗೊಂಡ ನಂತರ, ತುಮಕೂರು ಜಿಲ್ಲೆಯ 11 ನಗರ ಸ್ಥಳೀಯ ಸಂಸ್ಥೆಗಳಲ್ಲಿ 10 ನಗರ ಸ್ಥಳೀಯ ಸಂಸ್ಥೆಗಳಲ್ಲಿ ತಪಾಸಣೆ ಮಾಡಿರುವ ಪಟ್ಟಿ ಗಮನಿಸಿ.

10 ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮತ್ತು ವಿಶೇಷವಾಗಿ ನಗರ ಯೋಜನಾ ವಿಭಾಗದ ನಿರ್ದೇಶಕರಾದ ಶ್ರೀಮತಿ ಶುಭರವರನ್ನು ಅಭಿನಂದಿಸಲೇ ಬೇಕು. ಮನೆ ಮನೆಗೆ ತೆರಳಿ ಪಟ್ಟಿ ತಪಾಸಣೆ ಮಾಡಿಸಿದ್ದಾರೆ.

 ಅಷ್ಟೆ ಅಲ್ಲ ವಿಧಾನಸಭಾ ಸದಸ್ಯರ ಅಧ್ಯಕ್ಷತೆಯಲ್ಲಿರುವ ಆಶ್ರಯ ಸಮಿತಿಯಲ್ಲಿ ಇಟ್ಟು ಈ ಪಟ್ಟಿಯನ್ನು ಅನುಮೋದಿಸಿ, ಇವರಿಗೆ ಅಗತ್ಯವಿರುವ ನಿವೇಶವನ್ನು ಹುಡಕಿ ಗುರುತಿಸಲು ಸದಸ್ಯ ಕಾರ್ಯದರ್ಶಿಗಳಾದ ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ.

ಸರ್ಕಾರಿ ಜಮೀನು ಹುಡುಕುವುದು ಬಹಳ ಸುಲಭ, ನಗರ ಸ್ಥಳೀಯ ಸಂಸ್ಥೆಗಳ ಸುತ್ತ-ಮುತ್ತ 5 ಕೀಮೀ ವ್ಯಾಪ್ತಿ ಹಾಗೂ ಪಾಲಿಕೆ ಸುತ್ತಮುತ್ತ 10  ಕೀಮೀ ವ್ಯಾಪ್ತಿ ಬಗರ್‌ಹುಕುಂ ಯೋಜನೆಯಡಿ ಜಮೀನು ಮಂಜೂರು ಮಾಡಲು ಅವಕಾಶವಿಲ್ಲ.

ನಾವು ಇಂಥ ಸರ್ವೆನಂಬರ್‌ನಲ್ಲಿ ಇಷ್ಟು ಎಕರೆ ಭೂಮಿ ಉಳುಮೆ ಮಾಡುತ್ತಿದ್ದೇವೆ, ಮಂಜೂರು ಮಾಡಿಕೊಡಿ ಎಂದು ರೈತರೇ ಅರ್ಜಿಹಾಕಿದ್ದಾರೆ, ನಿಗದಿತ ಸುತ್ತಳತೆಯ ಬಗರ್ ಹುಕುಂ ಅರ್ಜಿದಾರರ ಜಿಐಎಸ್ ಲೇಯರ್ ಮಾಡಿದರೇ,  ಸರ್ಕಾರಿ ಜಮೀನು ದೊರೆಯುತ್ತದೆ. ಅವಶ್ಯ ಕತೆಯಿರುವ ಜಮೀನು ವಸತಿಗಾಗಿ ಜಿಲ್ಲಾಧಿಕಾರಿಗಲೇ ಮಂಜೂರು ಮಾಡಬಹುದು.

ಒಂದು ವೇಳೆ ಸರ್ಕಾರಿ ಜಮೀನು ಇಲ್ಲವೇ ಇಲ್ಲ ಎಂದಾದರೇ, ಖಾಸಗಿ ಜಮೀನು ಗುರುತಿಸಿ ಅಗತ್ಯವಿರುವ ಜಮೀನಿನ ಭೂಸ್ವಾಧೀನಕ್ಕಾಗಿ ಪ್ರಸ್ತಾವನೆ ಸಲ್ಲಿಸಬೇಕು.

ಇಷ್ಟು ಪ್ರಕ್ರಿಯೇ ಮಾಡಿ ಮುಂದಿನ ದಿಶಾ ಸಮಿತಿ ಮುಂದೆ ಪಾಲಾನಾ ವರದಿ ನೀಡಲೇ ಬೇಕು. ನಗರ ಯೋಜನಾ ನಿರ್ದೇಶಕರು ಒಂದೇ ಸಮನೆ ಕಡತದ ಅನುಸರಣೆ ಮಾಡುತ್ತಿದ್ದಾರೆ. ಶಾಸಕರುಗಳ ಪಾತ್ರ ಏನು ಎಂಬುದು ಗೊತ್ತಾಗುತ್ತಿಲ್ಲ.

ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಮಾಹಿತಿ ಇನ್ನೂ ದೊರೆತಿಲ್ಲ, ಇನ್ನೊಮ್ಮೆ ಅಭಿನಂದನೆ ಶುಭ ಮೇಡಂ, ಮೋದಿಯವರ ಯೋಜನೆ ಎನ್ನುವುದಕ್ಕಿಂತ ಬಡವರ ಸೇವೆಗಾಗಿ ಕಾಲಮಿತಿಯಲ್ಲಿ ಶ್ರಮಿಸಿ. ಮುಂದಿನ ದಿಶಾ ಸಮಿತಿಯ ವೇಳೆಗೆ ಪಾಲಾನಾ ವರದಿ ನೀಡಿ.