22nd December 2024
Share

TUMAKURU:SHAKTHIPEETA FOUNDATION

ಶ್ರೀ ಭೈರತಿ ಬಸವರಾಜ್ರವರ ಗಡುವು ನಾಗರೀಕ ಆಂದೋಲನ1 ನೇ ದಿವಸ ದಿನಾಂಕ:09.01.2021

ತುಮಕೂರಿಗೆ ದಿನಾಂಕ:06.01.2021 ರಂದು ಬಂದ ನಗರಾಭಿವೃದ್ಧಿ ಸಚಿವರಾದ ಶ್ರೀ ಬೈರತಿ ಬಸವರಾಜ್ ರವರು ಕಾಲಮಿತಿ ನಿಗದಿ ಮಾಡಿ, ದಿನಾಂಕ:10.02.2021 ರೊಳಗೆ

  1. ತುಮಕೂರು ನಗರದಲ್ಲಿರುವ ಎಲ್ಲಾ ಉಧ್ಯಾನವನಗಳ ಒತ್ತುವರಿ ತೆರವು.
  2. ತುಮಕೂರು ನಗರದಲ್ಲಿರುವ ಎಲ್ಲಾ ರಾಜಕಾಲುವೆಗಳ ಒತ್ತುವರಿ ತೆರವು.
  3. ತುಮಕೂರು ನಗರದಲ್ಲಿರುವ ಎಲ್ಲಾ ರಾಜಕಾಲುವೆಗಳ ಹೂಳು ತೆಗೆಯುವುದು. 

ಈ ಮೂರು ಮಹತ್ತರವಾದ ಯೋಜನೆಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ತಾಕೀತು ಮಾಡಿದ್ದಾರಂತೆ. ಈ ಯೋಜನೆ ಗುರಿ ತಲುಪ ಬೇಕಾದರೇ, ತುಮಕೂರು ಮಹಾನಗರ ಪಾಲಿಕೆ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ, ತುಮಕೂರು ಸ್ಮಾರ್ಟ್ ಸಿಟಿ, ತುಮಕೂರು ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಒತ್ತುವರಿ ಟಾಸ್ಕ್ ಪೋರ್ಸ್ ಸಮಿತಿ ಮತ್ತು ರಕ್ಷಣೆಗಾಗಿ ಪೋಲೀಸ್ ಇಲಾಖೆ ಸೇರಿದಂತೆ ಈ ಐದು ಇಲಾಖೆಗಳ ಸಮನ್ವಯತೆ ಅಗತ್ಯ.

 ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರು, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ಯಾವುದೇ ಹಸ್ತಕ್ಷೇಪ ಮಾಡಬಾರದು. ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳದಂತೆ ಒತ್ತಡ ತರಬಾರದು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯರು, ಪಾಲಿಕೆ ಕಾರ್ಪೋರೇಟರ್‍ಸ್, ಉಪಾಧ್ಯಕ್ಷರು ಮತ್ತು ಅಧ್ಯಕ್ಷರು ಸಹ ಬೆಂಬಲಿಸಬೇಕು ಅಥವಾ ಮೌನವಾಗಿದ್ದರೆ ಅಷ್ಟೆ ಸಾಕು.

ಜೊತೆಗೆ ತುಮಕೂರು ನಗರದ ನಾಗರೀಕ ಸಮಿತಿಗಳು, ಹೋರಾಟಗಾರರು, ಚಿಂತಕರು ನಿರ್ಧಾಕ್ಷಣ್ಯವಾಗಿ ತಮ್ಮ ತಮ್ಮ ಮನೆಗಳ ಪಕ್ಕ ಇರುವ ಉದ್ಯಾನವನಗಳು, ರಾಜಕಾಲುವೆಗಳ ಸ್ಥಿತಿಗತಿ ಬಗ್ಗೆ ಮಾಹಿತಿಯನ್ನು ನೀಡುವುದು ಅಗತ್ಯವಾಗಿದೆ.

ಒತ್ತುವರಿ ಮಾಡಿರುವವರು ಬಹುಷಃ 1000 ಜನ ಇರಬಹುದು. ಅವರಿಗೆ ನೋವಾಗಬಹುದು. ಆದರೂ ತುಮಕೂರು ನಗರದಲ್ಲಿರುವ 3,05,000 ಜನರು ಸಚಿವರ ಮೂರು ಯೋಜನೆಗಳಿಗೆ ಬೆಂಬಲ ನೀಡುತ್ತಾರೆ. ಇದು ನಗರದ ಜನತೆಯ ಬಹಳ ವರ್ಷಗಳ ಕನಸು ಆಗಿದೆ.

ನ್ಯಾಯಾಲಯದ ಆದೇಶಗಳು ನೆನೆಗುದಿಗೆ ಬಿದ್ದಿವೆ. ಅಧಿಕಾರಿಗಳು ಸಚಿವರು ಗಡುವು ನೀಡಿದಾಗಲು ಕ್ರಮಕೈಗೊಳ್ಳದೇ ಇದ್ದಲ್ಲಿ  ಇದಕ್ಕಿಂತ ನಾಚಿಕೆಗೇಡಿನ ಕೆಲಸ ಇನ್ನೊಂದಿಲ್ಲ. ನಾಗರೀಕರ ಡಿಜಿಟಲ್ ಸಹಭಾಗಿತ್ವದಲ್ಲಿ  ಒಂದು ತಿಂಗಳ ಕಾಲ ನಿರಂತರವಾಗಿ ಆಂದೋಲನ ಹಮ್ಮಿಕೊಳ್ಳಲು ಅಭಿವೃದ್ಧಿ ರೆವೂಲ್ಯೂಷನ್ ಫೋರಂ  ಚಿಂತನೆ ನಡೆಸಿದೆ.

 ಈ ಹಿನ್ನಲೆಯಲ್ಲಿ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕರವರೊಂದಿಗೆ ಸಮಾಲೋಚನೆ ನಡೆಸಿದಾಗ ಸಾರ್, ಕಳೆದ ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆಯಲ್ಲೂ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು. ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು, ಜಿಲ್ಲಾಧಿಕಾರಿಗಳು ಮತ್ತು ತಾವೂ ಸಹ ನಗರದ ಎಲ್ಲಾ ಉಧ್ಯಾವನಗಳ ಒತ್ತುವರಿ ತೆರವುಗೊಳಿಸಿ, ನಾಮಫಲಕ ಹಾಕಿ ಮುಳ್ಳುತಂತಿ ಹಾಕಿ,  ಗಿಡ ಹಾಕಲು ತಿಳಿಸಿದ್ದೀರಿ, ಈಗ ಸಚಿವರು ಉಧ್ಯಾನವನಗಳ ಒತ್ತುವರಿಗೆ ಸೂಚಿಸಿದ್ದಾರೆ.

ಸಚಿವರು ಮತ್ತು ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಇಬ್ಬರೂ ನೀಡಿರುವ ಯೋಜನೆಗಳಿಗೆ ತಗುಲುವ ವೆಚ್ಚವನ್ನು ಅಂದಾಜು ಮಾಡಲು, ಎರಡನೇ ಶನಿವಾರ ರಜಾ ಇದ್ದರೂ, ಈ ದಿನ ಸಭೆ ಮಾಡುತ್ತಿದ್ದೇನೆ. ಎಷ್ಟೆ ಕಷ್ಟವಾದರೂ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಪಾಲಿಕೆ ಅಧಿಕಾರಿಗಳು ಶ್ರಮಿಸುತ್ತೇವೆ.

ತುಮಕೂರು ಸ್ಮಾರ್ಟ್ ಸಿಟಿ ಮತ್ತು ಪಾಲಿಕೆಯಿಂದ ಅವಶ್ಯಕತೆ ಇರುವ ಅನುದಾನ ಬಿಡುಗಡೆ ಮಾಡಲು ನಿರ್ಣಯ ಮಾಡಬೇಕಿದೆ ಎಲ್ಲರ ಸಹಾಕರ ಅಗತ್ಯ ಎಂಬ ವಿಚಾರ ಹಂಚಿ ಕೊಂಡಿದ್ದಾರೆ. ನಿಜಕ್ಕೂ ಅವರ ಆರಂಭಿಕ ಚಟುವಟಿಕೆಗೆ ಮೆಚ್ಚಲೇ ಬೇಕು. 30 ನೇ ದಿವಸ ಅಂದರೆ ದಿನಾಂಕ:10.02.2021 ರಂದು ಏನು ಬರೆಯಬೇಕೋ ಕಾದು ನೋಡೋಣ?