TUMAKURU:SHAKTHIPEETA FOUNDATION
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಿ, ಜಿಲ್ಲಾ ಗ್ರಂಥಾಲಯದ ಆವರಣದಲ್ಲಿ ನಿರ್ಮಾಣ ಮಾಡುತ್ತಿರುವ ಇನ್‌ಕ್ಯುಬೇಷನ್ ಸೆಂಟರ್ ಕಟ್ಟಡದಲ್ಲಿ ’ನಿರುದ್ಯೋಗಿಗಳ ಅಕ್ಷಯ ಪಾತ್ರೆ’ಯಂತಹ ವಾತಾವಾರಣ ಸೃಷ್ಠಿ ಮಾಡುವ ಮಹತ್ತರವಾದ ನಿರ್ಣಯ ಮಾಡಲಾಗಿದೆ.
ದಿನಾಂಕ:31.12.2020 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಡಿಸಿ ಶ್ರೀ ಡಾ.ರಾಕೇಶ್ ಕುಮಾರ್‌ರವರ ಅಧ್ಯಕ್ಷತೆಯಲ್ಲಿ ನಡೆದ ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.
ಸಭೆಯಲ್ಲಿ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್, ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್, ಸದಸ್ಯರುಗಳಾದ ಕುಂದರನಹಳ್ಳಿ ರಮೇಶ್, ನರಸಿಂಹಮೂರ್ತಿ, ಜೆಫಿನ್ ಜಾಯ್, ವ್ಯಸ್ಥಾಪಕ ನಿರ್ದೇಶಕರಾದ ಶ್ರೀ ರಂಗಸ್ವಾಮಿರವರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಸಂಭಂಧಿಸಿದ ಎಲ್ಲಾ ಇಲಾಖೆಗಳು ಕೈಜೊಡಿಸುವುದು ಅಗತ್ಯವಾಗಿದೆ. ಜಿಲ್ಲಾಧಿಕಾರಿಗಳು ಸಮಿತಿ ರಚಿಸುವಾಗ ಸೈನಿಕರಂತೆ ಕೆಲಸ ಮಾಡುವವರನ್ನು ಸಮಿತಿಗೆ ಸೇರ್ಪಡೆ ಮಾಡುವುದು ಸೂಕ್ತವಾಗಿದೆ. ಜಿಲ್ಲೆಗೆ ಇಂಡಸ್ಟ್ರಿಯಲ್ ಕಾರಿಡಾರ್ ಘೋಷಣೆಯಾದ ನಂತರ ಯೋಜನೆಗೆ ಶರವೇಗ ದೊರಕಿದಂತಾಗಿದೆ.
ತುಮಕೂರು ಸ್ಮಾರ್ಟ್ ಸಿಟಿ ವ್ಯಸ್ಥಾಪಕ ನಿರ್ದೇಶಕರಾದ ಶ್ರೀ ರಂಗಸ್ವಾಮಿರವರು ಇನವೆಸ್ಟ್ ತುಮಕೂರು, ಇನ್‌ಕುಬೇಷನ್ ಸೆಂಟರ್‌ಗೆ ವಿಶೇಷವಾಗಿ ಆಸಕ್ತಿ ವಹಿಸಬೇಕಿದೆ.
ದಿಶಾ ಪಾಲನಾ ವರದಿ
ತುಮಕೂರು ಜಿಲ್ಲೆಯ ಉದ್ಯೋಗ ಆಕಾಂಕ್ಷಿಗಳ ಮನೆ ಮನೆ ಸಮೀಕ್ಷಾ ಕಾರ್ಯ ಮಾಡಲು ಜಿಲ್ಲೆಯ ಎಲ್ಲಾ ಗ್ರಾಮಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಸಿಇಓ ರವರಿಂದ ಪತ್ರ ಬರೆಸಲಾಗುವುದು. ಎಂದು ಜಿಲ್ಲಾ ಉದ್ಯೋಗಾಧಿಕಾರಿ ಶ್ರೀಮತಿ ಕವಿತಾ ತಿಳಿಸಿದ್ದಾರೆ.
ದಿನಾಂಕ:21.12.2020 ರಂದು ನಡೆದ ತುಮಕೂರು ಜಿಲ್ಲಾ ದಿಶಾ ಸಮಿತಿಯ ನಿರ್ಣಯದಂತೆ. ವಿದೇಶಗಳಲ್ಲಿ ಉದ್ಯೋಗ, ಕೃಷಿ, ಸ್ವಯಂ ಉದ್ಯೋಗ, ಖಾಸಗಿ ಉದ್ಯೋಗ ಮತ್ತು ಸರ್ಕಾರಿ ಉದ್ಯೋಗ ಹೀಗೆ ಐದು ವಿಭಾಗ ಮಾಡಿ ಆಸಕ್ತರ ಪಟ್ಟಿಯನ್ನು ಮಾಡಲಾಗುವುದು. ನಂತರ ಕೌಶಲ್ಯ ಇಲಾಖೆಯಿಂದ ಆಸಕ್ತರ ಇಚ್ಚೆಗೆ ಅನುಗುಣವಾಗಿ ತರಬೇತಿ ನೀಡಬೇಕಾಗುತ್ತದೆ. ವಿದೇಶಗಳಲ್ಲಿ ಉದ್ಯೋಗ ಬಯಸುವವರಿಗೆ ವಿವಿಧ ದೇಶದ ಭಾಷೆಗಳನ್ನು ಕಲಿಸಬೇಕಿದೆ.
ಉದ್ಯೋಗಾಧಿಕಾರಿ ಚುನಾವಣಾ ಸಮಯದಲ್ಲಿ ಗ್ರಾಮಪಂಚಾಯತ್ ಪಿಡಿಓಗಳೊಂದಿಗೆ ಚರ್ಚಿಸಿದಾಗ ೧೫ ದಿನದಲ್ಲಿ ಮನೆ ಮನೆ ಸಮೀಕ್ಷಾ ಮಾಡಿ ಪಟ್ಟಿ ನೀಡುವುದಾಗಿ ತಿಳಿಸಿದ್ದಾರಂತೆ, ಸಮೀಕ್ಷೆಯನ್ನು ಒಂದು ಅಂದೋಲನ ರೀತಿಯಲ್ಲಿ ಕೈಗೊಳ್ಳಬೇಕಿದೆ ಎಂದು ಹೇಳಿದರು.
ಸ್ವಯಂ ಉದ್ಯೋಗ ಆಕಾಂಕ್ಷಿಗಳಿಗೆ ವಿವಿಧ ಬ್ಯಾಂಕ್‌ಗಳಲ್ಲಿ ಆರ್ಥಿಕ ನೆರವು ನೀಡುವ ಮೂಲಕ ಉದ್ಯೋಗ ನೀಡುವುದು ಅಗತ್ಯವಾಗಿದೆ. ಪಟ್ಟಿ ಮಾಡಿ ತರಬೇತಿ ನೀಡಿ ಪ್ರತಿ ಮೂರು ತಿಂಗಳಿಗೊಮ್ಮೆ ಎಷ್ಟು ಜನರಿಗೆ ಯಾವ ರೀತಿ ಉದ್ಯೋಗ ನೀಡಲಾಗಿದೆ ಎಂಬ ಡಿಜಿಟಲ್ ಪ್ರಗತಿ ಪರಿಶೀಲನೆ ಮಾಡುವುದು ಅಗತ್ಯವಾಗಿದೆ.
ತುಮಕೂರು ಜಿಲ್ಲೆಯಲ್ಲಿ ಸ್ಥಾಪಿಸುವ ಎಲ್ಲಾ ಕೈಗಾರಿಕೆಗಳು ಸಹ ಈ ಪಟ್ಟಿಯಲ್ಲಿರುವವರಿಗೆ ಉದ್ಯೋಗ ನೀಡಲು ತಾಕೀತು ಮಾಡುವ ತಾಕತ್ತು ಬೇಕಿದೆ. ಇದಕ್ಕೆ ಪೂರವಾದ ವಾತಾವಾರಣ ಸೃಷ್ಟಿಸಬೇಕಿದೆ.
ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆಯಿಂದ ಉದ್ಯೋಗ ವಿಭಾಗ ಬೇರ್ಪಡಿಸಿದೆ, ಇದೊಂದು ಅವೈಜ್ಞಾನಿಕ. ಉದ್ಯೋಗ ಮತ್ತು ಕೌಶಲ್ಯ ಇಲಾಖೆ ಉಪಮುಖ್ಯ ಮಂತ್ರಿಯವರಾದ ಶ್ರೀ ಅಶ್ವತ್ ನಾರಾಯಣ ರವರಲ್ಲಿದೆ. ಇವರು ಗಂಭಿರವಾಗಿ ತೆಗೆದುಕೊಂಡು ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಆಂದೋಲನ ರೂಪಿಸುವುದು ಸೂಕ್ತವಾಗಿದೆ.
ಇಲ್ಲದೆ ಇದ್ದಲ್ಲಿ ಇದೇ ರೀತಿ ನಡೆದರೆ ಇಲಾಖೆ ಮುಚ್ಚುವುದೇ ಒಳ್ಳೆಯದು.