21st November 2024
Share

TUMAKURU:SHAKTHI PEETA FOUNDATION

ಶಕ್ತಿಪೀಠ ಕ್ಯಾಂಪಸ್ 2 ನೇ ಸಭೆ, ದಿನಾಂಕ:04.01.2021

ಭಾರತ ದೇಶದ ಪ್ರತಿಯೊಂದು ಜಿಲ್ಲೆಗೂ, ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಒಂದೊಂದು ಉತ್ಪನ್ನವನ್ನು ಆಯ್ಕೆ ಮಾಡುವ ಮೂಲಕ, ಅತ್ಯಂತ ಉತ್ತಮವಾದ ಯೋಜನೆಯನ್ನು ಪ್ರಧಾನಿ ಮೋದಿಯವರು ಜಾರಿಗೊಳಿಸಿದ್ದಾರೆ.

ಆದರೇ ಕರ್ನಾಟಕ ರಾಜ್ಯದ 30 ಜಿಲ್ಲೆಗಳ ಪಟ್ಟಿಯನ್ನು ಗಮನಿಸಿದಾಗ ಒಂದು ಜಿಲ್ಲೆಯಲ್ಲೂ ಅಡಿಕೆ ಆಯ್ಕೆ ಮಾಡಿರುವುದು ಕಂಡು ಬಂದಿಲ್ಲ. ರಾಜ್ಯದ ಎಲ್ಲಾ ಸಂಸದರು ಮೌನವಾಗಿದ್ದಾರೆ. ಏಕೆ ಎಂಬುದೇ ಅರ್ಥವಾಗುತ್ತಿಲ್ಲ.

ರಾಜ್ಯದ ವಿರೋಧ ಪಕ್ಷಗಳು ಈ ಯೋಜನೆಯ ಪ್ರಗತಿ ಬಗ್ಗೆ ಚಕಾರ ಎತ್ತಿಲ್ಲ, ಅಡಿಕೆಯನ್ನು ಯೋಜನೆಯಿಂದ ಕೈಬಿಟ್ಟಿರುವ ಬಗ್ಗೆ ಅವರಿಗೆ ತಿಳಿದೇ ಇಲ್ಲ ಎನಿಸುತ್ತಿದೆ. ವಿರೋಧ ಪಕ್ಷಗಳ ಕಚೇರಿಯ ಸಿಬ್ಬಂದಿ ನಮ್ಮ ಈ ಪೇಪರ್ ಓದುತ್ತಿದ್ದಾರೆ. ನಾನು ಅವರೊಂದಿಗೂ ಪ್ರಸ್ತಾಪ ಮಾಡುತ್ತೇನೆ.

 ಜೊತೆಗೆ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೂ ತಂದು, ಒಂದು ಜಿಲ್ಲೆಗೆ ಅಡಿಕೆ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ರಾಜ್ಯ ಮಟ್ಟದ ದಿಶಾ ಸಭೆಯಲ್ಲಿ ಮಾತನಾಡುತ್ತೇನೆ. ರಾಜ್ಯದ ಎಲ್ಲಾ ಸಂಸದರ ಗಮನಕ್ಕೂ ತರುವುದು ಅಗತ್ಯ ಎಂಬ ತೀರ್ಮಾನಕ್ಕೆ ಬರಲಾಯಿತು.

ದಿನಾಂಕ:04.01.2021 ರಂದು ಶಕ್ತಿಪೀಠ ಕ್ಯಾಂಪಸ್ ನಲ್ಲಿ ನಡೆದ 2 ನೇ ಸಭೆಯಲ್ಲಿ ಈ ವಿಚಾರವನ್ನು ಗಂಬೀರವಾಗಿ ಚರ್ಚೆ ಮಾಡಲಾಯಿತು. ಚಿಂತಕ ಶ್ರೀ ಪ್ರತಾಪ್‌ರವರು ಪ್ರಧಾನಿ ಮೋದಿಯವರ ಈ ಯೋಜನೆ ನಿಜಕ್ಕೂ ರೈತರಿಗೆ ಮತ್ತು ನಿರುದ್ಯೋಗಿಗಳಿಗೆ ವರದಾನವಾಗಲಿದೆ.

ರಾಜ್ಯದ 31 ಜಿಲ್ಲೆಗಳ ಪ್ರಗತಿ ಬಗ್ಗೆ ಅವಲೋಕನ ಮಾಡುವುದು ಅಗತ್ಯ. ತಾವು ತಮ್ಮ ವಿಷನ್ 2025 ಡಾಕ್ಯುಮೆಂಟ್‌ನಲ್ಲಿ ಪ್ರಸ್ತಾಪ ಮಾಡಿದ್ದ ಅಂಶವನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಎಂಬ ಹಲವಾರು ಕನಸುಗಳನ್ನು ಹಂಚಿಕೊಂಡರು.

ಅವರು ರಾಜ್ಯದ ಬೆಂಗಳೂರು ನಗರ ಜಿಲ್ಲೆಯ ಬಿಜೆಪಿ ವೃತ್ತಿಪರ ಪ್ರಕೋಷ್ಠಕದ ಸಂಚಾಲಕರಾಗಿ ನೇಮಕವಾಗಿದ್ದಾರೆ. ನಿಜಕ್ಕೂ ಅವರ ಚಿಂತನೆ ಬಹಳ ವಿಶೇಷ ಎನಿಸಿತು .ಒಂದು ರಾಜಕೀಯ ಪಕ್ಷದ ಘಟಕ, ಆ ಪಕ್ಷದ ನೇತೃತ್ವ ಇರುವ ಸರ್ಕಾರದ ಯೋಜನೆಗಳ ಬಗ್ಗೆ ಅವಲೋಕನ ಮಾಡಿ, ಅರ್ಹರಿಗೆ ದೊರಕಿಸಿದಲ್ಲಿ ಅದರಿಂದ ಸಿಗುವ ಸಂತೋಷ ಬೇರೆ ಯಾವುದರಿಂದ ಸಿಗಲಾರದು.

ನಾನು ಅವರಿಗೆ ಮನವರಿಕೆ ಮಾಡಿದೆ, ನೋಡಿ ಪ್ರತಾಪ್ ಈ ಕ್ಯಾಂಪಸ್‌ನಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲಾಭವನದ ಕನಸು ನನ್ನದಾಗಿದೆ, ಮುಂದಿನ ವಾರದೊಳಗೆ ನಿವೇಶನವನ್ನು ನಿಗದಿ ಮಾಡಲಾಗುವುದು. ಇಲ್ಲಿ ಆಯಾ ಜಿಲ್ಲೆಯ ಅಭಿವೃದ್ಧಿ ವಿಚಾರಗಳ ಬಗ್ಗೆ ಚಿಂತನೆ ಪ್ರಮುಖ ಗುರಿಯಾಗಿದೆ.

ನಾವೂ ರೈತರ ಅದಾಯ ದುಪ್ಪಟ್ಟು ಮಾಡುವ ಯೋಜನೆಗಳಿಗೆ ವಿಶೇಷ ಒತ್ತು ಕೊಡಬೇಕು. ಪ್ರತಿಯೊಂದು ಜಿಲ್ಲಾಭವನದ ನಿವೇಶನದಲ್ಲಿ, ಆಯಾ ಜಿಲ್ಲೆಯ ಉತ್ಪನ್ನಗಳ ಯೋಜನೆಗಳ ಬಗ್ಗೆ ವಿಶೇಷ ಪ್ರಾತ್ಯಾಕ್ಷಿಕೆ ಮಾಡೋಣ. ನಿಮ್ಮ ಪ್ರಕೋಷ್ಠಕದ ರಾಜ್ಯ ಮಟ್ಟದ ಸಂಚಾಲಕರೊಂದಿಗೂ ಚರ್ಚಿಸಿ.