22nd December 2024
Share

TUMAKURU:SHAKTHIPEETA FOUNDATION

ಊರಿಗೊಂದು ಕೆರೆ- ಕೆರೆಗೆ ನದಿ ನೀರು’

ಮುಖ್ಯಮಂತ್ರಿಗಳ ಆದೇಶ ದಿನಾಂಕ: 09.11.2020  ಇಂದಿಗೆ 61  ದಿವಸ.

ರಾಜ್ಯ ನದಿ ಜೋಡಣೆ- ಬಹಿರಂಗ ಡೈರಿ ಭಾಗ-25  ದಿನಾಂಕ: 09.01.2021

 ಕೇಂದ್ರ ಸರ್ಕಾರದ ನದಿಜೋಡಣೆ, ರಾಜ್ಯದ ನದಿ ಜೋಡಣೆ ಮತ್ತು ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆ ಡಿಪಿಆರ್ ಮಾಡುವ ಬಗ್ಗೆ, ದಿನಾಂಕ:05.12.2020 ರಂದು ರಾಜ್ಯ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ರಾಕೇಶ್‌ಸಿಂಗ್‌ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ನಡವಳಿಕೆಯನ್ನು ರಾಜ್ಯದ ಜಲಸಂಪನ್ಮೂಲಸಚಿವರಾದ ಶ್ರೀರಮೇಶ್ ಜಾರಕಿಹೊಳೆರವರಿಗೆ ದಿನಾಂಕ:02.01.2021 ರಂದು ಇ-ಆಫೀಸ್ ಮೂಲಕ ಕಳುಹಿಸಲಾಗಿದೆ.

ದಿನಾಂಕ:08.01.2021 ರಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸಚಿವರ ಕಚೇರಿಯಲ್ಲಿ ನೀರಾವರಿ ತಜ್ಞ ಹಾಗೂ ಓಎಸ್‌ಡಿ ಶ್ರೀ ರುದ್ರಯ್ಯನವರನ್ನು ಭೇಟಿಯಾಗಿ ವಿಚಾರಿಸಿದಾಗ ಸಚಿವರು ಬಂದ ತಕ್ಷಣ ಕಡತವನ್ನು ಕ್ಲಿಯರ್ ಮಾಡುವುದಾಗಿ ತಿಳಿಸಿದ್ದಾರೆ.