TUMAKURU:SHAKTHIPEETA FOUNDATION
ತುಮಕೂರು ನಗರದಲ್ಲಿನ ವಿವಿಧ ಕಾಮಗಾರಿಗಳ ವೀಕ್ಷಣೆಯನ್ನು ರಾಜ್ಯ ಸರ್ಕಾರದ ಮಾನ್ಯ ನಗರಾಭಿವೃದ್ಧಿ ಸಚಿವರಾದ ಶ್ರೀ ಭೈರತಿ ಬಸವರಾಜ್‌ರವರು ಮಾಡಿರುವುದು ಸ್ವಾಗಾತಾರ್ಹ.
ನಗರಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಇಂಪ್ಲಿಮೆಂಟೇಷನ್ ಕಮಿಟಿ ಇದೆ. ಇದರಲ್ಲಿ ಪ್ರಗತಿ ಪರಿಶೀಲನೆ ಮಾಡುವಾಗ ಯಾವ ಅಧಿಕಾರಿಗಳಿಗೆ ಯಾವ ಯೋಜನೆ ಬಗ್ಗೆ ಯಾವ ರೀತಿ ಆದೇಶ ಅಥವಾ ಸಲಹೆ ನೀಡಿದ್ದೀರಿ?
ಮುಂದೆ ನೀವೂ ಮತ್ತೊಮ್ಮೆ ಬರುತ್ತೇನೆ ಬರುವುದರೊಳಗೆ ಸರಿ ಮಾಡಿ ಎಂದು ಆದೇಶ ನೀಡಿದ್ದೀರಿ?
ಈಗ ಯಾವುದು ಸರಿಯಿಲ್ಲ? ಯಾವ ರೀತಿ ಸರಿಯಿಲ್ಲ? ಮುಂದೆ ತಾವೂ ಬರುವುದೊರಳಗೆ, ಯಾವ, ಯಾವ ಅಧಿಕಾರಿಗಳು, ಏನೇನು ಮಾಡಬೇಕು ಎಂಬ ಬಗ್ಗೆ ಸಾರ್ವಜನಿಕರಿಗೂ ಅರ್ಥವಾಗುವಂತೆ ಒಂದು ಇನ್ಸ್‌ಪೆಕ್ಷನ್ ನೋಟ್ ಮಾಡಿದರೆ, ನಿಜಕ್ಕೂ ನಿಮ್ಮ ಭೇಟಿ ಸಾರ್ಥಕವಾಗುತ್ತದೆ.
ತುಮಕೂರಿನ ನಾಗರೀಕರು ಸಹ ಇದೇ ರೀತಿ ಪ್ರಶ್ನೆ ಕೇಳುತ್ತಿದ್ದಾರೆ. ಮಾಧ್ಯಮಗಳು ಸಹ ಇದೇ ರೀತಿ ಬರೆಯುತ್ತಾರೆ? ಇದೂವರೆಗೂ ಯಾವ ಒಬ್ಬ ಅಧಿಕಾರಿಗೂ, ತಪ್ಪು ಮಾಡಿದ್ದಾರೆ ಎಂದು ಶಿಕ್ಷೆ ಆಗಿಲ್ಲ. ಮತ್ತೆ ಏಕೆ ಹೀಗೆ ಎಂಬುದು ಒಂದು ಯಕ್ಷಪ್ರಶ್ನೆಯಾಗಿದೆ.
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮಾಧುಸ್ವಾಮಿರವರು ಪ್ರಗತಿಪರಿಶೀಲನಾ ಸಭೆಗಳನ್ನು ನಡೆಸಿದ್ದಾರೆ? ಅವರು ಸಹ ನಿರ್ಧಿಷ್ಠ ಯೋಜನೆಯ ಬಗ್ಗೆ ಯಾವೋಬ್ಬ ಅಧಿಕಾರಿ ಮೇಲೆ ಇದೂವರೆಗೂ ಕ್ರಮ ಕೈಗೊಂಡಿಲ್ಲ.
ತುಮಕೂರಿನ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಪ್ರಗತಿಪರಿಶೀಲನಾ ಸಭೆಗಳನ್ನು ನಡೆಸಿದ್ದಾರೆ? ಅವರು ಸಹ ನಿರ್ಧಿಷ್ಠ ಯೋಜನೆಯ ಬಗ್ಗೆ ಯಾವೋಬ್ಬ ಅಧಿಕಾರಿ ಮೇಲೆ ಇದೂವರೆಗೂ ಕ್ರಮ ಕೈಗೊಂಡಿಲ್ಲ.
ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ಪ್ರಗತಿಪರಿಶೀಲನಾ ಸಭೆಗಳನ್ನು ನಡೆಸಿದ್ದಾರೆ? ಅವರು ಸಹ ನಿರ್ಧಿಷ್ಠ ಯೋಜನೆಯ ಬಗ್ಗೆ ಯಾವೋಬ್ಬ ಅಧಿಕಾರಿ ಮೇಲೆ ಇದೂವರೆಗೂ ಕ್ರಮ ಕೈಗೊಂಡಿಲ್ಲ.
ತುಮಕೂರು ಮಹಾನಗರ ಪಾಲಿಕೆ ಮೇಯರ್‌ರವರು ಪ್ರಗತಿಪರಿಶೀಲನಾ ಸಭೆಗಳನ್ನು ನಡೆಸಿದ್ದಾರೆ? ಅವರು ಸಹ ನಿರ್ಧಿಷ್ಠ ಯೋಜನೆಯ ಬಗ್ಗೆ ಯಾವೋಬ್ಬ ಅಧಿಕಾರಿ ಮೇಲೆ ಇದೂವರೆಗೂ ಕ್ರಮ ಕೈಗೊಂಡಿಲ್ಲ.
ತುಮಕೂರು ನಗರಾಭಿವೃದ್ಧಿಕಾರದ ಅಧ್ಯಕ್ಷರು ಪ್ರಗತಿಪರಿಶೀಲನಾ ಸಭೆಗಳನ್ನು ನಡೆಸಿದ್ದಾರೆ? ಅವರು ಸಹ ನಿರ್ಧಿಷ್ಠ ಯೋಜನೆಯ ಬಗ್ಗೆ ಯಾವೋಬ್ಬ ಅಧಿಕಾರಿ ಮೇಲೆ ಇದೂವರೆಗೂ ಕ್ರಮ ಕೈಗೊಂಡಿಲ್ಲ.
ಮತ್ತೇ ನೀವೂ ಇದೇ ರೀತಿ ಹೇಳಿದರೆ ದೇಶದ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಅಥವಾ ರಾಜ್ಯದ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ತುಮಕೂರಿನಲ್ಲಿ ಇದು ಸರಿಯಿಲ್ಲ, ಈ ರೀತಿ ಮಾಡಿ ಎಂದು ಹೇಳಲು ಸಾಧ್ಯವೇ?
ನಾನೂ ತುಮಕೂರಿನ ನಾಗರೀಕರಿಗೆ ನಿರ್ಧಿಷ್ಠವಾದ ಮಾಹಿತಿ ನೀಡಿ ಎಂದು ಮಾಧ್ಯಮಗಳ ಮೂಲಕ ಕೇಳಿದ್ದೇ? ಬಹುತೇಕ ಪ್ರಶ್ನೆಗಳು ಸಾಮಾನ್ಯ ರೀತಿಯಲ್ಲಿವೆ? ನಿರ್ದಿಷ್ಠ ಯೋಜನೆಯ ಬಗ್ಗೆ ಒಂದು ಆರೋಪ ಸಹ ಇಲ್ಲ.
ಆಗಿದ್ದ ಮೇಲೆ ಯಾರ ಮೇಲೆ? ಯಾರು, ಯಾವ ಕ್ರಮಕೈಗೊಳ್ಳಲು ಸಾಧ್ಯಾ ನೀವೇ ಹೇಳಿ ಸ್ವಾಮಿ?
ಇದನ್ನು ಯಾರು ಹೇಗೆ ಸರಿಪಡಿಸ ಬೇಕು?
ತುಮಕೂರಿನ ನಾಗರೀಕರು ಕೇಳುವ ಪ್ರಶ್ನೆಗಳ ಮಾದರಿಯಲ್ಲಿ ಸಚಿವರು ಕೇಳಿದರೆ ಹೇಗೆ? ಎಂಬ ಚರ್ಚೆ ನಡೆಯುತ್ತಿದೆ.
ನನಗೂ ಕೇಂದ್ರ ಸರ್ಕಾರದ ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ಸದಸ್ಯನಾಗಿ ಪ್ರಶ್ನೆ ಮಾಡಲು ಅವಕಾಶವಿದೆ. ನಾನೂ ಪ್ರತಿ ಸಭೆಯಲ್ಲೂ ಪ್ರತಿಯೊಂದು ಇಲಾಖಾ ಅಧಿಕಾರಿಗಳಿಗೆ ನಿರ್ದಿಷ್ಠವಾದ ಪ್ರಶ್ನೆಗಳನ್ನು ಕೇಳಿದ್ದೇನೆ. ಅದು ಸಭೆ ನಡವಳಿಕೆಯಲ್ಲಿ ರೆಕಾರ್ಡ್ ಆಗಿದೆ. ಪ್ರತಿ ಸಭೆಯಲ್ಲೂ ಪಾಲನಾ ವರದಿ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ.
ಅದೇ ರೀತಿ ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆಯಲ್ಲಿ ಸದಸ್ಯನಾಗಿ ನಾನು ಪ್ರತಿಯೊಂದು ಯೋಜನೆಯ ಬಗ್ಗೆ ಸಲಹೆ ನೀಡುತ್ತೇನೆ. ಸಭೆ ನಡವಳಿಕೆಯಲ್ಲಿ ನಾನು ಹೇಳಿದ್ದು ಇದೂವರೆಗೂ ಬಹುತೇಕ ರೆಕಾರ್ಡ್ ಆಗಿಲ್ಲ? ಯಾರನ್ನು ಪ್ರಶ್ನೆ ಮಾಡಬೇಕು?
ಇದೂವರೆಗೂ ಒಂದು ಸಭೆಗೂ ನಾನು ಗೈರಾಜರಾಗಿಲ್ಲ. ಪ್ರತಿ ಸಭೆಯಲ್ಲಿ ನಾನು ಹೇಳಿದ ಮಾತುಗಳು ತುಮಕೂರು ಜಿಲ್ಲಾ ದಿಶಾ ಸಮಿತಿ ಸಭೆ ನಡವಳಿಕೆ ಮಾದರಿಯಲ್ಲಿ, ರೆಕಾರ್ಡ್ ಆಗಿದ್ದರೆ ಸತ್ಯಾಂಶ ಹೊರಬರುತ್ತಿತ್ತು.
ಇದೇ ರೀತಿ ನಗರಾಭಿವೃದ್ಧಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಪಾಲಿಕೆ ಮೇಯರ್, ಟೂಡಾ ಅಧ್ಯಕ್ಷರು ವಿವಿಧ ಸಭೆಗಳಲ್ಲಿ ಹೇಳಿದ ಅಮೃತ ವಾಣಿಗಳು ರೆಕಾರ್ಡ್ ಆಗಿವೆಯೋ? ಇಲ್ಲವೋ ಮೊದಲು ಎಲ್ಲಾ ಸಭೆಗಳ ನಡವಳಿಕೆ ಪಡೆದು ಪರಿಶೀಲನೇ ಮಾಡಬೇಕು?
ನಾನು ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯನಾಗಿ, ಈ ಕೆಲಸವನ್ನು ಆರಂಭಿಸಬೇಕು. ಆರಂಭಿಸಲು ನನಗೆ ಮಾನ್ಯ ಮುಖ್ಯ ಮಂತ್ರಿಗಳ ಆದೇಶ ಬೇಕಾಗಿದೆ ಕಾಯುತ್ತಿದ್ದೇನೆ.